ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಯತಿವೃಂದ ಸ್ತೋತ್ರ ಯತಿಗಳ ಸತತ ಸಂಸ್ತುತಿಸುವೆ ಅತಿತ್ವರಿತದಲಿ ದುರಿತಗಳ ತರಿವೆ ಪ ಮೋದತೀರ್ಥಾದಿ ಸುಬೋಧೇಂದ್ರ ಪರಿಯಂತ ಮೋದದಿಂದವರ ಶ್ರೀಪಾದಕ್ಕೆ ನಮಿಪೆ 1 ಅಜನಪಿತನಪಾದ ಭಜಿಸುವ ಭಕುತ ನಿಜವಾಗಿ ಪಾಲಿಪ ಸುಜನೇಂದ್ರ ತೀರ್ಥ 2 ಆನತಜನ ಪಾಪಕಾನನದಹಿಪ ಕೃ ಶಾನನಂತಿಪ್ಪ ಸುಙÁ್ಞನೇಂದ್ರ ತೀರ್ಥ 3 ದುರ್ಮತಧ್ವಂಸ ಸದ್ಧರ್ಮ ಸಂಸ್ಥಾಪಕ ಕರ್ಮಂದಿವರ ಸುಧರ್ಮೇಂದ್ರ ತೀರ್ಥ 4 ಅಗಣಿತಮಹಿಮ ಮೂಜಗದೊಳು ಪ್ರಖ್ಯಾತ ನಿಗಮಾಗಮಜ್ಞ ಶ್ರೀ ಸುಗುಣೇಂದ್ರ ತೀರ್ಥ 5 ಸಸುಪ್ರಸಿದ್ಧ ಮುನಿ ವಿಪ್ರಸಮೂಹವ ಕ್ಷಿಪ್ರದಿಪಾಲಿಪ ಸುಪ್ರಙÉ್ಞಂದ್ರಾಖ್ಯ 6 ಶ್ರೀಶ ಪದಾರ್ಚಕ ಸುಕೃತೀಂದ್ರ 7 ಮೂಲೋಕ ವಿಖ್ಯಾತ ಶ್ರೀಲೋಲನಂಘ್ರಿ ಕೀ - ಲಾಲಜಮಧುಪ ಸುಶಿಲೇಂದ್ರ ಮುನಿಪ 8 ವರದೇಶ ವಿಠಲನ ಪರಿಪರಿ ಪೂಜಿಪ ಪರಮಹಂಸರ ಪಾದಕ್ಕೆರಗಿ ಬಿನ್ನೈಪೆ 9
--------------
ವರದೇಶವಿಠಲ
ಸುಶಿಲೇಂದ್ರತೀರ್ಥರ ವೈಭವವನು ನೋಡ ಬನ್ನಿರೆ ಜನರು ಹೊಸರಿತ್ತಿ ಧೀರೇಂದ್ರರ ಬಳಿಯಲಿ ಹಸನಾಗಿರುವವರು ಪ. ವರದಾ ತೀರದಿ ನೆಲಸುತ ಹರುಷದಿ ವರಗಳ ಕೊಡುತಿಹರು ಪರಿಪರಿಯಿಂದಲಿ ಸೇವಿಪ ಭ- ಕ್ತರ ಕರುಣದಿ ಪೊರೆಯುವರು 1 ವೃಂದಾವನದಲಿ ದ್ವಾದಶ ವರ್ಷಗ ಳಿಂದಲಿ ನಿಂದಿಹರು ಕುಂದದೆ ಶ್ರೀ ರಾಘವೇಂದ್ರರ ದಯವನು ಚಂದದಿ ಪಡೆದಿಹರು 2 ಕುಷ್ಟಾದಿಗಳನು ದುಷ್ಟ ಗ್ರಹಗಳ ಥಟ್ಟನೆ ತೊಲಗಿಪರು ಇಷ್ಟ ಭಕ್ತರನು ಸಲಹುವ ಗೋಪಾಲಕೃಷ್ಣವಿಠ್ಠಲ ಪ್ರಿಯರು 3
--------------
ಅಂಬಾಬಾಯಿ
ಸುಶೀಲೇಂದ್ರರ ಸ್ತೋತ್ರ ಇಂದು ನೋಡಿದೆ, ಸುಶಿಲೇಂದ್ರ ಗುರುಗಳ ಕುಂದಣದ ಶಿಖರ ಮೌಕ್ತಿಕದಿಂದ ವಿರಾಜಿಸುವ ರಜತ ಅಂದಣವನೇರಿ ಸಂಭ್ರಮದಿಂದ ಮೆರೆದು ಬರುವ ಗುರುಗಳ ಪ ಧ್ವಜ ಪತಾಕೆಶ್ವೇತ ಛತ್ರ ರಜತವರ್ಣ ಚವರ ಚಾಮರ ಭಜಿಪÀ ಭಟರ ಸಂದಣಿಮಧ್ಯ ರಜನಿ ಪತಿಯ ತೆರದಿ ಶೊಭಿಪರಿಂದು 1 ಭೇರಿ ಕಹಳೆ ವಾದ್ಯನೇಕ ಚಾರುತರ ಶೃಂಗಾರವಾದ ವಾರಣಗಳು ಎಡಬಲದಲಿ ಸಾರಿಬರುವ ಸಂಭ್ರಮವನು 2 ಎಲ್ಲಿನೋಡೆ ಪಾಠಪ್ರವಚ - ನೆಲ್ಲಿ ನೋಡೆ ವೇದಶಾಸ್ತ್ರ ಎಲ್ಲಿ ನೋಡಲಲ್ಲಿ ಲಕುಮಿ ನಲ್ಲನ ಸತ್ಕಥಾಲಾಪವಿಂದುನೋಡಿದೆ 3 ಆ ಮಹಾಸುಶೋಭಿತಮಾದ ಹೇಮಮಂಟಪ ಮಧ್ಯಮೂಲ ರಾಮನಾರ್ಚನೆಗೃವ ವೃಂದ ಪ್ರೇಮದಿ ನೋಡಿ ಧನ್ಯನಾದೆ 4 ಈ ಮಹಾಗುರುವರ್ಯರ ಪದ ತಾಮರ¸ವÀ ಪೊಂದಿದ ಭಕ್ತರ ನೇಮದಿಂ ವರದೇಶ ವಿಠಲ ಕಾಮಿತಾರ್ಥಗರೆವ ಸತ್ಯ 5
--------------
ವರದೇಶವಿಠಲ