ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೈಮುಗಿದು ಕೇಳಿಕೊಂಬೆ ಕರುಣಾಸಾಗರ ಶ್ರೀಕರ ಪ ಶ್ರೀಮನೋಹರ ಭಾವಿಸುತ್ತ ಭಕ್ತಿಯೀವುದೈ ಶುಭಕರ ಅ.ಪ ಕಣ್ಣ ತುಂಬ ನೋಡುವೆ ಚನ್ನ ಪಾದಯುಗಳ ನೀನಿಡುನಾ ನನ್ನಿಯಿಂ ನಮಿಪೆ ನಾರಾಯಣ 1 ಎನ್ನೊಳೆರಡು ಮಾತನಾಡು ಮೃದುನುಡಿ ಕೇಳುವೆ ಸಂ ಪನ್ನ ಕೃಪಾದೃಷ್ಟಿಯ ನೀಡು ಧನ್ಯನಾಗುವೆ ದೀನಬಂಧು2 ಬಾಲಗೋಪಾಲ ಲೀಲೆ ತೋರೋ ನಲಿಯುವೆ ಶ್ರೀಲೋಲ ಮುದ್ದಾಡುವೆ ಮುದ್ದು ಕೃಷ್ಣ3 ಎನ್ನ ಬಿನ್ನಪವ ಕೇಳು ಜನ್ಮ ಸಾರ್ಥಕವ ಮಾಡು ಇನ್ನು ಸಾವಕಾಶವೇಕೊ ಜಾಜೀಕೇಶವ ಸುವೈಭವ 4
--------------
ಶಾಮಶರ್ಮರು
ಶ್ರೀರಮಾರಮಣ ಶರಣಾರ್ತಿನಿವಾರಣಾ ಪ ಸಾರಸಾಕ್ಷ ಕರುಣಾರಸಪೂರ್ಣ ಭೂರಿ ಸುವೈಭವ ಭುವನರಕ್ಷಣಅ.ಪ ನಾನು ನಿನ್ನೊಳು ಮೊರೆಯಿಡುತಿರುವೆನೊ ನೀನೆನ್ನೊಳು ದಯೆದೋರು ಹರಿಯೆ ದೀನಪಾಲನಾಪರ ನೀನೆನ್ನುತ ಲಾನು ಬಂದೆನೊ ಶ್ರೀನಿಕೇತನ 1 ಹಿಂದೆಯನೇಕರ ಕಾಪಾಡಿರುವೆ ಮುಂದೆಯು ಭಕ್ತರ ಬೆಂಬಿಡದಿರುವೈ ತಂದೆ ಬಂದು ಗಜರಾಜನ ಸಲಹಿದೆ ಯೆಂದು ನಂಬಿದೇ ಮಂದರಾದ್ರಿಧರ 2 ಸುಧಾಮ ಅಜಮಿಳ ಅಂಬರೀಷ ದ್ರೌ ಪದಿಯರ ಸಮಯದಿ ಕಾಯ್ದವನೇ ವಿಧಿಪಿತ ನೀನದುಭುತಮಹಿಮನಯ್ಯ ಸುಧಾ[ಮ] ನ ಬಂಧುವೆ ಜಾಜೀಶಾ 3
--------------
ಶಾಮಶರ್ಮರು
ಸಾಕೇತಾಧಿಪ ಸತ್ವಸ್ವರೂಪ ಶ್ರೀಕರರೂಪ ಜಿತಕೋಪ ಪ ಕರಧೃತಚಾಪ ಖಂಡಿತತಾಪ ಪರಂತಪ ಪಾಹಿ ಕವಿಜನಾಲಾಪ 1 ಅರಿಜನ ಭೀಕರ ಕರಿವರ ಶ್ರೀಧರ ವರದಾಭಯಕರ ಪರಮಕೃಪಾಕರ 2 ಇನಕುಲಮಂಡನ ಭಕ್ತಾರ್ತಿಭಂಜನ ವನರುಹಲೋಚನ ಭವಬಂಧಮೋಚನ 3 ಕ್ಷಿತಿನಾಥ ರಾಘವ ಸತತ ಸುವೈಭವ ನುತಶೇಷಗಿರೀಧವ ವಿಜಿತಮನೋಭವ 4
--------------
ನಂಜನಗೂಡು ತಿರುಮಲಾಂಬಾ