ಒಟ್ಟು 4 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜ್ಞಾನಾಮೃತ ಭುಜಿಸು ಜೀವ ಮಾನವಜನುಮದ ಗುರಿಯಿದು ಪ ಶುದ್ಧಮನದ ಪಾತ್ರೆಯಲ್ಲಿ ಸದ್ಗುರುವಿನ ಬೋಧದನ್ನ ಶುದ್ಧ ಚೈತನ್ಯಾತ್ಮ ನೀನೆ ಬದ್ಧಜೀವನಲ್ಲವೆಂಬ 1 ಶಿವರೂಪನು ಸಚ್ಚಿದಾತ್ಮ ಭವಬಂಧನವೆನ್ನೊಳಿಲ್ಲ ಆವಿನಾಶಿಯೆ ನಾನು ಎಂಬ ಸುವಿಚಾರದ ಬಾಯಿಯಿಂದ 2 ಸದ್ ರೂಪದ ಆರೋಗ್ಯ ಚಿದ್ ರೂಪದ ಪರಮ ಭಾಗ್ಯ ಆನಂದದ ನಿಧಿಯಾಗುವಿ ಬೋಧ 3
--------------
ಶಂಕರಭಟ್ಟ ಅಗ್ನಿಹೋತ್ರಿ
ತಿಳಿ ಸತ್ಯರೂಪವÀ ಪರಮಾನುಭವವ ಸುವಿಚಾರದಿಂದ ಯೋಚಿಸು ಜೀವಾ ಪ ನಾ ನೀನು ಎನುವಾ ಇದು ಅದು ಎನುವ ನಾನಾತ್ಮಭಾವಾ ಪುಸಿಯಿದು ಜೀವಾ ಏನೊಂದು ಮಿಲ್ಲದೆ ತಾನುಳಿದಿರುವ ಸ್ವಾನುಭವಾತ್ಮಾ ಸತ್ಯನಾಗಿರುವ 1 ಕರ್ತೃವೆನಿಸದ ಭೋಕ್ತøವೆನಿಸದ ಅನಿಸಿಕೆಯಳಿದಾ ನಿತ್ಯನಿರಂಜನ ಮಾಯಾವಿಲಾಸದಿ ತೋರುವನೀಪರಿ ಕನಸಿನೊಲಿದುವೇ ಪುಸಿ ಈ ಜಗವು 2 ಅವಿಚಾರಗಳಿಗೆ ಬೇರಾಗಿ ತೋರೇ ಸುವಿಚಾರದಿಂ ನೋಡೇ ತಿಳಿವುದು ಇದುವೇ ಅದೇ ಪರಮಾತ್ಮನೇ ನೀನಿರುವಿಯಿದೋ ಗುರು ಶಂಕರರಾರ್ಯನ ವರಬೋಧವಿದೋ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಬೋಧದ ಘನಮಳೆಯುಸುರಿದು ಮುಕುತಿಬೆಳೆಯು ಬಂದುದು ಪ ಮಾಯೆಯ ಬಲು ಬಿಸಿಲುತಾಪ ಕಾಯದೊಳಗೆ ಹೆಚ್ಚುತಿರಲು ಹೇಯವೆನಿಸಿ ಜನನಮರಣ ಮುಮುಕ್ಷುತ್ವ ಮೋಡಗವಿದು 1 ಸುವಿಚಾರದ ಮಿಂಚು ಹೊಳೆದು ಶ್ರುತಿಶಿರಗಳ ಗುಡುಗು ಹೊಡೆದು ಶ್ರವಣದ ಸುಳಿಗಾಳಿ ಬೀಸಿ ಭವತಾಪವ ಹರಿಸುತಿರಲು 2 ವೈರಾಗ್ಯದ ರಂಟೆ ಹೊಡೆದು ಶಮೆದಮೆಗಳ ಹರತೆಯಾಗಿ ಪರಮಾರ್ಥದ ಬೀಜ ಬಿದ್ದ ನರಜನ್ಮದ ಹೊಲದ ಮೇಲೆ 3 ದೃಷ್ಟಿಯೊಳಗಿನಾನಂದ ಸೃಷ್ಟಿಯಾಗಿ ತೋರಿ ಚಂದ ಶ್ರೇಷ್ಠನಾದ ಶಂಕರಗುರುವರನ ಸಹಜಕರುಣೆಯಿಂದ 4
--------------
ಶಂಕರಭಟ್ಟ ಅಗ್ನಿಹೋತ್ರಿ