ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಗಿರಿಜಾ ಸುತನೆ ಸುರರಾಜ ಪೂಜಿತನೆ ಇಭ ಆನನೆ ದುರಿತಾಪ ಹರನೆ ಫ ಶರಣು ಗಣನಾಯಕನೆ ಮೂಷಿಕ ಸುವಾಹನನೆ ಶರಣು ಪಾಶಾಂಕುಶನೆ ಪರಮ ಪಾವನನೆ ಶರಣು ಶರಣು 1 ಲಿಖಿತದೊಳುವೇದವ ಬರೆದ ಪೂಜೆಯನು ಕೈಗೊಳುತ ಗಜ ಶರಣು ಶರಣು 2
--------------
ಕವಿ ಪರಮದೇವದಾಸರು
ಗೋಪಾಲದಾಸರ ಸ್ಮರಣೆ | ಬಹುತಾಪತ್ರಯದ ನಿವಾರಣೆ ಪ ಶ್ರೀಪತಿ ವೇಂಕಟೇಶನ | ಸಾಪರೋಕ್ಷದಿ ಕಂಡುಹಿಗ್ಗುತವ್ಯಾಪ್ತದರ್ಶಿಗಳಾಗಿ ಭಕ್ತಿಲಿ | ಆಪರಂತಪನೊಲುಮೆಗಳಿಸಿದ ಅ.ಪ. ಬಾಲ್ಯತನದಿ ವೇದಮಾತಾ | ಎಂಬಗಾಯತ್ರಿ ಮಂತ್ರವು ಜಪ್ತಾ |ಸೂರ್ಯಾಂತರ್ಗತನಾದ | ಹರಿಯನ್ನು ಕಾಣುತಾಕಾರ್ಯೋನ್ಮುಖನು ಆದ | ಪ್ರಶ್ನೆಗಳ ಪೇಳಲು 1 ಇರಲೊಂದು ಕಾಲಕ್ಕೆ ವಿಜಯಾ | ದಾಸರ್ ಬರವಾಯ್ತು ಕೇಳಿರಿ ಚರ್ಯಾ || ವರ ವಿಜಯ ದಾಸಾರ್ಯರೆಂಬರ | ಪ್ರತಿಭೆಯಾವರಣ ಮುಸುಕಿಲಿನಿರುತ್ತರರು ಆಗಿಹರ್ | ಪ್ರಶ್ನೋತ್ತರಗಳ ಕೇಳಲು2 ಮೂಷಕ | ವರಸುವಾಹನನಂಶ ಸಂಭವ 3
--------------
ಗುರುಗೋವಿಂದವಿಠಲರು
ರಕ್ಷಿಸೊ ಸ್ವಾಮಿ ನೀ ಪಕ್ಷಿ ಸುವಾಹನ ಭಿಕ್ಷೆ ಸುನೀಡೊ ನೀ ಲಕ್ಷ ಸುಸಾಧನ ಅಕ್ಷಯಾನಂದ ನೀ ಲಕ್ಷುಮಿ ಜೀವನ ಪಕ್ಷ ನೀ ಪ್ರಾಣಕ ಈಕ್ಷಿಸಿದವನ 1 ಸೃಷ್ಟಿಗಧಿಕ ನೀ ವಿಷ್ಣು ಜನಾರ್ಧನ ಕಷ್ಟ ನೀ ಹಿಂಗಿಸೊ ದುಷ್ಟರ ಮರ್ದನ ಶಿಷ್ಟರ ಪಾಲಕ ಶ್ರೇಷ್ಠ ನಾರಾಯಣ ದೃಷ್ಟಿಸಿ ನೋಡೊ ನೀ ಕೃಷ್ಣ ಕೃಪಾಘನ2 ಈಶನೆಂದರಿಯದೆ ದೋಷದ ರಾಶಿ ನಾ ವಾಸನೆ ಪೂರಿಸೊ ದಾಸರ ದಾಸ ನಾ ಏಸು ತಾ ಜನ್ಮಕೆ ಬಂದು ಸೂಸಿದೆನೊ ಹೇಸಿತು ಜೀವನ ಸ್ಮರಿಸಬೇಕೆಂದು ನಾ 3 ನಿಮ್ಮನೆ ನೋಡಬೇಕೆಂದು ಬಂದೆ ನಾ ಘಮ್ಮನೆ ಪೂರಿಸೊ ಭಾವನೆ ಕಂದನ ತಮ್ಮನೆ ಬೇಡಿಕೊಂಬುದು ತಾ ವಂದನ ಅಮ್ಮ ನಮ್ಮಪ್ಪನೆ ಬಂಧು ನೀ ಎಂದೆ ನಾ 4 ಕಾಣದ ಪಾಮರ ಹೀನ ಸೂಕರ ಏನು ತಾ ಬಲ್ಲದು ಲೂನದ ಸೂಕರ ನೀನೆ ದಯಾನಿಧೆ ಜ್ಞಾನದ ಸಾಗರ ನ್ಯೂನ ನೋಡದೆ ತಾರಿಸೊ ಶ್ರೀಧರ 5 ಪಾರ ನೀ ಗೆಲಿಸೊ ದ್ವಾರಕಿನಾಥನೆ ಸಾರಿ ನೀ ಬೋಧವ ತಾರಿಸೊ ದಾತನೆ ತೋರಿ ನೀ ಪಾದವ ಬೀರು ಸ್ವಹಿತನೆ ಸಿರಿ ಲೋಲನೆ ನೀಕರುಣಿಸಿ ಮಾತನೆ 6 ಪಾಲಿಸೊ ಪ್ರಾಣವ ಬಾಲಮುಕುಂದನೆ ಲಾಲನೆ ನೋಡು ಗೋಪಾಲ ಗೋವಿಂದನೆ ತ್ಯಕ್ತ ನಾ ತಾಳು ನೀ ಸಚ್ಚಿದಾನಂದನೆ ಕೀಲನೆ ಹೇಳು ನೀ ಭಕ್ತಿಯ ವಂದನೆ 7 ದೇವರ ದೇವನೆ ಕಾವ ಕರುಣನೆ ಜೀವದ ಜೀವ ನೀ ಸ್ವಾಮಿ ಸರ್ವೇಶನೆ ಭಾವದ ಭಾವ ನೀ ಸಾವಿರ ನಾಮನೆ ಸೇವೆಗೆ ಯೋಗ್ಯನ ಮಾಡು ಸರ್ವೋತ್ಮನೆ 8 ಹಿಂಡ ದೈವಕೆ ಪ್ರಚಂಡ ಪರೇಶನೆ ಗಂಡು ಹೆಣ್ಣಿಗೆ ತಾ ಒಬ್ಬ ಸರ್ವೇಶನೆ ಮಂಡಿ ಮರೆಯಲಿಹನೆ ಮಹೇಶನೆ ಕಂಡುಕಾಂಬ ಸುಖದೋರು ದೇವನೆ 9 ವೇದಕ ನಿಲ್ಕದಾಭೇದ್ಯ ಪುರುಷನೆ ಸಾರ ಸುರಸನೆ ಅದಿಗಿಂದತ್ತಲ್ಯಾನಾದಿ ನಿರ್ವಿಶೇಷನೆ ಹಾದಿದೋರಿಕೊಡೊ ಭಕ್ತಿಗೊಂದೀಶನೆ 10 ಮಹಿಪತಿಗೆ ನೀ ಸ್ವಾಮಿ ಶ್ರೀನಾಥನೆ ಬಾಹ್ಯ ಅಂತ್ರಕೆ ನೀನೆವೆ ಸುದಾತನೆ ಸೋಹ್ಯದೋರಿಕೊಡೊ ಸಾಹ್ಯವುಳ್ಳಾತನೆ ತ್ರಾಹಿಯಂದವನ ಮಾಡು ಸನಾಥನೆ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವೈಕುಂಠ ವಿಠ್ಠಲನೆ ನೀನಿವನ ಸಾಕಬೇಕಯ್ಯ ಶ್ರೀ ಹರಿಯೆ ಪ ನಾಕಪತಿಯೆ ನಿನ್ನ ತೋಕನೆಂದೆನಿಸಿ ಕೃಪಾಕರುಣೆ ಕಾಪಾಡ ಬೇಕೊ ಹರಿಯೆ ಅ.ಪ. ಪುಂಡಲೀಕ ವರದ ಪಾಂಡುರಂಗನೆ ನಿನ್ನತೊಂಡನಾಗಿಹನ ಕೈಗೊಂಡು ಕಾಪಾಡೊ ಹರಿಯೆ |ಅಂಡಜಸುವಾಹನನೆ ಮಾರ್ತಾಂಡ ಶತತೇಜಭಾಂಡ ಕಾರಕ ಭೀಮ ಗೊಲಿದಂತೆ ಒಲಿಯಬೇಕು 1 ಇಹಪರಗಳೆರಡಕ್ಕೂ ಅಹಿಶಯ್ಯ ನಿನ ಪಾದವಹಿಸೆ ಸೇವಿಪನಯ್ಯ ಸಹಜ ಭಕ್ತಿಯಲಿವಿಹಗೇಂದ್ರ ವಾಹನನೆ ಐಹಿಕದ ಭಯಹರಿಸಿವಿಹಿತ (ಕರುಣ)ದಿಂದಿವನ ಕಾಪಾಡು ಬೇಕು ಹರಿಯೇ 2 ವಿಘ್ನಹರ ನಿನ್ನಲ್ಲಿ | ಲಗ್ನ ಗೈಸಿಹಮನವ ನಿ-ರ್ವಿಘ್ನತೆಯ ನೀಡಯ್ಯ ಸರ್ವಕಾಲದಲಿಯಜ್ಞೇಶ ಯಜ್ಞ ಭುಗ್ ಯಜ್ಞಸಾಧನ ಯಜ್ಞಯಜ್ಞಾನು ಸಂಧಾನ ಸರ್ವಕಾರ್ಯದಲೀಯೊ 3 ವೃಂದಾರ ಕೇಂದ್ರ ರಿಂ | ವಂದ್ಯ ಹಯಮುಖ ಪಾದಭೃಂಗರೆಂದೆನಿಸುವ ಭಾವಿ ಮರುತರ ಚರಣದೀಸಂಧಿಸುತ ಧೃಡಭಕ್ತಿ ವೃಂದಾವನಾಖ್ಯಾನಸಂದೋಹ ಸುಜ್ಞಾನ ನೀನಿತ್ತು ಸಲಹೊ ಹರಿಯೇ 4 ಪತಿ ನಿನ್ನ ಹಂಬಲಿಸಿ ಬೇಡುವೆನುಇಂಬಿಟ್ಟು ತವ ಪಾದದ್ಹಂಬಲವ ನೀಯೋಉಂಬುಡುವ ಕ್ರಿಯೆಗಳಲಿ ಬಿಂಬ ಕ್ರಿಯೆಗಳ ತಿಳಿಸಿಬಿಂಬ ತವರೂಪ ಹೃದಯಾಂಬರದಿ ತೋರಿ ಸಲಹೋ 5 ಪಂಚಪಂಚಸುತತ್ವ | ಪಂಚ ಭೇದದಜ್ಞಾನಸಂಚಿಂತೆಯ ನೀಯೋ ವಾಂಛಿತಾರ್ಥದನೇಪಂಚ ಅವಿದ್ಯೆಯ ಕಳೆದು ಪಂಚಸು ಪರ್ವದಲಿಪಂಚಾಸ್ಯನಲಿ ನಿನ್ನ ಪಂಚರೂಪವ ತೋರಿಸೋ 6 ದಿವಿಜ ವಂದ್ಯಮಧ್ವಾಂತರಾತ್ಮ ಗುರು ಗೋವಿಂದ ವಿಠಲ ತವದಿವ್ಯ ರೂಪವ ತೋರಿ ಕಾಪಾಡೊ ಹರಿಯೆ 7
--------------
ಗುರುಗೋವಿಂದವಿಠಲರು
ಎನ್ನ ಮನದ ಡೊಂಕ ತಿದ್ದಿ-ಚರಣದಲ್ಲಿ ಸೇರಿಸೋ |ನಿನ್ನ ಸೇವಕನಾದ ಮೇಲೆಇನ್ನು ಸಂಶಯವೇಕೆ ಕೃಷ್ಣ ಪಉದಯವಾದರೆ ಊಟದ ಚಿಂತೆ ಅದರ ಮೇಲೆ ಭೋಗದ ಚಿಂತೆ |ಹದಿನಾಲ್ಕು ಲೋಕಂಗಳನಾಳಬೇಕೆಂಬ ಚಿಂತೆ ||ಇದು ಪುಣ್ಯ ಪಾಪವೆಂದು ಹೃದಯದಲಿ ಭಯವಿಲ್ಲದಲೆ |ಮದ ಮೋಹಿತನಾದೆ ನಿನ್ನ ಪದವ ನಂಬದೆ-ದಯಾಳೊ 1ನೆರೆಮನೆಗಳ ಭಾಗ್ಯವ ನೋಡಿ-ತರಹರಿಸುತ ಅಸೊಯೆಯಿಂದ |ಹರಿಯ ಸ್ಮರಣೆಗೆ ವಿಮುಖನಾದೆ - ನರರಸ್ತುತಿಯ ನಾ ಮಾಡಿದೆ ||ಪರರ ಸತಿಗೆ ಪರರನ್ನಕೆ ತಿರುಗಿ ತಿರುಗಿ ಚಪಲನು ಆದೆ |ಗುರುಹಿರಿಯರ ದೂಷಿಸುತಲಿ ಮರುಳನಾದೆ ದೀನಶರಣ್ಯ 2ಅಗಣಿತಸುಖ ಬಂದರೆ ನಾನು -ಅಗಣಿತದುಃಖಕೆ ಹರಿಯೆನ್ನುವೆನು |ಜಗದೊಳಾವ ಲಾಭವು ಬಂದರು ಧನಿಯು ನಾನೆ ಎಂಬೆ ||ಮಿಗೆ ಹಾನಿಗೆ ಹರಿಯನು ದೂಷಿಸಿನೆಗೆದು ಪತಂಗವು ಕಿಚ್ಚಲಿ ಬೀಳುವ |ಬಗೆ ನಾನಾದೆನುಪುರಂದರವಿಠಲನಖಗರಾಜಸುವಾಹನ ಶ್ರೀ ಕೃಷ್ಣ 3
--------------
ಪುರಂದರದಾಸರು