ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಲಕ್ಷ್ಮೀ ಸ್ತುತಿಗಳು ಅಮ್ಮಾ ನೀನೆಮ್ಮ ಮನೆಯಲಿಹುದಮ್ಮಾ ನಿತ್ಯ ಪ ನಮ್ಮಯ್ಯನೊಡನೆ ಸುಭಾಷಿಸುತಲಿ ಸಮ್ಮಾನದಿ ಮುಖದಿಂ ನಲಿದಾಡುತಾ ಅ.ಪ ಮಕ್ಕಳೆಂದೆಮ್ಮ ನಲಿಸುತ ಒಲಿಸುತ ಸಕ್ಕರೆ ಸಮಿಗುಂಮಿಗಲಹ ಮಾತುಗ ಳಕ್ಕರದಾಡುತ ಶುಭಸಂಪದಗಳ ನಕ್ರೂರಾರ್ಚಿತೆ ಕೊಡುತ ಮೋದದಿಂ 1 ನೀನಿರುವ ಮನೆಯು ಶೋಭಿಸುತಿಹುದು ತಾನೇತಾ ಮಂಗಳ ನೆಲೆಸಿಹುದು ಸಾನುರಾಗದಿಂ ಸರ್ವರ ಜನನಿಯೆ ನಾನಿನ್ನಾದರದ ಪ್ರೇಮಸುಪುತ್ರನು 2 ನಿತ್ಯಾರಾಧನೆಗನುಕೂಲಗಳಂ ಸತ್ಯಧರ್ಮಗಳ ಬಿಡದಾಚರಿಪುದ ಸ್ತುತ್ಪತದಿ ಸಮಾರಾಧನ ವೆಸಗುನವ ಅತ್ಯಾನಂದದ ಸೌಭಾಗ್ಯವಿತ್ತು 3 ಸವಿ ಸವಿಭಕ್ಷ್ಯಗಳನುಗೊಳಿಸುತ್ತ ಸುವಿಮಲ ಮಂಗಲ ದ್ರವ್ಯಸುಪುಷ್ಪವ ಸುವಾಸಿನಿಯರಿಗೂ ಸದಭಕ್ತರಿಗುಂ ಸುವರ್ಣಭಾಜನದೀಯುವುದಿತ್ತು 4 ಹಾಲು ಹಣ್ಣು ಮಧು ಮಧುರದ ಮನೆಯಂ ಶ್ರೀಯೋಗಗಾನ ಧ್ಯಾನದ ನೆಲೆಯ ಬಾಲರ ಲೀಲೆಯ ಲಾಲನ ಪಾಲನ ಕಾಲವೆಲ್ಲ ಸೊಗನಗೆ ಮೊಗನೆರೆಯಲಿ 5 ಭೃಗುಸುತೆ ಕ್ಷೀರಸಾಗರಜಾತೆ ಭಗವತಿ ಭಾಗ್ಯದಾತೆ ಅಮೃತ ಮಂಗಳಸುಂದರಿ ಚಂದ್ರಸಹೋದರಿ ಅಗಲದೆ ಹರಿವಕ್ಷಸ್ಥಲಸ್ಥಿತೇ 6 ಸುವರ್ಣವರ್ಣಿ ಕಮಲಸುಚರಣೆ ಭುವಿಸುರ ಪೂಜಿತೆ ಕಲ್ಪಲತೆ ಭವ ಭವಹಾರಿಣೆ ಭಕ್ತೊದ್ಧಾರಿಣೆ ದಿವಿರಾಜವರದೆ 7 ಶ್ರೀಕರ ಸಾತ್ವಿಕ ಸುಲಲಿತರಿಂದ ನಾಕಿಗರೆಂಬೊ ಬಂಧುಗಳೊಡನೆ ಜೋಕೆಯ ಮಕ್ಕಳ ವಿವಾಹಗೈದು ಸಾಕಾರ ಸಂಸಾರ ಸುಖನಿಧಿ ಎನಿಸು 8 ಚಪ್ಪರ ತೋರಣ ಮೇಲ್ಕಟ್ಟುಗಳಿಂ ದೊಪ್ಪುವ ಬಗೆಬಗೆ ರಂಗವಲಿಗಳಿಂ ದಿಪ್ಪಾಸಾಗರ ಮಂಗಳ ವಾದ್ಯಂಗ ಳಪ್ಪ ಸದೃಹವ ಮಾಡುತ ಮಮತೆಯಿಂ9 ಅಪ್ರತಿಮ ರತ್ನಪೀಠವನಿಟ್ಟು ತುಪ್ಪದ ನಂದಾದೀವಿಗೆ ಹಚ್ಚಿ ಅಪ್ರಮೇಯನೋಡನಿಪ್ಪ ನಿನ್ನ ಸುಪ್ರೀತಿಯೊಳಾಂ ಪೂಜಿಪುದೀಯತ 10 ಪರಿಮಳ ತೈಲದಭ್ಯಂಜನದಿಂ ಸುರಭೀತೊಯ ಸ್ನಾವನಗೈದು ಹರಿದ್ರಾಕುಂಕುಮ ರತ್ನ ಕಿರೀಟವು ಸರಪೀತಾಂಬರ ಕಮಲವ ಧರಿಸಿ 11 ನರುಗುಂಪಿನ ಶ್ರೀಗಂಧದ ಲೇಪ ಪರಿಪರಿ ಘಮ ಘಮ ಸುಗಂಧ ಧೂಪ ಪರಮ ಪ್ರಕಾಶದ ಮಂಗಳ ದೀಪ ಸಿರಿಹರಿ ನಿಮ್ಮಯ ದಿವ್ಯ ಸ್ವರೂಪ 12 ಬಗೆ ಬಗೆ ಭಕ್ಷ್ಯವು ಕ್ಷೀರಾಜ್ಯಗಳಂ ಹಗಲಿರುಳುಂ ಫಲತಾಂಬೂಲಗಳಂ ನಿಗಮ ಸ್ತುತಿಕೈಗೊಳ್ಳುತ ಪಿಯೆ ನೀ ನಗಲದೆ ಸವಿಯುತ ಸಂತೋಷದಿಂದ 13 ಜಯ ಜಯ ಕರ್ಪೂರಾರತಿಮಾತೆ ನಯದಿಂ ಕುಸುಮಾಂಜಲಿಯಖ್ಯಾತೆ ದಯೆಯಿಂ ಭಾವಭಯ ಹರಿಸಾಪೂತೆ ಜಯ ಜಯ ಶ್ರೀಕೇಶವ ಸಂಪ್ರೀತೆ 14 ವಿಧಿರಮಾತೇ ಶ್ರೋಣಿತ ಚರಿತೆ ಬುಧಜನಪಾಲೆ ಕೃಪಾಲಪಾಲೆ ಮುದದಿಂ ಪಾಲಿಸು ಬಾಳಿನಲಿಡುತೆ ಹೃದಯನ್ನುತೆ ಜಾಜೀಶ ಸಹಿತೆ 15 ಅಗಣಿತ ಸುಗುಣೆ ಕರುಣಾಭರಣೆ ಜಗದೋದ್ಧಾರೆ ಜಯಜಯತಾರೆ ಯುಗಪದಕೀಗಲೆ ಮುಡಿಯಿಟ್ಟಿರುವೆ ಮಗುವಾದೆನ್ನಂ ಮಡಿಲೊಳಗಿಡು ನೀಂ 16
--------------
ಶಾಮಶರ್ಮರು
ನಿರುತದಿಂದಿಳೆಯೊಳು ಅರಸಿ ನೋಡಲು ಕಾಣೆ ಗುರು ಸತ್ಯಜ್ಞಾನರಿಗೆ ಪ ಸರಿ ಇಲ್ಲಿವರ ಚರಣಕಮಲವ ನಿತ್ಯ ದುರಿತ ಹರಿಪರ ಅ.ಪ ಸತ್ಯ ಜ್ಞಾನ ಗುರೋ ನೀ ಗತಿ ಎಂದವರ ನಿತ್ಯದಿ ಬಿಡದೆ ಕಾಯ್ವ ಅತ್ಯಾದರದಿ ಮಧ್ವಮತ ಸ್ಥಾಪಕರಾಗಿ ಮಿಥ್ಯಾ ಜ್ಞಾನಗಳಳಿದ | ಮೆರೆದ 1 ಸತ್ಯಧೀರರಿಂದ ಯತ್ಯಾಶ್ರಮ ಪಡೆದು ರತ್ಯಾದಿ ವಿಷಯವ ಬಿಟ್ಟು ಯತ್ಯಾಶ್ರಮೋಕ್ತ ಕೋಪತ್ಯಾಗಾದಿಗಳನು ವ್ಯತ್ಯಾಸಿಲ್ಲದೆ ನಡೆಸಿ | ಶೋಭಿಸಿ2 ಗುರು ಆರಾಧನಿ ದಿನ ತೀರ್ಥವ ಕೊಡುತಿರೆ ವರ ಸುವಾಸಿನಿ ಒಬ್ಬಳೂ ಕರವ ನೀಡಲು ಬಂದು ಅರಿತು ವಿಧವತ್ವ ನೆರಪೇಳ್ದರಪರೋಕ್ಷದಿ | ಭೂತಳದಿ 3 ಭರದಿಂದ ಸುರಿಯುತ್ತಿರೆ ಮೊರೆಯಿಡೆ ಎಡಬಲದವರು ಅದನು ಕೇಳೆ ದೂರಸ್ಥಳಿಹಳೆಂದ್ಹೇಳಿರು | ಪಂಕ್ತಿಯಲಿ 4 ಈ ರೀತಿಯಿಂದಲಿ ತೋರಿಸಿ ಮಹಿಮೆಯ ಇರಿಸೆ ಮಂತ್ರಿಸಿ ಫಲವ ಭರದಿ ಸುರಿವ ಮಳೆ ತ್ವರಿತದಿ ನಿಲ್ಲಲು ಅರಿತು ವಿಚಾರಿಸಲು | ನಿಜವಿರಲು5 ಪತಿ ಪೂಜೆ ಸಾವಧಾನದಿ ಮಾಡಲು ಇವರ ಮನೋಧಾರಡ್ಯ ಜವದಿ ಜಯಾಮುನಿ ಅವನಿಗರುಹಬೇಕೆಂದು | ತಾ ಬಂದು 6 ಬರುತಿರೆ ಉರಗಾಕಾರದಿಂದಲಿ ಬಂದು ಅರಿಯದ ಜನರು ಕೂಗೆ ಮಾರಮಣನ ಧ್ಯಾನ ಜರಿಯದೆ ಅವರಿಗೆ ತೋರಿದರಭಯವನು | ವಿಚಿತ್ರವನು 7 ಭೂವೈಕುಂಠದಿ ವಿಶ್ವರೂಪದರ್ಶನಕ್ಹೋಗೆ ಮಾರ್ಗವ ಕೊಡದಿರಲು ಭಾವದಿ ಧ್ಯಾನಿಸೆ ಶ್ರೀ ವಲ್ಲಭನಾಮ ಧರಿಸದೀರಾಧರಿಸೇ | ಧರಿಸಿ 8 ಈ ವಿಧ ಮಹಿಮೆಯ ತೋರಿಸಿ ಜಗದೊಳು ಗೋದಾತೀರದಿ ಶೋಭಿಪ ಅವನಿಪ ಮಹೇಂದ್ರ ಭುವನ ಶ್ರೀ ನರ ಹರಿ ನಿನ್ನ ಮಾಘಸಿತದಿ | ಸ್ಮರಿಸಿದ9
--------------
ಪ್ರದ್ಯುಮ್ನತೀರ್ಥರು
ಮಹಾಲಕ್ಷ್ಮೀ ಅಷ್ಟಕಂ ಪಂಕಜ ಮಾಲಿನಿಪಾಹಿಮಾಂ ಕರವೀರವಾಸಿನಿ ಪಾಹಿ ರಾಘವ ಕಾಮಿನಿ ಪ ಚಂದ್ರಮಂಡಲ ಹಾಸ ಸನ್ಮುಖ ಮಂದಹಾಸ ಸುಶೋಭಿತೆಸಿಂಧುರೇಂದ್ರ ಕರಾಮೃತೌಘ ಸುಗಂಧ ಬಿಂದು ನಿಷೇಚಿತೆಕುಂದರೋಜ್ವಲ ಇಂದ್ರನೀಲ ಮಣೀಂದ್ರಹಾರ ವಿಲಾಸಿತೇಬಂದ್ರಿರಾಜಸುತೇವ ಸೂನುಮನಾದಿ ಬಂಧ ವಿವರ್ಜಿತೇ 1 ಸಾಂಬ ಸುಶಾಂತಿ ಕಾಂತಿ ಸಹೋದ್ಭವೆ 2 ಚಾರು ಸುರಾಳಿ ಮೌಳಿಗ ಹಸ್ತತೇ 3 ತಪ್ತಕಾಂಚನ ನೂಪುರೋಜ್ವಲ ರಕ್ತಪಾಲ ಸರೋರಹೆಚಿತ್ರಪೇಟ ಪಟೋಲ್ಲ ಸತ್ಕಟೆ ರತ್ನ ಕಾಂಚಿ ಗುಣೋದ್ಭವೇನಿತ್ಯತೃಪ್ತ ನಿರಂಜನೈಸುರ ಮೃತ್ಯುಮೋಹನ ವಿಗ್ರಹೆತತ್‍ಕೃಪೈವಪು ಮೃತ್ಯುಸಾಧನ ಸಪ್ತ ಮೋಡಿಹ ವಿದ್ಮಹೆ 4 ಅಂಬಜಾವಕ ಲಕ್ಷ್ಮೀ ಮೇಷ ಕದಂಬಿನೀನಿಲಯಸ್ಥಿತೆಕಂಬುಕಂಜರ ತಾರಿಬೇಟ ಕರಾಂಬು ಸಂಭವ ಸೇವಿತೆಶಂಭರಾರಿ ಸುತಾಂಘ್ರಿಪಂಕಜೆ ಬಿಂಬರಾಹಿ ಭೂಸುತೆಸಾಂಬಹೀಂಬ ನಿಹಾ ಸುದರ್ಶಯ ಜಂಜವೈರಿನಿ ಸೇವಿತೆ 5 ತಲ್ಪ ಮಂದ ಸೌಭಗ ಶಾಲನಂವಂದ್ಯ ಮಾನ ವಿದೇಂದ್ರ ದೈವತ ವೃಂದ ವೈಭವದಾಯಿನಂಸುಂದರಾಂಗಿಣಿ - ನಿವೇದಗೇಹ ಭವಾಂಧಿ ಪೋಪನೀ ಶೋರ್ಪಣಂ 6 ಜೀವವರ್ಗ ಹೃದಾಲಯ ಸ್ಥಿತ ಭೂವರಾಹಸಹಾನನೇಪಾವನೀತಾಹೇ ವಸೇದ್ರುಮ ಹಾನು ಭಾವ ಶಿಖಾಮಣಿಹಾವಭಾವ ವಿಲಾಸಿನಾಕಿ ಸುವಾಸಿನಿನುತ ಸದ್ಗುಣಿಸೇವಕೇಯ ವಿಭಾವಿತಾಖಿಲ ಭಾವಕಾಯದ ಶಿಕ್ಷಣಿ 7 ಇಂದಿರೇಶ ಸತೀಂದುಮೌಳಿ ಕರಾರವಿಂದ ನಿಷೇವಣೇಚಂದ್ರಮಾರುತರೇಂದು ಸೈಂದವವೀಂದ್ರ ಪೂರ್ವಸು ವಾಹನೇಅಂಧಕೂಪ ಸಮಾನ ದುರ್ಭವ ಬಂಧ ಸೇಘನೀ ಪೋಷಿಣಿನಂದನಂದನ ಮಾಸುದರ್ಶಯ ಬಂಧುರಾಮೃತ ಭಾಷಿಣಿ 8
--------------
ಇಂದಿರೇಶರು
ಸರೋಜಜಾತೆ ಜಗನ್ಮಾತೆ ಪಾಲಿಸು ಜನಕಸುತೆ ಜನನಮರಣರಹಿತೆ ಪ ಬನ್ನಬಡಿಸುವುದೇ ನಮ್ಮ ಸೀತಮ್ಮ ಅ.ಪ ಪತಿಹೃದಯನಿವಾಸಿನಿ ಸುವಾಸಿನಿ ಭ- ವತ್ಪಾದಾಂಬುಜ ಭಜಿಸುವ ಜನರು ಸತತವಿಹಪರದಿ ಸೌಖ್ಯ ಪಡುವರೆಂದು ಸಾ- ರುತಿಹವು ಶೃತಿ ಸ್ಮøತಿ ಪುರಾಣ 1 ಭವ್ಯ ಚರಿತರಾದ ಬ್ರಹ್ಮಾದಿಗಳಿಗಳವೆ ನಿನ್ನ ದಿವ್ಯಾಂಘ್ರಿ ದರ್ಶನವಾಗುವುದು ಸೇವ್ಯನಾದ ಪತಿಚಿತ್ತಾನುಸಾರದಿ ಜೀವನಿಕರವ ಕರುಣದಿ ನೋಡುವ 2 ಕೃತಿ ಶಾಂತಿ ರುಕ್ಮಿಣಿ ಲಕುಮಿ ನಿರುತವು ನೆನೆವರ ದುರಿತಗಳ ಕಳೆದು ಗುರುರಾಮವಿಠಲನ ಚರಣವ ತೋರಿಸೆ 3
--------------
ಗುರುರಾಮವಿಠಲ