ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನವ ಸುವರ್ಣದಾ ಪರಿಯ ಹೊಳೆವ ಕೆಂಜೆಡೆಯಲೀ ದಿವಿಜ ನದಿಯ ನಿರುತ ಧರಿಸೀ ಮುಂದಲಿಯ ಲೀ ತವ ಶೀತಾಂಶೂನಾ ಕಳೆಯ ತಿಲಕಾ ಮಾಡಿ ಮೆರೆವಾ ಭವ ಭಯ ನಿವಾರಿಸಿ ಹೊರೆವಾ 1 ಮದನ ನಳಿದಾ ಭಾಲನಯನಾ ಸುವಿಧ್ಯದಿ ಮೊರೆಹುಗಲು ವಲುವಾನಂದನಯನಾ ಫಣಿ ಭೂಷಣ ಮಾರಿ ಮೆರೆ ವಾ ಭವ ಭಯ ನಿವಾರಿಸಿ ಹೊರೆ ವಾ 2 ಠವ ಠವಿಸುವ ಮುನಿಯ ಮನೋಹರ ಪಂಚ ವದನಾ ರವಿ ಕೋಟಿ ತೇಜದಿರುವಾಘನ ಕಾರುಣ್ಯ ಸದನಾ ಭವಾನೀ ಯಡದ ತೋಡಿಯಲಿರಿಸೀ ಕೊಂಡು ಮೆರೆವಾ ಭವ ಭಯ ನಿವಾರಿಸಿ ಹೊರೆವಾ 3 ಧವಲೀಸುತಿಹ ತನು ರೂಚಯ ಕರ್ಪೂರ ಪರಿಯಾ ತವಕದಿಂದುಟ್ಟಾ ಉಡುಗಿ ಹರನಾ ಚರ್ಮ ಕರಿಯಾ ಸವಿಭೂತಿಯ ಸುಧರಿಸಿ ತಪವೇಷದಿ ಮೆರೆ ವಾ ಭವ ಭಯ ನಿವಾರಿಸಿ ಹೊರೆವಾ 4 ಭುವನತೃಯದಾ ಸುರನರೋರಗ ಪೂಜಿಸುತಿಹಾ ಪಾದ ದ್ವಿತೀಯಾ ಅವಿನಾವಾ ದೇವರ ಜನಗಿರಿ ವಾಸವಿ ಮೆರೆ ವಾ ಭವ ಭಯ ನಿವಾರಿಸಿ ಹೊರೆ ವಾ 5 ತ್ರಿವಿಧ ತಾಪವಾಹರಿಸುವದು ಹರಯಂದ ಭರವಿದೀ ಭವಯನ್ನ ಲಾಗಾ ಸುಖಗರೆವ ಸಾನಂದ ವರದೀ ಭವ ಭಯ ನಿವಾರಿಸಿ ಹೊರೆ ವಾ 6 ಸವಾರೀಧರನಾವರಣದಿರುವಾ ಕಪ್ಪುಗೋರಳಾ ತ್ರಿವಿಷ್ಟಾಪರಿಯಾ ಪದವ ಮುನಿವಾ ತ್ರಿಶೂಲ ಸರಳಾ ಕವಿಬೋಧಿಸುವಾ ಡುವರ ಸೂತ್ರದ ಕೈಯ್ಯಾ ಮೆರೆ ವಾ ಭವ ಭಯ ನಿವಾರಿಸಿ ಹೊರೆ ವಾ 7 ಶಿವಷ್ಟಕವನು ಹೃದಯ ಪತ್ರ ಮ್ಯಾಲ ಬರವಾ ಅವನಿಷ್ಟಾರ್ಥವಾ ಕುಡುತ ದುಷ್ಕøತ ಮೂಲಹರಿವಾ ಅವಿದ್ಯೋಡಿ ಸುವಾ ಗುರು ಮಹಿಪತಿಯಾಗಿ ಮೆರೆ ವಾ ಭವ ಭಯ ನಿವಾರಿಸಿ ಹೊರೆ ವಾ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಯೆಂದು ಮನದಲ್ಲಿ ಮರೆದೊಮ್ಮೆ ನೆನೆದರೆ |ದುರಿತಪರ್ವತ ಖಂಡಿಪುದು ವಜ್ರದಂತೆ ಪ.ಮೇರು ಸುವರ್ಣದಾನವ ಮಾಡಲು ಪುಣ್ಯ |ನೂರು ಕನ್ಯಾದಾನವ ಮಾಡಲು ||ಧಾರಿಣಿಯೆಲ್ಲವ ಧಾರೆಯ ನೆರೆಯಲು ||ನಾರಾಯಣ ಸ್ಮರಣೆಗೆ ಸರಿಬಹುದೆ ? 1ಹತ್ತುಲಕ್ಷ ಗೋದಾನ ಮಾಡಲು ಪುಣ್ಯ - |ವ್ರತಗಳಅನುದಿನ ಆಚರಿಸಲು ||ಶತಕೋಟಿ ಯಜÕನ ಮಾಡಲು ಲಕ್ಷ್ಮೀ - |ಪತಿನಾಮ ಸ್ಮರಣೆಗೆ ಸರಿಯೆನ್ನಬಹುದೆ 2ಗಂಗೆ ಕಾಳಿಂದಿ ಗೋದಾವರಿ ಕಾವೇರಿ |ತುಂಗಭದ್ರೆಯಲಿ ಸ್ನಾನವ ಮಾಡೆ ||ಮಂಗಳಮೂರುತಿ ಪುರಂದರವಿಠಲ |ರಂಗನ ಸ್ಮರಣೆಗೆ ಸರಿಯೆನ್ನಬಹುದೆ ? 3
--------------
ಪುರಂದರದಾಸರು