ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಊ. ವಿಶಿಷ್ಟ ಹಾಡುಗಳು ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ ಸಂಗಡಿಕ್ಕ ಬೇಡ ನೀವು ಭಂಗಬಡುವಿರಿ ಪ ಮುಂಗಡದ ಬಡ್ಡಿಯನು ಮುಂದೆ ಕಳುಹಿಸಿ ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ ಅ.ಪ ಕೋಲುಗಾರನೊಬ್ಬನಲ್ಲಿ ಹೊರಟನಂತೆ ಬೇಳುವ ಶಂಖದ ಧ್ವನಿಯ ತೋರ್ಪನಂತೆ ಹೀಲಿಯ ಕುಂಚವು ಕಯ್ಯೊಳಿಪ್ಪುದಂತೆ ಮೇಲೆ ಮೂರು ನಾಮ ಧರಿಸಿ ಬಪ್ಪನಂತೆ 1 ಮೂರುಗಡುಬ ಸುಳ್ಳನಾಡಿ ಮೀರಿ ಹೋಯಿತೀ ಸಾರಿ ಬಂದ ದೂತರಿಂಗೆ ಲಂಚ ನಡೆಯದು ಭಾರಿಯಿಕ್ಕಿ ಕೈಗೆ ಚಿಪ್ಪಳೇರಿಸುವರು ಸಾರಿ ಕಂಡು ಬದುಕುವರೆ ದಾರಿವೊಳ್ಳೆದು 2 ಮೊದಲ ಪತ್ರದ್ಹಣವ ಕೊಟ್ಟು ಬದಲು ಪತ್ರವ ಸದರ ಬಡ್ಡಿಯಿಂದ ಬರೆದು ಚದುರತನದಲಿ ಇದಿರು ಬಿದ್ದು ಕೈಯ ಮುಗಿದುವೊದಗಿನಿಂದಲೆ ಗದರಬೇಡ ಬನ್ನಿ ಚಿನ್ನ ವರದನಲ್ಲಿಗೆ 3 ದುಡ್ಡು ಕೊಟ್ಟು ಮಡ್ಡಿಯನ್ನು ತೆಗೆದು ಉಂಬೆವು ಅಡ್ಡಕೊಂಡು ಅತಿರಸವ ತೆಗೆದುಕೊಂಬೆವು ದೊಡ್ಡ ದೋಸೆ ವ್ಯವಹಾರವ ಮಾಡಿಕೊಂಬೆವು ಕಡ್ಡಾಯದ ಸರಕನೆಲ್ಲ ಕಂಡು ಬಿಡುವೆವು 4 ಗಂಧಿಕಾರನಂಗಡಿ ಗೋವಿಂದನಲ್ಲಿ ಚಂದದ ಔಷಧವನ್ನು ತಿಂಬೆವಲ್ಲಿ ಬಂದ ಭವದ ರೋಗ ಕೊಂದೆವಲ್ಲಿ ಆತ ಮಿಂದ ತೀರ್ಥವನ್ನು ಊರಿಗೆಂದೆವಲ್ಲಿ 5 ಸಾಲವನ್ನು ತಿದ್ದಿ ಮುದದ ಸಾಲವನ್ನು ನಾಲಿಗೆಯ ಪತ್ರದಿಂದ ತಂದೆವಿನ್ನು ನೀಲದ ಮಣಿಯನೊಂದ ಕದ್ದುದನ್ನು ಆಲಿಯೊಳಗಿಟ್ಟುಕೊಂಡು ಬಂದುದನ್ನು 6 ಅಂಗಡಿ ಗೋವಿಂದ ಬಹಳ ಅಂಗವುಳ್ಳವ ಮಂಗಳವ ಮಾರುವಲ್ಲಿ ಶೃಂಗಾರವುಳ್ಳವ ಬಂಗಾರ ವ್ಯಾಪಾರದಲ್ಲಿ ತುಂಗ ವಿಕ್ರಮ ಮುಂಗುಡಿಯ ಜನಕೆ ಅಂತರಂಗ ಕೊಡುವವ 7 ದಾಸರಿಗೆ ಧರ್ಮವನ್ನು ಕೊಡುವನಲ್ಲದೆ ಕಾಸು ಹೊರತು ಮೀಸಲನ್ನ ನೀಡಲರಿಯನು ಶೇಷಗಿರಿಯವಾಸನೆಂದು ಹಾಸಿಕೊಂಬನು ಬೇಸರನ್ನು ಕಂಡು ಸಂತೋಷವೀವನು 8 ಸ್ವಾಮಿಯೆಂಬ ತೀರ್ಥದೊಳಗೆ ಮಿಂದೆವಲ್ಲಿ ಭೂಮಿ ವರಾಹತಿಮ್ಮಪ್ಪನ ಧ್ಯಾನದಿಂದಲಿ ಕಾಮಿತ ವ್ಯಾಪಾರವನ್ನು ತಂದೆವಿಲ್ಲಿ ಆ ಮಹಾ ಚಂದ್ರಾರ್ಕವಾಗಿ ಬಾಳುವಲ್ಲಿ 9
--------------
ವರಹತಿಮ್ಮಪ್ಪ
ನಿನ್ನಪಾದ ದೊರಕುವುದು ಎಂತೆನಗೆ ರಂಗ ಗನ್ನಗತಕ ನಾನು ಪುಣ್ಯದ್ಹಾದ್ಯರಿಯೆ ಪ ಕಳ್ಳನಾಗಿ ಜೀವಿಸಿದೆ ಸುಳ್ಳನಾಡಿ ನಾ ದಣಿದೆ ತಳ್ಳಿಕೋರತನದನ್ಯರ್ಹಾಳು ಮಾಡಿದೆನೊ ಖುಲ್ಲತನದಿಂ ಪರರ ನಲ್ಲೆಯರೋಳ್ಮನಸಿಟ್ಟು ಕ್ಷುಲ್ಲಕನಾದೆ ನಾನೆಲ್ಲಿ ನೋಡಲವ 1 ಅನ್ನಕೊಟ್ಟವರಿಗೆ ಅನ್ಯಾಯಯೋಚಿಸಿದೆ ಬನ್ನ ಬಡಿಸಿದೆನಯ್ಯ ನನ್ನನಂಬಿದವರ ಎನ್ನ ಪಡೆದವರನ್ನು ಮನ್ನಿಸಿನೋಡಿಲ್ಲ ನಿನ್ನ ಧ್ಯಾನದ ಖೂನವನ್ನರಿಯೆ ದೇವ 2 ಗುರುಹಿರಿಯರನು ಜರಿದೆ ಪರಿಪರಿಯಲಿ ನಾನು ಪರರಿಗೊಂದಿಕ್ಕಿ ನಾನುಂಡಿರುವೆನೊಂದು ಧರೆಯೊಳೆಣೆಯಿಲ್ಲದ ದುರಿತವನು ಗಳಿಸಿರುವೆ ಕರುಣಾಳು ಶ್ರೀರಾಮ ನೀನೆ ಪೊರಿಬೇಕೊ 3
--------------
ರಾಮದಾಸರು
ಹೊಟ್ಟೆ ಎಲೆ ಹೊಟ್ಟೆ ಭ್ರಷ್ಟ ನಿನಗಾಗಿ ಜಗದೊಳು ನಾ ಕೆಟ್ಟೆ ಪ ಜನರ ಗೋಣು ಮುರಿದೆ ನಿನಗಾಗಿ ಪರರಿಗ್ಹಾನಿ ಬಯಸಿದೆ ನಿನಗಾಗಿ ಮಾನಹೀನಾದೆನು ನಿನಗಾಗಿ ಮಾಣದ ಅಪವಾದ ಕ್ಷೋಣಿಯೊಳ್ಹೊತ್ತು ನಾ ಕ್ಷೀಣಿಸುತಿರುವೆನು ಗೇಣ್ಹೊಟ್ಟೆ ನಿನಗಾಗಿ 1 ಬಹು ಸುಳ್ಳನಾಡಿದೆ ನಿನಗಾಗಿ ಮಹ ಕಳ್ಳನೆನಿಸಿದೆ ನಿನಗಾಗಿ ತೊರೆದೊಳ್ಳೆಗುಣವ ನಿನಗಾಗಿ ಗುರು ತಳ್ಳಿಬಿಟ್ಟೆನು ನಿನಗಾಗಿ ತಿಳಿಯದೆ ಕೆಟ್ಟೆನು ಇಳೆಯೊಳು ತಿರುಗುತ ಕಳವಳಿಸುತಲತಿಲೊಳ್ಳೊಟ್ಟಿ ನಿನಗಾಗಿ 2 ನಿನ್ನ ನಂಬಿ ಮರೆದೆ ರಾಮನಾಮ ನಿನ್ನ ನಂಬಿ ತೊರೆದೆ ನಿತ್ಯನೇಮ ನಿನ್ನ ನಂಬಿ ಪಡೆಯದ್ಹೋದೆ ಕ್ಷೇಮ ನಿನ್ನ ನಂಬಿ ಬಿಟ್ಟೆನು ಅತಿಶ್ರಮ ನಿನ್ನಿಂದ ಮತಿಗೆಟ್ಟೆ ನಿನ್ನಿಂದ ವ್ಯಥೆಪಟ್ಟೆ ನಿನ್ನಿಂದ ಗತಿಗೆಟ್ಟೆ ಸತತ ಭುವನದೊಳು 3
--------------
ರಾಮದಾಸರು
ಎಂದಿಗೆ ಬಿಡಿಸುವೆದಂದುಗಗೋವಿಂದ ದಣಿಸುತಿದೆದಂದುಗಪ.ಸುಳ್ಳನಾಡಿಸುತಿದೆದಂದುಗನೇಮಗಳ್ಳನ ಮಾಡಿತುದಂದುಗಎಲ್ಲೆಂಜಲುಣಿಸಿತುದಂದುಗಕೈವಲ್ಯವ ಮರೆಸಿತುದಂದುಗ1ಹರಿಸೇವೆ ಬಿಡಿಸಿತುದಂದುಗಗುರುಹಿರಿಯರನ್ವಂಚಿಪದಂದುಗಸರಕುಮಾಡಿತು ಎನ್ನದಂದುಗಯಮಪುರದಾರಿವಿಡಿಸ್ಯದೆದಂದುಗ2ನೀಚಗಂಚಿಸುತಿದೆದಂದುಗಕ್ಷುದ್ರಯಾಚನೆವಿಡಿಸ್ಯ್ಕದೆದಂದುಗಆಚಾರ ಚರಿಸಿತುದಂದುಗದುಷ್ಟ್ಯೋಚನೆ ತ್ಯಜಿಸದುದಂದುಗ3ಕಾಂಚನದಾಸೇಲಿದಂದುಗಕೆಟ್ಟಹಂಚಿಗ್ಹಲ್ದೆರೆಸಿತುದಂದುಗಪಂಚಗಂಗೆಯ ಬಿಟ್ಟುದಂದುಗಜೊಂಡುಬೆಂಬಿಲಿ ಮೀಯಿಸಿತುದಂದುಗ4ನಿನ್ನೊಲುಮ್ಯೊದರಿದಂದುಗಕಾಡಿಎನ್ನಾಳೋದುಂಟೇನೊದಂದುಗಪ್ರಸನ್ವೆಂಕಟೇಶ ನಾಮಜಿಹ್ವೆಪೂರ್ಣಗಲ್ಲಾದ್ಯಂತದಂದುಗ5
--------------
ಪ್ರಸನ್ನವೆಂಕಟದಾಸರು