ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತುನುತಿಪೆ ನಾನು-ಈ ಜಗ | ದಂತರ್ಯಾಮಿಯನು ಪ ಸಂತತ ವಾಙÁ್ಮನ ಅ.ಪ. ಸಾಸಿರ ಮುಖದವನ-ಅವಯವ-ಸಾಸಿರವುಳ್ಳವನ ಸಾಸಿರ ಪೆಸರವನ-ರೂಪಿ ಸಾಸಿರವಾಗಿಹನ ಮೀಸಲಳಿಯದಂತೀ ಸಚರಾಚರ ವಾಸಿಯಾದ ಶ್ರೀ ವಾಸುದೇವನು1 ಜಗವನು ನಿರ್ಮಿಸುವ-ಬೊಮ್ಮನು-ಮಗನೆಂದೆನಿಸಿರುವ ಬಗೆಯುವದೀಜಗವ-ಜಠರದಿ-ನುಸುಳಿಸಿಕೊಂಡಿರುವ ಮಗುಳಿದ ನಳಿಯುವ ನಗಚಾಪರಮೊಮ್ಮಗನೆಂಬುವರೀ | ಯಗಣಿತ ಮಹಿಮನ 2 ನಿಗಮವ ಪೆತ್ತವನ-ಬೊಮ್ಮಗೆ-ನಿಗಮವನಿತ್ತವನ ನಿಗಮೋದ್ಧಾರಕನ-ನಿತ್ಯದಿ-ನಿಗಮಗೋಚರನ ಬಗೆಬಗೆಯೋಗಿಗಳ ಧ್ಯಾನಕೆನುಗಳಿದ ಶ್ರೀಪದ ಯುಗಳಾಂಬುಜನನು 3 ಮಾಯಾಧೀಶ್ವರನ-ದೇವನಿ-ಕಾಯಾರಾಧಿತನ ಕಾಯಜ ಸುಂದರನಾ-ಜೀವನಿ-ಕಾಯಕೆ ಮಂದಿರನಾ ಮಾಯಾಕಾರನಿವ ನಾಯವ ನರಿಯದೆ ದಾಯಗೆಟ್ಟರ ನ್ಯಾಯದಿ ಮುನಿಗಳು 4 ಪರಮಪದದೊಳಿಹನಾ ಪುನರಪಿ- ತರಣಿಯೊಳಿರುತಿಹನ ಶರನಿಧಿ ಮಂದಿರನಾ-ಶ್ರೀ ಪುಲಿಗಿರಿಯೊಳು ನಿಂದಿಹನ ನಿರುತವು ತನ್ನಯ ಚರಣವ ನಂಬಿದ ಶರಣರ ಪೊರೆಯುವ-ವರದ ವಿಠಲನಾ 5
--------------
ಸರಗೂರು ವೆಂಕಟವರದಾರ್ಯರು
ದಾನಿ ಸದ್ಗುರು ಕೊಟ್ಟಾ ಸ್ವಾನಂದ ಸುಖವಾ ಪ ಕರದು ಘನದಯ ಮಳೆಗರದಾ | ಕ್ಷರವ ನುಡಿದು ಯನ್ನ ಕಿವಿಯೊಳುಸುರಿದಾ 1 ನಯನ ವೆರಡರಲಿ ಮುದ್ರಿಯನಿಲಿಸಿ | ಮಯ ಪ್ರಭೆ ಕುರುಹನು ದೋರಿದ ಸುಳಿಸಿ2 ಬೋಧ ವೆಚ್ಚರಿಸಿ | ದನು ಗುರು ಮಹಿಪತಿ ಕಂದನುದ್ಧರಿಸಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನವ ನಾನೆಂದು ಸಿರಿನಲ್ಲಾ ರಕ್ಷಿಸೋ | ಎನ್ನವಗುಣಗಳ ಎಣಿಸದೆ ದಯದಿಂದ ಪ ನಿನ್ನ ಮೂರುತಿಯ ಬೆಳಗವದೋರಿಸಿ | ನಿನ್ನ ಪಾದಾಂಬುಜ ಪರಿಮಳ ಸುಳಿಸಿ | ನಿನ್ನ ನಾಮಾಮೃತ ಸವಿಸವಿ ಉಣಿಸಿ1 ನಿನ್ನ ಪೂಜಿಸಿಕೊಂಡು ಕರಗಳಿಂದ | ಚೆನ್ನಾಗಿ ಪ್ರದಕ್ಷಿಣೆಯಾ ಪಾದಗಳಿಂದ | ಕಾಯ ನಮನದಿಂದ - ಎನ್ನ ಮನವಿಟ್ಟು ನಿನ್ನ ನೆನುವಿನಿಂದಾ2 ಅನುದಿನ ಕೊಟ್ಟು ನಿನ್ನ ದಾಸರ ಸಂಗ | ಕೊನೆದೇಳದಿರಲೆನ್ನಾ ವಿಶ್ರಾಮದಂಗ | ನೀನಾಗಿರು ತುಂಬಿಯೆನ್ನಾ ಬಾಹ್ಯಾಂತರಂಗ | ಘನಗುರು ಮಹಿಪತಿ ಪ್ರಭುಶ್ರೀರಂಗ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾಡಿದಿ ಸಂಧ್ಯೆಯನು ವೆಂಕಟಕೃಷ್ಣಾಮಾಡಿದಿ ಸಂಧ್ಯೆಯನು ಕೂಡುತಾಸನದೊಳುಜೋಡು ಬಾಲಕರಿಬ್ಬರಾಡುತ ಮನೆಯೊಳು ಪ ತಂಬಿಗಿ ಥಾಲಿಯ ತುಂಬಿಸಿಟ್ಟಿದ ಗೋಪಿಡಿಂಬುರಿಬ್ಬರು ಆಪಸ್ತಂಭ ಶಾಕದಲಿ 1 ಕೇಶವ ತುದಿ ಮೊದಲೀಸು ಸಂಧ್ಯೆಯ ಮಾಡಿಕೂಸುಗಳು ಭಯತರಾಸು ಭುಂಜಿಸಿರಿ 2 ಶೇಷ ಮಂಚದಿ ರಮಾ ಹಾಸಿಯೊಳ್ಹಾಸಿರೆತೋಷದಿ ಮಲಗಿಂದಿರೇಶ ಸುಳಿಸಿರಿ 3
--------------
ಇಂದಿರೇಶರು