ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿ ನೀನೆ ವೇಲಾಪುರಿ ಶ್ರೀ ಚನ್ನರಾಯಾ ಪ ಪೊಳೆವ ನಂದನವನದಲಲರ್ದ ಮಾವಿನ ನೆಳಲ ಲಲರುವಾ ಸಿರಿತೋಳ ತಲೆಗಿಂಬನೊರಗೀ ಅಳಿಯ ಮೃದುಗಾನಕ್ಕೆ ತಲೆದೂಗುತಲೆ ನುಡಿದ ವಿಲಸಿತದ ಸರಸ ವಚನವ ಚೆನ್ನರಾಯಾ 1 ಬೆಳದಿಂಗಳೆರಕದಂದದ ಸಾರದ್ಹಂದರದಿ ಪೊಳೆವಿಂದುಕಾಂತದ ಜಗುಲಿಯೊಳೆನ್ನ ತಲೆಯ ಮಗ್ಗಲನೊರಗಿ ಸುಳಿವೆಲರಗಾಳಿಗಂಜಿಸುತ ಕಲೆಯರಿತು ಮೈಮರಸಿದುದ ಚನ್ನರಾಯಾ 2 ತನುಮಿಸುಕೆ ಬಹುವಿಧದಿ ಧ್ವನಿಗೈವ ಶಕುನಿ ಪೆಸ- ರಿನ ಮಂಚದಲಿ ಹಂಸತೂಲ ತಲ್ಪದಲಿ ಮನಸಿಜಾಗಮವರಿತು ಮನವ ಮೆಚ್ಚಿಸಿದೆ ಎ- ನ್ನಿನಿಯ ಶ್ರೀ ವೈಕುಂಠಪತಿ ಚೆನ್ನರಾಯಾ 3
--------------
ಬೇಲೂರು ವೈಕುಂಠದಾಸರು
ದಾಸರ ದಾಸರ ದಾಸನೆಂದೆನಿಸುವ ಲೇಸು ಭಾಗ್ಯವ ಕೊಡೊ ಶಾಶ್ವತವಾಗಿಪ ಆಶಾಪಾಶವ ನಾಶನಗೈಸಿ ದೇಶಿಗರೆಲ್ಲರ ಕೂಸೆಂದೆನಿಸಿ ಅ.ಪ. ಉಪಟಳ ಬಹಳ ನೇಮ ನಿಷ್ಠೆಯ ಸುಳಿವೆನಗಿಲ್ಲ ತಾಮಸನಾಗಿ ಬಳಲಿದೆನಯ್ಯ ಪ್ರೇಮದಿ ಪಿಡಿದು ಸಲಹೊ ದಮ್ಮಯ್ಯ 1 ವದನದಿ ನಿನ್ನ ನಾಮವ ನುಡಿಸೊ ಪದದಲಿ ನಿನ್ನ ಯಾತ್ರೆಯ ನಡೆಸೊ ಹೃದಯದಿ ನಿನ್ನ ರೂಪವÀ ತೋರಿ ಅನುದಿನ ಶೌರಿ 2 ಭಕ್ತವತ್ಸಲ ಭಾಗ್ಯಸಂಪನ್ನ ಭಕ್ತರ ಸಂಗತಿ ಪಾಲಿಸೊ ಘನ್ನ ಉಕ್ತಿಯ ಲಾಲಿಸೊ ನಾನು ಅನಾಥ ಮತ್ತೇನು ಬೇಡೆನೊ ಶಕ್ತ ಶ್ರೀಕಾಂತ 3
--------------
ಲಕ್ಷ್ಮೀನಾರಯಣರಾಯರು
ಯಾಕೆ ದಯಬಾರದೊ ಕಾಂತೇಶ ಪ್ರಾಣೇಶ ಸಾಕಲಾರದೆ ಪೋದೆಯಾ ಎನ್ನನು ಪ. ಏಕಚಿತ್ತದಿ ನಿನ್ನ ಚರಣ ನಂಬಿ ಬರಲು ಭಾರತೀಶ ಅ.ಪ. ತೊಳಲಿ ಬಳಲಿ ಸುಖ ಸುಳಿವೆಂಬೋದರಿಯದೆ ನಳಿನಾಕ್ಷನ ದಾಸ ನಿನ್ನ ಕೀರ್ತಿ ಇಳೆಯೆಲ್ಲ ಪೊಗಳಲು ಸಲಹುವನೆಂತೆಂದು ಬಳಿಗೆ ಬರಲು ಮನಕರಗದೆ ತಂದೆ 1 ಅಂದು ಕನಸಿನಲ್ಲಿ ಶಿರದಲ್ಲಿ ಕರವಿಟ್ಟೆ ಇಂದೆಲ್ಲಿ ಪೋಯಿತೊ ಆ ಕರುಣ ತಂದೆ ಮುದ್ದುಮೋಹನ ಗುರುಗಳ ವಚನವ ಇಂದು ಒಲಿದೆನ್ನ ಕಾಯೊ2 ವಿೂಸಲ ದಾಸ್ಯಕೆ ಆಶೆ ಮಾಡಿದೆನೆಂದು ದೋಷವೆಣಿಸುವರೆ ಎನ್ನಲಿ ನೀ ಶೇಷಶಯನನೆ ಬಲ್ಲೆನೊ ಇದರ ಮರ್ಮ ಘಾಸಿಗೊಳಿಸದೆ ನೀ ಅಭಯವನೀಯೊ 3 ರಾಮದಾಸ್ಯವ ಬಯಸಿ ನೇಮದಿಂದಲಿ ಇದ್ದು ರಾಮನಾಗಮ ಕಂಡು ಎರಗಿ ನಿಂದು ಪತಿ ಪಾದ ದಾಸ ಸಿದ್ಧಿಯ ಪಡೆದು ಭೂಮಿಯೊಳು ಖ್ಯಾತನಾದೆಯೊ ಆಂಜನೇಯ 4 ಚಿತ್ತಿದಿ ಕೃಷ್ಣನ ದಾಸತ್ವ ಸಾಧಿಸಿ ಮತ್ತೆ ಮುನಿಯಾಗಿ ಗ್ರಂಥವ ರಚಿಸಿ ಚಿತ್ತದಿ ಗೋಪಾಲಕೃಷ್ಣವಿಠ್ಠಲನ ಪಾದ ನಿತ್ಯದಿ ಭಜಿಪೆ ನೀ ಮತ್ತೆನ್ನ ಕಾಯೊ 5
--------------
ಅಂಬಾಬಾಯಿ
ಮಂದಮತಿಯೈ ನಾನುಮದನಜನಕನು ನೀನುಕುಂದುಗಳನೆಣಿಸದಲೆ ದಯೆ ಮಾಡಿ ಸಲಹೋ ಪಪಾಪಕರ್ತನು ನಾನು ಪಾಪನಾಶಕ ನೀನುಕೋಪ ಮದ ಮತ್ಸರದಿ ಸುಳಿವೆ ನಾನು ||ತಾಪವನು ತರೆದು ನಿರ್ಭಯವ ಮಾಡುವೆ ನೀನುರೂಪಛಾಯಕೆ ಮರುಳುಗೊಂಬೆನೈ ನಾನು 1ಶರಣ ಶಿಕ್ಷಕ ನೀನುಪರಮಪಾತಕಿನಾನುದುರಿತಪರ್ವತವ ಪರಿಹರಿಪೆ ನೀನು ||ಮರುಳುಗೊಂಬನು ನಾನು ಅರಿತು ರಕ್ಷಿಪೆ ನೀನುಗರುವಮತಿಯೈ ನಾನಗಮ್ಯ ನೀನು 2ಮಂದಭಾಗ್ಯನು ನಾನು ಇಂದಿರಾಪತಿ ನೀನುಹಿಂದು ಮುಂದಿನ ಸುದ್ದಿ ಅರಿಯದವ ನಾನು ||ತಂದೆ ಶ್ರೀ ಪುರಂದರವಿಠಲ ರಾಯನೆ ದೇವಎಂದೆಂದು ಭಕ್ತರನು ಸಲಹುವೆಯೋ ನೀನು 3
--------------
ಪುರಂದರದಾಸರು