ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಪರಿಯಲಿ ನಿನ್ನನು ವೊಲಿಸುವೆ ದೇವ ಎನ್ನೊಳಗೆ ಒಂದಾದರೂ ಗುಣವಿಲ್ಲಾ ಪ ಅರಿಯೆ ಧರ್ಮವ ಪಾಪ | ಮರಿಯೆ ಉತ್ತಮರನ್ನ ಕರಿಯೆ ನಾಮಕೆ ಬಾಯಿ | ತೆರಿಯೆ ಸುರಿಯೆ ಜರಿಯೆ ಮೋºಕೆ ಮನ | ಮುರಿಯೆ ವ್ಯಾಕುಲ ಜ್ಞಾನಾಂ | ಕುರಿಯ ನಿನ್ನವರೊಳು | ಬೆರಿಯೆನರಿಯೆ ಸರಿಯೆ ದುಸ್ಸಂಗ ಕಥಾ | ಬರಿಯೆ ಕರದಿ ಯಾತ್ರಿಗೆ ಹರಿಯೆ ಪುಣ್ಯ ತೀರ್ಥ | ವರಿಯೆ ಮೊರಿಯೆ ಹರಿಯೆ ಜಗದೊರೆಯೆ | ಸಿರಿದೊರೆಯೆ ಅಘ ಕರಿಗೆ ಕೇಸರಿಯೆ ಮತ್ತಾ | ರರಿಯೆ ನಿನ್ನವರ ಮರಿಯೆ1 ನಡಿಯೆ ಸುಮಾರ್ಗ ವ್ರತವಿಡಿಯೆ ಮುಡಿದ ಪೂವು ಮುಡಿಯೆ ಕಾಮದ ಮರ್ಮ | ತಡಿಯೆ ಕಡಿಯೇ ಕುಡಿಯೆ ಪಾಪೋದಕವ ನುಡಿಯೆ ಮಂಗಳ ವಾರ್ತಿ ಪಿಡಿಯೆ ಭಕುತಿ ನೀತಿ ಪಿಡಿಯೆ ಗುಡಿಯೇ ಸುಕೃತಿ ಕಾಳ | ಗೆಡಿಯೆ ಪರರೊಸ್ತಕ್ಕೆ ತೊಡಿಯೆ ಚಿಂತಾತುರವ | ವುಧಿಯೆ ಹೊಡಿಯೆ ಕೊಡಿಯೆ ಎನ್ನಗೊಡಿಯೆ ನೆಂ | ದೆಡೆಯಲ್ಲಿ ಸೂಸಿದಾ ಪುಡಿಯಲ್ಲಿ ವೊಡಬೆರಸೆ | ಅಡಿಗಡಿಗೆ ಎನ್ನ ಕಡಿಗೆ 2 ಸುಳಿಯೆ ಕೀರ್ತನಿಗೆ ಮದ | ವಳಿಯೆ ಗುರುನಿಂದಕರ ಹಳಿಯೆ ಕಾಮದ ಕುಪ್ಪೆ | ಕಳಿಯೆ ಬಳಿಯೆ ತೊಳಿಯೆ ಮನನ ನರಕಕ್ಕೆ | ಮುಳಿಯೆ ಸುಮತಿಮಾರ್ಗ ತಿಳಿಯೆ ಪದವಿಗೆ ಪೋಗಿ | ಇಳಿಯೆ ಬೆಳಿಯೆ ಛಳಿಯೆ ಮುಂದಿನ ಜನನ | ಹೊಳೆಯೆಂಬೋದು ಅರಿದು ಸಂಚಿತ ಕರ್ಮ | ವಳಿಯೆ ತುಳಿಯೆ ವುಳಿಯೆ ಬೊಬ್ಬುಳಿಯೆ ಈ | ಕಳೆಯೇನುವಲ್ಲನಭ ಸುಳಿ ಹೃದಯಾವಳಿಯಲ್ಲಿ | ವಿಜಯವಿಠ್ಠಲವೊಳಿಯೆ3
--------------
ವಿಜಯದಾಸ
ಎನ್ನ ಪಾಲಿಸುವದಾಗದೇ|ಸಿರಿ ರಮಣಾ| ಪ್ರಸನ್ನ ವಿಮಲ ಅತುಳ ಶೇಷಗಿರಿಯ ವಾಸಾ ವೆಂಕಟೇಶಾ ಪ ದುರುಳ ದೈತ್ಯನ ಕರುಳ ಬೆರಳ ಸರಳ ಉಗುರಿನಿಂದ ವಿರಳ| ವಿರಳ ಮಾಡಿ ಪೊಸರಂತೆ ಕೊರಳಿಗಾಕಿ ಮರಳೆ| ತರಳಗೊಲಿದು ಹರಣಗಾಯ್ದೆ|ಆದೇಶದಲ್ಲಿ| ಅರಸುತನುವ ಕೊಟ್ಟು ನಿಲಿಸಿದೇ|ಕ್ಷಿತಿಯೊಳಗ| ಪರಮ ನಿಜ ಭಕ್ತನೆನೆಸಿದೇ 1 ನೆಗಳಿ ಬಂಧನ ಬಿಡೆ ಹರಿಗಳರಿಗಳ ಸಂಗಡಿಭಗಳ ಸಮೂ| ಪತಿ ನೀರ್ಗುಡಿಯೆ ಪೋಗಲಾಗಳೆ| ನೆಗಳಿ ಪಿಡಿಯೆ ಶ್ರೀ ಪಾದಗಳ ಯುಗಳ ನೆನಿಯ ಕೇಳದೇ| ಸಕಲ ಪಕ್ಷಿಗಳ ಶ್ರೇಷ್ಠ ನಿಲ್ಲದೊದಸಿದೇ|ಕರುಣದಿಂದ ಸುಗತಿ ಕೊಟ್ಟು ಜನಮ ಹರಿಸಿದೇ2 ಇಳೆಯ ಮದದಿ ದ್ರೌಪತಿಯನು| ತಿಳಿಯದೆಳಿಯೆ ಕಳಿಯೆ ಸೀರೆಯಾ| ಕಳಿಯೆ ಮಾನ ವಿಜಯಗೆಳೆಯ ಇಳೆಯ ಭಾರರ್ಬಳಿಯೆ| ಸುಳಿಯೆ ದಾಟಿಸೆನುತ ನುತಿಸೆ ತ್ವರಿತದೀ|ನೀನು ಸಭೆ| ಯೊಳಗ ಪೊರಯಿಸಿದೇ ವಸ್ತ್ರದೀ|ಮಹಿಪತಿ| ನಂದನೊಡೆಯ ವ್ಯಾಳ್ಯಕ್ಕೊದಗಿದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಗರ ಎಂಥನಗರ ನಿಂತು ವರ್ಣಿಸಬೇಕುಶ್ರೀಕಾಂತೆಯಿಂದ ಇಂತು ರಮಿಸುವುದು ಪ. ಮುಂದಕ್ಕೆ ನೋಡಲು ಹೊಂದಿದ್ದ ಮನೆಗಳುಹಂದರದ ಜಗಲಿ ಸುಳಿಗೊಳಹಂದರದ ಜಗಲಿ ಸುಳಿಯೆಲಿ ಬೀದಿಯಲಿತುಂಬಿದ ಜನರು ಕಡೆಯಿಲ್ಲ 1 ಅತ್ತಿತ್ತ ನೋಡಲು ಕಾಣುವ ಗೋಪುರಮುತ್ತಿನಂಗಡಿ ಎಡಬಲಮುತ್ತಿನಂಗಡಿ ಎಡಬಲ ನೋಡುತ ಕತ್ತೆತ್ತಿ ನೋಡಿದರೂ ಕಡೆಯಿಲ್ಲ 2 ಕೋಗಿಲದ ಸ್ವರದಂತೆ ಮಕ್ಕಳ ಜೋಗುಳಹಾಡುತೆ ಮನೆ ಬಾಗಿಲ ಮುಂದೆಹಾಡುತೆ ಮನೆಮುಂದೆ ಮಕ್ಕಳಲಾಲಿ ಪಾಡುವರು ಕಡೆಯಿಲ್ಲ3 ನವನೀತ ಭಾರವ ವಹಿಸಿ ಕೆಲರುಭಾರವ ವಹಿಸಿ ಕೆಲರು ಅಲ್ಲಲ್ಲಿಸಾರಿ ಮಾರುವವರು ಕಡೆಯಿಲ್ಲ4 ಹಸಿರು ಬಳೆತೊಟ್ಟು ಕುಸುರಿನ ಸಿಂಬೆಯಲಿಮೊಸರ ಗಡಿಗೆ ಎಸಗುತಮೊಸರ ಗಡಿಗೆ ಎಸಗುತ ಮಾರುವ ಬಿಸಜನೇತ್ರಿಯರು ಕಡೆಯಿಲ್ಲ 5 ಬಿಳಿಯ ದಟ್ಟಿಯುಟ್ಟು ಸಣ್ಣ ಬುಟ್ಟಿಹೊತ್ತುಕಣ್ಣು ಕಜ್ಜಲದ ಕೆಲದೆಯರು ಕಣ್ಣು ಕಜ್ಜಲದ ಕೆಲದೆಯರು ಕೂಗುತಹಣ್ಣು ಮಾರುವವರು ಕಡೆಯಿಲ್ಲ 6 ಅಮ್ಮಮ್ಮ ರಮಿಯರಸು ಒಮ್ಮೊಮ್ಮೆ ಬೀದಿಲೆಸುಮ್ಮನೆ ಸುಳಿವ ಯಮಕದಿಸುಮ್ಮನೆ ಸುಳಿವ ಯಮಕದಿ ಶ್ರೀಕೃಷ್ಣತನ್ನ ಭಕುತರನ ಸಲುಹಲಿ 7
--------------
ಗಲಗಲಿಅವ್ವನವರು
ವ್ಯಾಸಾ ಬದರಿ ನಿವಾಸಾ | ಎನ್ನಯ | ಕ್ಲೇಶ ನಾಶನಗೈಸು ಮೌನೀಶಾ | ಸಾಸಿರ ಮಹಿಮನೆ | ದೋಷರಹಿತ ಸುರ ಭೂಸುರ ಪರಿಪಾಲ ಶಾಶ್ವತ ವೇದ ಪ ಸತ್ಯವತಿ ವರಸೂನು ಭವತಿಮಿರ ಭಾನು | ಭೃತ್ಯವರ್ಗದ ಸುರಧೇನು | ಸತ್ಯಮೂರುತಿಯೆ ನೀನು | ಸ್ತುತಿಪೆ ನಾನು || ಹೊತ್ತು ಹೊತ್ತಿಗೆ ಸೂಸುತ್ತಿರಲೆನಗದು | ಅತ್ಯಂತ ಸುಖತರ | ಸುತ್ತವ ಸುಳಿಯೆಂದೆತ್ತಿ ಕಡೆಗೆಯಿಡು | ಎತ್ತ ನೋಡಲು ವ್ಯಾಪುತ ಸದಾಗಮ 1 ಲೋಕ ವಿಲಕ್ಷಣ ಋಷಿ | ಗುಣವಾರಿ ರಾಸಿ | ವೈಕುಂಠ ನಗರನಿವಾಸಿ | ನಾಕಾರಿಗಳ ಕುಲದ್ವೇಷಿ ಚಿತ್ರ ಸನ್ಯಾಸಿ | ಬೇಕೆಂದು ಭಜಿಪೆ ನಿಲಸಿ | ಜೋಕೆ ಮಾಡುವುದ | ನೇಕ ಪರಿಯಿಂದ | ನಿಕರ ತರಿಸದೆ | ಭೂಕಾಂತರು ನೋಡೆ | ಸಾಕಾರ ದೇವ ಕೃಪಾಕರ ಮುನಿ ದಿವಾಕರ ಭಾಸಾ2 ನಿರುತ ಎನ್ನಯ ಅರಿಷ್ಟ | ಮೆರೆವ ಉನ್ನತ ವಿಶಿಷ್ಟ | ಉರಗ ಕಿನ್ನರ ಗಂಧರ್ವರ | ಕರಕಮಲಗಳಿಂದ | ವರಪೂಜೆಗೊಂಬ | ಸಿರಿ ಅರಸನೆ ನಮ್ಮ ವಿಜಯವಿಠ್ಠಲ ಪರಾ | ಶರಸುತ ಬಲು ವಿಸ್ತರ ಜ್ಞಾನಾಂಬುಧೆ || 3
--------------
ವಿಜಯದಾಸ
ವಿಷಯದೊಳಿರೆಬ್ರಹ್ಮಜ್ಞಾನವಿಷಯ ಪಾಪ ಹತ್ತಿತೇನವಿಷಯದೊಳಿರುತಾತ್ಮನಾಗಿಯೆ ಎಚ್ಚರಿಕೆಭಸ್ಮವಹುದು ದುರ್ಗುಣಪಮುತ್ತೈದೆ ಇರುತಿರಲ್ಕೆ ಆಕೆಗೆ ಕೆಲಸವು ಬಹಳವಾಗಿಮುತ್ತೈದೆಯು ತಾನು ಎಂಬುದು ಮರೆತರೆಮತ್ತೆ ವಿಧವೆಯಾದುದೆಲ್ಲಿ1ಒತ್ತೊತ್ತು ಮನೆ ಇರುತಿರಲುಸ್ವಪ್ನಹತ್ತಿರೆ ಕೆಟ್ಟುಹೋಗಿರಲುಮತ್ತುತ್ತಮನು ಸ್ವಪ್ನದಲಿ ಕೆಟ್ಟು ಎಚ್ಚರವಾಗೆಉತ್ತುಮನು ಕೆಟ್ಟಿದೇನು2ಶರೀರ ಧರ್ಮವು ಜ್ಞಾನಿಗೆ ಹೊಳೆಯೆಕಾಮ ಹೊರಳಿ ಕ್ರೋಧ ಲೋಭ ಸುಳಿಯೆವರಚಿದಾನಂದ ಗುರುತಾನಾಗೆ ಎಚ್ಚರಿಕೆಮರೆದ ಕರ್ಮನಿಂದುರಿಯೇ3
--------------
ಚಿದಾನಂದ ಅವಧೂತರು