ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನ್ನ ಸ್ಮರಣೆ ತಾನರಿಯದ ಮನವು ಚಿನುಮಯ ರೂಪನ ಬೆನ್ನವಿಡಿವುದುಂಟೆ ಪ ಹಾವಿನ ಹೆಜ್ಜೆಯ ಹಾವರಿವಂದದಿ ಭಾವಿಸಿಕೊಳ್ಳದೆ ತಗ್ಗು ಮುಗ್ಗುಗಳ ಗೋವಳನಿಲ್ಲದ ಗೋವಿನ ತೆರನಂತೆ ಜೀವನುಂಗುವ ವ್ಯಾಘ್ರನಗ್ರಕೆ ಸುಳಿಯಲು 1 ಕನ್ನಡಿ ಶುದ್ಧವಾಗಿಯೆ ಕಾಣದ ದೃಷ್ಟಿ ಚಿನ್ನವಾರಿಕೆಯನ್ನು ಮಾಡುವ ಪರಿಯು ನಗದ ಮನ ಮನ್ನಣೆಯಿಲ್ಲದ ಮನೆಯೊಳುಂಬರೆ ಹೇಸ2 ಹೇಳಿದ ಮಾತನು ಕೇಳಿ ಮಾನಸದೊಳು ಮೇಳವಾಗುವೆನೆಂದು ಖೂಳತನದಿ ಪೋಗಿ ಕೇಳಿದ ಉತ್ತರಕುತ್ತರ ಹರಿಸದೆ ಆಳು ಬಾವಿಯ ಹಾರಿ ಹೊಳಚುವ ತೆರನಂತೆ 3 ಕಾಗೆಯು ಗರುಡನ ಸರಿಯೆಂದು ಜೂಜಾಡಿ ಸಾಗರವನು ಹಾರಿ ನಡುವೆ ಬಿದ್ದಂದದಿ ಯೋಗಿಯ ಪರಿಯಂತೆ ತಪವೆಂದು ತನ್ನಯ ಮೂಗ ಮುಚ್ಚಲು ಭವರೋಗ ಹಾರುವುದಂತೆ 4 ಮೀಸಲಿಗೊದಗುವ ಶೇಷಗಿರೀಶನ ಆಸೆಯಗ್ರಾಸವ ಬೇಡಿಕೊಳ್ಳದ ಮನ ಸಾಸಿರ ವೆಗಡದ ಭಾಂಡದೊಳೋಗರ ಬೇಯಿಸಿ ಭುಂಜಿಪೆಯೆಂದು ಮೋಸ ಮಾಡುವದಿಂದು 5 ಚಿತ್ರಿಕ ರಚಿಸಿದ ಸೇನೆ ಸೇನೆಗಳಲ್ಲ ಪ್ರಸ್ತುತಕೊದಗುವದೆನುತಿಹ ರಾಯನ ಮುತ್ತಿಕೊಂಡಿಹ ಪರಸೇನೆಯ ಇದಿರೊಳು ಮೃತ್ಯುದೇವತೆ ಬಂದು ಮೂದಲಿಸುವಳೆಂದು6 ಮೊಸರನ್ನ ತನ್ನ ಕೈಯೊಳಗಿದ್ದಂತೆ ಹಸಿವಾದ ವೇಳ್ಯದಿ ಹಸಿಯ ಮೆಲ್ಲುವದೇಕೆ ಕುಶಲದಿ ನೆನೆಯಲು ಹಸನದಿ ಸಲುಹುವ 7
--------------
ವರಹತಿಮ್ಮಪ್ಪ
ಸೃಷ್ಟಿ ಕಾರಣ ದಯಾ ದೃಷ್ಟಿಯಲಿ ನೋಡೆನ್ನ ಘಟ್ಟಿಗನೆನಬೇಕೊ ಇಷ್ಟಿಲ್ಲ ಅಪರಾಧ ಪ ಇಷ್ಟವರನ ಬಂಧದೋಳೆನ್ನ ಸಿಲುಕಿಸಿ ದುಷ್ಟರೂ ಒಂದಾಗಿ ತಾವೆಲ್ಲ ಎನ್ನನೂ ಲಿಷ್ಟರೊಳು ನೀ ಕೇಳುವಂತೆ ಕೂಗಿದೆನಲ್ಲ 1 ನಿನ್ನ ಮಾತುಗಳಾಡಧ್ಹಾಂಗೆನ್ನ ಮಾಡಿಸಿ ಅನ್ಯವಾರುತಿಗಳು ಚನ್ನಾಗಿ ನುಡಿಸಲು ಅನ್ಯಾಯ ಬಂತೆಂದು ಅವರಂತೆ ನುಡಿದು ನಾ ಮನ್ನದೊಳಗೆ ಮೊರೆ ಇಟ್ಟದನರಿಯಾ 2 ಒಳಗೆ ಹೊರಗೆ ತುಂಬಿಕೊಂಡಿಹರು ಬಹಳ ಖಳರು ಅವರು ದೇಶ ಕಾಲವಯ್ಯ ಬಳಿಯಲಿ ನಿನ್ನವರು ಗೂಢ ವೇಷದಿ ತಾವು ಸುಳಿಯಲು ಅವರನ್ನು ಗುರುತು ಮಾಡಿದೆನಯ್ಯ 3 ಈಗಲೂ ನಿನ್ನ ಬಲಪವನನಾಗಮದಿಂದ ಬ್ಯಾಗನೆ ಖಳರನ್ನ ವರದು ಸವರಿಸೊ ಜಾಗರೂಕನಾಗಿ ಅದೇ ಪದ್ಧತಿ ಪಿಡಿದು ಸಾಗಿ ಬಂದೆನು ಕೇಳು ಎನ್ನಿಂದೇನಪರಾಧ4 ಲೇಸಾಗಿ ಬಲವಿತ್ತು ಎನ್ನನು ಕಳಿಸಲು ಆಸು ಅಸುರರನ್ನು ತರದೊಟ್ಟುವೆಯಾ ವಾಸುದೇವವಿಠಲ ನೀ ಕೈಯ್ಯ ಪಿಡಿದರೆ ಆ ಸುಕಾರ್ಯಕೆ ಬಾಹೆ ನೋಡೆನ್ನ ಶಕುತಿ5
--------------
ವ್ಯಾಸತತ್ವಜ್ಞದಾಸರು
ಎಳೆಯನೆನ್ನದಿರಮ್ಮ ಎಲೆಗೋಪಿಕೃಷ್ಣಗೆಕೆಳದೇರುಟ್ಟಿಹವಸನಕಳೆವ ಜಾರಮಣಿಗೆಪ.ನಡುವಿರುಳೆ ಬಂದೆಮ್ಮ ನಲ್ಲರಂತೆ ಮಾತನಾಡಿಪಿಡಿದು ಚುಂಬಿಸಿ ಪರಿಯಂಕದಲ್ಲಿ ಕೂಡಿಮಡದಿಯರಂತ ನಾವು ಮಾಯ ಮೋಸದಿ ಗೆಲ್ಲುವಒಡನೆ ಗೋವಳನಂತೆ ಒಪ್ಪುವ ಗಾಡಿಕಾರಗೆ 1ಬಾಲಕನಂತೆ ಕಂಗೊಳಿಸಿ ಬೀದಿಯೊಳು ಸುಳಿಯಲುನಲವಿಂದೆತ್ತಿಕೊಂಡು ನೇಹ ತೊಡರಿ ಅಪ್ಪಿಕೊಂಡುನೀಲದ ಹಣ್ಣ ನೀಡೆ ತಾನಾಲದ ಹಣ್ಣು ಬೇಡುವಮೇಲಣ ಮಾತೇನೆ ಬೇಗ ಮೊಳೆಮೊಲೆಗ್ಹೆಣಗುವಗೆ 2ರನ್ನದುಂಗುರ ಬೆರಳ ರತಿಗೆ ಮಾರನ ಸರಳಕನ್ನೆಯರನೆಲ್ಲ ಚೆಲ್ವ ಕಣ್ಣ ಸನ್ನೆಲೆ ಮೋಹಿಸುವಚಿನ್ನನೆನ್ನಬಹುದೆ ಇವಗೆಚಟುಲಪ್ರಾಯದವಗೆ ಪ್ರಸನ್ನ ವೆಂಕಟೇಶ ನಮ್ಮ ಸೇರಿ ಬೆನ್ನಬಿಡನಮ್ಮ 3
--------------
ಪ್ರಸನ್ನವೆಂಕಟದಾಸರು