ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತಹದೋ ನಿನ್ನ ಸಂದುರಶನಾ | ಕಂತುವಿನ ಜನಕ ಉಡಪಿ ಕೃಷ್ಣರಾಯಾ ಪ ಓದನ ತಿಂದೆ | ಪರರ ದ್ರವ್ಯದ ತಂದೆ | ಪರ ಸತಿಯರಿಗೆ ನೊಂದೆ | ಗುರು ಹಿರಿಯರ ನಿಂದೆ | ಹಿರದಾಗಾಡಿದೆ ಮುಂದೆ | ಬರುತಿಪ್ಪ ಪಾಪದಿಂದೆ | ಪರಿಯಾಗಿ ಈ ಬಂದೆ | ಅರುಹು ತೊರದೆ ಬಂದೆ | ಕರುಣಿಸು ಜಗದ ತಂದೆ 1 ಸುಜನರ ಗುಣವ ಹಳಿದೆ | ಕುಜನರ ಸಂಗದಲಿ ಬೆಳಿದೆ | ಭಜನೆಗೆÀಟ್ಟು ಸುಳಿದೆ | ಪ್ರಜರನು ಪೊಗಳಿದೆ | ವೃಜ ಪುಣ್ಯಕೋಶ ಕಳಿದೆ | ಋಜುಮಾರ್ಗವ ತೊರದುಳಿದೆ | ರಜನಿಚರ ಮತಿಗಳಿದೆ | ವಿಜಯ ವಾರ್ತೆಗೆ ಮುಳಿದೆ | ತ್ರಿಜಗಪತಿ ಕೇಳಿದೆ 2 ಹರಿವಾಸರವ ಬಿಟ್ಟೆ | ದುರುಳರಿಗೆ ಧನ ಕೊಟ್ಟೆ | ಹರಿಭಕ್ತರ ತೊರೆದು ಕೆಟ್ಟೆ | ಹರಿಶ್ರವಣ ಬಚ್ಚಿಟ್ಟೆ | ಪರಮ ವ್ರತವ ಮೆಟ್ಟೆ | ಹರುಷದಲ್ಲಿಗೆ ಮನಮುಟ್ಟಿ | ಬಟ್ಟೆ | ವಿರಕುತಿಯನು ಬಿಟ್ಟೆ | ದುರಿತಕ್ಕೆ ಗುರುತಿಟ್ಟೆ | ಬಟ್ಟೆ 3 ಜ್ಞಾನವೆಂಬೋದೇ ಇಲ್ಲಾ | ಏನು ಪೇಳಲಿ ಸೊಲ್ಲಾ | ನೀನೆಂಬೋದಿಲ್ಲವಲ್ಲಾ | ಹಾನಿ ವೃದ್ದಿಗಳೆಲ್ಲಾ | ನಾನುಂಟೆ ಎಲ್ಲ ಸಲ್ಲಾ | ದಾನಾದೆ ಸತತ ಖುಲ್ಲಾ | ತಾ ನುಡಿಗೆ ಸೋತು ಚಿಲ್ಲಿ | ರಾನಡತಿ ಸಿರಿನಲ್ಲಾ | ನಾ ನಡದೆ ನೀ ಬಲ್ಲಾ | ದೇ ನೋಡು ಪ್ರತಿ ಮಲ್ಲಾ 4 ಅಪರಾಧಿ ನಾನಯ್ಯ | ಅಪವಾದದವನಯ್ಯ | ಕೃಪಣದಿಂದೆನ್ನ ಕಾಯಾ | ಉಪಜಯವಾಯಿತು ಪ್ರೀಯಾ | ಸ್ವಪನದಿ ಪುಣ್ಯ ಸಹಾಯಾ | ಲಪಮಾಡಲಿಲ್ಲ ಜೀಯಾ | ಕೃಪೆಯಲ್ಲಿ ಪಿಡಿ ಕೈಯಾ | ವಿಜಯವಿಠ್ಠಲರೇಯಾ | ಗುಪುತವಾದುದುಪಾಯಾ | ತಪಸಿಗಳ ಮನೋಜಯಾ 5
--------------
ವಿಜಯದಾಸ
ಶ್ರೀನಿಕೇತನ ಲಕ್ಷ್ಮೀ ಕಾಂತನ ಪದಪದ್ಮ ಧ್ಯಾನ ಮಾಡುತ ಎನ್ನ ಸ್ಥಿತಿಯ ದೀನಭಾವನೆಯಿಂದಲೊರೆವೆನು ಗುರುಪವ ಮಾನ ಪಾಲಿಸಲಿ ಸನ್ಮತಿಯ ಪ. ತಾನು ತನ್ನದೆಂಬ ಹೀನ ಭಾವನೆಯಿಂದ ನಾನಾ ಯೋನಿಗಳಲ್ಲಿ ಚರಿಸಿ ಮಾನವ ಜನ್ಮವನೆತ್ತಲು ಮುಂದಾದ- ದೇನೆಂಬೆ ಗರ್ಭದೊಳುದಿಸಿ 1 ಮಾತಾಪಿತರುಗಳು ಮೋಹದಿ ರಮಿಸಲು ಕೇತ ತತಿಗೆ ಸರಿಯಾಗಿ ಆತು ಬಂದಿಹೆನು ಗರ್ಭದಿ ಮೆಲು ನರ ವ್ರಾತ ಬಂಧಕೆ ಗುರಿಯಾಗಿ 2 ಸೇರಿದ ಕ್ರಿಮಿ ಪರಿವಾರ ಕಚ್ಚುತಲಿರೆ ಚೀರಲಾದರು ಶಕ್ತಿಯಿರದೆ ಭಾರ ವಸ್ತುವು ಕಣ್ಣಸಾರವು ತಡೆಯದೆ ಗಾರುಗೊಂಡೆನು ಗರ್ಭದೊಳಗೆ 3 ಮೂರರಾ ಮೇಲೆ ಮತ್ತಾರುಮಾಸಗಳಿಂತು ಭಾರಿ ಭವಣೆಗೊಂಡು ಕಡೆಗೆ ಭೋರನೆ ಭೂಮಿಗೆ ದೂರಿ ಬಂದೆನು ಮಲ ಧಾರೆಯಾ ಕೂಡಿ ಮೈಯೊಳಗೆ 4 ಹೇಸಿಗೆ ಮಲಮೂತ್ರ ರಾಶಿಯ ಒಳಗೆ ದು- ರ್ವಾಸನೆ ಬರುವ ಗೆರಸಿಯ ಹಾಸಿಗೆ ಒಳಗೆ ಹಾಕಿರುತಿರೆ ದೇಹದ ಲೇಶ ಸ್ವಾತಂತ್ರ್ಯವೇನಿರದೆ 5 ಮೂಸಿ ಮುತ್ತುವ ನುಸಿಮುತ್ಕುಣ ಬಾಧೆಗೆ ಘಾಸಿಗೊಳುತ ಬಾಯ ತೆರದೆ ದೋಷ ಶಂಕಿಸಿ ಮೈಯೊಳಿಕ್ಕಿದ ಬರೆಗಳ ಬಾಸಲೆಯುನು ತಾಳ್ದೆ ಬರಿದೆ 6 ನಾಲ್ಕು ಕಾಲುಗಳಿಂದ ನಾಯಿಗೆ ಪರಿಯಾಗಿ ಸೋಕಿದೆ ಸರ್ವತ್ರ ತಿರುಗಿ ಸಾಕುವ ಜನರೆಡಬಲಗಾಲ ತುದಿಯಿಂದ ದೂಕಿದರಲ್ಲಿಯೆ ಸುಳಿದೆ 7 ವಾಕುಗಳೆಂಬ ಕೂರಂಬನು ಸಹಿಸಿ ಪ- ರಾಕೆಂದು ಪರರ ಸೇವಿಸಿದೆ ಮಾಕಳತ್ರನೆ ನಿನ್ನ ಕೃಪೆಯಾದ ಬಳಿಕ ಮೋ- ಹಾಕಾರ ಮಡುವಿನೊಳಿಳಿದೆ 8 ಈಗಲಾದರು ದೇಹ ಭೋಗವೆ ಬಯಸುತ ನೀಗಿದೆ ವ್ರತ ನೇಮಾದಿಗಳ ಸಾಗದ ಫಲ ತನಗಾಗಬೇಕೆಂಬ ಮ- ನೋಗತಿಯಿಂದ ಕರ್ಮಗಳ 9 ಮೂಗಭಾವನೆಯನ್ನು ನೀಗದೆನಿಸಿ ಮುಂ- ದಾಗಿಯಾಡುವೆ ಮಥನಗಳ ಕಾಗೆಯು ಕುಂಭದ ಜಲ ಕುಕ್ಕುವಂತೆ ಬೆಂ- ಡಾಗಿ ಕೊಂಡೆನು ಝಗಳಗಳ 10 ಕಂತುಜನಕ ಕಂಜನಾಭ ವೆಂಕಟರಾಜ ಚಿಂತಾಮಣಿ ಸುರತರುವೆ ಎಂತಾದರು ನಿನ್ನ ದಾಸ್ಯ ಸೇರಿದ ಮೇಲೆ ಇಂತುಪೇಕ್ಷಿಸುವುದು ಥರವೆ 11 ಭ್ರಾಂತಿ ಎಂಬುದ ಬಿಡಿಸಿನ್ನಾದರು ಲಕ್ಷ್ಮೀ ಕಾಂತ ಕಾರುಣ್ಯ ವಾರುಧಿಯೆ ಚಿಂತಿತದಾಯಿ ಎನ್ನಂತರಂಗದಿ ಬೇಗ ನಿತ್ಯ ವಿಧಿಯೆ 12
--------------
ತುಪಾಕಿ ವೆಂಕಟರಮಣಾಚಾರ್ಯ
ಸಂದಿತಯ್ಯ ಪ್ರಾಯವು |ಸಂದಿತಯ್ಯ ಪ್ರಾಯವು ಪಮೂರು ತಿಂಗಳುಸಂದುಹೋಯಿತು ತಿಳಿಯದೆ ||ಬಂದೆ ತಾಯಿಯ ಜಠರದಲಿ ಮ-|ತ್ತೊಂದು ಬುದ್ಧಿಯನರಿಯದೆ ||ಬೆಂದೆ ನವಮಾಸದಲಿ ಗರ್ಭದಿ |ಒಂದು ದಿವಸವು ತಡೆಯದೆ ||ಕುಂದದೀಪರಿಯೊಂದು ವರುಷವು |ಇಂದಿರೇಶನೆ ಕೇಳು ದುಃಖವ 1ಕತ್ತಲೆಯೊಳಿರಲಾರೆನೆನುತಲಿ |ಹೊತ್ತೆ ಹರಕೆಯ ನಿನ್ನನು ||ಮತ್ತೆ ಜನಿಸಲು ಭೂಮಿಯೊಳು ನಾ |ಅತ್ತುನಿನ್ನನು ಮರೆತೆನು ||ಮತ್ತೆ ಮಲ-ಮೂತ್ರದೊಳು ಬಾಲ್ಯದಿ |ಹೊತ್ತು ದಿನಗಳ ಕಳೆದೆನು ||ಮತ್ತೆ ನರಕದೊಳುರುಳುತುರುಳುತ |ಉತ್ತಮೋತ್ತಮ ನಿನ್ನ ನೆನೆಯದೆ 2ಚಿಕ್ಕತನವನು ಮಕ್ಕಳಾಟದಿ |ಅಕ್ಕರಿಂದಲಿ ಕಳೆದೆನು ||ಸೊಕ್ಕಿ ಹದಿನಾರಲಿ ನಾನತಿ |ಮಿಕ್ಕಿ ನಡೆದೆನು ನಿನ್ನನು ||ಸಿಕ್ಕಿ ಬಹು ಸಂಸಾರ ಮಾಯೆಯ |ಕಕ್ಕುಲಿತೆಯೊಳು ಬಿದ್ದೆನು ||ಹೊಕ್ಕುದಿಲ್ಲವು ನಿನ್ನ ಪಾದವ |ರಕ್ಕಸಾರಿಯೆ ಕೇಳು ದುಃಖವ 3ಸುಳಿದೆ ಮನೆಮನೆ ಕಳೆದೆ ಕಾಲವ |ಉಳಿದ ಯೋಚನೆ ಮಾಡದೆ ||ಬೆಳೆದೆ ತಾಳೆಯ ಮರದ ತೆರದಲಿ ||ಉಳಿವ ಬಗೆಯನು ನೋಡದೆ ||ಎಳೆಯ ಮನದೊಳೆ ಇಳೆಯ ಜನರೊಳು |ಬಳಕೆ ಮಾತುಗಳಾಡಿದೆ ||ಕಳೆದೆ ಈ ಪರಿಯಿಂದ ಕಾಲವ |ನಳಿನನಾಭನೆ ನಿನ್ನ ನೆನೆಯದೆ 4ಎಡೆಬಿಡದೆಅನುದಿನದಿ ಪಾಪದ |ಕಡಲೊಳಗೆ ನಾನಾಳ್ದೆನು ||ದರವ ಕಾಣೆದೆ ಮಧ್ಯದಲಿ ಎ-|ನ್ನೊಡಲೊಳಗೆ ನಾನೊಂದನು ||ದೃಢದಿ ನಿನ್ನಯ ಧ್ಯಾನವೆಂಬಾ |ಹಡಗವೇರಿಸು ಎನ್ನನು ||ಒಡೆಯ ಪುರಂದರವಿಠಲ ಎನ್ನನು |ಬಿಡದೆ ಕಾಯೈ ಬೇಗ ಶ್ರೀಹರಿ5
--------------
ಪುರಂದರದಾಸರು