ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಳಗೆ ಹೊರಗೆ ಓಡಾಡುವ ಉತ್ತಮಳಾರು ಹೇಳೆಬಳಿಕ ಹೇಳುವೆ ಬಹಳ ಭಾಗ್ಯ ಬಗಳಾಂಬ ಕೇಳೇ ಪ ಸರಿ ವಾಲೆ ಕಪ್ಪನ್ನಿಟ್ಟು ವಜ್ರಗಳ ಸರವನೆ ಹಾಕಿಪರಮಾನಂದಪಡಿಸುತಿಹ ಪಂಡಿತಳಾರು ಹೇಳೆದುರುಳ ಮಹಿಷಾಸುರನ ಕೊಂದು ಮರಳಿ ಚಿದಾನಂದನಲ್ಲಿಸ್ಥಿರವ ಮಾಡಿಯಿಹಳು ಬಹಳ ಶಿಷ್ಟಳು ಕೇಳೇ 1 ಪಿಲ್ಲಿ ಮಂಟಿಕೆ ಗೆಜ್ಜೆಯನಿಟ್ಟುಘುಲ್ಲು ಘುಲ್ಲು ಹೆಜ್ಜೆಯನಿಕ್ಕುತಪಲ್ಯ ಕಾಯ ವಾಸವ ಮಾಡಿಹ ಬಗಳ ಮಹಿಮಳು ಕೇಳೇ 2 ದುಂಡು ಮುತ್ತ ಕಟ್ಟಿ ಹೇಮಗುಂಡು ಸರವೊಲೆವುತಮಂಡಿಗೆಯ ಹಿಡಿದು ಬಡಿಸುತಿಹ ಉದ್ದಂಡಳಾರು ಹೇಳೆಚಂಡ ಮುಂಡರ ಶಿರವ ಖಂಡಿಸಿ ಚಿದಾನಂದನಲಿ ಅ-ಖಂಡ ವಾಗಿಹಳು ಬಗಳ ಪುಂಡಳು ಕೇಳೇ3 ಹೊನ್ನ ಕಡಗ ಸೀರೆಯುಟ್ಟು ಚೆನ್ನ ರತ್ನದ ಕುಪ್ಪಸ ತೊಟ್ಟುಅನ್ನವ ಹಿಡಿದು ಬಡಿಸುತಿಹ ಮಾನ್ಯಳು ಯಾರು ಹೇಳೇಕುನ್ನಿ ದುರ್ಜನರ ಛೇದಿಸಿ ಚಿದಾನಂದ ಗುರುವಬೆನ್ನು ಕಾದು ಬಿಡದೆ ಇಹಳು ಬಗಳಾಂಬ ಕೇಳೇ 4 ನಿತ್ಯಾತ್ಮ ಚಿದಾನಂದನಲ್ಲಿ ನಿಲುಗಡೆಯಿಲ್ಲದೆ ಓಡಾಡುತಸುತ್ತಮುತ್ತ ಸುಳಿದಾಡುವ ಸೂಕ್ಷ್ಮಳಾರು ಹೇಳೇಕರ್ತೃವಾಗಿ ತತ್ವವ ಕೇಳುತ ಚಿದಾನಂದನಲಿ ವಾಸವಮಾಡುವ ಮಹಾಮಾಯಿ ಬಗಳೆ ಪಾರುಪತ್ಯಳು ಕೇಳೇ5
--------------
ಚಿದಾನಂದ ಅವಧೂತರು
ಆವಾವ ಬಗೆಯಿಂದ ಹರಿಗರ್ಪಿಸೊ ಭಾವ ಶುದ್ಧನಾಗಿ ಮುಖ್ಯತ್ವ ವಹಿಸದೆ ಪ ನೋಡುವ ನೋಟಗಳು ಹರಿಯೆ ನೋಡಿದನೆನ್ನಿ ಆಡುವ ಮಾತುಗಳು ಹರಿಯೆ ಆಡಿದನೆನ್ನಿ 1 ನಡಿವ ನಡಿಗೆ ಎಲ್ಲ ಹರಿಯೆ ನಡೆದನೆನ್ನಿ ಕೊಡುವ ದಾನಗಳು ಹರಿಯೆ ಕೊಟ್ಟನೆನ್ನಿ ಒಡನಾಡುವ ಲೀಲೆ ಹರಿಯೆ ಆಡಿದನೆನ್ನಿ ಪಿಡಿವ ಚೇಷ್ಟೆಗಳೆಲ್ಲ ಹರಿಯೆ ಪಿಡಿದನೆನ್ನಿ 2 ಕೇಳುವ ಶಬ್ದಗಳು ಹರಿಯೆ ಕೇಳಿದನೆನ್ನಿ ಹೇಳುವ ವಿಧವನಿತು ಹರಿಯೆ ಎನ್ನಿ ಮಾಲೆ ಧರಿಸುವುದು ಹರಿಯೆ ಧರಿಸಿದನೆನ್ನಿ ಮೇಲು ಸುಖ ಬಡುವುದು ಹರಿಯೆ ಎನ್ನಿ3 ಕೊಂಡ ಎನ್ನಿ ಭೂಷಣವಿಡುವುದು ಹರಿಯೆ ಎನ್ನಿ ಲೇಸು ಬಯಸುವುದು ಹರಿಯೆ ಬಯಿಪನೆನ್ನಿ ಗ್ರಾಸ ಮೆಲುವದೆಲ್ಲ ಹರಿಯೆ ಎನ್ನಿ 4 ಸತಿಯ ಕೂಡುವದೆಲ್ಲ ಹರಿಯೆ ಕೂಡಿದನೆನ್ನಿ ಹಿತವಾಗಿಪ್ಪದು ಹರಿಯೆ ಎನ್ನಿ ಸುತರ ಪಡೆದಾದಲ್ಲಿ ಹರಿಯೆ ಪಡೆದನೆನ್ನಿ ಪ್ರತಿಕೂಲವಾಗುವುದೆ ಹರಿಯೆ ಎನ್ನಿ 5 ಬಳಗ ಸಾಕುವುದೆಲ್ಲ ಹರಿಯೆ ಸಾಕಿದನೆನ್ನಿ ಸುಲಭನಾದರೆ ಹರಿಯಾದನೆನ್ನಿ ಗಲಭೆ ಮಾಡುವುದೆಲ್ಲ ಹರಿಯೆ ಮಾಡಿದನೆನ್ನಿ ಸುಳಿದಾಡುವುದೆಲ್ಲ ಹರಿಯೆ ಎನ್ನಿ 6 ಏನೆಂಬೆ ಹರಿ ಲೀಲೆ ನಿರ್ದೋಷ ನಿಸ್ಸಂಗ ಅನಂತಕಾಲಕ್ಕೂ ಎಲ್ಲಿದ್ದರು ಕಾಯ ವಿಜಯವಿಠ್ಠಲರೇಯ ನಾನಾ ವ್ಯಾಪಾರಗಳ ಮಾಳ್ಪನೆನ್ನಿ 7
--------------
ವಿಜಯದಾಸ
ನೆನೆದು ನಿಷ್ಕಳಂಕರಾಗಿರೋ ಪಂಕಜಾಕ್ಷನ ಕೂಡ ದ್ವೇಷ ಬಳಿಸುವ ಮಾಯಿ ಪ ಮಲವಿಸರ್ಜನೆಯಾಗುವಾಗ ಮೂತ್ರವನು ಬಿಡುವಾಗ ಹೊಲಗೇರಿಯೊಳಗೆ ಸುಳಿದಾಡುವಾಗ ಹೊಲಿಯಾದವನು ತನ್ನ ಎದುರಿಗೆ ಬರುವಾಗ ಕಲಿಶಿಷ್ಯನಾದ ಮಣಿವಂತನ ನೆನೆಸಿರೊ1 ಶ್ರದ್ಧವನು ಬಿಡುವಾಗ ಸ್ವಪ್ನದೊಳಗೆ ಇಂದ್ರಿಯ ಬಿದ್ದು ಹೋಗುವಾಗ ಉಗುಳುವಾಗ ಗುಹ್ಯ ತೊಳೆಯುವಾಗ ಅಪ್ರ ಬದ್ಧನಾದ ಏಕಲವ್ಯನ ನೆನೆಯಿರೋ 2 ಶುದ್ಧ ಅಶುದ್ಧವನು ತುಳಿದು ನೆಲಕ್ಕೆ ವರಸುವಾಗ ವಮನವಾಗುವಾಗ ಮರಿಯದಲೆ ಅಮಲ ಸುಖ ಮುನಿ ಗುರು ವಿಜಯವಿಠ್ಠಲ ವೈದು ತಮಕೆ ಹಾಕುವ ಶುದ್ಧ ಕುಮತಿಯನು ನೆನೆಯಿರೋ 3
--------------
ವಿಜಯದಾಸ
ಬಿಡಬೇಡೋ ರಂಗಾ ಬಿಡಬೇಡೋಕಡುಮೋಹಕದ ಕೊಳಲನೂದುವದನು ಪ ಬಿಡುವೆಯಾದರೆ ಮನಕಡು ತವಕದೊಳುತಡವರಿಸುವುದೊಲೆಡೆಯನು ನೋಡೋ ಅ.ಪ. ಕಿವಿಯೊಳು ನಾದವು ಅಮೃತವ ಸುರಿಯೆಸವಿಯುಣ್ಣುತಲೀ ಮನ ಮೈಮುರಿಯೆತಳಮಳಿಸುವದು ನಡುವೆ ನಿನಗಿದು ಸರಿಯೆಹೊರಗಿನ ಭಾವದ ಪವಣವನರಿಯೆ 1 ಕೊಳಲನೂದುತಿರಲಾನಂದೊಳುಮುಳುಗಿರಲಾಗ ಕಣ್ಣಮುಂದಸುಳಿದಾಡುವ ನಿನ್ನ ಮೂರುತಿ ಚಂದತೊಲಗಿ ಪೋಗುವದೊ ಗೋಪಿಯ ಕಂದ 2 ಮಧುರವೋ ನಿನ್ನ ಕೊಳಲು ಗಾಯನಇದರೊಳಿಲ್ಲವೊ ಲವ ಅನುಮಾನಮೊದಲು ಮುರಳಿಯ ಹಿಡಿಹಿಡಿ ಜಾಣಗದುಗಿನ ವೀರನಾರಾಯಣ 3
--------------
ವೀರನಾರಾಯಣ
ಆನೆ ಬಂತಾನೆ ಬಂತಾನೆ ಬಂತಮ್ಮದಾನವಕದಳಿಯಕಾನನಮುರಿವ ಮದ್ದಾನೆ ಬಂತಮ್ಮಪ.ಉಂಗುರುಗುರುಳು ನೀಲಾಂಗ ಚೆಲ್ವಾನೆಕಂಗಳುಹೊಳೆವೊ ವ್ಯಾಘ್ರಾಂಗುಲಿಯಾನೆಬಂಗಾರದಣುಗಂಟೆ ಶೃಂಗಾರದಾನೆಮಂಗಳತಿಲಕದ ರಂಗನೆಂಬಾನೆ 1ಅಲೆದೊಲೆದಾಡುವ ಎಳೆಮರಿಯಾನೆಕೆಳದಿ ಗೋಪಿಯರೊಳು ಗೆಳೆತನದಾನೆಘಳಿಲು ಫಳಿಲು ರವದಿ ಸುಳಿದಾಡುವಾನೆಮಲೆತವರೆದೆ ತುಳಿದಾಡುವಾನೆ 2ನಳಿನಭವರಿಗೆ ತಾ ನಿಲುಕದ ಆನೆಹಲವು ಕವಿಗಳಿಗೆ ಸಿಲುಕದೀ ಆನೆನಲವಿಂದ ಭಕ್ತರ ಸಲಹುವ ಆನೆಸಲೆ ಪ್ರಸನ್ವೆಂಕಟನಿಲಯನೆಂಬಾನೆ 3
--------------
ಪ್ರಸನ್ನವೆಂಕಟದಾಸರು