ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜನುಮ ಸಾರ್ಥಕವ ಮಾಡಿಸು ತಂದೇ ನೆನೆವರ ಕಾವನು ನೀನೆಂದು ಬಂದೇ ಪ ನಾನಿರುವುದು ಲೌಕಿಕರ ಸಮೂಹ ಏನ ಗೈವುದೋ ಪ್ರಪಂಚದ ಮೋಹ 1 ಅಜ್ಞನು ನಾ ನನ್ನದೆಂಬುದ ಬಿಡಿಸು ಸುಜ್ಞಾನದೀಪ ಕೊಟ್ಟು ಪ್ರಜ್ವಲಿಸು 2 ಅಜ್ಞನಾ ಯೆನ್ನಪರಾಧಾವ ಕ್ಷಮಿಸು ವಿಜ್ಞಾಪಿಸಿಕೊಂಬೇ ನೀ ಮನಸ್ಕರಿಸು 3 ಹಗಲಿರಳು ಯನ್ನ ಹೆಗಲೊಳು ಕುಳಿತು ಮಿಗಿಲಾಗಿಸು ದಿನ್ಯ ಸೇವೆಗಳನಿತು 4 ನಾಲಗೆ ಮಧ್ಯದಿ ನೀ ನಲಿದಾಡಿ ಬಾಳುವೆಯೆಲ್ಲವು ಭಜಿಪುದ ಮಾಡಿ 5 ಕಣ್ಣೆಲ್ಲಿ ಸುಳಿದರೆ ಅಲ್ಲಿನೀ ಕಂಡು ಉನ್ನತವೈಭವ ತೋರು ಮನಗೊಂಡು 6 ಜಾಜೀಕೇಶವ ಜಯ ಪದವಿತ್ತು ರಾಜೀವಾಂಬಕ ಪೊರೆ ಭಾರಪೊತ್ತು 7
--------------
ಶಾಮಶರ್ಮರು
ದೃಷ್ಟಿ ತಾಕೀತೋ ಬೀದಿ ಮೆಟ್ಟಬ್ಯಾಡವೋಸೃಷ್ಟಿಯ ನಾರಿಯರೆಲ್ಲ ಕಣ್ಣಿಟ್ಟು ಹೀರುವರೋ ನಿನ್ನ ಪ ಪುಟ್ಟ ಪದಕಮಲದಿ ಮೆಟ್ಟಿ ರತುನ ಪಾದುಕಾಇಟ್ಟ ಕಿರುಗೆಜ್ಜೆ ಪೆಂಡ್ಯೆ ದಿಟ್ಟತನದಿಘಟ್ಟಿ ಸಾಸಿರ ಬಾಳುವ ಪಟ್ಟೆಯನೆ ಬಿಗಿದುಟ್ಟು ಮೇಗಿಲ್ಲದ ಬೆಲೆಯಾದ ಪಟ್ಟದುಡುದಾರವಿಟ್ಟು 1 ಸಿರಿಯಿರುವ ಉರದಲ್ಲಿ ಪರಿಮಳ ಗಂಧವ ಪೂಸಿಪರಿಪರಿ ಪದಕ ಮುತ್ತು ಸರ ವೈಜಯಂತಿಕೊರಳ ಕೌಸ್ತುಭದ ಕಾಂತಿ ನಿರುಪಮ ಶ್ರೀವತ್ಸಲಾಂಛನ ಸರಿಗೆ ತಾಳಿ ಪದಕವು ಸೇರಿದ ಮುತ್ತಿನ ಜಲ್ಲೆ 2 ಉಗುರ ಗೋರಂಟಿ ಛಾಯಾ ಚಿಗುರು ಪೋಲುವ ಬೆರಳುಬಗೆಬಗೆ ರತುನಂಗಳ ನಗಗಳನಿಟ್ಟುನಗವನೆತ್ತಿದ ಭುಜಕೆ ಬಿಗಿದ ಬಾಹುಪುರಿ ಕೆಂಪುನಿಗಿನಿಗಿಗುಟ್ಟುವ ಕಾಂತಿ ನಗುತಿದೆ ಬಾಲಭಾನುವ 3 ನಾಸಿಕ ಲಲಾಟಚೆಲುವ ಪುಬ್ಬು ಕಸ್ತೂರಿಯ ತಿಲಕ ಒಪ್ಪುವ ಮುಖದಿ 4 ಕೋಟಿ ಹೊನ್ನು ಬಾಳುವ ಕಿರೀಟವಿಟ್ಟು ಕಡೆಗಣ್ಣನೋಟದಿಂದ ತರುಣೇರ ಪೋಟಿ ಮಾಡುತಚಾಟು ಮಾತುಗಳಾಡುತ ಪೊಟ್ಟನಂತೆ ತಿರುಗಿದರೆನೀಟಲ್ಲವೋ ನಿನಗದು ಪಾಟಲಾಧರನೆ ಕೇಳು 5 ಬಿಂಕದಿಂದ ಎರಡು ಕರದಿ ಶಂಖ ಚಕ್ರವ ಪಿಡಿದುಅಂಕಿತ ವೇಣುನೂದುತ ಶಂಕೆ ಇಲ್ಲದೆ ಮಂಕು ಮಾಡುತ ಬಾಲೇರ ಪಂಕಜಾಕ್ಷ ಸುಳಿದರೆÉಮಂಕುಗಾರನೆಂದು ನಿನ್ನ ಅಂಕಿತ ಮಾಡುವರಲ್ಲೋ 6 ಮಂಗಳಮೂರುತಿ ಮುಂಚೆ ಶೃಂಗಾರಗಳನೆ ಮಾಡಿಪೊಂಗೊಳಲನೂದುತ ಶ್ರೀರಂಗ ಸುಳಿದರೆಹೆಂಗಳ ರಂಭೇರೊಂದಾಗಿ ಕಂಗಳಿಡಲು ಉನ್ನಂತರಂಗವಿಠಲಗಲದಿರೋ ಹಿಂಗದೆ ನರಸಿಂಗನೇ 7
--------------
ಶ್ರೀಪಾದರಾಜರು