ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಕಾಣಬಂದೆನಯ್ಯ ಚೆನ್ನಕೇಶವಾ ನಿನ್ನ ಕಂಡು ನಲಿದೆ ರಮಾರನ್ನ ಮಾಧವಾ ಪ ಜಳದಿ ಮುಳುಗಿ ತೊಳಲಿ ಬಳಲಿ ಬಹಳನೊಂದೆನು ತಳವ ಬಯಸಿ ಬಳಸಿ ಬಳಸಿ ನಡುವೆ ನಿಂದೆನೊ ಬಳಿಯ ಬಳಗವಿಲ್ಲ ನೋವಿನಿಂದ ಬೆಂದೆನೋ ಸುಳಿಗೆ ಸಿಲುಕಿ ಅಳುಕಿ ಬಳುಕಿ ವಿಧಿಯ ಬೈದೆನೋ 1 ಕರವ ಮುಗಿದು ಕರೆವೆ ನಿನ್ನ ಕರುಣದಿ ಬಾರೋ ಮರುಗಿ ಮರುಗಿ ಕೊರಗಿದೆನಗೆ ಚರಣವ ತೋರೋ ಕರಿಯ ಪೊರೆದೆ ತರಳಗೊಲಿದೆ ಮರುಕವ ಬೀರೋ ಶಿರವ ಚರಣಕಿರಿಸುವೆ ಮಾಂಗಿರಿಯರಂಗ ಬಾರೋ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾನವಜನ್ಮ ದೊಡ್ಡದು - ಇದ |ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ಪ.ಕಣ್ಣು ಕೈಕಾಲ್ಕಿವಿ ನಾಲಗೆ ಇರಲಿಕ್ಕೆ |ಮಣ್ಣುಮುಕ್ಕಿ ಮರುಳಾಗುವರೆ ||ಹೊನ್ನು ಹೆಣ್ಣಿಗಾಗಿ ಹರಿನಾಮಾಮೃತವನು |ಉಣ್ಣದೆ ಉಪವಾಸವಿರುವರೇನೋ 1ಕಾಲನವರು ಬಂದು ಕರಪಿಡಿದೆಳೆವಾಗ |ತಾಳು ತಾಳೆಂದರೆ ಕೇಳುವರೆ ? ||ವೇಳೆ ಹೋಗದ ಮುನ್ನ ಧರ್ಮವ ಗಳಿಸಿರೊ |ಸುಳ್ಳಿನ ಸಂಸಾರ ಸುಳಿಗೆ ಸಿಲುಕಬೇಡಿ 2ಏನು ಕಾರಣ ಯದುಪತಿಯನು ಮರೆತಿರಿ |ಧ್ಯಾನ್ಯ - ಧನ -ಸತಿ - ಸುತರಿವು ನಿತ್ಯವೆ? ||ಇನ್ನಾದರು ಶ್ರೀ ಪುರಂದರವಿಠಲನ |ಚೆನ್ನಾಗಿ ಭಜಿಸಿ ನೀವ್ ಸುಖಿಯಾಗಿರಯ್ಯ 3
--------------
ಪುರಂದರದಾಸರು