ಒಟ್ಟು 8 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಪ್ಪ ಕೇಳೋ ಬೇಡಿಕೊಂಬೆ ನಿನ್ನ ತಿಳಿಯಪ್ಪಒಪ್ಪಿ ಮಾತನ್ನಾಡಿಸಿದರೆ ನೀನೆ ಜಗದಪ್ಪ ಪ ನಾನದಾರು ಬಂದೆನೆಲ್ಲಿಗೆ ಎನ್ನುತ ನೀನಪ್ಪನಾನು ಹೋಗುವೆ ಎಲ್ಲಿಗೆ ಎಂದು ಚಿಂತಿಸು ನೀನಪ್ಪನೀನು ಸುಳಿಗಾಳಿಯ ಶಾವದ ತೆರದಂದದಿ ಇಹೆಯಪ್ಪನಾನಾ ಭವವಾಚರಿಸುತಿಹೆ ಆದಿ ಅಂತ್ಯವಿಲ್ಲಪ್ಪತನುವ ನೆಚ್ಚಬೇಡ ಮೊದಲಿನ ತನುವದೇನಾಯಿತಪ್ಪತನಯ ಸತಿಯರನೆಲ್ಲ ಬಿಟ್ಟುಬಂದೆ ನೀನುಮನೆ ಕಟ್ಟುವೆ ನೀನು ಮೊದಲಿನ ಮನೆ ಏನಾಯಿತಪ್ಪಾನಿನಗೆ ಕುಲವು ಎಷ್ಟಾದವು ಎಣಿಸಿಕೊಳ್ಳಪ್ಪ2 ಹಿಂದೆ ಮುಂದೆ ಕಾಣದಂತೆ ತಿರುಗಿ ತಿರುಗಿ ಅಪ್ಪಬೆಂದು ಬೆಂದು ಓಡಾಡುತಿಹೆ ಸ್ವರ್ಗ ನರಕಕಪ್ಪಎಂದೆಂದಿಗೂ ಅರಿವಾಗದ ಮರೆವು ಮುಚ್ಚಿ ಅಪ್ಪಅಂಧಕಾರ ಸಂಸಾರದಿ ಕಳವಳಿಸುತ ಅಪ್ಪ3 ಕಣ್ಣುಯಿದ್ದು ಕಣ್ಣಿಗೀಗ ಬೀಳಬೇಡವಪ್ಪನಿನ್ನ ನರಿವುದಕ್ಕೆ ಮನುಜ ಜನ್ಮ ಸಾಧನವಪ್ಪಹೊನ್ನು ಹೆಣ್ಣು ಮಣ್ಣು ಎನಗೆ ಬೇಡ ಬೇಡಪ್ಪಎನ್ನ ಬೋಧೆ ಕೇಳದಿರಲು ಕೆಟ್ಟುಹೋದೆಯಪ್ಪ 4 ವಾಸನದಿಂದ ತಿರುಗುವೆ ರಾಟಾಳರಂತಪ್ಪದೇಶಿಕ ಸದ್ಗುರು ಹೊಂದು ದೇವನಹೆಯಪ್ಪನಾಶವಹವು ನಾನಾ ಗುಣಗಳು ಜೀವನ ತನುವು ಅಪ್ಪಈಶ ಚಿದಾನಂದನಹೆ ಜನ್ಮವಳಿದು ಅಪ್ಪ 5
--------------
ಚಿದಾನಂದ ಅವಧೂತರು
ಏಳಯ್ಯ ಶ್ರೀ ಲಕ್ಷ್ಮೀರಮಣ ಸುರನÀುತ ಚರಣ ಏಳು ಶ್ರೀ ನೀಲಕಂಠನ ಮಿತ್ರ ಸುಚರಿತ್ರ ಏಳು ಶ್ರೀ ಭಾಗೀರಥೀ ಪಿತನೆ ಮತಿಯುತನೆ ಏಳು ಶ್ರೀ ಕೃಷ್ಣರಾಯ ಸ್ವಾಮಿ ಏಳಯ್ಯ ಬೆಳಗಾಯಿತು ಪ ನಸುಗೆಂಪಾಗಿ ತಾರಕಿಗಳಡುಗುತಿದೆ ಬೊಂಪು ಹರಿದೋಡುತಿದೆಕೋ ಸೊಂಪಡಗುತಿದೆ ಕುಮುದ ಕಮಲವರಳುತಿದೆ ನಾಗ ಸಂಪಿಗೆಯ ಬನದಿ ಸ್ವರ ಗೈಯುತಿದೆ ಮರಿದುಂಬಿ ಸಂಪತ್ತು ಬಡವಗೆ ಬರುವಂತೆ ರವಿ ಬಿಂಬ ಸೊಂಪಿ ನಿಂದೆಸೆಯುತಿದೆಕೋ ||ಸ್ವಾಮಿ|| 1 ಹಲವುಮೃಗ ಜಾತಿಗಳು ಹಳುವನಡ ಹಾಯುತಿವೆ ಫಲ ಪುಷ್ಪಚಯವು ಪಲ್ಲವಿಸಿ ಪಸರಿಸುತಲಿವೆ ಗಿಳಿ ವಿಂಡು ನಲಿಯುತಿದೆ ನವಿಲು ಜೇಂಕರಿಸುತಿವೆ ಹೊಲ ಮನೆಗಳೆಲ್ಲ ಹಸನಾಗಿ ಕಾಣಿಸುತಲಿವೆ ಸುಳಿಗಾಳಿ ಸುಳಿಯುತಿದೆ ಜಲಜಾಕ್ಷನುಪ್ಪವಡಿಸಾ ||ಸ್ವಾಮಿ|| 2 ಹಕ್ಕಿಗಳು ಹಾರುತಿದೆ ಕುಕ್ಕುಟವು ಕೂಗುತಿದೆ ನಕ್ಷತ್ರ ಪತಿಯ ಪ್ರಭೆ ಮಾಸುತಿದೆ ಸುರಭಿ ಬಲು ರಕ್ಕಸಾಂತರನೆವಳು ಮನೆಮನೆ ಬಿಡದೆ ಅಮ್ಮಿಯನು ಹುಡುಕುತಿವೆ ಚೊಕ್ಕ ಬೆಳಗಾಯಿತಿದೆ ಕೋ ||ಕೃಷ್ಣ || 3 ಪತಿವ್ರತೆಯರೆದ್ದು ಪುರುಷನ ಚರಣಕ್ಕೆರಗಿ ಚಮ ತ್ಕøತಿಯಿಂದ ಮುಖ ಮಜ್ಜನವಮಾಡಿ ಪಣೆಗಿಟ್ಟು ದಧಿ ಮಥಕನುವಾಗಿ ಕುಳಿತು ಅತಿಶಯ ದೊಳಗೆಲ್ಲ ಮನೆವಾರ್ತೆಯನು ಮುಗಿಸಿ ನಿಜ ಮತ ವಿಡದು ಭಕ್ತಿಯಲಿ ಗಿಂಡಿಲುದಕವ ತುಂಬಿ ನೀನು ಉಪ್ಪವಡಿಸ 4 ಮದ್ದು ಮಂತ್ರವು ಸಿದ್ದಿಸುವ ಕಳವಿನೊಳಗಿರ್ದ ಚೋರರಿ ಗೆದೆಯ ಧೈರ್ಯಗುಂದುವ ಸಮಯ ಉದ್ಯೋಗವಂತರಿಗೆ ಎಚ್ಚರಿಕೆ ಸಮಯ ದರಿದ್ರರಿಗೆ ನಿದ್ದೆ ಸಮಯ ಬುದ್ದಿಯುತರಾದ ಬುಧಬಾಲರಿಗರ್ಥಗ್ರಂಥ ದ್ಯಾನ ಶಾಸ್ತ್ರ ಪುರಾಣಗಳ ಬಹುವಿದ್ಯೆ ಪಠಿಸುವ ಮುದ್ದು ಗೋಪಾಲಕೃಷ್ಣ 5 ವ್ಯಾಸ ವಾಲ್ಮೀಕಿ ಶುಕನಾರದನು ಶೌನಕ ಪರಾಶರ ವಶಿಷ್ಟ ವೈಶಂಪಾಯ ಕಣ್ವ ವಿಶ್ವಾಮಿತ್ರ ಗೌತಮ ಭರದ್ವಾಜ ಸನಕ ದೂರ್ವಾಸ ಕೌಶಿಕ ಕಪಿಲರು ಕೌಶ್ಯಪ ದಧೀಚಿ ಭಾರ್ಗವರಗಸ್ತ್ಯ ಋಷಿ ಈ ಸಮಸ್ತಾದಿ ಹರಿಯೇ || ಸ್ವಾಮಿ || 6 ಜಾಂಬವ ವಿಭೀಷಣಾಶ್ವತ್ಥಾಮ ಹನುಮಂತ ಜಂಭಾರಿಸುತ ಧನಂಜಯ ಬಲಿಷ್ಠಹಲಾದರೆಂಬಸದ್ಭಕ್ತರುಗಳು ಅಂಬುಜೋದ್ಭವ ಮುಖ್ಯರಮರ ಗಂಧರ್ವಾದಿ ತುಂಬುರ ಭುಜಂಗ ಭೂಸುರರೆಲ್ಲರೊಂದಾಗಿ ಬಿಡದ ಹಂಬಲಿಸುತೈದಾರೆ ಹರಿಯೆ || ಸ್ವಾಮಿ || 7 ಗಂಗೆ ಗೋದಾವರಿಯ ಭೀಮರತಿವರದೆ ವರ ತುಂಗ ಭದ್ರೆಯು ಯಮುನೆ ಕಾವೇರಿ ಸಿಂಧು ಅಂಗನೆಯರೆಲ್ಲರೂ ಕೂಡಿ ರಂಗು ಮಾಣಿಕದ ಆಭರಣಗಳಲಂಕರಿಸಿ ಹಿಂಗದೆಲ್ಲರು ನೆರೆದು ಹರಿ ನಿಮ್ಮ ಬಾಗಿಲೋಳು ಮಂಗಳಭಿಷೇಕಕೆಂದು ಸ್ವಾಮಿ 8 ಕರುಗಳನು ಕಾಯ್ದ ಕಾರುಣ್ಯ ಮೂರುತಿ ಏಳು ವರ ಪಾಂಡುರಂಗ ವಿಠಲ ಹರಿಸುತನ ಹಯವರೂಥವ ಹರಿಸಿದವನೆ ಏಳು ಹರಿಸುತನ ಸುತನ ಸುತನ ಕಾಯ್ದವನೆ ಏಳು ಹರಿಸುತನ ಕೋಣೆ ಲಕ್ಷ್ಮೀರಮಣನೆ ಏಳು ಶ್ರೀ ಹರಿಯೆ ನೀನು ಉಪ್ಪವಡಿಸಾ ||ಕೃಷ್ಣ || 9
--------------
ಕವಿ ಪರಮದೇವದಾಸರು
ನಂಬಿದೆ ನಾನಿನ್ನ ಚರಣವನಂಬಿಗ ಅಂಬೆಗಳ ಸುತನೆ ಕೋ ಬ್ಯಾಗಂಬಿಗ ಪ ಇಂಬಾಗಿ ದಡ ಸೇರಿಸೆನ್ನನೇನಂಬಿಗ ತುಂಬಿ ನದಿ ಸೂಸುತಲಿದೆ ನೋಡಂಬಿಗ ಅ.ಪ. ಕರ್ಮವೆಂಬ ಪ್ರವಾಹವ ನೀ ನೋಡಂಬಿಗ ಚರ್ಮದಿಂದೇಳು ಹೊದ್ದಿಕಿ ಅಂಬಿಗ ಮರ್ಮ ಒಂಭತ್ತು ರಂಧ್ರ ಉಂಟಂಬಿಗ ಶರ್ಮವಿದಕೆ ಕಾಯದ್ಹರಿಗೋಲಂಬಿಗ 1 ಆಳ ಬಹಳ ಗೊತ್ತಾಗದಂಬಿಗ ಶೆಳವು ಘನ ಉಳ್ಳುಹುದು ನೋಡಂಬಿಗ ಸುಳಿಗಾಳಿಗೆ ಸಿಗಿಸದಿರೊ ಅಂಬಿಗ ಬಳಸಿ ಕೊಂಡೊಯ್ಯೋದು ಒಳ್ಳೇದೆ ಅಂಬಿಗ 2 ಸಂಚಿತಾಪ್ತಿ ಇವರೊಳುಂಟಂಬಿಗ ಭಾರ ಜಡಿಯೋದು ನೀ ನೋಡಂಬಿಗ ವಂಚಕ ಮಾತು ರಾಗವು ಹೆಚ್ಚಂಬಿಗ ಚಂಚಲಗೊಂಡು ಭ್ರಮಿಸೋದು ಕಾಣಂಬಿಗ 3 ಆಶಾಜಲ ಮೇಲೆ ಮೇಲೆ ಬರುವುದಂಬಿಗ ಮೋಸ ಮಾಡುವುದೇನೊ ಕೊನೆಗೆ ಅಂಬಿಗ ಪೊಸ ಪೊಸ ಕಾಮತೆರೆ ತುಂಬಾಯಿತಂಬಿಗ ಲೇಶವಾದರು ಬತ್ತದು ನೋಡಂಬಿಗ4 ಅಷ್ಟ ಆನೇ ಒಳಗಿಟ್ಟುಕೊಂಡಿಹುದಂಬಿಗ ಹುಟ್ಟು ಹಾಕೋದು ಬಿಟ್ಟು ಜಲ್ಲೆ ಕೊಳ್ಳಂಬಿಗ ಬೆಟ್ಟ ಆರಕ್ಕೆ ಸಿಕ್ಕಿಸದೆ ನೋಡಂಬಿಗ ನೆಟ್ಟ ನಡುವಿನ ಪಥದಿ ಒಯ್ಯೋ ಅಂಬಿಗ 5 ಸುತ್ತ ಕಾರ್ಮುಗಿಲು ಬಂತಲ್ಲೊ ಅಂಬಿಗ ಹತ್ತು ಹನಿಗಳು ಬಿತ್ತು ನೋಡಂಬಿಗ ಎತ್ತಿ ನಡೆಸೋದು ಶಕ್ತಿ ನಿನ್ನದು ಕಾಣಂಬಿಗ ಹತ್ತಿಸೊ ಭಕ್ತಿದಡಕಿನ್ನಂಬಿಗ 6 ಮರಕಟಿ ಸೇರಿಹದಿದರೊಳಗಂಬಿಗ ಕರೆಕರೆಗೆ ಗುರಿ ಮಾಡೊದಿದೆ ಅಂಬಿಗ ಸರಿಯಾಗಿ ನಡೆಸೊ ಇನ್ನಾದರಂಬಿಗ ವರದವಿಜಯ ರಾಮಚಂದ್ರವಿಠಲ ನೀನಂಬಿಗ 7
--------------
ವಿಜಯ ರಾಮಚಂದ್ರವಿಠಲ
ಬಂಟರಾಗಿ ಬಾಗಿಲ ಕಾಯೋರು ಹರಿಯವೈಕುಂಠದಿ ರಂಗನಾಯಕನರಮನೆಯ ಪ. ಸುತ್ತ ವಿರಜಾನದಿ ಮತ್ತು ನಂದನ ವನಉತ್ತಮೋತ್ತಮ ವೈಕುಂಠಉತ್ತಮೋತ್ತಮ ವೈಕುಂಠದೊಳಗಿನ್ನುಮಿಂಚಿನಂತೆ ಹೊಳೆವೊ ಮುಕ್ತರು1 ಶ್ರೀದೇವಿ ತಾನು ಮುರಹರನ ಪುರದಾಗವಿರಜಾ ತಾನೆಂದು ಕರೆಸುತವಿರಜಾ ತಾನೆಂದು ಕರೆಸುತ ನಾನಾ ಪರಿಗಿಳಿ ಕೋಗಿಲಾಗಿ ಮೆರೆವೋಳು2 ಉತ್ತರ ದಿಕ್ಕಿನಲೆಥಳ ಥಳಿಸುವ ದ್ವಾರ ಮುತ್ತು ಮಾಣಿಕ್ಯ ಅಳವಟ್ಟಮುತ್ತು ಮಾಣಿಕ್ಯ ಅಳವಟ್ಟ ಹರಿಪುರರತ್ನದ ಝಲ್ಲೆ ಬಿಗಿದಾವೆÉ 3 ರಾಜಿ ಮಾಣಿಕ ಗೋಡೆ ಗಾಜಿನ ನೆಲಗಟ್ಟುಈ ಜೋಡು ದ್ರವ್ಯ ಎಲ್ಲಿಲ್ಲ ಈ ಜೋಡು ದ್ರವ್ಯ ಎಲ್ಲಿಲ್ಲ ಇದುನಮ್ಮ ಶ್ರೀದೇವಿಯರಸನ ಅರಮನೆ 4 ಕೇಶರ ಶ್ರೀಗಂಧ ಕಲವೆಲ್ಲ ಪರಿಮಳಬಿಸÀಜನೇತ್ರನರಮನೆಯಬಿಸಜನೇತ್ರೆಯರ ಮನೆಯಿಂದ ಕುಸುಮದ ವೃಷ್ಟಿಗರೆದಾವು5 ಉತ್ತರ ಪಾಲ್ಗಡಲೊಳು ಮುತ್ತು ಮಾಣಿಕರತ್ನಪಚ್ಚ ಕರ್ಪೂರ ಸುಳಿಗಾಳಿಪಚ್ಚ ಕರ್ಪೂರ ಸುಳಿಗಾಳಿ ಇದುನಮ್ಮ ಅಚ್ಯುತಾನಂತನರಮನೆಯ6 ಕೃಷ್ಣ ರಾಮೇಶನ ವಿಶಿಷ್ಠದ ವೈಕುಂಠಸೃಷ್ಟಿ ಮಾಡಿ ರಚಿಸಿದ ಸೃಷ್ಟಿ ಮಾಡಿ ರಚಿಸಿದ ನೋಡಲು ದೃಷ್ಟಿ ಸಾಲದು ಜನರಿಗೆ7
--------------
ಗಲಗಲಿಅವ್ವನವರು
ಬೆಳಗಾಯಿತು ಕೇಳಿ ಭ್ರೂಮಧ್ಯ ಮಂಟಪದೊಳಗೆಬೆಳಕು ಪಸರಿಸುತಿದೆಕೊ ಎತ್ತಿತ್ತ ನೋಡೆಮುಂಬೆಳಕು ಕಾಣಿಸುತ್ತ ರವಿಕೋಟಿಯಂ ಪಳಿಯುತಿದೆನಿರ್ಮಳ ನೋಡಲುಪ್ಪವಡಿಸ ಯತಿರಾಜ ಪ ಷೋಡಶಾಕಾರವಹ ಸೋಮ ಕಳೆಗುಂದಿಹುದುಖೋಡಿ ಜನನ ಮರಣ ಚಕ್ರ ತಾ ಕೊರಗಿದುದುಪಾಡಳಿದು ಜೀವಶಿವ ಶೈತ್ಯ ಬಿಟ್ಟಾಡಿದುದುಆರೂಢನೊಲಿದುಪ್ಪವಡಿಸ ಯತಿರಾಜ1 ತಾಪತ್ರಯಗಳೆಂಬ ರಾತ್ರಿ ತಾ ಜಗುಳಿದುದುಪಾಪಿ ಇಹಪರವೆಂಬ ಸುಳಿಗಾಳಿ ಜಾರಿದುದುಕೋಪಿ ಸಪ್ತವ್ಯಸನ ಗೂಗೆ ಕಣ್ಣುಡುಗಿದುದುನಿರ್ಲೇಪನುಪ್ಪವಡಿಸ ಯತಿರಾಜ2 ಅಷ್ಟ ಪ್ರಕೃತಿಗಳೆಂಬ ನಕ್ಷತ್ರವಡಗಿದವುದುಷ್ಟ ಪಂಚೇಂದ್ರಿಯದ ಕುಮುದಗಳು ಬಾಡಿದವುನಷ್ಟರಾರುವರೆಂಬ ಶಿವನಿಕರ ವೋಡಿದವುಶಿಷ್ಟ ನೀನೊಲಿದುಪ್ಪವಡಿಸ ಯತಿರಾಜ3 ಭ್ರಮರ ಕಮಲ ತಾನಿಲ್ಲಿ ಬಿರಿಯುತಿದೆನಿಶ್ಚಿಂತನೊಲಿದುಪ್ಪವಡಿಸ ಯತಿರಾಜ 4 ಮೂರ್ತಿ ಚಿದಾನಂದಗುರುನಾಥನುಪ್ಪವಡಿಸ ಯತಿರಾಜ 5
--------------
ಚಿದಾನಂದ ಅವಧೂತರು
ಬೋಧದ ಘನಮಳೆಯುಸುರಿದು ಮುಕುತಿಬೆಳೆಯು ಬಂದುದು ಪ ಮಾಯೆಯ ಬಲು ಬಿಸಿಲುತಾಪ ಕಾಯದೊಳಗೆ ಹೆಚ್ಚುತಿರಲು ಹೇಯವೆನಿಸಿ ಜನನಮರಣ ಮುಮುಕ್ಷುತ್ವ ಮೋಡಗವಿದು 1 ಸುವಿಚಾರದ ಮಿಂಚು ಹೊಳೆದು ಶ್ರುತಿಶಿರಗಳ ಗುಡುಗು ಹೊಡೆದು ಶ್ರವಣದ ಸುಳಿಗಾಳಿ ಬೀಸಿ ಭವತಾಪವ ಹರಿಸುತಿರಲು 2 ವೈರಾಗ್ಯದ ರಂಟೆ ಹೊಡೆದು ಶಮೆದಮೆಗಳ ಹರತೆಯಾಗಿ ಪರಮಾರ್ಥದ ಬೀಜ ಬಿದ್ದ ನರಜನ್ಮದ ಹೊಲದ ಮೇಲೆ 3 ದೃಷ್ಟಿಯೊಳಗಿನಾನಂದ ಸೃಷ್ಟಿಯಾಗಿ ತೋರಿ ಚಂದ ಶ್ರೇಷ್ಠನಾದ ಶಂಕರಗುರುವರನ ಸಹಜಕರುಣೆಯಿಂದ 4
--------------
ಶಂಕರಭಟ್ಟ ಅಗ್ನಿಹೋತ್ರಿ
ಉಪ್ಪವಡಿಸೆಲೆಲೆ ತಂದೆಸರ್ಪಗಿರಿವಾಸ ಶ್ರೀನಿವಾಸ ದಯದಿ ಪ.ಕಮಲಸಖಸೂರ್ಯಮೂಡದ ಮುನ್ನೆ ಮುನಿಜನರುತಮ ತಮಗೆ ನೀನೊಲಿದ ನಿನ್ನ ಪ್ರತಿಮೆಯ ಪದಕೆನಮಿಸುತೈದಾರೆ ಧ್ಯಾನಮೌನ ಜ್ಞಾನದೊಳವರುರಮೆಯರಸ ಯೋಗನಿದ್ರನೆ 1ಸುಳಿಗಾಳಿ ಸೌರಭಿಯ ಬಳಿವಿಡಿದು ಮಧುಪಕುಲಸುಲಲಿತ ಸ್ವನದಿ ಪಾಡುತಿರೆಸಾರಸಮಯೂರಗಿಳಿಕೋಕಿಲ ಮರಾಳ ಚಕ್ರವಾಕ ಶಕುಂತಬಳಗ ಬಲು ತುತಿಸುತಿವೆ ಕೋ 2ಪವಿತ್ರೆಯೆನಿಸುವ ದೇವನದಿ ಯಮುನೆ ಗೋದಾವರಿ ಸರಸ್ವತಿ ಶ್ರೀಕೃಷ್ಣ ಕಾಳಿಂದಿಕಾವೇರಿ ತುಂಗಭದ್ರೆ ಭೀಮಾದ್ಯರೈತರಲುಪಾವನಿಸುತೀರ್ಥಪದನೆ3ಹನುಮಸುರಋಷಿದೇವ ಗಂಧರ್ವ ಕಿಂಪುರಷರನುನಯದಿ ದಂಡಿಗೆ ಸುವೀಣೆಯಂ ಮುಟ್ಟಿ ನಿಜತನುವ ಮರೆದು ಉಗ್ಗಡಿಸುತಿರೆ ಸರಸಪ್ರಿಯಸನಕಾದಿ ವಂದ್ಯ ಕೃಷ್ಣ 4ತಮಜಾರಿ ಕೇಳುಮಂದರಪೊರೆಯಲೇಳೈ ವಸುಮತಿಲ್ಭಕ್ತ ಇಂದ್ರಾದಿಗಳ ಮೊರೆ ಕೇಳುಕುಮತಿಜನರಿಪುಭವಾಬ್ಧಿತ್ರಾತ ಸುಖಿಯೋಗಿಅಮಲಪ್ರಸನ್ನ ವೆಂಕಟೇಶ 5
--------------
ಪ್ರಸನ್ನವೆಂಕಟದಾಸರು