ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಗಿ ಭಜಿಸಿರೋ | ಭಾಗಣ್ಣ ದಾಸರನಾ | ನಮಿಪರ ಬೀಷ್ಟದನಾ ಪ ಭೋಗಿ ಭೂಷಣ ಸುತನಾ | ಮನ್ಮಥ ಸದೃಶನನಾ ಅ.ಪ. ಮುರಹರ ನಾಮಕನರಸಿಯುದರದಲ್ಲಿ | ಜನುಮತಾಳಿ ಅಲ್ಲೀಸುರಪುರ ವೈದಲು ತನ್ನ ಪಿತನು ಮುಂದೇ | ಸಂಕಾರ ಪುರಸೇರ್ದೇ | ವರಚಿಂತಲ ವೇಲಿಲಿ ಧ್ಯಾನಕಾಗಿ ನಿಂದು | ಗಾಯಿತ್ರಿ ಜಪಿಸು ತಂದು ವರಮಾರುತಿ ಗುಡಿಯೊಳು ನೆಲಿಸುತ್ತಾ | ವರಪಡೆದೆಯೊ ಜಪಿಸುತ್ತಾ 1 ತ್ರಿಲಿಂಗಪುರಕೇ ಕವಿಯೈತರಲೂ | ಪಂಡಿತರನು ಗೆಲಲೂಬಲುಚಿಂತಿಸಿ ಜನಸಭೆಯ ಸೇರಿ ಆಗ | ತೀರ್ಮಾನಿಸಿ ವೇಗ |ಕಳುಹಿದರವನ ಭಾಗಣ್ಣನ ಬಳಿಗಾಗೀ | ಬಲವನು ತೋರೆನಲಾಗೀ ನಿಲಲಾರದೆ ತೆರಳಿದ ಭೀತಿಯಲೀ | ವರಕವಿ ಮೆರೆದನು ಕೀರ್ತಿಯಲೀ2 ಪರಿ ನಿತ್ಯ ಶ್ರೀ ವೆಂಕಟಕೃಷ್ಣನ ಪಾಡುತ್ತಾ | ನರ್ತನ ಗೈಯ್ಯುತ್ತಾ ಸುತ್ತಿ ಬರುವ ಜನರ ದೃಷ್ಠಾರ್ಥಾ | ಪೇಳುತ ಗಳಿಸಿದೆ ಅರ್ಥಾ 3 ತಿಮ್ಮಣ್ಣ ದಾಸಾರ್ಯರ ಬಳಿಯಲೀ | ಆದವಾನಿಯಲ್ಲೀನೆಮ್ಮದಿಲಿದ್ದಲ್ಲಿಂದಲಿ ತೆರಳಿ | ಕಾಶೀಶನ ಬಳೀಕ್ರಮ್ಮಿಸಿ ದಿನ ಗುರು ಸೇವೆಯಲ್ಲಿ ಬಹಳಾ | ಮೆಚ್ಚಿಸಿ ಗುರುಗಳ | ಹಮ್ಮಿನ ವಿಜಯರಿಂದುಪದೇಶಾ | ಗೋಪಾಲ ವಿಠ್ಠಲದಾಸ 4 ವೆಂಕಟರಾಮಗೆ ರಾತ್ರಿಕಾಲದಲ್ಲೀ | ಆಘ್ರ್ಯವ ಕೊಡುವಲ್ಲೀ ಪಂಕಜಮಿತ್ರನ ತೋರುತಲವರೀಗೆ | ಸಂಶಯ ಕಳೆದವಗೆ | ವೆಂಕಟೇಶನೊಳ್ ಭಕುತಿ ಪುಟ್ಟುವಂತೆ | ಸೇವೆ ವಿಧಿಸಿ ಅಂತೇ ಪಂಕಜನಾಭನ ಕೀರ್ತನಾದಿಗಳನೂ | ಮಾಡಿ ಕಳೆದ ದಿನಗಳನೂ 5 ವೆಂಕಟೇಶನ ಪರೋಕ್ಷಿ ದಾಸರೆಂದು | ಪೇಳೆ ಜನರು ಅಂದು ವೆಂಕಟ ನರಸಿಂಹಾಚಾರ್ಯಾ | ದಾಸರೊಳು ಮಾತ್ಸರ್ಯಾ | ಶಂಕೆಪಟ್ಟು ಭಜನೆಯೊಳಿರುವಂದೂ | ಮುಂದಿನ ಪೀಠದಲೊಂದೂ ಲಂಕೆಯ ಪುರವನು ದಹಿಸಿದನಾ | ಕಂಡರು ಕೋಡಗನಾ 6 ವಾಸುದೇವ ವಿಠಲನ್ನಾ | ಕಾಣುತಲಿ ಮುನ್ನಾ ಅಂಕಿತ ನಾಮದಿ ಪದಪದ್ಯಾ | ರಚಿಸಿ ಮೆರೆದ ನಿರವದ್ಯಾ7 ರೋಗದಿ ಶ್ರೀನಿವಾಸಾಚಾರ್ಯಾ | ಬರಲಾಗ ದಾಸಾರ್ಯ ಜಾಗ ಗುಡಿಯಲಿ ಶುದ್ಧಿ ಮಾಡುತಿರಲು | ಕೇಳಿ ಗೃಹಕೆ ಹೋಗಲು | ವೇಗದಿ ಮಂತ್ರಿತ ರೊಟ್ಟಿ ತಿಂದು ಇನ್ನ | ಕಳೆದ ರೋಗವನ್ನ ನಾಗಶಯನ ಶ್ರೀ ಜಗನ್ನಾಥ ವಿಠಲನ್ನಾ | ತೋರ್ಯರ್ಧಾಯು ಇತ್ತವನ್ನಾ 8 ಮುದದಲಿ ನಿಜಜನರನು ಪೊರೆಯೇ | ಶಾಸ್ತ್ರರ್ಥವ ನೊರೆಯೆ ಪದ ಸುಳಾದಿಯನೆ ಬಲುರಚಿಸೀ | ಭಕುತಿ ಮಾರ್ಗ ಬೆಸಸೀ | ಸುಧೆಸಮವೆನೆ ಹರಿಕಥೆಸಾರ | ರಚಿಸಿ ಜನೋದ್ಧಾರ ಮುದಮುನಿ ಮತಗ್ರಂಥಗಳೊರೆದೇ | ಸಚ್ಛಾಸ್ತ್ರಪೊರೆದೇ 9 ಹತ್ತೆಂಟು ಒಂದು ಮೊಗದ ರೂಪ | ಶ್ರೀ ವಿಶ್ವರೂಪನಿತ್ಯ ಚಿಂತಿಪ ತನ್ನ ಬಿಂಬರೂಪ | ಅಂಶದಿಹನು ಗಣಪಚಿತ್ರಿಸಿರುವ ಚಕ್ರಾಬ್ಜ ವಲಯವನ್ನ | ಧೇನಿಸಿ ವಿಜಯರನ್ನಕೃತ್ಯ ಪೇಳಲೊಶವೆ ಅಪರೋಕ್ಷಿಗಳ | ಮಂದನು ನಾ ಬಹಳ 10 ಚಿತ್ರಮಾರ್ಗದಿ ಭ್ರಾತೃವರ್ಗವನ್ನ | ದೂರಕಳಿಸಿ ಮುನ್ನಚಿತ್ರಭಾನು ಸಂವತ್ಸರದಲ್ಲಿ | ದಶಮಾಸಾಷ್ಟಮಿಲೀ |ಚಿಂತಿಸುತ ಯೋಗಮಾರ್ಗದಲ್ಲಿ | ದಹಿಸಿ ದೇಹವಲ್ಲೀ |ಚಿತ್ರ ಚರಿತ ಗುರುಗೋವಿಂದ ವಿಠ್ಠಲನಾ | ಪದಕಮಲವ ಸೇರಿದನ 11
--------------
ಗುರುಗೋವಿಂದವಿಠಲರು
ರತುನ ದೊರಕಿತಲ್ಲ | ಎನಗೆ ದಿವ್ಯ ರತುನ ದೊರಕಿತಲ್ಲ ಪ ರತುನ ದೊರಕಿತು ಎನ್ನ ಜನುಮ ಪ ವಿತರವಾಯಿತು ಈ ದಿನದಿ ನಾ ಯತನ ಗೈಯುತ ಬರುತಿರಲು ಪ್ರ ಯತನವಿಲ್ಲದೆ ವಿಜಯರಾಯರೆಂಬೊ ಅ.ಪ. ಪಥದಿ ನಾ ಬರುತಿರಲು ಥಳಥಳವೆಂದು ಅತಿ ಕಾಂತಿ ಝಳಪಿಸಲು ಬೆರಗಾಗುತ್ತ ಅತಿ ಚೋದ್ಯವ ಕಾಣಲು ಸೇವಿಸುತಿರೆ ಸತತ ಕರಪಿಡಿದಾದರಿಸಿ ಮನೋ ರಥವ ಪೂರೈಸುತಲಿ ದಿವ್ಯ | ಸ ನ್ಮತಿಯ ಪಾಲಿಸಿ ಮೋಕ್ಷ ಸುಪಥವ ಅತಿಶಯದಿ ತೋರುತ್ತ ಪೊರೆದ 1 ಪುತ್ಥಳಿ ಕಂಬಿಯಲ್ಲಿ ಸುಕೃತ ಮಾಲಾ ನಾನಾವಿಧ ಹವಳದಲಿ ಸೇರಿಸುತಲಿ ಪ್ರಾಣ ಪದಕವೆಂಬ ಮಾಲೆಯನು ಅನು ಮಾನವಿಲ್ಲದೆ ಕೊರಳಿಗ್ಹಾಕುತ ಗಾನದಿಂ ಕುಣಿಯುತ್ತ ಪಾಡುತ್ತ ದೀನ ಜನರುದ್ಧಾರ ಗೈಯುವ 2 ಶೋಧಿಸಿ ಗ್ರಂಥಗಳ - ಸುಳಾದಿಯ ಮೋದದಿಂದಲಿ ಬಹಳ ಕವಿತೆ ಮಾಡಿ ಸಾಧುಜನಕೆ ಸಕಾಲ ಆನಂದ ವಿತ್ತು ವಾದಿಜನರನು ಗೆದ್ದು ಬೋಧಿಸಿ ಮಾಧವ ಜಗನ್ನಾಥ ವಿಠಲನ ಪಾದ ಕಮಲಕೆ ಮಧು ಪನಂದದಿ ಸಾದರದಿ ತೋರುತ್ತ ಮೆರೆಯುವ 3
--------------
ಜಗನ್ನಾಥದಾಸರು
ಸಂಗಸುಖವ ಬಯಸಿ ಬದುಕಿರೋ ರಂಗವಲಿದ ಭಾಗವತರ ಪ ಸಂಗಸುಖವ ಬಯಸಿ ಬದುಕಿ ಭಂಗಪಡಿಪ ಭವವ ನೂಕಿ ಹಿಂಗದೇ ನರಸಿಂಗನನ್ನು ಕಂಗಳಿಂದ ಕಾಣುತಿಹರ ಅ.ಪ. ಪುಟ್ಟಿದಾರಭ್ಯ ಪರಮ ವೈಷ್ಣವಾಧ್ಯಕ್ಷರೆನಿಸಿ ನಿತ್ಯ ಮುದ್ದು ಕೃಷ್ಣ ಕೀರ್ತನೆಯನು ಪಾಡುತ ಕಾವ್ಯಕರ್ಮ ಬಿಟ್ಟು ಭಕ್ತಿಯನೆ ಮಾಡುತ ಮಧ್ವಮತವ ಪುಷ್ಟಿಗೈಸಿ ಖಳರ ಕಾಡುತ ಬಂದ ಲಾಭ ನಷ್ಟ ತುಷ್ಟಿಗಳಿಗೆ ಒಡಂಬಟ್ಟ ಬಗೆಯ ಪೇಳಲೆಷ್ಟು 1 ಭೂತದಯಾಶೀಲರಾದ ನೀತ ಗುರು ಜಗ- ನ್ನಾಥ ವಿಠಲಾಂಕಿತವನು ಪಡೆದು ಸಂಗೀತ ವೃತ್ತ ಪದ ಸುಳಾದಿಯ ಪೇಳಿ ಪ್ರೇ- ಮಾತಿಶಯದಿ ಒಲಿಸಿಕೊಂಡು ಮಧುವಿರೋಧಿಯ ಒಲಿಸಿಕೊಂಡ ಜಾತರಾಗಿ ಜವನಬಾಧೆಯ ಬಯಲು ಮಾಡಿ ಖ್ಯಾತರಾಗಿಹರು ಪುಸಿಯ ಮಾತಿದಲ್ಲ ಮರೆಯಸಲ್ಲ 2 ಮೇದಿನಿಯೊಳಗುಳ್ಳ ಗಂಗಾದಿತೀರ್ಥ ಸತಿಗಳಿವರ ಕಾದುಕೊಂಡಿಹರು ಬಿಡದೆ ಸ್ವಾದಿರಾಜೇಂದ್ರರ ಪ್ರ- ಸಾದದಿಂದ ಹರಿಕಾಥಾಮೃತ ಸಾರತತ್ವ ಸಾಧುಜನರಿಗಾಗಿ ಪ್ರಾಕೃತ ಪದ್ಧತಿಯಲಿ ಸಾದರದಲಿ ಪೇಳಿ ದುಷ್ಕøತ ದೂರಮಾಡಿ ಮೋದಿಸುವರಿಗೆಣೆಗಾಣೆ ಶ್ರೀದವಿಠಲನಾಣೆ 3
--------------
ಶ್ರೀದವಿಠಲರು
ಸ್ಮರಿಸಿ ಬದುಕಿರೊ ಸರ್ವಾನಂದ ಗುರುಗಳ ನಿರುತದಿಂದ ಇಷ್ಟಫಲವ ನೀಡೋ ವರಗಳ ಬೇಡಿ ಪ ಆದಿಕಲ್ಲಿನಲ್ಲಿ ಮಹಾದೇವ ಕರೆಯೆ ಬಂದು ನಿಂತ ಶ್ರೀದೇವಿರಮಣನ ಮುದ್ದು ಪಾದಾಂಬುಜವ ಪೂಜಿಸುವರ 1 ಉತ್ತಮವಾಗಿದ್ದ ದಿವ್ಯ ಛತ್ರ ವಿಜಯತೀರ್ಥ ನಿರ್ಮಿಸಿ ನಿತ್ಯದಲಿ ಮೃಷ್ಟಾನ್ನದಾನ ವಿಸ್ತಾರವನೆ ಪೇಳಲೊಶವೆ 2 ಕುಷ್ಠರೋಗ ವ್ಯಾಧಿ ಜ್ವರ ಚತುರ್ಥಿ(?) ಭಯಭೀತಿಗಳನ್ನೆಲ್ಲ ಬಿಟ್ಟೋಡಿಸಿ ತೀರ್ಥ ಅಂಗಾರದಲಿ ಸಮಸ್ತರ ಮಹಿ(ಮೆ)ಯ ನೋಡಿ 3 ಸಂತಾನ ಸಯುತದ ಫಲವ ನಿಂತು ಕೊಡುತ ಮಂತ್ರಾಕ್ಷತೆಯ ಗ್ರಂಥ ಪದಸುಳಾದಿಯ ಲಕ್ಷ್ಮೀಕಾಂತಗೆ ಮಾಡರ್ಪಿಸುವರ 4 ಹರಿಯ ದಿವ್ಹ್ಯಾಸಿಕÉಯ ನಾಮ ಗುರು ವಿಜಯರಾ- ಬಿಡದೆ ಭಜನೆ ಮಾಡುವವರ5
--------------
ಹರಪನಹಳ್ಳಿಭೀಮವ್ವ