ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಲ್ಲೆ ನೋಡಿದರೀಹ್ಯ ಇಲ್ಲೆ ನೋಡಿದರೀಹ್ಯ ಎಲ್ಲಾ ಕಡೆಯಲ್ಲೇಕೋಮಯವೋ 1 ಸುಲ್ಲಭವಾಗಿ ನಮ್ಮ ಫುಲ್ಲಲೋಚನ ಕೃಷ್ಣ ಬಲ್ಲ ಮಹಿಮರಿಗೆ ಭಾಸುವನು 2 ಭೇದಿಸಿ ನೋಡಿರಯ್ಯ ಸಾಧು ಜನರೆಲ್ಲ ಮೇದಿನಿಯೊಳು ಘನತುಂಬಿಹುದು 3 ಕಣ್ಣಾರೆ ಕಂಡೆವಯ್ಯ ಪುಣ್ಯಚರಣಮಹಿಮೆ ಸಣ್ಣ ದೊಡ್ಡದರೊಳು ಸಾಕ್ಷಾತವೊ 4 ನಂಬಿನಡಿಯಲಿಕೆ ಅಂಜುಜಾಕ್ಷನ ಪಾದ ಗುಂಭಗುರುತವಾಗಿದೋರುವದು 5 ಗುರುಕೃಪೆಯಿಂದ ನೋಡಿ ಹರುಷವಾಯಿತು ಜೀವ ಬೆರತುಕೂಡಿತು ಸಮರಸವೊ 6 ಬೆರೆದು ಕೊಡುವದು ಹರಿಯ ಕಟಾಕ್ಷವಿದು ಮರುಳ ಮಂಕಗಳಿದು ಅರಿಯಾವೊ 7 ವದಗಿ ಬಂದತಿದರಿಟ್ಟು ಸದಮಲಬ್ರಹ್ಮಸುಖಾ ಮೊದಲಿನ ಪುಣ್ಯ ಪೂರ್ವಾರ್ಜಿತವೊ 8 ಧನ್ಯವಾಯಿತು ಮೂಢ ಮಹಿಪತಿ ಪ್ರಾಣಜೀವ ಮನವು ಆಯಿತು ಉನ್ಮನವೊ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎಲ್ಲಿಗ್ಹೋಗಿ ತಡಮಾಡಿದ್ಯೋ ಫುಲ್ಲಲೋಚನ ಕೃಷ್ಣ ನೀ ಎಲ್ಲಡಗಿದ್ಯೊ ಧ್ರುವ ಬಲ್ಲವರಿಗೆ ಬಲ್ಲತನದೋರ ಹೋಗಿದ್ಯೊ ಅಲ್ಲಿ ಅವರ ಸಹಕಾರ ನೀನಾದ್ಯೊ ಸುಲ್ಲಭವಾಗಿ ಜ್ಞಾನಕೆ ನೀ ಸಿಲುಕಿದ್ಯೋ ಒಲ್ಲದ್ಹಾಂಗ್ಹೋಗಿ ಎಲ್ಲರಿಗಾಗಿದ್ಯೊ 1 ಙÁ್ಞನಿಗಳಿಗೆ ಙÁ್ಞನಸಮುದ್ರ ನಾಗಿದ್ಯೊ ಧ್ಯಾನಮಾಡುವರ ಧ್ಯಾನವೆ ಅಗಿದ್ಯೊ ಮುನಿಜನರೊಡನೆ ಮಾನಸ ಹಂಸನಾಗಿದ್ಯೊ ಖೂನದೋರಲು ಹೋಗಿ ನೀನೆ ಆಗಿದ್ಯೊ 2 ಧೃಢಭಕ್ತರೊಡನೆ ಭಿಡಿಯೊಳಗಾಗಿದ್ಯೊ ಕಡಿಗಾಗದ್ಹಾಂಗ ಕೈಯೊಳಗಾಗಿದ್ಯೊ ಎಡಬಲಕವರೆಂದು ಬಿಡದ್ಹಾಂಗಾಗಿದ್ಯೊ ಒಡಲ ಹೊಕ್ಕವರ ಒಡಿಯನಾಗಿದ್ಯೊ 3 ಪ್ರೇಮ ಉಳ್ಳವರ ಪ್ರೀತಿಯೊಳಗಾಗಿದ್ಯೊ ಸ್ವಾಮಿತನದಲಿ ಸಮೀಪನಾಗಿದ್ಯೊ ಕಾಮ ಪೂರಿಸಲಿಕೆ ನೇಮವ ಪಿಡಿದ್ಯೊ ಮಾಮನೋಹರ ನೀ ಸುಗಮವಾಗಿದ್ಯೊ 4 ಇಂದು ನೆನಪಾಯಿತೆಂದು ಓಡಿ ನೀ ಬಂದ್ಯೊ ಚಂಚವಾಗೆನ್ನೊಳಗಾದ್ಯೊ ನೀ ಬಂದ್ಯೊ ಕಂದಮಹಿಪತಿಗನುಭವದೋರ ನೀ ಬಂದ್ಯೊ ತಂದೆ ಸದ್ಗುರು ಅನಂದವ ತಂದ್ಯೊ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾತೆಂದೆನಬ್ಯಾಡಿ ಧ್ರುವ ಎಲ್ಲಿ ನೋಡಿದರೆ ತಾ ಅಲ್ಲಿಗಲ್ಲಿಗಿಹ್ಯ ಎಲ್ಲ ಕಡೆಯಲ್ಲೇಕೋಮಯವೊ ಸುಲ್ಲಭವಾಗಿಹ್ಯಬಲ್ಲ ಜ್ಞಾನಿಗೆ ಭಾಸುತಿಹ್ಯ ಫುಲ್ಲಲೋಚನ ಪ್ರಾಣದೊಲ್ಲಭನು 1 ಎತ್ತ ನೋಡಿದರತ್ತ ಸುತ್ತಸುತ್ತಲಿಹ್ಯ ನಿತ್ಯವಾಗಿಹ್ಯ ಹೃತ್ಕಮಲದಲಿ ತುತ್ತಾಯಿತ ತಾ ಮಾಡಿ ನಿತ್ಯಸಲಹುವ ಹತ್ತಿಲೆ ಹೊಳೆಯುತ ಚಿತ್ತದಲಿ 2 ಹಿಂದೆನೋಡಿದಿರಿಹ ಮುಂದೇನೋಡಿದಿರಿಹ್ಯ ಸಂಧಿಸಿಹನು ಅಂತರಾತ್ಮದಲಿ ತಂದೆ ತಾಯಿಯು ಬಳಗಾಗಿಹ್ಯ ತಾನೆ ಎಂದಿಗೆ ಅಗಲದೆ ಅನುದಿನದಲಿ 3 ಜನವನದೊಳಗಿಹ್ಯ ಜನಾರ್ಧನ ತಾನು ತನುಮನದೊಳು ಥಳಥಳಸುತಲಿ ಅನುಮಾನವಿಲ್ಲದೆ ಅನಿಮಿಷದಲಿ ನೋಡಿ ಆಣುರೇಣುದಲಿ ಪರಿಪೂರ್ಣನು 4 ಸಾರಿಚಲ್ಲೆದ ಪರಬ್ರಹ್ಮಸ್ವರೂಪವಿದು ಸೂರ್ಯಾಡಬಹುದು ಸುಜ್ಞಾನಿಗಳು ತೋರದು ಎಂದಿಗೆ ಗುರುಕೃಪೆಯಿಲ್ಲದೆ ತರಳಮಹಿಪತಿ ವಸ್ತುಮಯವಿದು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು