ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬರಲಿಲ್ಲವೆನುತ ನೀ ಹೊರಗಿಕ್ಕಬೇಡ ಉರಗಾದ್ರಿವಾಸ ಶ್ರೀ ವೆಂಕಟೇಶ ಪ ಕಾಸಿಲ್ಲ ಕೈಯೊಳಗೆ ಲೇಸಿಲ್ಲ ಮನೆಯೊಳಗೆ ವಾಸಿತಪ್ಪಿಯೆ ಬಹಳ ಬೇಸತ್ತೆನು ಈಸು ಪ್ರಯಾಸ ನಿನ್ನ ದಾಸಗೊದಗಿದ ಮೇಲೆ ದೋಷವೆನ್ನಲ್ಲಿಲ್ಲ ಶೇಷಾದ್ರಿವಾಸ 1 ಗೆಲುವಿಲ್ಲ ಮನದೊಳಗೆ ಬಲವಿಲ್ಲ ಕಾಯದೊಳು ಹೊಲಬುದಪ್ಪಿಯೆ ಬಹಳ ಸುಲಿವಾದುದು ಫಲವೇನು ಇದರೊಳಗೆ ಕೆಲಸವೇನಿಹುದಿಲ್ಲ್ಲಿ ಸುಲಭದೊಳು ಬೇರೊಂದು ಪರಿಯ ನೋಡಯ್ಯ 2 ಕತ್ತಲೆಯ ರಾಜ್ಯವನು ಆದಿತ್ಯನಾಳುವ ತೆರದಿ ಸುತ್ತಗಳನೆಲ್ಲವನು ಕಿತ್ತು ಹಾರಿಸಿಯೆನ್ನ ಹತ್ತಿರದಿ ಮೈದೋರು ಭಕ್ತವತ್ಸಲನೆ 3 ಹಿರಿಯೊಳು ಆರ್ಜಿಸಿದ ಗೃಹಕೃತ್ಯವೆಂಬುದಿದು ಕೊರಳಡಿಗೆ ಸಿಲುಕಿರ್ದ ಸೆರೆಯಾಯಿತೊ ಹರುಷವಿಲ್ಲಿದರೊಳಗೆ ಬರುವ ಗತಿಯನು ಕಾಣೆ ದರುಶನಕೆ ಬಗೆದೋರು ದೊರೆ ವೆಂಕಟೇಶ 4 ಮಾತು ತಪ್ಪಿತು ಎಂದು ಭೀತಿಗಿಕ್ಕಲುಬೇಡ ಸೋತುದೈ ಕೈಯೆನಗತೀತ ಮಹಿಮ ಕಾತುರವು ಮನದೊಳಗೆ ಕಾಣಬೇಕೆಂದೆಂಬ ಪ್ರೀತಿಯಾಗಿದೆ ಜಗನ್ನಾಥ ನಿನ್ನೆಡೆಗೆ 5 ಒಂದು ಪರಿಯನು ನೀನು ತಂದು ತೋರಿದರೀಗ ಇಂದೆ ನಾನೇಳುವೆನು ಮಂದಿವಾಳದಲಿ ಚಂದದಲಿ ಮಡದಿ ಮಕ್ಕಳ ಸಹ ಕರಕೊಂಡು ಬಂದು ನೋಳ್ಪೆವು ನಿನ್ನ ಆನಂದ ಮೂರುತಿಯ 6 ಅಣಿಮಾಡಿ ನೀನೆನಗೆ ಮನದಣಿವ ತೆರನಂತೆ ಕ್ಷಣವಾದ ಕೆಲಸಗಳು ನಿನಗೆ ಘನವಲ್ಲ ತನಿರಸವನೆನಗೀಯೊ ಜನ ಮೆಚ್ಚುವಂತೆ 7
--------------
ವರಹತಿಮ್ಮಪ್ಪ
ಒಡಿಯಾ ನಿನ್ನಡಿಗಳಿಗೆ ಬಿಡದೆ ನಾ ನಮೋ ಎಂಬೆ ಕೊಡು ಎನಗೆ ದೃಢ ಪದವಿ ಕಡಲಶಯನಾ ಪ ಪಿತನ ತೊಡಿಯ ಮೇಲೆ ಕುಳಿತಿರಲು ಮಲತಾಯಿ ಅತಿ ರೋಷದಿಂದವನ ಹೊಯಿದೆಬ್ಬಿಸೆ ಖತಿಯಿಂದ ವನಕೆ ಪೋಗಿ ನಿನ್ನ ಪೂಜಿಸಲು ಮತಿವಂತನ ಮಾಡಿ ಧ್ರುವಪದವಿ ಕೊಡಲಿಲ್ಲವೆ 1 ತಂದೆ ಬಾಧಿಸೆ ಧೃತಿಗೆಡದೆ ನರಹರಿ ಗೋ ವಿಂದ ನಾರಾಯಣ ಕೃಷ್ಣ ವಿಷ್ಣು ಇಂದಿರಾರಮಣ ಇನಕುಲತಿಲಕ ಎಂದೆನಲು ಕಂದನಿಗೆ ಕೈವಲ್ಯಪದವಿ ಕೊಡಲಿಲ್ಲವೇ2 ಜಾತಿಧರ್ಮವ ಬಿಟ್ಟು ಅಜಮಿಳನು ಚಂಡಾಲ ಜಾತಿ ವಧುವಿಗೆ ಸೋತು ಕೆಟ್ಟು ಯಮನ ದೂತರನ ನೋಡಿ ಕಂಗೆಟ್ಟು ಮಗನನು ಕರಿಯೆ ಪ್ರೀತಿಯಲಿ ವೈಕುಂಠ ಪದವಿ ಕೊಡಲಿಲ್ಲವೇ 3 ವನಿತೆ ಪತಿವ್ರತವಾನಂತನನುಚರಿಸಿ ಬಂದಿರಲು ಮನದ ಖೇದವ ತಾಳಿ ಹರಿದು ಬಿಸುಟೆ ಮುನಿಪುಂಗ ಅಡವಿಯನು ತೊಳಲಿ ನೆಂದು ಬಿದ್ದಿರಲು ಪುನರ್ವಸು ಸ್ಥಾನವು ಕೊಡಲಿಲ್ಲವೆ4 ಶೌರ್ಯದಲಿ ಅಬ್ಧಿಯನು ಹಾರಿ ಲಂಕೆಯ ಸುಟ್ಟು ಧೂರ್ಯದಲಿ ರಕ್ಕಸರನೊರಿಸಿ ಬಿಸುಟೂ ಕಾರ್ಯದಲಿ ಹನುಮಂತ ನಿನ್ನ ಮೆಟ್ಟಿಸೆ ಒಲಿದು ಸೂರ್ಯಭಾಂದವಗೆ ಜನಪದವಿ ಕೊಡಲಿಲ್ಲವೆ 5 ಸೋದರಗೆ ಬುದ್ದಿಯನು ಪೇಳೆ ಕೇಳದೆಯಿರಲು ಪಾಧಾರಿ ದಾಟಿ ನಿಮ್ಮ ಸೇವಿಸಿ ಕಾದಿ ರಾವಣನ ಛೇದಿಸಿ ಲಂಕಾಪುರ ಪದವಿ ಪರಿಯಂತ ಕೊಡಲಿಲ್ಲವೆ 6 ಚಿತ್ತದೊಳು ಆವಾಗ ನಿನ್ನ ಧ್ಯಾನವ ಮಾಡಿ ವಿತ್ತಾದಿ ದಾನಗಳು ಮಿತಿಯಿಲ್ಲದೇ ಅತ್ಯಂತ ಕೊಡುವವನ ಮೂರು ಪಾದವ ಬೇಡಿ ಭಕ್ತಗೆ ನಲಿದು ಸುರಪದವಿ ಕೊಡಲಿಲ್ಲವೆ 7 ಮಾನಿನಿಯ ಸೀರಿಯನು ಸಭೆಯೊಳಗೆ ದುರುಳರು ಅಭಿ ಮಾನ ಭಂಗವ ಮಾಡಿ ಸುಲಿವುತಿರಲು ಶ್ರೀನಾಥ ಕೇಶವ ಮುಕುಂದನೆಂದು ಮೊರೆ ಇಡೆ ನೀನರಿತು ಅಕ್ಷಯಾಂಬರ ಕೊಡಲಿಲ್ಲವೆ8 ಬಡತನ ಉಳ್ಳವನಾಗಿ ಕ್ಲೇಶದಲಿ ಸುಧಾಮ ನಡುಗುತಲಿ ನಿನ್ನ ಪಟ್ಟಣಕೆ ಬರಲು ಹಿಡಿತುಂಬಿ ಅವಲಕ್ಕಿಗೆ ಸಂತೃಪ್ತನಾಗಿ ಕಡೆಯಿಲ್ಲದೈಶ್ವರ್ಯ ಪದವಿ ಕೊಡಲಿಲ್ಲವೆ 9 ಸರಸಿಯೊಳು ಬಾಲಕನ ನೆಗಳಿ ಪಿಡಿದು ನುಂಗೆ ಗುರುದಕ್ಷಿಣವ ಬೇಡೆ ಸಾಂದೀಪನು ಭರದಿಂದ ಪೋಗಿ ಕೃತಾಂತನೊಳು ಭೂ ಸುರಗೆ ಸುಪುತ್ರ ಪದವಿ ಕೊಡಲಿಲ್ಲವೆ 10 ಭುಜಕರೆಲ್ಲರು ನಿನಗೆ ಭಾಗ್ಯವನು ಕೊಡಲಿಲ್ಲ ಭಜಿಸಿದರವರು ತಮ್ಮ ತಕ್ಕ ತೆರದಿ ಭಜಿಸುವೆನು ನಿನ್ನ ತಕ್ಕಂತೆ ದೃಢ ಪದವಿಕೊಡು ಸಿರಿ ವಿಜಯವಿಠ್ಠಲನೆ11
--------------
ವಿಜಯದಾಸ
ಕಾಯ ಸುತ್ತಿ ಬಾಯ ಹೊಯ್ವುದು ಆಯ ತಪ್ಪಿ ಆಯ ಕೆಟ್ಟ ನ್ಯಾಯಬಪ್ಪುದು ಪ ಹೆತ್ತ ತಾಯಿ ತಂದೆಯನ್ನು ಒತ್ತಿ ಬಯ್ವುದು ಅತ್ತೆಯನ್ನು ಕಂಡು ಹರುಷವಿತ್ತು ನಗುವುದು ಮೃತ್ಯುವನ್ನು ತಂದು ತನ್ನ ಹತ್ತಿರಿಡುವುದು ಒತ್ತಿನವನ ಹೊರಗೆ ಸಾರೆನುತ್ತ ನುಡಿವುದು 1 ಗುರುಗಳನ್ನು ಜರೆದು ಕರೆಕರೆಯ ತಪ್ಪುದು ಕೊರಳು ಕೊಯ್ಕರನ್ನು ತಾನು ಸೆರಗ ಪಿಡಿವುದು ಮರವೆ ತೋರ್ಪುದು ಗರುವತನದಿ ಪರರ ಒಡವೆ ಇರುಳು ಸುಲಿವುದು 2 ದಾನದತ್ತವಾದುದನ್ನು ತಾನು ಸೆಳೆಯುವುದು ಮಾನವನ್ನು ಹಿಡಿದು ಮೇಲೆ ಮಾನಯಿಡುವುದು ಜ್ಞಾನಿಯನ್ನು ಕಂಡು ಮನದಿ ಬೇನೆ ತೋರ್ಪುದು ಅನಾಥರನ್ನು ಕಂಡು ಬಹು ಹೀನ ನುಡಿವುದು 3 ಅನ್ನವನ್ನು ಇತ್ತವರ ಮುನ್ನ ಬೈಯ್ವುದು ಭಿನ್ನ ಭೇದ ತೋರಿ ಮನವ ಕನ್ನ ಕೊರೆವುದು ತನ್ನವರ ಮರೆತು ಪರರ ಕನ್ಯೆಗಳುವುದು ಹೊನ್ನ ಬೊಂಬೆಯಂತೆ ಮಾಯೆ ಬೆನ್ನ ಸುಳಿವುದು 4 ತಪ್ಪಿ ನಡೆಯೆ ಈ ಪರಿಯೊಳಿಪ್ಪೆಯೆಂಬುದು ಅಪ್ಪ ವರಾಹತಿಮ್ಮಪ್ಪನ ಸೇರಿಕೊಂಬುದು ಒಪ್ಪಿ ತೋರ್ಪ ಮಾಯೆಯೆಲ್ಲ ತಪ್ಪಿ ಪೋಪುದು ಉಪ್ಪರದ ದಾಸ ಪೇಳ್ದ ಒಪ್ಪಿಕೊಂಬುದು 5
--------------
ವರಹತಿಮ್ಮಪ್ಪ
ನಾರಾಯಣತೇ - ನಮೋ ನಮೋ ತಾರಕ ಪದಯುಗ - ನಮೋ ನಮೋ ಪ ಪಾರಾಶರತೇ ನಮೋ ನಮೋ ಗುಣ ವಾರಿಧಿ ಸುಖಮಯ - ನಮೋ ನಮೋ ಅ.ಪ ಇಂದಿರೆ ಮನುಕುಮುದೇಂದು ಪರಾವರ ನಂದಗುಣಾರ್ಣವ ನಮೋ ನಮೋ ಸಿಂಧುಶಯನ ಅರವಿಂದ ಸುನಾಭ ಮಹೇಂದ್ರ ವಿನಾಂತನೆ ನಮೋ ನಮೋ1 ಸುಂದರ ವೀ ಜಗ _ ತಂದೆ ಮಹಾಬಲ ಕುಂದು ವಿದೂರನೆ ನಮೋ ನಮೋ ಮಂದಜ ಭವಮನ ಸ್ಪಂದನ ಕರುಣಿಯೆ ನಮೋ ನಮೋ2 ಸುಂದರ ತಮ ಅರವಿಂದ ಸುಲೋಚನ ಕಂಧರ ಪಾಣಿಯ ನಮೋ ನಮೋ ನಂದನ ಕಂದ ಮುಕುಂದ ಜನಾರ್ಧನ ಛಂದಸು ವೇದ್ಯನೆ ನಮೋ ನಮೋ 3 ನಾಶರಹಿತ ಸ್ವತಂತ್ರಗುಣಾತ್ಮಕ ವಾಸುದೇವತೇ ನಮೋ ನಮೋ ಭೇಶಕಾಂತಿ ಮುಕ್ತೇಶ ಪರಾಮೃತ ವಿಶ್ವಜೂತಿ ಬಲ ನಮೋ ನಮೋ 4 ಶೇಷಶಯನ ವಾರಾಸಿಗೇಹ ಮಾಯೇಶ ಸನಾತನ ನಮೋನಮೋ ಓಸು ಜಾಡಾಜಡ ರಾಸಿ ಬಿಂಬಗುಣ ಭಾಸಕ ನಾಯಕ ನಮೋ ನಮೋ 5 ದೇವ ದೇವ ಜಗ ಪಾವನ ಚರಿತ ವಿಭಾವರಿ ಚರಹರ ನಮೋ ನಮೋ ಜೀವರ ಜೀವ ವಿಭಾವ ಸುನಾಯಕ ಭಾವುಕ ಜನಪ್ರಿಯ ನಮೋ ನಮೋ 6 ಅಂಡಜವಾಹನ ಪುಂಡರೀಕನುತ ಪಾಂಡುರಂಗತೇ ನಮೋ ನಮೋ ತೊಂಡವತ್ಸಲಾಖಂಡ ವಿಜಯ ಕೋದಂಡಪಾಣಿ ತೇ ನಮೋ ನಮೋ 7 ಭವ ಸಂಕಟ ನಾಶಕ ಶಂಕರ ಮಹಿಮನೆ ನಮೋ ನಮೋ ಸುಂಕ ಸುಲಿವ ಬಿರುದಾಂಕಿತ ಕುಟಿಲಾ ಟಂಕರಹಿತ ತೇ ನಮೊ ನಮೋ 8 ಪರಮೇಷ್ಠಿ ಜನಕ “ಶ್ರೀ ಕೃಷ್ಣವಿಠಲ” ವಿಭು ನಮೋ ನಮೋ ಅಷ್ಟಕರ್ತ ಶಿಪಿವಿಷ್ಠಸುನಾಮಕ ಧಿಟ್ಟ ನೃಸಿಂಹನೆ ನಮೋ ನಮೋ 9
--------------
ಕೃಷ್ಣವಿಠಲದಾಸರು
ಯಾರ ಕೃತಕವು ಇದು ವಿಚಾರವನು ಮಾಡಿ ಕಾರಣೀಕದ ಸ್ವಪ್ನ ಕಾಣುತಿದೆ ನೋಡಿ ಪ ಕಾಳ ಮೇಘಧ್ವನಿಯು ಗಾಳಿ ಮಳೆ ಮಿಂಚುಗಳು ಧಾಳಿ ಇಡುತಿಹ ಸಿಡಿಲು ಬಹಳ ಕತ್ತಲೆಯು ಹಾಳೂರ ಮಧ್ಯದೊಳು ಬೀಳುತಿಹ ವಾರಿಗಳು ಮೃಗ ಮೈಮೇಲೆ ಬೀಳುವುದ 1 ವೃಷ್ಟಿ ತೀರುವ ತನಕ ಇಟ್ಟೆಡೆಯೊಳಿರುತಿರ್ದು ಕೆಟ್ಟ ಪಥದಲಿ ಚಾರುಗಟ್ಟಿವಿಳಿದು ಗಟ್ಟಿಯಾಗಿಹ ಚಳಿಯು ಹುಟ್ಟಿ ಕೈಕಾಲುಗಳು ಒಟ್ಟಾಗಿ ಕೂಡಿರ್ದು ದೃಷ್ಟಿ ಬಿಡುತಿಹುದು 2 ಬಿಸಿನೀರ ಮಳೆಯೊಳಗೆ ನುಸಿತ ಗುಣೆಯಸೆಯೊಳಗೆ ಎಸೆದು ತೋರುವ ಉರಿಯ ಹಸಿಯ ಮೆಣಸಿನೊಳು ಗಸಣಿಯನು ಕೈಕೊಂಡು ಕಸಮುಸುರೆಯಾಗಿರ್ದು ಉಸುರಲಾರದೆ ತೃಷೆಯ ಹಸಿದ ಬಳಲಿಕೆಯ 3 ನಿಂದೆಯಾಗಿಹ ಮೃಗದ ಚಂದವನು ಮೈಗೊಟ್ಟು ಬಂದುದೆನಗೈಶ್ವರ್ಯ ಎಂದು ಹರುಷಿಸುತ ಮಂದಹಾಸದ ಒಳಗೆ ಬಂಧನದಲಿರುತಿರ್ದು ಮುಂದುವರಿದು ವ್ಯಸನದೊಳು ಬಂದಿರ್ದ ಬಗೆಯ 4 ಮೂರು ಮಂದಿಯು ಬಂದು ಸೇರಿದರು ದೂರಿಡುವ ಆರು ಕರೆದರು ತಾನು ಬಾರೆನೆಂಬ ಮೇರೆಯಾಗಿಯೆ ಬಪ್ಪ ಮೂರಾರು ತಾ ಬಿಡುವ ಸಾರಿ ಚೋರತ್ವದಲ್ಲಿ ಪರವೂರ ಸುಲಿವ 5 ಮೇಲು ದುರ್ಗವ ಕಂಡು ಗಾಳಿಗೋಪುರವನ್ನು ಆಳ ಬಲುಹುಳ್ಳವನು ಅವಸರದೊಳು ನೂಲಯೇಣಿಯನಿರಿಸಿ ಏರಿಳಿದು ಬಾಹಾಗ ಕಾಲು ಜಾರಿಯೆ ಬಸಿದ ಶೂಲದೊಳು ಬೀಳುವುದು 6 ಹೀಗಿರುವ ಕೃತ್ಯಗಳು ನಾಗಶಯನನಿಗರುಹು ಬೇಗದೊಳು ಪರಿಹರಿಪ ಯೋಗವನು ಕೊಡುವ ನಾಗಗಿರಿವಾಸನಹ ವರಾಹತಿಮ್ಮಪ್ಪ ತೂಗುವನು ತೊಟ್ಟಿಲೊಳು ಆಗುವುದನಿತ್ತು 7
--------------
ವರಹತಿಮ್ಮಪ್ಪ
ಸಿರಿ ಪ ನಲ್ಲನವರ ಸಂಗದಿ ಕೂಡು ಅ.ಪ ಉಪದೇಶ ಮಾಳ್ಪುದಕೆ ಹೋಗಬೇಡ ನೀ ಚಪಲಚಿತ್ತನು ತಿಳಿದಿರು ಮೂಢ- ತೋರ್ಪದಿರು ಕೋಣ 1 ಹಿಂದೆ ಹೋದರು ಬಹಳ ಮಂದಿ | ಸ್ಥಿರ- ವೆಂದು ತಿಳಿದು ನೀದುಃಖ ಹೊಂದಿ ಮುಂದಾಗುವುದುಕ್ಕೆಲ್ಲಾ ಕಂದರ್ಪ ಕಾರಣನಲ್ಲಾ 2 ಎಲ್ಲಾ ಜನರನು ಸುಲಿವರು ಮುನ್ನು ಕ್ಷುಲ್ಲಕರಿಗೆ ತತ್ವವ ಪೇಳೆ ಸುಳ್ಳೆಂದು ನಿಂದಿಸುವರು 3 ಪ್ರಶ್ನೆಗೆ ತಕ್ಕ ಉತ್ತರವಾಡು | ಸೂರ್ಯ- ರಶ್ಮಿಯೊಳಗಿರುವ ಲವಣಿಯ ನೋಡು ನಿ_ ನ್ನಸ್ವರೂಪವದರಂತೆ | ಯಾತಕೆ ಇನ್ನು ಅಗಾಧ ಭ್ರಾಂತಿ 4 ಅನಂತ ಪ್ರಾಣಿಗಳೊಳಗೆ ನಿವಾಸ | ನಮ್ಮ ವನಜಾಕ್ಷ ಗುರುರಾಮವಿಠಲೇಶ ಅನಿಮಿತ್ತ ಬಂಧುವನು ಬಿಡಿಬಿಡಿರೋ ದುರಾಶಾ5
--------------
ಗುರುರಾಮವಿಠಲ