ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಳಲನೂದುವ ನಮ್ಮ ಚಲುವ ಕೃಷ್ಣಯ್ಯ ನಳಿನಾಕ್ಷಿಯರ ಮಧ್ಯೆ ಪೊಳೆವ ರಂಗಯ್ಯ ಪ. ಕರದ್ವಯದಲಿ ಶಂಖ ಚಕ್ರಪಿಡಿದಿಹ ಕಿರುನಗೆ ನಗುತ ಸುಲಿಪಲ್ಲಿನ ಚಲುವ ಸ್ವರಗಳ ಪಿಡಿಯುತ ವೇಣು ನುಡಿಸುವ ಸರಸಿಜನಾಭ ಹೃನ್ಮಂದಿರದಿ ಮೆರೆವ 1 ಜಗವ ಮೋಹಿಸುವಂಥ ನಗೆಯ ಮೊಗ ಚೆಲುವ ಹೆಗಲು ಎಡದಲ್ಲಿ ಗಲ್ಲ ತಗುಲಿಸಿ ಇರುವ ಸತಿ ಹೆಗಲಲಿ ಇಡುವ ನಗಧರ ನರ್ತನವಾಡಿ ಮುದವೀವ 2 ಕಾಲಕಡಗ ಗೆಜ್ಜೆ ಪಾಡಗರುಳಿಯು ಮೇಲೆ ಪೀತಾಂಬರ ಜರಿಯ ವೈಭವವು ಸಾಲ ಮುತ್ತಿನಹಾರ ಪದಕದ್ವಜ್ರಗಳು ಓಲಾಡುವ ನೀಲಾಂಬರ ಹೊದ್ದಿಹ ಒಲಪು 3 ಕಂಠ ಕೌಸ್ತುಭಮಣಿ ಅಧರದ ಕೆಂಪು ಕರ್ಣ ಕದಪು ಕನ್ನಡಿಯು ಬಂಟರಾದವರನ್ನು ಪೊರೆಯುವ ದೃಷ್ಟಿ ವೈ - ನಾಸಿಕ ಫಣೆಯ ತಿಲುಕವು 4 ಶ್ರೀಪತಿ ಮುಂಗುರುಳು ಶಿರದಲ್ಲಿ ಮಕುಟ ಪಾಪವ ದಹಿಸುವ ಪಾವನ ವೇಣು ಆಪಾದ ಮೌಳಿಯ ರೂಪದ ಚಲುವ ಗೋಪಾಲಕೃಷ್ಣವಿಠ್ಠಲ ಎನ್ನ ಕಾವ 5
--------------
ಅಂಬಾಬಾಯಿ
ದೇವಾನಾ ಮೂರು ಲೋಕಂಗಳನುನೆರೆ ಕಾವಾನಾ ಶರಣಾಗತ ಸಂ ಜೀವಾನ ರೂಪ ಕಂಡೆ ಕೈಯಡಿಯಾ ಪ ಧಗಧಗಿಸುವ ಕೋಟಿ ದಿವಾಕರ ಕಿರಣಗಳ ಧೃಗುಳುಗಳ ಕಾಂತಿಯ ಮೊಗೆದು ಚೆಲ್ಲುತ ಪಾ ಲೊಗುವ ಕದಪಿಲಿ ಢಾಳಿಪ ಕುಂಡಲಂಗಳಾ 1 ತಿಲಕದ ಕುಡಿವರಿದಿಹ ಪುರ್ಬುಗಳ ಮಂ ಹೇಮ ಚಂಪಕದ ನಾಸಿಕದಾ ಜಲಜ ಕಸ್ತೂರಿ ಕಪ್ಪುರದ ಕಂಪಿನ ಸುಲಿಪಲ್ಲಿನ ಬಾಯಿದೆರೆಯ ಚೆಲುವನುಳ್ಳಾ 2 ತೋರಮಂದಾರ ತುಲಸೀ ವನಮಾಲೆ ಕೊರಳ ಹಾರ ಪೇರುರದಾ ಶ್ರೀ ಚಂದನದಾ ವಾರಿಜಪಾಣಿಯುಗದೆ ಶಂಖಚಕ್ರ ಸ- ರೋರುಹ ಕರದಲಭಯವಿತ್ತು ಸಲಹುವಾ 3 ಅಂದು ಜಘನದಿ ಕರವಿಟ್ಟು ಪೊಂಬಟ್ಟೆಯನುಟ್ಟು ಮಣಿ ಬಿರುಡೆಯವಿಟ್ಟು ಸ ನ್ಮುದದಿ ವೀರಮುದ್ರಿಕೆ ಮಂಡಿಕಾಗಳನಿವಿಟ್ಟು ಮೃದುಪಾದನಖದಿ ಮೂಜಗವ ಬೆಳಗುತಿಹ4 ಪಾವಕ ವರಕಾಂತಿಯ ಗೆಲುವಾ ಜಾಜಿ ಸೇವಂತಿಗೆ ಮೃದುವನು ಸೋಲಿಪಡಿಗಳಾ ಶ್ರೀ ವೆಲಾ ಪುರದ ವೈಕುಂಠೇಶ ವೇಂಕಟಾದ್ರೀಶಾ 5
--------------
ಬೇಲೂರು ವೈಕುಂಠದಾಸರು