ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಐ) ಸರಸ್ವತೀ ಕಿಂಕರನ ಧ್ವನಿಗೆ ಕೊಡು ಮತಿಯನು ಪ ಪಂಕಜಾನಾಭನ ಸೊಸೆ ಸರಸ್ವತಿಯೆ ಅ.ಪ. ಪುತ್ಥಳಿ ಬೊಂಬೆ ವಿಕಸಿತ ಸುಲಲಿತಾಂಬೆ ಸುನಿತಂಬೆ ನಿಕುರುಂಬೆ ಸುರರಂಭೆ ದಂತ ದಾಳಿಂಬೆ ಭಕುತಿಯಲಿ ಕಾಂಬೆ ನಿನ್ನ ನಾಮವನುಂಬೆ1 ಗಂಗೆ ಯಮುನೆ ಉಭಯ ಸಂಗಮೆ ಭಕ್ತ ಭಯ ಅಖಿಳ ಧ್ಯೇಯೆ ಮಂಗಳ ಶೋಭನ ಮಣಿಯೆ ಅಭ್ಯುದಯೆ ಅತಿ ಸದಯೆ ರಂಗು ಮಾಣಿಕ ಪ್ರಭೆಯೆ ಸುಜನಾಬ್ಧಿಗೇಯೆ 2 ಪ್ರಯಾಗ ವರಕ್ಷೇತ್ರವಾಸೆ ಪುಣ್ಯಕ್ಷೇತ್ರೆ ಕ್ಷಯ ರಹಿತ ಮುನಿಸ್ತೋತ್ರೆ ಶುಭಚರಿತ್ರೆ ನಯವಿನಯ ನೇತ್ರೆ ಪವಿತ್ರ ಅಜನ ಕಳತ್ರೆ ಸಿರಿ ವಿಠ್ಠಲನ ಪೌತ್ರೆ 3
--------------
ವಿಜಯದಾಸ
(ನವಗ್ರಹ ಸ್ತೋತ್ರ) ಸತ್ಕಟಾಕ್ಷವಿರಿಸು ದಕ್ಷನಖವಜ್ರಿರಿಪುಪಕ್ಷದಹಿಸು ವಿರೂಪಾಕ್ಷ ಶರಣು ಪಕ್ಷವೃತ್ವಯನ ಸಂವತ್ಸರಾಖ್ಯ ದಯಮಾಡು ಶರಣೆಂದು ನಮಿಪೆ ನಿನ್ನ 1 ತೇಜೊರಾಶಿಯಾಗಿ ಮೆರೆವ ಕಮಲ ಘೂಕ ತಸ್ಕರರ ಗಣವ ನಾದಿಪತಿ ಗ್ರಹರಾಜ ನಿನ್ನ ಪದವ ವ್ಯಾಧಿಗಳ ಪರಿಹರಿಸು ಪಾವನಾತ್ಮ ಸಲಹೆನ್ನ ನಿರ್ಮಲಾತ್ಮ2 ನೀರುಮರಬಳ್ಳಿಸಕಲೌಷಧಿಗಳ ತಾರೆಗೊಲಿದಾಕೆಯಲಿ ಬುಧನಪಡದೇ ರಾಶಿ ಸಂಚಾರ ಮಾಳ್ಪೆ ಮೋಹದ ಬಲೆಯ ನೀರಜಾಕ್ಷ ಸಮನೋಜ ಮಾದೇವಿಸಹಜ 3 ಗುರುಮಿತ್ರ ಸಜ್ಜನತ್ರ ವ್ಯಾಮೋಹಗೊಳಿಸದಿರು ದಂಡಪಾಣಿ ರಾಜಕರುಣಾ ಪಾತ್ರನೆ ಕಾಮಚಾರಜ ಬಹುವಿಧಾಮಯವ ಪರಿಹರಿಸಿ ನೀ ಮನೋಹರ್ಷ ಪಾಲಿಸು ಧೀರನೆ ಕಮನೀಯ ಕಾಂತಿ ಕುಹಕಜನವಾರಿ4 ಪದುಮಗಳಿಗೆರಗುವೆನು ಪಾಲಿಸೆಂದು ಮಧು ವಿರೋಧಿಯ ಮನೋಭವನಣುಗ ಮಾತಿನಲಿ ಚದುರತೆಯನಿತ್ತು ಚಾತುರ್ಯಗೊಳಿಸು ಸದಯಾವಲೋಕ ನೀನೆಂದು ತಿಳಿದೆ ಮಾತ್ಸರ್ಯವೆಲ್ಲಬಿಡಿಸು ಪಾದ ಸ್ವರ್ಣವರ್ಣ ಸುಲಲಿತಾಂಗ 5 ಮಂತ್ರಜ್ಞ ಚೂಡಾಮಣಿ ಸದುಪಾಯಗಳ ತಿಳಿಸಿ ಸುರರ ಕಾವ ಉದಿತನಾಗಿರೆ ಸಕಲ ಬುಧರಿಗನುಕೂಲ ನಿತ್ಯದಲಿ ನಿಖಿಳ ಗ್ರಹೋನ್ನತ ಶಕ್ತಿಯೇ ಸಕಲಾರ್ಥ ಪಡದೀವನೆ ನಿನ್ನ ನಮಿಸುವೆನು ನೀನೊಲಿದು ಸಲಹೊ6 ಭಾರ್ಗವನೆ ಭಜಿಪೆ ನಿನ್ನ ತಪ್ಪು ಮರತು ಮುಖ್ಯವೆಂಬರ್ಥವರಿತು ಸೇವೆಗನುಕೂಲನಾಗಿರುವೆ ಕುರಿತು ಕಾಪಾಡು ಕರುಣ ವಹಿಸು7 ಮುನಿಸದಿರು ನಮ್ಮಮೇಲೆಂದೆಂದಿಗು ನಿನ್ನ ಘನವ ತ್ಯಜಿಸು ಭಂಗ ಶಕ್ತರಹರೆ ಪೇಳು ಮನ್ನಿಸುವ ಮಮತೆ ತಾಳು ಕನಸಿಲಾದರು ಕ್ರೋಧವಿಡದೆ ಕಾಪುವುದೆಂದು ನಿರುತದಿಂ ಕೈ ಮುಗಿದು ಬೇಡಿಕೊಳುವೆ 8 ವೀರ್ಯ ವಹಿಸಿದ ರಾಹು ಕೇತುಗಳನು ಶೌರ್ಯಾದಿಗಳ ದಯ ಮಾಡಿರಿ ಧಾರವೆಂದಿತ್ತಹರ್ಯಜ್ಞೆಯಿಂದ ನಾರ್ಯತನವೇನಿವರೊಳಿದ್ದರರಿತು ಮಂಗಳವಿತ್ತು ಸೌಖ್ಯ ಪಾಲಿಸಲಿ9
--------------
ತುಪಾಕಿ ವೆಂಕಟರಮಣಾಚಾರ್ಯ
ಪಾದ ಸನ್ನುತ ರೂಪಕಾರಣಾನಂತ ಪುಣ್ಯಾ ಸತ್ಪಥಾಚಾರ ಸಜ್ಜನ ಶರಣ್ಯಾ ಕೀರ್ತಿವಿಸ್ತಾರ ಶೋಭಿತವರೇಣ್ಯಾ ನನ್ಯಾ 1ಸಂತತಾನಂದ ಘನ ಸಮಸ್ಯನಿದಾನಚಿಂತಿತಾರ್ಥದ ಶೀಲ ಚಿತ್ತಶುದ್ಧಿಯ ಲೀಲಶಾಂತ ಸದ್ಗುಣ ಭೂಪ ಸುಲಲಿತಾಮೃತ ಭಾಷಕಂತುಮದ ಪರಿಹಾರಕಾ ಆದಿಮಧ್ಯಾಂತ ರಹಿತಾಕಾರಕಾ ಆಶ್ರಿತಸ್ವಾಂತ ಸಂಸ್ಕøತಿ ತಾರಕಾಲೋಕಾ 2ತಾಪಸ ಜನೋತ್ತುಂಗ ತಾರತಮ್ಯ ವಿಭಂಗತಾಪತ್ರಯಾಳಿ ಹರ ದಳಿತ ಲಿಂಗ ಶರೀರಸ್ವಾಪಾದಿ ಕುಲದೂರಸ್ವಾಶ್ರಿತ ಜನೋದ್ಧಾರಧೀಪದಸ್ಫುರಣ ದೀಪ ಗೋಪಾಲತಾಪ ಸಮುದಯವಿಲಾಪ ದೇಶಿಕ ಪರೋಪಕೃತಿ ಕೃತ್ಪ್ರತಾಪಾಲೇಪ 3
--------------
ಗೋಪಾಲಾರ್ಯರು
ವಿಜಯವಿಠ್ಠಲ ಶ್ರೀ ವಿಜಯವಿಠ್ಠಲ ಪ ವನಚರ ನಗಧರ ಅವನಿಯ ಉದ್ಧಾರ ಕಾನನ ವೇಗದಿ ಭು- ವನ ದಾನದ ನೆವನನು ಮಾಡಿ ಗಂಗೆಯ ಹ - ವಣದಿ ಪಡದೋ ಶ್ರೀ ವಿಜಯವಿಠ್ಠಲಾ 1 ಛಲದಿಂದ ಕುಲ ಕೋಲಾಹಲ ಮಾಡಿಸಿ ನೀ ತರಿದೆ ಬಾಲೆಯರ ಬಾಲರ ಬಿಡದೆ ಸುಲಭದಿ ಕರ್ಣಗೆ ಒಲಿದು ಪೇಳಿದೆ ಆ ಸುಲಲಿತಾ ಭಾರ್ಗವ ವಿಜಯವಿಠ್ಠಲ2 ಶತಮಖರಿಪು ಲೋಕಪಿತನೊರವಿನಿಂದಲಿ ಖತಿ ಸಕಲರಿಗೆ ನೀವು ತರಿದಿರಲು ಪತಿತಪಾವನ ರಾಮ ಅತಿ ವೇಗ ದನುಜನ ಹತವ ಮಾಡಿದೆಯೊ ಶ್ರೀ ವಿಜಯವಿಠ್ಠಲ3 ಬಕಮುಖ ದನುಜರ ಹಕ್ಕಲಗೊಳಿಸಿ ಬಲು ಯುಕುತಿಯಿಂದಲಿ ಭಕುತರ ಪೊರದೆ ವಿಕಸಿತ ಕಮಲನಯನ ಕಂಜನಾಭನೆ ಸಕಲ ಸುರರ ಪಾಲ ವಿಜಯವಿಠ್ಠಲಾ 4 ರಕ್ಕಸ ಮರ್ದನ ದಿಕ್ಕು ಮೋಹಿಪ ಕೃಷ್ಣ ರುಕ್ಮಿಣಿ ಪತಿಯಾದಾ ಚಕ್ರಪಾಣಿ ಉಕ್ಕಿದ ಮಗಧನ ಸೊಕ್ಕು ಮುರಿದು ಕಪಿ ರೆಕ್ಕ ಆಳ್ವನಿಗೆ ಒಲಿದೆ ವಿಜಯವಿಠ್ಠಲಾ 5 ಘನವಾದ ವಿಶ್ವರೂಪವ ತೋರಿದೆ ದಿನಮಣಿ ಕೋಟಿ ಅಧಿಕ ಕಾಂತಿ ನರಹರಿ ವನಜ ಸಂಭವನಯ್ಯ ವಿಜಯವಿಠ್ಠಲಾ 6 ವನಿತೆಯರ ವ್ರತ ಭಂಗವ ಮಾಡಿ ದಾನವರ ಮೋಹಿಸಿದೆಯೊ ಪವನನೊಡಿಯಾ ಉನುಮತ ಜನ ಕುಲ ಸನುಮತ ಶಾಸ್ತ್ರವ ವ- ದನದಲಿ ಮೆದ್ದಿಯೊ ವಿಜಯವಿಠ್ಠಲಾ 7 ರಜೋತಮ ಗುಣವನು ಭುಂಜಿಸುತ ವ್ರಜ ಭೂಮಿ ನಿಜವಾಗಿ ವ್ಯಾಪಿಸಿರೆ ಸುಜನಪಾಲ ನೀನು ವದಗಿ ವಾಜಿಯನೇರಿ ಭಜನಗೈಸಿದ ವೇಗ ವಿಜಯವಿಠ್ಠಲಾ 8 ಗೋಕುಲದಲಿ ಅನೇಕ ಲೀಲೆಯ ತೋರಿ ಬೇಕಾದ ವರ ಪುಂಡರೀಕಗಿತ್ತೆ ಸಾಕಾರ ಗುಣ ಪೂರ್ಣ ವೇಣುಗೋಪಾಲ ವಿ ವೇಕವ ಕೊಟ್ಟ ಕಾಯನ್ನ ವಿಜಯವಿಠ್ಠಲಾ9
--------------
ವಿಜಯದಾಸ
ಎಲೆ ಮನವೆ ನೀ ತಿಳಿಹರಿ ಸರ್ವೋತ್ತಮನೆಂದು |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಸುಲಲಿತಾತ್ಮನ ಭಜಿಸಿ ಸುಖಿಯಾಗೊ ಮನವೆ ಪ.ಇಕ್ಷುದಂಡಗಳಿರಲು ಇಂಧನವ ಮೇಲೇಕೆ |ಅಕ್ಷಯ ಪಾತ್ರೆಯಿರಲು ಹಸಿವೆಯೆನಲೇಕೆ |ನಿಕ್ಷೇಪ ನಿಧಿಯಿರಲು ನಿರುತ ದಾರಿದ್ರ್ಯವೇಕೆ |ಪಕ್ಷಿವಾಹನನಿರಲು ಪರದೈವವೇಕೆ 1ಸುರಧೇನು ಕೈಸೇರಿ ಸುಖವಿಲ್ಲವೆನಲೇಕೆ |ಗರುಡ ಮಂತ್ರವ ಜಪಿಸಿ ಗರಳಭಯವೇಕೆ ||ತರಣಿಕಿರಣಗಳಿರಲು ಹಲವು ಜ್ಯೋತಿಗಳೇಕೆ |ಮುರಹರನ ಪೂಜಿಸದೆ ಮುಂದುಗೆಡಲೇಕೇ 2ಭಾವಶುದ್ಧಿಗಳಿರಲು ಬಯಲಡಂಬರವೇಕೆ |ದೇವತಾ ಸ್ತುತಿಯಿರದ ದೇಹವೇಕೆ ||ಆವಗಂ ಹರಿಯೆನದೆ ಅನ್ಯಚಿಂತೆಗಳೇಕೆ |ದೇವ ಪುರಂದರವಿಠಲನಿರಲು ಭಯವೇಕೆ 3
--------------
ಪುರಂದರದಾಸರು