ನೆಲೆಸೆನ್ನ ವದನದಿ ವಾಣಿ ಬ್ರಹ್ಮಾಣಿ
ನೆಲೆಸೆನ್ನ ವದನದಿ ವಾಣಿ ಪ
ಜಲಜನಾಭನ ಗುಣಗಣ ನಲಿಯುತ ಪಾಡಲು
ಸುಲಲಿತವಾದಂಥ ಪದಗಳನು ನುಡಿಸುತ್ತ ಅ.ಪ.
ಸದಾಶಿವಾದಿ ಸಕಲ ಸುರಗಣ ಸೇವಿತ
ಪಾದ ಪಂಕಜವನ್ನು 1
ಇಂದುವದನೆ ನಿನ್ನ ಮಂದಸ್ಮಿತವೆಂಬುವ
ಚಂದ್ರಕಾಂತಿಯ ಮನ್ಮನದೊಳು ಬೀರುತ 2
ಕರದಲಿ ವೀಣೆಯ ನುಡಿಸುತ ವದನದಿ
ಹರುಷದಿ ರಂಗೇಶವಿಠಲನ ಪಾಡುತ 3