ಒಟ್ಟು 9 ಕಡೆಗಳಲ್ಲಿ , 8 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿತು ಕೊಳ್ಳಿರೊ ಬ್ಯಾಗ ಹರಿಯ ನಾಮಮೃತ ದೊರಕುವದಲ್ಲಿದು ನೋಡಿ ಸರ್ಕನೆ ಸರ್ವರಿಗೆಲ್ಲಾ ಧ್ರುವ ಗುರುಕರುಣ ಕೃಪೆಯಿಂದ ಪರಮ ದಿವ್ಯಾಮೃತವು ಸುರಿಸುರಿದು ಚಪ್ದರಿಸು ಸೂರ್ಯಾಡಿ ಸಾರಸವ 1 ಅನುದಿನ ಸೇವಿಸುವ ಅನುಭವಿಗಳೂಟ ಏನೆಂದು ಸುರಲಿ ನಾ ಆನಂದೋಬ್ರಹ್ಮವಾ 2 ಮಾನವ ಜನ್ಮ ಚಂದ ಮಾಡಿಕೊಳ್ಳಿರೊ ಬಂದ ಕೈಯಲಿ ಬ್ಯಾಗ 3 ಆಲಸ್ಯ ಮಾಡಬ್ಯಾಡಿ ವಾಲ್ಗೈಸಿಕೊಳ್ಳಲಿಕ್ಕೆ ಸುಲಲಿತವಾಗಿಹುದು ತಿಳಿದುಕೊಂಬವರಿಗೆ 4 ಇರಳ್ಹಗಲ ಪೂರ್ಣ ಸುರವುತಿಹ ಅಮೃತ ತರಳ ಮಹಿಪತಿ ಪ್ರಾಣ ದೊರೆವ ಸಂಜೀವನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗಾನಮಾಳ್ಪ ಧೀರನಾವನೋ ಪ ತಾಳ ತಂಬೂರಿಗಳನು ಮೇಳವಿಸಿ ಸರಾಗದಿಂದ 1 ಹಿಂಗದೆ ಮೃದಂಗದಿಂದ ಸಂಗಡಿಸಿ ಸುಲಲಿತವಾಗಿ2 ಗುಂಬವಾದ್ಯವನು ಪರಮಸಂಭ್ರಮದಲ್ಲಿ ಬಾರಿಸುತ್ತ 3 ಜೊತೆಗೆ ಸೇರಿದವರ ಕೂಡಿ ಶ್ರುತಿಲಯಗಳಿಂದ ಪಾಡಿ4 ಪರಮಪುರುಷ ವ್ಯಾಘ್ರಗಿರಿಯ ವರದವಿಠಲನೆಂದು ಮುದದಿ 5
--------------
ವೆಂಕಟವರದಾರ್ಯರು
ನಲಿನಲಿದು ಬಾ ತ್ರಿಜಗದಾಂಬೆ ಪ. ಮಾನಸದೊಳು ಸುಜ್ಞಾನಬೋಧಳಾಗಿ ಆತನದೇವಕದಂಬೆ ಅ.ಪ. ವಿದ್ಯಾ ಬುದ್ಧಿ ವಿನಯ ಮಂಗಳಗಳ ಸಾಧ್ವಿ ನಿನ್ನಲಿ ಬೇಡಿಕೊಂಬೆ 1 ನಲಿದೆನ್ನಯ ಜಿಹ್ವಾಗ್ರದಿ ನೆಲಸುತ ಸುಲಭದೋರೆಯೆ ಸುಲಲಿತವ ಶಿವೆ 2 ಧೀರ ಲಕ್ಷ್ಮೀನಾರಾಯಣಾಶ್ರಿತೆ- ಪರಮೇಷ್ಠಿಪರಿರಂಭೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ನೆಲೆಸೆನ್ನ ವದನದಿ ವಾಣಿ ಬ್ರಹ್ಮಾಣಿ ನೆಲೆಸೆನ್ನ ವದನದಿ ವಾಣಿ ಪ ಜಲಜನಾಭನ ಗುಣಗಣ ನಲಿಯುತ ಪಾಡಲು ಸುಲಲಿತವಾದಂಥ ಪದಗಳನು ನುಡಿಸುತ್ತ ಅ.ಪ. ಸದಾಶಿವಾದಿ ಸಕಲ ಸುರಗಣ ಸೇವಿತ ಪಾದ ಪಂಕಜವನ್ನು 1 ಇಂದುವದನೆ ನಿನ್ನ ಮಂದಸ್ಮಿತವೆಂಬುವ ಚಂದ್ರಕಾಂತಿಯ ಮನ್ಮನದೊಳು ಬೀರುತ 2 ಕರದಲಿ ವೀಣೆಯ ನುಡಿಸುತ ವದನದಿ ಹರುಷದಿ ರಂಗೇಶವಿಠಲನ ಪಾಡುತ 3
--------------
ರಂಗೇಶವಿಠಲದಾಸರು
ನೋಡಬಾರದೆ ಹರಿಯ ಮನವೆ ಧ್ರುವ ಸುಲಲಿತವಾಗಿ ಸುಲ್ಲಭವಾಗ್ಹಾನೆ ನೆಲೆ ನಿಭವಾಗಿ ತನ್ನೊಳು ತುಂಬ್ಹಾನೆ 1 ಹೃದಯಕಮಲದೊಳು (ಕರೆಗುಡು)ತ್ಹಾನೆ ಸದೋದಿತ ಸವಿಸುಖ ಬೀರುತಲ್ಹಾನೆ 2 ಹಲವು ಪರಿಯಲಿ ತಾ ಸಲಹುತಲ್ಹಾನೆ ಕುಲಕೋಟಿ ಬಂಧು ಬಳಗಾಗ್ಹಾನೆ 3 ಕಣ್ಣಿನ ಮುಂದೆವೆ ತಾನೆ ಕಟ್ಹಾನೆ ಬಣ್ಣ ಬಣ್ಣದಲಿ ತಾ ಭಾಸುತಲ್ಹಾನೆ 4 ಸ್ವಹಿತ ಸುಖದ ಸುಮೂರುತಿ ಆಗ್ಹಾನೆ ಮಹಿಪತಿಯೊಳು ಶ್ರೀಪತಿ ಆಗ್ಹಾನೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪೊಗಳಲರಿಯೆನೆ ಲೋಕಮಾತೇ ನಿನ್ನ ಸೊಗಸಾದ ರೂಪುರೇಖೆಯ ಸಿಂಧುಜಾತೇ ನಿಗಮವಿಖ್ಯಾತೇ ಪ ಅಳಕ ನಿಚಯವು ಇಂದ್ರನೀಲಗಳು ತುಂಬಿಗಳು ತಳಪುಗಳು ಯೆಸೆವ ನಳಿನಗಳು ಬಾಳೆಗಳು ಚೆಲುವಹಿ ಸುನಾಸಿಕವು ಅಲಕೆ ಸುಮವು ಚಂಪಕವು ಅಲರ್ವಿಲ್ಲಿನ ಧನುವೋ ಪುರ್ಬುಗಳೋ ಪೊಳೆವರದನದಸಾಲುಗಳುಕಳಸಗಳೋ ಕುಂಡಲಗಳೋ ವಿಲಸದಧರವು ಬಿಂಬಫಲವೋ ನವವಿದ್ರುಮವೋ ಅಳವಟ್ಟ ಸವಿನುಡಿಯು ಗಿಣಿಯ ಸೋಲಿಪ ಪರಿಯೋ ಕಳೆ ಪೆರ್ಚಿದಾನನವೋ ಶಶಿಯೋ ಭಳಿರೆ ಮಳಯಜಗಂಧಿನಿ ಮಹೇಶರಿಪು ಜನನೀ 1 ಗಳವು ಶಂಖವು ಮೆರೆವ ಕದಪುಗಳು ಮುಖರಗಳು ಕುಸುಮ ಮಾಲೆಗಳು ಸುಲಲಿತವಯವವೋ ಲತಾವಳಿಗಳ ತರಂಗವೋ ತಳಿವ ಪೂಜಡೆಯೋ ಸುಲಿಪಲ್ಲವವೋ ತೊಳಗುವ ತೊಡೆಯೆನಲೋ ಸಲಿಲಜಾಗಾರೇ ಸಮ್ಮೋಹನಾಕಾರೇ ಸೌಂದರ್ಯಭರಿತೆ 2 ವರಜಂಘೆಗಳು ಪಂಚಶರನ ಶರಧಿಗಳೋ ಸರಸೀರುಹ ಕೆಂದಳಿರೋ ಚರಣಗಳು ನಖಗಳು ಸುರುಚಿರಾಂಬಕೀ ದಯಾಕಾರೇ ಶುಭಚರಿತೆ ವಿಖ್ಯಾತೆ ಪುರಹರ ಸುರೇಶ್ವರ ಸುಪೂಜಿತಾಂಘ್ರಿಸರೋಜೇ ಭಕ್ತ ಮಂದಾರೇ ವರವೇಲಾನಗರವಾಸಿ ವೈಕುಂಠಚನ್ನಿಗರಾಯನರಸಿ ಗುಣರಾಸಿ ದುರಿತಾಸಿ ನಮೋ ಪರಮಪದದಾಯಕಿಯೆ ಸೌಮ್ಯನಾಯಕಿಯೆ 3
--------------
ಬೇಲೂರು ವೈಕುಂಠದಾಸರು
ಶ್ರೀನಿವಾಸನಮಲನಾಮನ ಸೊಗಸಿನಿಂದ ಗಾನಮಾಳ್ವ ಧೀರನಾವನೋ ಪ ತಾಳತಂಬೂರಿಗಳನು ಮೇಳವಿಸಿ ಸರಾಗದಿಂದ1 ಹಿಂದೆ ಮೃದಂಗದಿಂದ ಸಂಗಡಿಸಿ ಸುಲಲಿತವಾಗಿ 2 ಗುಂಭವಾದ್ಯವನ್ನು ಪರಮ ಸಂಭ್ರಮದಲ್ಲಿ ಬಾರಿಸುತ್ತ3 ಜತೆಗೆ ಸೇರಿದವರ ಕೂಡಿ ಶ್ರುತಿ ಲಯಗಳಿಂದ ಪಾಡಿ 4 ಪರಮಪುರುಷ ವ್ಯಾಘ್ರಗಿರಿಯ ವರದ ವಿಠಲನೆಂದು ಮುದದಿ 5
--------------
ಸರಗೂರು ವೆಂಕಟವರದಾರ್ಯರು
ಸಿರಿನರಸಿಂಹನೆ ಕರಿಗಿರಿ ನಿಲಯನೆ ಶಿರಬಾಗಿ ನಮಿಸುವೆ ಭಕ್ತಿಯಲಿ ಪ ಕರುಣಾಸಾಗರ ನಿನ್ನ ಚರಣ ಕಮಲದಲಿ ಸ್ಥಿರ ಸ್ಮರಣೆಯ ಕೊಟ್ಟು ಸಲಹೆನ್ನನು ಅ.ಪ. ನೆಲೆಗೆ ನಿಲ್ಲದು ಮನ ಹಲವಕ್ಕೆ ಹರಿವುದು ಸುಲಲಿತವಲ್ಲವು ಸಾಧನವು ನಳಿನನಾಭನೆ ಎನ್ನ ಕುಲದೈವ ನಾರಸಿಂಹ ಒಲಿದು ನೀನಾಗಿಯೆ ಸಲಹುವುದು 1 ಅತ್ತಿತ್ತ ಓಡುವ ಚಿತ್ತವ ನಿಲಿಸುವ ಶಕ್ತಿಯು ಎನಗಿಲ್ಲ ಲವಲೇಶವು | ಚಿತ್ತಜಪಿತ ಎನ್ನ ಚಿತ್ತದೊಳಗೆ ನಿಂತು ಭಕ್ತಿಯ ಕರುಣಿಸೋ ತವ ಪಾದದಿ 2 ನೆಲದ ಮೇಲಲೆವಾಗಯಲರುಣಿ ಗಮನವು ಹಲವು ರೀತಿಯಲಿ ವಕ್ರವಲೆ ಘಳಿಲನೆ ತನ್ನಯ ಬಿಲದೊಳು ಪೋಪಾಗ ಸಲೆ ನೇರವಲ್ಲವೆ ಸಿರಿವರನೇ 3 ವನ ವಿಷಯಗಳಲದಲಿ ಬರಲಾರವು ಘನಭಕ್ತಿರಸದಿಂದ ತೊಳೆದು ನಿರ್ಮಲಗೈದು ಮನವ ನೀ ಮಡಿ ಮಾಡು ಘನಮಹಿಮ 4 ಕಳೆಗಳೆ ಬೆಳೆದಿವೆ ಮನಕ್ಷೇತ್ರದೊಳಗೆಲ್ಲಾ ಫಲ ಸಸ್ಯಗಳಲ್ಲಿ ಸ್ಥಳವಿಲ್ಲವು | ಕಳೆಗಳ ಕಳೆದು ಉತ್ತಮ ಫಲ ಕೊಡುವಂಥ ಬೆಳೆಯ ನೀನು ಬೆಳಸಯ್ಯಾ ಕರಿಗಿರೀಶ 5
--------------
ವರಾವಾಣಿರಾಮರಾಯದಾಸರು
ನಲಿನಲಿದು ಬಾ ತ್ರಿಜಗದಾಂಬೆ ಪ.ಮಾನಸದೊಳು ಸುಜ್ಞಾನಬೋಧಳಾಗಿಆತನದೇವಕದಂಬೆ ಅ.ಪ.ವಿದ್ಯಾ ಬುದ್ಧಿ ವಿನಯ ಮಂಗಳಗಳಸಾಧ್ವಿ ನಿನ್ನಲಿ ಬೇಡಿಕೊಂಬೆ 1ನಲಿದೆನ್ನಯ ಜಿಹ್ವಾಗ್ರದಿ ನೆಲಸುತಸುಲಭದೋರೆಯೆ ಸುಲಲಿತವ ಶಿವೆ 2ಧೀರ ಲಕ್ಷ್ಮೀನಾರಾಯಣಾಶ್ರಿತೆ-ಪರಮೇಷ್ಠಿಪರಿರಂಭೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ