ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ಬಗೆಯಿಂದ ಸಲಿಗೆಯನಿತ್ತಿಯೊ ಮಾವಮರ್ದನ ರಂಗ ನಿನ್ನ ದಯಾ ತಿಳಿಯದು ಪ ಅಂದರೆ ಆನಂದ ಅನಂದದೇ ಅನಾನಂದ ನಿಂದದೆ ಗೋಕುಲ ನಿಲದದೆ ವ್ಯಾಕುಲ ಬಂದದೆ ಪುರುಷಾರ್ಥ ಬಾರದಿದ್ದರೆ ವ್ಯರ್ಥ ಮಂಧರಧರ ನಿನ್ನ ಮನಸು ಬಂದದ್ದೆ ಸರಿ 1 ಕೊಟ್ಟದ್ದೆ ಪುರುಷಾರ್ಥ ಕೊಡದಿಪ್ಪದೆ ಅನರ್ಥ ಅಟ್ಟಿ ಬರುವ ಪಾಪ ಸುಟ್ಟು ಬಿಡು ನಿರ್ಲೇಪ ತಟ್ಟಿದುದೆ ವೇದಾರ್ಥ (ತಟ್ಟದದೆ) ಮಿಥ್ಯ ವಿಠ್ಠಲ ನಿನ್ನ ಭಕ್ತರಿಗೆ ನೀ ಬಲು ಸುಲಭಾ 2 ದೆರಗಲು ಆಕ್ಷಣವೆ ಸಿದ್ಧ ಮಾಳ್ಪೆ ಕರುಣ ನಿಧಿಯೆ ನಮ್ಮ ವಿಜಯವಿಠ್ಠಲ ನಿನ್ನ ಸರಿಯಾದ ದೇವರನು ಕಾಣೆ ತ್ರಿಭುವನದಲ್ಲಿ3
--------------
ವಿಜಯದಾಸ
ಪಾದ ಸಲಹವೆ ಬಿಡಲಾರೆ ಕಲಿತ ಕಲ್ಮಶವನ್ನು ಸುಲಭಾದಿ ಓಡಿಸು ಪ ಅಂದು ಆ ಕರಿರಾಜ ಸರಸಿಲಿವಂದಿಸಿದಾ ಪಾದ ಪಾದ 1 ನಾರಿಯು ನಿನ್ನ ನೆನದಾ ಮಾತ್ರದಿ ಶೀರಿಯ ಮಾಳೇಗರದಾ ಪಾದ 2 ಕಮಲನಾಭ ನೀನು ದೇವರ ದೇವ ಸುಮನಸರೊಡೆಯನು ಅಮಿತ ಮಹಿಮೆ ತೋರಿ ಭ್ರಮೆಯ ಹರಿಸು 3 ಆರು ವೈರಿಗಳು ಮಿತಿಮೀರಿರುವರು ಕೇಳು ನೀರಜಾಕ್ಷಯನ್ನನಾರು ಕಾಯುವರೊ ಧೀರ ನೀನೇ ಪೇಳು 4 ಪೊರೆಯದೆ ಬಿಡದಿರು ಶಿರಿನುತಚರಣವನ್ನು ತೋರು ನರಸಖ ನಿನ್ನಯ ಕರುಣವ ಬೀರು 5
--------------
ಸಿರಿವತ್ಸಾಂಕಿತರು
ಬೆಳಗುವಾರತಿ ಬನ್ನಿ ಲಲನೆಯರೆಲ್ಲರು| ಸುಲಭಾ ಭಕ್ತರಿಗಾದಾ ಚೆಲುವ ಶ್ರೀಕೃಷ್ಣಗ ಪ ಮಲ್ಲಯುದ್ದವನೆ ಮಾಡಿ ಮಾವ ಕಂಸನ ಕೊಂದು ಇಳೆಯೊಳು ಜಯವರಿಸಲು ನಡೆತಂಡನು 1 ದುಷ್ಟಬುದ್ದಿಯನ್ನುಳ್ಳ ಜಟ್ಟೇರ ಮಡಹಿಸಿ| ಸೃಷ್ಟಿಯ ಭಾರನಿಳಹಿಸಿ ಶಿಷ್ಟರ ಕಾಯ್ದನು 2 ಗಂಡರ ಗಂಡ ಪ್ರಚಂಡನಾಗಿ ಮೆರೆದನು| ಕುಂಡಲ ಭೂಷಿತ ಗಂಡ ಕಪೋಲಾ 3 ವರ ಉಗ್ರಸೇನಗ ಅರಸುತನವನಿತ್ತಾ| ಗುರು ಮಹಿಪತಿ ಸುತ ಪೊರೆವ ಶ್ರೀ ಅರಸಗೆ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾಯಾ ವಾರವ ನೀಡಿ ಪ್ರೀಯದಿಂದಲಿ ಜನರು ಸ್ತ್ರೀಯರು ಮುದದಿಂದ ಪ ಸಾರುತ ಹರಿದಾಸ ಕೇರಿಯೊಳಗೆ ಬರಲು ಚೋರತನವ ಮಾಡಿ ಚುದಗು ಬುದ್ಧಿಯಲಿಂದ ದ್ವಾರವನಿಡದಿರಿ 1 ಬಂದಾ ಹರಿದಾಸನ ವಂದಿಸಿ ನಿಮ್ಮಯ ಮಂದಿರದೊಳು ಕರೆದು ತಂದಿಗಳೆಂದು ನಲು ವಿಂದಲಿ ಉಪಚರಿಸಿ 2 ಪರಲೋಕ ಬಂಧುಗಳೆ ಕರುಣವ ಮಾಡಿದಿರಿ ಕರ್ಮ ಪರಿಹರವೆಂದು ನಾ ಸಿರ ಬಗೆ ಕೊಂಡಾಡುತಾ 3 ಪತಿಮತೈಕ್ಯವಾಗಿ ಅತಿಶಯ ಭಕುತಿಯಲಿ ಗತಿಗೆ ಸಾಧನವೆಂದು ತಿಳಿದು ಈ ಧರ್ಮಕ್ಕೆ ಪ್ರತಿಕೂಲವಾಗದಲೆ 4 ವಕ್ಕಡತಿ ತಂಡುಲವ ಚಕ್ಕನೆ ನೀಡಲು ಮಕ್ಕಳು ಮರಿಗಳು ಸಹಿತ ನಿತ್ಯಾ ಸುಖವಕ್ಕು ಸಟಿಯಲ್ಲಾ 5 ಇಲ್ಲವೆಂದು ನುಡಿದರೆ ಪುಲ್ಲಲೋಚನವಪ್ಪಾ ಎಲ್ಲ ಕಾಲದಲಿ ನಿಮ್ಮಂಗಣದೊಳು ಇಲ್ಲವೆ ನಿಂತಿಪ್ಪದು 6 ಹಸ್ತು ಹರಿದಾಸ ಬಂದು ಹೊಸ್ತಿಲಿಂದಲೆ ತಿರಿಗಿ ವಿಸ್ತರಿಸುವೆ ಕೇಳು ಹರಿ ತೊಲಗುವಾ ದ್ವಿ ಮಸ್ತಕ ಭುಂಜಿಸುವಾ 7 ಒಂದೊಂದು ಕಾಳಿಗೆ ಒಂದೊಂದು ಕುಲಗೋತ್ರ ಮುಂದೆ ಉತ್ತಮ ದೇಹದಲಿ ಬಂದು ಸುಜ್ಞಾನದಿಂದಲೆ ಲೋಲಾಡುವರು 8 ಹಲವು ಪೇಳುವದೇನು ಸುಲಭಾವೆನ್ನು ಧರ್ಮ ಅಳಿದು ಹೋಗುವದಲ್ಲ್ಲ ಇದನು ವಿಜಯವಿಠ್ಠಲ ಬಲ್ಲ ಮಹಾಫಲವ9
--------------
ವಿಜಯದಾಸ
ಶ್ರೀ ಲತಾಂಗಿಯ ವಲ್ಲಭಾ|ಎನ್ನ| ಪಾಲಿಸೋ ಭಕ್ತರ ಸುಲಭಾ ಪ ಇಂದೀವರದಳ ನಯನಾ ಮು| ಕುಂದ ಉರಗರಾಜ ಶಯನಾ| ಮಂದರೋದ್ಧರ ಪಾಪ ಶಮನಾ|ಗೋ| ವಿಂದ ಖಗೇಶ್ವರ ಗಮನಾ 1 ಶರಣ ಜನರಾಭರಣಾ|ಮುರ| ಹರ ಜಗದೀಶನೇ ಕರುಣಾ| ಪರಮಾನಂದ ಜೀತ-ದೂಷಣಾ|ಮ| ಕರಕುಂಡಲ ಸುಭೂಷಣಾ 2 ಸರಸಿಜ ಭವನುತ ಸ್ವಾಮಿನ್ನಾ|ಶ್ರೀ| ಹರಿ ಪೂರಿತ ಮನೋಕಾಮನ| ಶರಧಿ ಕೀಲನಾ|ಗುರು| ವರ ಮಹಿಪತಿ ಸುತ ಪಾಲನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು