ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(41ನೇ ವರ್ಷದ ವರ್ಧಂತಿ) ಸತ್ಯ ಸಂಕಲ್ಪಾನುಸಾರದಿ ನಡೆಸುವುದುತ್ತಮ ಬಿರುದಾದರು ಭೃತ್ಯನ ಬಿಟ್ಟನೆಂಬಪಕೀರ್ತಿ ಬರದಂತೆ ಚಿತ್ತದಲ್ಲಿರಲಾದರು ಪ. ಕಳೆದಿತು ಐದೆಂಟು ಮೇಲೊಂದು ವತ್ಸರ ಬೆಳೆದಿತು ಬಲು ಮತ್ಸರ ನೆಲನ ಮೇಲಡಿಯಿಡಲಿಲ್ಲ ಶಕ್ತಿಯು ಇಂಥ ಛಲದಿ ತೋರುವಿ ತಾತ್ಸಾರ ಬಳುಕಿ ಬಾಡಿದ ದೇಹವುಳುಹಲುತ ಸೇವಾ ಫಲಕೆ ಕಾರಣವೆಂಬೆನು ನಳಿನನಾಭನೆ ನಿನ್ನ ಮನವೆಂತಿರುವುದೆಂದು ತಿಳಿಯದೆ ಬಳಲುವೆನು 1 ವಯಿನು ತಪ್ಪಿದ ಬಳಿ- ಕ್ಯಾತರಗುಣವಪ್ಪುದು ಭೂತಪಂಚಕ ಸನ್ನಿಪಾತ ಸೂಚಿಸುವಂತೆ ಕಾತರತೆಯು ತಪ್ಪದು ಈ ತೆರದಲಿ ದೇಹ ರೀತಿಯಾಗಿರುವುದ ನೀ ತಿಳಿದಿರಲೆನ್ನಯ ಮಾತ ಕೇಳದೆ ಲಕ್ಷ್ಮೀನಾಥ ತಾತ್ಸಾರವಿಂತು ನೀತಿಯಾಗದು ಚಿನ್ಮಯ 2 ಜನನ ಮರಣ ಜೋಡಾಗಿರುವುದೆಂಬ ಸಿದ್ಧ ನಿನಗಿದು ಸುಲಭಸಾಧ್ಯ ಮನೆವಾರ್ತೆ ಮಡದಿ ಮಕ್ಕಳು ಮುಂತಾದುದಕೆಲ್ಲ ವನಜಾಕ್ಷ ನೀನೆ ಬಾಧ್ಯ ಕನಸಿಲಾದರು ನಿನ್ನ ನೆನವ ತಪ್ಪಿಸದಿರು ವಿನಯ ವೆಂಕಟರಾಯನೆ ನಿನಗಿಲ್ಲದಪಕೀರ್ತಿ ಎನಗಿಲ್ಲ ಮಹದಾರ್ತಿ ಘನಕಲ್ಪ ಸುರಭೂಜನೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಇದೇ ಭಕುತಿ ಮತಿಗೆ ಮುಕುತಿ | ಇದಕ್ಕಧಿಕವಾಗಿಪ್ಪ ವಿಧಿಗಳೆಲ್ಲಿಯಿಲ್ಲಾ ಪ ರತುನ ಗರ್ಭದೊಳಗೆ ತಿಳಿ | ರತುನ ಸಮಕ್ಷೇತ್ರಗಳಿಗೆ | ರತುನವೆನ್ನಿ ಯತಿವಂಶ | ರÀತುನ ಮಧ್ವಮುನಿಮಾಡಿದಾ 1 ಪದ ಜೀವಸ್ತರಿಗದೆ ಪಾ | ಪ ಜನರು ಕೃಷ್ಣರಾಯನ ಪಾದವ ನೋಡಿ ನಿತ್ಯಾ | ಸಾಧನಿ ಮನ ಮಾಡಿರಯ್ಯಾ 2 ಏಳು ಒಂದು ಮಠದ ಲೋಕರಂಸೆ ಸದನವೆನ್ನಿ | ಪೇಳಲೇನು ಅವರೇ ಯಿಲ್ಲಿ ಊಳಿಗವ ಮಾಡುತ್ತಿಪ್ಪರು 3 ಮೇರೊ ಪರ್ವತ ತುಲ್ಯವಿದೆ | ವಾರಿಜನೆ ಮಧ್ವರಾಯ | ಈ ರಜತ ಪೀಠವೆ ಮಂದಿರ ಶತಕೋಟಿ ಎನ್ನೀ4 ಮೆರೆವ ಮಧ್ವತೀರ್ಥ ಬಾಹಿರ | ವರಣ ಉದಕವೆನ್ನಿ ಇಲ್ಲಿ | ಚರಿಸುವಂಥ ಸುಗುಣ ತೃಣಾ ದ್ಯರು ಮುಕುತಿ ಯೋಗ್ಯರಹುದು5 ಉಡಪಿ ಯಾತ್ರೆ ಮಾಡಿದವನು | ಪೊಡವಿ ತುಂಬ ಯಾತ್ರೆ | ಬಿಡದೆ ಚರಿಸಿದವನೆ ಎಂದು | ಮೃಡನು ಇಲ್ಲಿ ಸಾರುತಿಪ್ಪಾ 6 ಉಬ್ಬಿ ಸರ್ವ ಇಂದ್ರಿಯಂಗಳಾ | ಹಬ್ಬವಾಗಿ ಸುಖಿಪದಕೆ | ಊರ್ಬಿಯೊಳಗೆ ಉಡುಪಿ ಯಾತ್ರೆ | ಅಬ್ಬದಲೆ ದೊರಕದಯ್ಯಾ 7 ಹಿಂಗಿ ಪೋಗದಕೆ ಇದೇ | ಅಂಗವಲ್ಲದೆ ಬೇರೆ ಇಲ್ಲ | ರಂಗ ಸುಲಭಸಾಧ್ಯಾವಾಹಾ 8 ನೂರು ಕಲ್ಪಧರ್ಮ ಮಾರನಯ್ಯ ವಿಜಯವಿಠ್ಠಲನ | ಸಾರಿ ತಂದು ಕೊಡುವಾ9
--------------
ವಿಜಯದಾಸ
ಬೋಧಾ ಜ್ಞಾನದಾ ಬೋಧ ಮೋದಾ ಶಾಂತಿಯಾ ಸ್ವಾದಾ ಪ ಸ್ವರೂಪದಾ ಸುಖಸ್ಪದಾ ಪ್ರಶಾಂತ ಗುರುಬೋಧಾ ಬೋಧ ಅ.ಪ. ಸುಲಭಸಾಧ್ಯ ಸುವಿಚಾರಾ ವೇದಾಂತಶಾಸ್ತ್ರದ ಸಾರಾ ತಾನೇ ಪರಮಾತ್ಮನು ಎನುವಾ ಸ್ವಾನುಭವಾಮೃತಜಲಧಾರಾ ಘೋರಾ ಸಂಸ್ಕøತಿಯ ಪಾರಾ 1 ಜೀವಭಾವವ ಮರೆಯಿಸುತಿರುವಾ ಸಾವ ನೀಗುವಾ ಮಂತ್ರವಾ ಸಾರಿ ಪೇಳ್ವ ಶಂಕರಾರ್ಯ ಮೋದಾ ಶಾಂತಿಯಾ ಸ್ವಾದಾ 2
--------------
ಶಂಕರಭಟ್ಟ ಅಗ್ನಿಹೋತ್ರಿ