ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(39ನೇ ವರ್ಷದ ವರ್ಧಂತಿ) ಭೂವರ ಭಾಗ್ಯದೇವಿಯ ಕೂಡಿ ಶುಭಕಾರಿ ಪ. ಏಕೋನ ಚತ್ವಾರಿಂಶತಿವತ್ಸರವು ಸಂತು ರಾಕುತನದೊಳೆನಗೆ ಬೇಕು ಬೇಕೆಂಬಾಶಾಪಾಶವ ಸುಡಲಾರೆ ಭೀಕರಗೊಳಿಪ ಬಗೆ ಮಾಕಳತ್ರನೆ ಸುಮ್ಮನ್ಯಾಕುಪೇಕ್ಷಿಪೆ ಕರು ಣಾಕರ ಕಡೆಗಣ್ಣಿಂದಲಿ ನೋಡು ಕಮಲಾಕ್ಷ 1 ಹಲವು ಹಂಬಲಿಸುತ ಬಳಲಿದೆ ದಿನದಿನ ಗಳಿತವಾಗಿಹ ದೇಹದಿ ಬಲವು ಕುಂದಿತು ಒಂದು ನೆಲೆಯ ಕಾಣದು ಕಳ- ವಳಿಕೆಯಿಂದಲಿ ಮನವು ಮೊಲೆಯ ಕಂದನೊಳ್ ಫಲ ಸಲುವುದೆ ಮಾತೆಗೆ ನಳಿನನಾಭನೆ ಎನ್ನ ತಪ್ಪೆಣಿಸದಿನ್ನು 2 ನಿನ್ನ ನಾಮವ ನಂಬಿ ನೆನೆವರಿಗಖಿಳಾರ್ಥ ಸನ್ನಹ ಸುಲಭನೆಂದು ಮುನ್ನಿನ ಮುನಿಗಳು ನುಡಿದ ಮಾತನು ಶ್ರುತಿ ಸನ್ನುತ ಮರೆಯಲೆಂದು ಎನ್ನ ಮನೋರಥ ಕೊಡುತ ಕರುಣಾಸಿಂಧು ಪನ್ನಗಾಚಲನಾಥ ಪಾವನಕರ ಬಂಧು 3
--------------
ತುಪಾಕಿ ವೆಂಕಟರಮಣಾಚಾರ್ಯ
ಮೋಸ ಹೋದೆನಯ್ಯ ಕೃಷ್ಣ ಮೋಸ ಹೋದೆನಯ್ಯಾ ಪ ಈಸು ಸುಲಭನೆಂದು ಪೇಳಿ ದೂರ ಸರಿವೆಯೇಕಯ್ಯ ಇಷ್ಟವಿಲ್ಲವೇ ನಾನು ನಿನಗೆ ಬೇಡವಾದೆನೇ ಅ.ಪ ಉಡಲು ನಿನ್ನವೆಲ್ಲಾವೆಂದು ಸುಳ್ಳು ಹೇಳಿತೇ ವೇದ ಕಡಲು ದಾಟಲು ಬೇರೆ ದಾರಿಯಿಲ್ಲವಯ್ಯ ಒಡಲು ನನ್ನದಾಗಿ ನೊಂದ ನನ್ನ ಕೂಡಯ್ಯ ಒಡೆಯಶೆಲ್ವರಾಯ ಕೂಡಿಕೊಳ್ಳೊ ಅಯ್ಯ1
--------------
ಸಂಪತ್ತಯ್ಯಂಗಾರ್
ವಿಶ್ವಪತಿ ಇಂದುಶೇಖರ ಸುರಮಸ್ತಕಮಣಿ ಮನ್ಮಥರಿಪುವೆ ವಿಸ್ತರಿಪೆನು ನಿಮ್ಮ ಮಹಿಮೆಯ ಜಗದೊಳು ಸ್ವಸ್ಥವಾಗಿ ಪ. ಎಲ್ಲಿ ನೋಡಲು ಲಿಂಗಮಯವು ಅಲ್ಲಿಗಲ್ಲಿಗೆ ತೀರ್ಥಯಾತ್ರೆಯು ಸೊಲ್ಲು ಸೊಲ್ಲಿಗೆ ಹರಮಹಾದೇವಂತೆಲ್ಲರು ಸ್ತುತಿಸುವರು ಬಲ್ಲವರು ಇದು ಭಾವಿಸಿ ಕಾಶಿಗಿಂತ ಮಹಿಮೆ ವೆಗ್ಗಳವಹುದೆನುತ ಸುಲಕ್ಷಣೆ ಶಿವಗಾತ್ರೆ ಶಿವನವಲ್ಲಭೆ ತ್ರಾಸಿನಲಿ ತೂಗುವಳು 1 ನಾಟಕದಿ ನಾನಾಜನ್ಮದಿ ಬಂದು ದಾಟದಂತರವನಳಿದನು ಚಂದ್ರ ಕೋಟಿತೀರ್ಥದಿ ಮಿಂದು ಮೈಯ ಕೋಟಲೆ ಸಂಸಾರಗಳೆಲ್ಲ ದಾಟಿದೆನು ಇನ್ನು ಜನನಮರಣಗಳೆಂಬೋಪಾಯಗಳಿಲ್ಲವು 2 ಕೂಪಾರದಲಿ ಬಂದು ಸೂಸುವ ತೆರೆಗಳು ಅಭ್ರದಿಂದಲಿ ಅಪ್ಪಳಿಸಲು ಉನ್ನತ ಭ್ರಮೆಗೊಂಡಿದ್ದ ಕರ್ಮದ ಬಲಿಗಳು ಮಿಗಿಲಾದವು ಉರ್ವಿಯೊಳಗುಳ್ಳ ಸಕಲನದಿಗಳನು ಗರ್ಭದಲಿ ಇಂಬಿಟ್ಟು ಮೆರೆದಂತಿಹ ಸರ್ಬಗೂಡಿಸುವ ಸಿಂಧುರಾಜನಲಿ ಮಿಂದು ನಿರ್ಭಯಳಾದೆನು 3 ಬಲಿದ ದನುಜನ ಭಾವಕ್ಕೆ ಮೆಚ್ಚಿ ಒಲಿದಷ್ಟವರವಿತ್ತ ಸಿಲುಕಲು ಸುಲಭನೆಂದು ಹೇರಂಬನೊಳಿತ್ತು ನೆಲೆಗೊಳಿಸಿ ಎಳೆದರೆ ಎಳೆಯಲೊಲ್ಲದೆ ಛಲವಿಡಿದ ಲಂಕಾಧಿಪತಿಯ ಅಹಂಕಾರ ವಳಿದು ಇಂದ್ರಾದಿಗಳಿಗೆ ವರವಿತ್ತ ಮಹಾಬಲಲಿಂಗನ ಕಂಡೆ 4 ಅನ್ನದಾ ಶತಶೃಂಗ ಪರ್ವತ ಪಶ್ಚಿಮದಿಂದ ಪಾತಾಳಗಂಗೆ ಸಹಿತಲಿ ಪ್ರ- ಸನ್ನನಾಗಿ ನಿಂದ ಚೆನ್ನ ಹೆಳವನಕಟ್ಟೆರಂಗನ ಪ್ರಿಯ ಪನ್ನಂಗಧರ ಪರಮಪವಿತ್ರ ಗೋಕರ್ಣೇಶನ ಕಂಡೆ ಪಾ- ವನವಾಯಿತು ಎಲ್ಲಾ ಕುಲಕೋಟಿಯು 5
--------------
ಹೆಳವನಕಟ್ಟೆ ಗಿರಿಯಮ್ಮ
ಕಾಯಬೇಕೆನ್ನ ಗೋಪಾಲ ಬಂದು |ಪಾಯವನರಿಯೆನು ಭಕುತರ ಪಾಲಪಹಲವು ಜನ್ಮಗಳೆತ್ತಿ ಬಂದೆ-ಮಾಯಾ-|ಮಲವೆಂಬುದರಿಯದೆ ಭವದೊಳು ನೊಂದೆ ||ಬಲು ಭಯವಾಯಿತು ಮುಂದೆ-ನೀನು-|ಸುಲಭನೆಂದುಕೇಳಿಶರಣೆಂದೆ ತಂದೆ1ವಿತ್ತದೊಳಗೆ ಮನವಿಟ್ಟು-ನಿನ್ನ-|ಉತ್ತಮ ನಾಮದ ಸ್ಮರಣೆಯ ಬಿಟ್ಟು ||ಮತ್ತನಾದೆನು ಮತಿಗೆಟ್ಟು-ಇದ-|ಚಿತ್ತದಲಿ ತಿಳಿದಿ ಬಲು ದಯವಿಟ್ಟು 2ಜರುಗಿದ ಪಾಪಂಗಳೆಲ್ಲ-ಅನ್ಯ-|ನರರೇನ ಬಲ್ಲರು ಯಮಧರ್ಮ ಬಲ್ಲ ||ನರಕಕೆ ಒಳಗಾದೆನಲ್ಲ-ಸಿರಿ-|ವರನಾರಾಯಣ ಪುರಂದರವಿಠಲ 3
--------------
ಪುರಂದರದಾಸರು