ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬರಲಿಲ್ಲವೆನುತ ನೀ ಹೊರಗಿಕ್ಕಬೇಡ ಉರಗಾದ್ರಿವಾಸ ಶ್ರೀ ವೆಂಕಟೇಶ ಪ ಕಾಸಿಲ್ಲ ಕೈಯೊಳಗೆ ಲೇಸಿಲ್ಲ ಮನೆಯೊಳಗೆ ವಾಸಿತಪ್ಪಿಯೆ ಬಹಳ ಬೇಸತ್ತೆನು ಈಸು ಪ್ರಯಾಸ ನಿನ್ನ ದಾಸಗೊದಗಿದ ಮೇಲೆ ದೋಷವೆನ್ನಲ್ಲಿಲ್ಲ ಶೇಷಾದ್ರಿವಾಸ 1 ಗೆಲುವಿಲ್ಲ ಮನದೊಳಗೆ ಬಲವಿಲ್ಲ ಕಾಯದೊಳು ಹೊಲಬುದಪ್ಪಿಯೆ ಬಹಳ ಸುಲಿವಾದುದು ಫಲವೇನು ಇದರೊಳಗೆ ಕೆಲಸವೇನಿಹುದಿಲ್ಲ್ಲಿ ಸುಲಭದೊಳು ಬೇರೊಂದು ಪರಿಯ ನೋಡಯ್ಯ 2 ಕತ್ತಲೆಯ ರಾಜ್ಯವನು ಆದಿತ್ಯನಾಳುವ ತೆರದಿ ಸುತ್ತಗಳನೆಲ್ಲವನು ಕಿತ್ತು ಹಾರಿಸಿಯೆನ್ನ ಹತ್ತಿರದಿ ಮೈದೋರು ಭಕ್ತವತ್ಸಲನೆ 3 ಹಿರಿಯೊಳು ಆರ್ಜಿಸಿದ ಗೃಹಕೃತ್ಯವೆಂಬುದಿದು ಕೊರಳಡಿಗೆ ಸಿಲುಕಿರ್ದ ಸೆರೆಯಾಯಿತೊ ಹರುಷವಿಲ್ಲಿದರೊಳಗೆ ಬರುವ ಗತಿಯನು ಕಾಣೆ ದರುಶನಕೆ ಬಗೆದೋರು ದೊರೆ ವೆಂಕಟೇಶ 4 ಮಾತು ತಪ್ಪಿತು ಎಂದು ಭೀತಿಗಿಕ್ಕಲುಬೇಡ ಸೋತುದೈ ಕೈಯೆನಗತೀತ ಮಹಿಮ ಕಾತುರವು ಮನದೊಳಗೆ ಕಾಣಬೇಕೆಂದೆಂಬ ಪ್ರೀತಿಯಾಗಿದೆ ಜಗನ್ನಾಥ ನಿನ್ನೆಡೆಗೆ 5 ಒಂದು ಪರಿಯನು ನೀನು ತಂದು ತೋರಿದರೀಗ ಇಂದೆ ನಾನೇಳುವೆನು ಮಂದಿವಾಳದಲಿ ಚಂದದಲಿ ಮಡದಿ ಮಕ್ಕಳ ಸಹ ಕರಕೊಂಡು ಬಂದು ನೋಳ್ಪೆವು ನಿನ್ನ ಆನಂದ ಮೂರುತಿಯ 6 ಅಣಿಮಾಡಿ ನೀನೆನಗೆ ಮನದಣಿವ ತೆರನಂತೆ ಕ್ಷಣವಾದ ಕೆಲಸಗಳು ನಿನಗೆ ಘನವಲ್ಲ ತನಿರಸವನೆನಗೀಯೊ ಜನ ಮೆಚ್ಚುವಂತೆ 7
--------------
ವರಹತಿಮ್ಮಪ್ಪ
ಲೋಕಕ್ಕೆ ನೀ ತಾಯಿ ಲೋಕಕ್ಕೆ ನೀ ತಂದೆ ಸಾಕುವಾಕೆಯೆ ನೀನು ಲೋಕಕ್ಕೆ ನೀ ತಾಯಿ ಪ ಬೇಸರಿಸಿ ಧರಿಸಿದಳು ಜನನಿ ಎನ್ನನÀು ದಶ- ಮಾಸ ಗರ್ಭದೊಳಿದ್ದು ಬಹಳ ಬಳಲಿದೆನು ಹೇಸಿಕೆಯ ವಿಣ್ಮೂತ್ರ ರಾಶಿಯೊಳುಗುದಿಸಿದರೆ ಆಸುರದಿ ಕೈಯೆತ್ತಿ ಪಿಡಿದು ರಕ್ಷಿಸಿದೆ1 ಮಲ ಮೂತ್ರ ಮೈಲಿಗೆಯ ಮೈಯೊಳಗೆ ಧರಿಸಿದರು ತಿಲ ಮಾತ್ರ ಹೇಸಿದೆಯ ಎನ್ನೊಳಗೆ ನೀನು ಜಲಜಮುಖಿ ಎನ್ ತಾಯಿ ಎಲೆಯ ಓಗರವಿಟ್ಟು ತೊಳೆದ ಹಸ್ತದಿ ಎನಗೆ ಕೊಳೆಯನಿಕ್ಕಿದಳು 2 ಮಗುವೆಂದು ಯೋಚಿಸದೆ ಉಗುಳುತ್ತ ಎಂಜಲನು ಒಗೆದು ಬೀಸಾಡಿದಳು ಎಡದ ಹಸ್ತದಲಿ ಜಗಳವಾಡಲು ಪಿತನು ಮಗನ ಮೋಹದ ಮೇಲೆ ತೆಗೆಯಬಾರದೆ ಮಲವನೆಂದು ಜರೆÀದಪಳು3 ಪಡೆದ ತಾಯ್ತಂದೆಗಳು ಅಡಗಿ ಹೋದರು ಎನ್ನ ಬಿಡದೆ ಸಲಹಿದೆ ನೀನು ಪೊಡವಿ ದೇವತೆಯೆ ಕಡೆಗಾಲದೊಳು ಕೈಯ ಪಿಡಿದು ರಕ್ಷಿಸದೆನ್ನ ಒಡಲ ದುಃಖವ ನೋಡಿ ನುಡಿಯದಿರಬಹುದೆ 4 ಬಲವಾಗಿ ಕೈವಿಡಿದೆ ವರಾಹತಿಮ್ಮಪ್ಪನಿಗೆ ಗೆಲವಿಂದ ಭೂರಮಣನೆನಿಸಿ ಮೆರೆವ ಜಲಜನಾಭನೆ ಎನ್ನ ಪಿತನು ಮಾತೆಯು ನೀನು ಸುಲಭದೊಳು ಮೈದೋರು ಫಲಿತವಹ ಪದವ 5
--------------
ವರಹತಿಮ್ಮಪ್ಪ
ಸುಲಭ ನೀನೆನಗಲ್ಲ ತಿಳಿವೆ ಶ್ರೀನಲ್ಲ ಪ ಸುಲಭನೆಂದಾಡುವರು ಹರಿದಾಸರೆಲ್ಲ ಅ.ಪ. ದರುಶನವು ಸಿಗಲೆಂದು ಪಂಢರಿಗೆ ನಾ ಬಂದೆಪರಮಪಾವನ ನಿನ್ನ ಮೂರುತಿಯ ಮುಂದೆತ್ವರದಿನಿಲೆ ಬರಲು ಬಹುಭಕ್ತಿಯಿಂದೆತೆರೆಯಲಿಲ್ಲವೊ ದ್ವಾರ ಏನೆಂದೆ ತಂದೆ 1 ಶಿಲೆಯ ಪ್ರತಿಮೆಯನೀಗ ತೋರದವ ನೀ ಮುಂದೆಬಲು ನಿಜದ ರೂಪವನು ತೋರುವುದು ಹೇಗೆಂದೆಜಲಜಾಕ್ಷ ಭರವಸೆಯ ನೀಡಲೆಂತು ಮನ ಗುಂದೆಸಲಹು ವಿಠ್ಠಲರಾಯ ಕೈ ಮುಗಿಯುವೆನು ತಂದೆ 2 ಸುಲಭದೊಳು ಸುಲಭನೈ ಪಂಢರಿಯ ವಿಠಲಾಬಲು ಪಾಪಿಗಳನು ಉದ್ಧರಿಪ ಸಕಲಬಲುಹಿ ನೀ ನುಡಿಯು ನನಗೆಲಾಸುಲಭ ಗದುಗಿನ ವೀರನಾರಾಯಣನು ಅಚಲ 3
--------------
ವೀರನಾರಾಯಣ