ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆನು ನಾನೊಂದು ಕೌತುಕ ಕಲಿಯುಗದೊಳಗೊಂದು ಧ್ರುವ ಮೈಯೊಳಗಿಹುದು ಕೈಯೊಳಗೆಂದಿಗೆ ಸಿಲುಕದು ಇಂದು 1 ವೇದಕ ನಿಲುಕದು ಸಾಧಕರಿಗೆ ತಾ ಸಿಲ್ಕುವದು ಭೇದಿಸಿದರೆ ಹೊಳೆವುದು ಸಾಧು ಜನರಿಗೆ ತಿಳಿವುದು 2 ಭಾವಕ ಸುಲಭದೇವಾದಿಗಳಿಗೆ ದುರ್ಲಭ ಜೀವರ ನೆಲೆನಿಭü ಮಹಿಪತಿ ಪ್ರಾಣದೊಲ್ಲಭ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೈಯ ಬಿಡುವರೇ ಕೃಷ್ಣ ಕೈಯ ಬಿಡುವರೇ ಪ ಹೇಯ ವಿಷಯದಲ್ಲೆ ಇರಿಸಿ ಜೀಯ ನಿನ್ನ ವಿಷಯ ಮರೆಸಿ ಭವ ಸಮುದ್ರ ಅ.ಪ ಬಿಂಬ ನೀನು ಸಿದ್ಧಪ್ರತಿಬಿಂಬ ನಾನು ಸಿಧ್ದವಿರಲು ತುಂಬಿ ಪರಿವ ನದಿಯ ಮಧ್ಯೆ ಅಂಬಿಗನೆ ತ್ಯಜಸಿದಂತೆ 1 ಕಲಿಯ ಕಾಟ ವಿಷಯ ದಾಟಗೆಲುವ ಶಕ್ತಿ ಎನಗೆ ಉಂಟೆ ಒಲಿಯದಿರಲು ನೀನೆ ದಯದಿ ಸುಲಭದೇವ ನೆನಿಸಿ ಹೀಗೆ 2 ತಾಯಿ ಬಿಡುವಳೇನು ಶಿಶುವ ಮಾಯೆ ಸುಳಿಯಲ್ಲಿರಲು ಸಹಾಯ ಮಾಡದೇನೆ ಬದಿಗ 3 ಶಿಷ್ಟನಲ್ಲ ದುಷ್ಟಕರ್ಮ ಭ್ರಷ್ಟನೆಂಬ ಮಾತು ಮೂಟೆ ಕಟ್ಟಿಪೇಳು ಬಿಟ್ಟು ನಿನ್ನ ಎಷ್ಟು ಕರ್ಮಮಾಡಲಾಪೆ 4 ಹಿಂದಿನವರು ತಾವೆ ಮುಂದೆ ಬಂದರೇನೊ ಬಿಟ್ಟು ನಿನ್ನ ಒಂದು ತೃಣವು ಚಲಿಸದಲ್ಲ ತಂದೆ ಮನವ ಮಾಡದಿರಲು 5 ನಾನು ಎಂದು ಹೀನನಾದೆ ನೀನು ಸ್ವಾಮಿ ನಾನು ಭೃತ್ಯ ಶ್ರೀನಿವಾಸ ಶರಣು ಶರಣು ಜ್ಞಾನವಿತ್ತು ಕಾಯೊ ಮುಂದೆ 6 ನಿನ್ನ ನಂಬಿ ಇರುವೆ “ಶ್ರೀ ಕೃಷ್ಣವಿಠಲ” ಸತ್ಯಸತ್ಯ ಅನ್ಯರನ್ನು ಕಾಣೆನಪ್ಪ ನಿನ್ನ ಚಿತ್ತ ನನ್ನ ಭಾಗ್ಯ 7
--------------
ಕೃಷ್ಣವಿಠಲದಾಸರು
161ಆರಿಗೆ ವಧುವಾದೆ - ಅಂಬುಜಾಕ್ಷಿ |ಕ್ಷೀರಾಬ್ಧಿ ಕನ್ನಿಕೆ - ಶ್ರೀ ಮಹಾಲಕುಮೀ ಪಶರಧಿಬಂಧನ ರಾಮಚಂದ್ರ ಮೂರುತಿಗೊ |ಪರಮಾತ್ಮ ಸಿರಿಯನಂತ ಪದ್ಮನಾಭನಿಗೋ ||ಸರಸಿಜಭವ ಜನಾರ್ದನ ಮೂರುತಿಗೋ |ಎರಡು ಹೊಳೆಯ ರಂಗಪಟ್ಟಣವಾಸಗೊ 1ಚೆಲುವ ಬೇಲೂರು ಚೆನ್ನಿಗರಾಯನಿಗೊ |ಕೆಳದಿ ಹೇಳುಡುಪಿಯ ಕೃಷ್ಣರಾಯನಿಗೊ ||ಇಳೆಯೊಳು ಪಂಢರಪುರ ವಿಠಲೇಶಗೊ ||ನಳಿನಾಕ್ಷಿ ಹೇಳು ಬದರೀನಾರಾಯಣನಿಗೊ 2ಮಲಯಜಗಂಧಿ, ಬಿಂದುಮಾಧವರಾಯಗೊ |ಸುಲಭದೇವ ಪುರುಷೋತ್ತಮಗೊ ||ಫಲದಾಯಕನಿತ್ಯಮಂಗಳನಾಯಕಗೊ |ಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ 3ವಾಸವಾರ್ಚಿತ ಕಂಚೀವರದರಾಜ ಮೂರುತಿಗೊ |ಆ ಸುರವಂದ್ಯ ಶ್ರೀಮುಷ್ಣದಾದಿ ವರಹನಿಗೊ ||ಶೇಷಶಾಯಿಯಾದ ಶ್ರೀ ರಂಗನಾಯಕಗೊ |ಸಾಸಿರ ನಾಮದೊಡೆಯ ಅಳಗಿರಿಯೀಶಗೋ 4ಶರಣಾಗತರನು ಪೊರೆವ ಶಾರ್ಙಪಾಣಿಗೊ |ವರಗಳನೀವ ಶ್ರೀನಿವಾಸ ಮೂರುತಿಗೋ |ಕುರುಕುಲಾಂತಕ ರಾಜಗೋಪಾಲ ಮೂರುತಿಗೊ |ಸ್ಥಿರವಾದ ಪುರಂದರವಿಠಲರಾಯನಿಗೊ 5
--------------
ಪುರಂದರದಾಸರು