ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿದೆ ವೇಂಕಟ ನಿನ್ನ ಪ ಕೊಂಡಾಡಿ ಬೇಡಿದೆ ವರವನ್ನ ಆಹಾ ರೂಢಿಯೊಳಗೆ ನಿನಗೆ ಈಡುಗಾಣೆನೊ ದೇವ ನಾಡುದೈವಗಳೆಲ್ಲ ಒಡಿಪೋದವೊ ಸ್ವಾಮಿ ಅ.ಪ ಮಣಿಗಣಮಯದ ಕಿರೀಟ, ಕಪ್ಪುವ ರಣಕುಂತಲದ ಲೋಲ್ಯಾಟ, ಯುಗತ ರಣಕುಂಡಲ ಬಹು ಮಾಟ ಅರ ಗಿಣಿ ಶÀಶಿಪೋಲ್ವ ಲಲಾಟ ಆಹಾ ಎಣೆಗಾಣೆ ಕಸ್ತೂರಿ ಮಣಿರ್ದಿಪ ಭ್ರೂಯುಗ ಕುಣಿಯುತ ಸ್ಮರಧನು ಗಣಿಸದೊ ಎಲೋದೇವಾ 1 ವಾರಿಜಯುಗಸಮನಯನ, ನಾಸ ಚಾರುಚಂಪಕ ತೆನೆ, ವದನದೊಳು ತೋರುವ ಸುಂದರರದನ ಪಂಕ್ತಿ ಸಾರಿದಾಧರ ಬಹು ಅರುಣ, ಆಹಾ ಸಾರಸಮುಖದೊಳು ಸೇರಿ ಶೋಭಿಪ ಚುಬಕ ಕೂರುಮಯುಗಕದಪು ಸಾರಕಟಾಕ್ಷವ 2 ಕಂಧರಾಂಕಿತ ಸತ್ರಿರೇಖಾ, ಕಂಠ ಪೊಂದಿಪ್ಪೊದ್ವರ್ತುಲ ಕ್ರಮುಕ, ಕೊರಳ ಸುಂದರಕೌಸ್ತುಭಪದಕ, ಬಹು ಬಂಧುರ ಚೆÉೈತ್ರ ಸುರೇಖ ಆಹಾ ಹಿಂದೆ ಸಿಂಹÀದ ಹೆÉಗಲಿನಂದದಲೊಪ್ಪಿದ ಸ್ಕಂಧದಿ ಶೋಭಿಪ ಒಂದು ಸರಿಗೆಯನ್ನು 3 ಸ್ವನ್ನ ಏಕಾವಳಿಹಾರಾ, ಬಾ ಪುತ್ಥಳಿ ಸಿರಿಯಾಕಾರ, ಬಹು ಚನ್ನವಾಗಿಹ ನಾನಾಹಾರ, ಶುಭ್ರ ವರ್ಣ ಶೋಭಿಪ ಜನಿವಾರ ಆಹಾ ಇನ್ನು ಗುಂಡಿನಮಾಲೆ, ಘನ್ನ ಜಲಸರಪಳಿ ಉನ್ನತದಾನಘ್ರ್ಯ ರನ್ನ ಜಯಂತಿಯಾ 4 ಶಿರಿವತ್ಸಲಾಂಛನಹೃದಯ, ಸುರ ಕರಿಕರತೆರಬಾಹು ಶಿರಿಯಾ, ನಾಲ್ಕು ಕರಗಳೊಪ್ಪವವೀಪರಿಯ, ಮೇಲಿ ನ್ನೆರಡು ಹಸ್ತದಿ ಶಂಖ ಅರಿಯ ಆಹಾ ವರರತ್ನ ಮುದ್ರಿಕೆ ಧರಿಸಿದ ಬೆರಳುಳ್ಳ ಕರತೋಡ ಕಡಗಕ್ಕೆ ಸರಿಗಾಣೆ ಧರೆಯೊಳು 5 ಪರಮವೈಕುಂಠದಕಿಂತ ಈ ಧರಿತಳವದಿಕವೆನ್ನು ತಾ ಬಲ ಕರದಿಂದ ಜನಕೆ ತೋರುತಾ ಬಾಹು ಎರಡು ಆಜಾನುಪೂರಿತಾ ಆಹಾ ಸ್ವರಣರತ್ನ ಖಚಿತ ವರನಾಗಭೂಷಣ ಧರಿಸಿ ಟೊಂಕದಿ ವಾಮಕರವಿಟ್ಟು ಮೆರೆವೋದು 6 ಹಸ್ತಯುಗದಿ ತೋಡ್ಯ ಕಡಗ, ಪ್ರ ಶಸ್ತ ರತ್ನದ್ಹರಳಸಂಘ ರಚಿತ ಸಿಸ್ತಾದÀ ಉಂಗುರ ಬೆಡಗ, ಬಹು ವಿಸ್ತರಾಂತರ ಭುಜಯುಗ ಆಹಾ ಹಸ್ತಿವರದ ಸಮಸ್ತಲೋಕಕೆ ಸುಖ ವಿಸ್ತಾರ ನೀಡುತ ಸಿಸ್ತಾದ ದೇವನ 7 ಉದರ ತ್ರಿರೇಖ ರೋಮಾಳಿನಾಭಿ ಪದುಮ ಶೋಭಿಪ ಗುಂಭಸುಳಿ ಮೇಲೆ ಉದಯಾರ್ಕ ಪೋಲುವ ಕಲೆ ಇಂದ ಸದಮಲಾಂಬರಪಟಾವಳಿ ಆಹಾ ಬಿದುರಶೋಭಿüತ ಮಹಾಚÀದುರದೊಡ್ಯಾಣವು ಪದಕ ಮುತ್ತಿನ ತುದಿ ವಿಧವಿಧ ಪೊಳೆವೋದು 8 ರಂಭೆ ಪೋಲುವ ಊರುಸ್ತಂಭ, ಇಂದು ಡಿಂಬ ಭಕ್ತ ಕ ದಂಬ ಮೋಹಿಪ ವಿಡಂಬ ಆಹಾ ಅಂಬುಜಾಸನಪಿತನ ತುಂಬಿದ ಮೀನ್ಜಂಘ ನಂಬಿದ ಜನರನ್ನ ಇಂಬಾಗಿ ಸಲಹೋನಾ 9 ಪರಡೆರಡು ಮಾಣಿಕ್ಯಾವರಣ, ಪೊಳೆವ ಕಿರುಗೆಜ್ಜೆನೂಪುರಾಭರಣ ಇಟ್ಟು ಮೆರೆವೊ ಗಂಗೆಯ ಪೆತ್ತ ಚರಣ ಯುಗ ನಿರುತ ಭಜಿಪರೊಳತಿ ಕರುಣ ಆಹಾ ಮರೆಯದೆ ಮಾಡುತ ಪರಿಪರಿ ಸೌಖ್ಯವ ಕರೆದುನೀಡುವನಹಿಗಿರಿವಾಸ ಶ್ರೀಶÀನ್ನ 10 ಪೋತೇಂದು ನಖಯುತ ಬೆರಳ ಸಾಲು ದೂತತತಿಗೆ ಸುಖಗಳನಿತ್ತು ನೀತಙÁ್ಞನ ಭಕ್ತಿಗಳ ನಿತ್ಯ ಪ್ರೀತಿಪಡೆಯೆ ಮುಕ್ತಿಗಳ ಆಹಾ ವಾತಗುರುಜಗನ್ನಾಥವಿಠಲನತಿ ನಿತ್ಯ 11
--------------
ಗುರುಜಗನ್ನಾಥದಾಸರು
ಮಂಗಳದೇವಿಯರರಸಗೆ ತುಂಗಮಹಿಮ ತ್ರಿವಿಕ್ರಮಗೆ ಅಂಗನೆಯರು ಸಿರಿರಂಗಗಾರತಿಯನೆತ್ತಿದರೆ ಪ. ಶ್ರೀರುಕುಮಿಣಿ ಮೊದಲಾದ ನಾರಿಯರೆಲ್ಲರು ನೆರೆದು ವಾರಿಜದಳಲೋಚನಗಾರತಿಯನೆತ್ತಿದರೆ 1 ಮುತ್ತಿನ ಹರಿವಾಣದಲಿ ರತ್ನದ ಸಾಲ್ಗಳ ನೆರಪಿ ಚಿತ್ತಜನಯ್ಯಗೆ ಮುತ್ತ್ತಿನಾರತಿಯನೆತ್ತಿದÀರೆ 2 ಚಿನ್ನದ ಹರಿವಾಣದಲಿ ರನ್ನದ ಸಾಲ್ಗಳ ನೆರಪಿ ಚೆನ್ನಕೇಶವನಿಗೆ ಚಿನ್ನದಾರತಿಯನೆತ್ತಿದರೆ 3 ಹೃದಯದ ತಮವ ಗೆಲುವಗೆ ಸದುಗತಿಪಥವ ತೋರುವಗೆ ಸುದತಿಯರೆಲ್ಲರು ಮಂಗಳಾರತಿಯನೆತ್ತಿದರೆ 4 ಚಂದದ ಭೂಷಣಮಣಿಯೊಳು ನಂದಾದೀಪಗಳೆಲ್ಲ ಹೊಳೆಯೆ ಒಂದನಂತವ ಮಾಡಿಕೊಂಬಗಾರತಿಯನೆತ್ತಿದರೆ 5 ಕಂದರ್ಪಕೋಟಿಲಾವಣ್ಯಗೆ ಸೌಂದರ್ಯವಾದ ಮೂರುತಿಗೆ ಇಂದುಮುಖಿಯರೆಲ್ಲ ಮಂಗಳಾರತಿಯನೆತ್ತಿದರೆ 6 ಅಗಣಿತ ಗುಣಸಾಗರಗೆ ನಿಗಮವಂದಿತ ವೈಭವಗೆ ಅಘಕುಲದೂರಗೆ ಮಂಗಳಾರತಿಯೆನೆತ್ತಿದರೆ 7 ನಳಿತೋಳ್ಗಳ ನಸುನಗೆಯ ಹೊಳೆವ ಕಡಗ ಕಂಕಣದ ಸುಲಲಿತ ಕಾಂತಿಗೆ ಮಂಗಳಾರತಿಯೆತ್ತಿದರೆ 8 ಶೇಷವಂದಿತಪದಗೆ ಸುರೇಖಾದಿಗಳೊಡೆಯನಿಗೆ ಭಾಸುರಸುರಮಯಪೀಠಗಾರತಿಯನೆತ್ತಿದರೆ9 ಶ್ರೀಸತಿಯಪ್ಪಿಕೊಂಡಿಪ್ಪಗೆ ವಾಸುದೇವಾದಿವಿಗ್ರಹಗೆ ಕೇಶವ ನಾರಾಯಣಗಾರತಿಯನೆತ್ತಿದರೆ 10 ನಿಖಿಳ ಖಳರ ಸೀಳ್ದನಿಗೆ ಅಕುತೋಭಯನಿಗೆ ಮಂಗಳಾರತಿಯನೆತ್ತಿದರೆ 11 ಕೂರ್ಮ ವರಾಹನಿಗೆ ಕುತ್ಸಿತರೊಲ್ಲದ ಹರಿಗೆ ಚಿತ್ಸುಖರೂಪಗೆ ಮಂಗಳಾರತಿಯನೆತ್ತಿದರೆ12 ಶಂಕೆಯಿಲ್ಲದ ಹಯವದನಗೆ ಕಿಂಕರವರದ ಶ್ರೀಹರಿಗೆ ಪಂಕಜಮುಖಿಯರು ಮಂಗಳಾರತಿಯೆತ್ತಿದರೆ 13
--------------
ವಾದಿರಾಜ
ಶೌರಿ ಪ ನಂದವ ಸೇವಕ ಬೃಂದ ತೋರಿ ಅ.ಪ ಕುಂದಮುಕುಳದಿಂದಾ ಕುಮುದ ಸುಗಂಧಿಯಗಳಿನಿಂದಾ ಕೆಂದಾವರೆ ಶ್ಯಾವಂತಿಗೆ ಜಾಜಿಯಿಂದ ರಚಿಸಿ ಸೊಗ ಸಿಂದಲಿ ಮೆರೆಯುವ 1 ಸ್ವಸ್ತಿಕಾದಿ ಬಹು ಚಿತ್ರದಿ ಶೋಭಿಪ 2 ಸೂರ್ಯ ಶಶಾಂಕ ಸುರೇಖೆಗಳಾ ಶಂಖ ಚಕ್ರ ಬಿರುದಾಂಕಿತ ದಿವ್ಯ ವಿಟಂಕದಿಂದ ಬಲು ಬಿಂಕದೊಳೆಸೆಯುವ3 ಕೋಟೆಯತೆನೆಗಳಲಿ ದಿವ್ಯವಧೂಟಿಯರೊಲವಿನಲಿ ನಾಟಕ ರಚನೆಯ ಪಾಠಕರಂದದಿ ನೋಟಕರಿಗೆ ಬಹು ದೀಟಿಯಲಿ ತೋರುವ 4 ಶಾರದಾಭ್ರನೀಲ ಶರೀರದಿ ಹೈರಣ್ಮಯ ಚೇಲಾ ಹಾರಮಕುಟ ಕೇಯೂರ ಕಟಕಮಂ ಜೀರಭೂಷಣೋದಾರ ವಿಹಾರ 5 ಮಂಗಳರವÀದೊಳಗೆ ಶಂಖ ಮೃದಂಗ ಧ್ವನಿಯೊಳಗೆ ಸಂಗತ ಸುರವಾರಾಂಗನೆಯರು ಗಾನಂಗಳಿಂದ ನಾ ಟ್ಯಂಗಳ ರಚಿಸಲು 6 ವರವಿಪ್ರರು ಪೊಗಳೆ ಛತ್ರಚಾಮರಗಳ ನೆಳಲೊಳಗೆ ಪರಿಪರಿ ಜ್ಯೋತಿಗಳೆಸೆಯಲು ಪುಲಿಗಿರಿನ ವರದವಿಠಲನು ವರಗಳ ಬೀರುತ 7
--------------
ವೆಂಕಟವರದಾರ್ಯರು
ಶೌರಿ ಪ ಬೃಂದಾರಕವರದಿಂದ ಶೌರಿಯಾನಂದವ ಸೇವಕ ಬೃಂದಕೆ ತೋರಿ ಅ.ಪ. ಕುಂದಮುಕುಳದಿಂದಾ ಕುಮುದಸು ಗಂಧಿಯಗಳಿನಿಂದಾ ರಚಿಸಿಸೊಗಸಿಂದಲಿ ಮೆರೆಯುವ 1 ಸುತ್ತಿರೆ ಹಸ್ತಿಗಳೂ-ಕೂರ್ಮನು ಪೊತ್ತಿರೆ ಮಧ್ಯದೊಳು ಮತ್ತೆಫಣೀಂದ್ರನ ಮಸ್ತಕದಲ್ಲಿರೆ ಸ್ವಸ್ತಿಕಾದಿಬಹು ಚಿತ್ರದಿ ಶೋಭಿಪ 2 ಪಂಕಜ ಚಿಹ್ನೆಗಳಾ-ಸೂರ್ಯಶ-ಶಾಂಕ ಸುರೇಖೆಗಳಾ ಬಹುಬಿಂಕದೊಳೆಸೆಯುವ3 ಕೋಟೆಯ ತೆನೆಗಳಲಿ ದಿವ್ಯವಧೂಟಿಯರೊಲವಿನಲಿ ಬಹುದೀಟಿಲಿ ತೋರುವ 4 ಶಾರದಾಭ್ರನೀಲ-ಶರೀರದಿ- ಹೈರಣ್ಮಯಚೇಲಾ ಜೀರಭೂಷಣೋದಾರ ವಿಹಾರ 5 ಮಂಗಳರವದೊಳಗೆ-ಶಂಖಮೃದಂಗ-ಧ್ವನಿಮೊಳಗೆ ನಾಟ್ಯಂಗಳರಚಿಸಲು6 ವರ ವಿಪ್ರರು ಪೊಗಳೆ-ಛತ್ರಚಾಮರಗಳ ನೆಳಲೊಳಗೆ ವರದವಿಠಲನು ವರಗಳ ಬೀರುತ 7
--------------
ಸರಗೂರು ವೆಂಕಟವರದಾರ್ಯರು