ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ಕಾರಣ ಮೊಗವ ತಿರುಗಿಹಿದ್ಯೊ ಪೇಳು ಭೂವರಹ ಸ್ವಾಮಿ ಪುಷ್ಕರಣಿ ತೀರಗನೆ ಪ ರಥ ಸಮೂಹಗಳೇರಿ ನೀ ಪ್ರಕಾಶಿಪ ಬಗೆಯೇ ಸತಿಯ ಲಾವಣ್ಯಾತಿಶಯವ ನೋಡುವ ಬಗೆಯೋ ಮಿತಿಯಿಲ್ಲದಸುರರ ಉಪೇಕ್ಷೆ ಮಾಡುವ ಬಗೆಯೋ ಪತಿತ ಪಾವನ ಪೂರ್ಣಕಾಮ ನಿನಗೆ ನುತಿಸಿ ಬಿನ್ನೈಸುವೆನು ಪೇಳೋ ಗುಣಧಾಮಾ 1 ಭಜಕರೆನ್ನನು ಬಿಡರೆಂಬ ಮನಸಿನಾ ಬಗೆಯೇ ಅಜಭವಾದಿಗಳ ಸಂಸ್ತುತಿಗಳಾಲಿಪ ಬಗೆಯೋ ರಜನೀಚರರ ಸದೆಯ ನಾಟ್ಯವಾಡುವ ಬಗೆಯೇ ಭುಜಗ ಭೂಷಣ ಪೂಜ್ಯ ಚರಣ ತ್ರಿಜಗದ್ವಿ ಲಕ್ಷಣ ಸುರೂಪಾ ನಿರ್ಲೇಪ 2 ಅನುಗರೊಶ ನೀನಾದಡೆಮ್ಮನ ಮರೆವರೆಂದು ವನತಿಗಾರರಿಯದಂತುಪದೇಶಿಸು ಬಗೆಯೋ ಘನಲಕ್ಷಣ ಮುಖಾಬ್ಜವನು ಚುಂಬಿಸುವ ಬಗೆಯೋ ವನಜ ಸಂಭವನ ನಾಸಜನೆ ಜಗ ಜ್ಜನಕ ಜಗನ್ನಾಥವಿಠ್ಠಲ ಕೃಪಾಸಾಂದ್ರಾ 3
--------------
ಜಗನ್ನಾಥದಾಸರು
ಏಸು ರೂಪಾಯ್ಗೆ ಕೊಂಡು ಕೊಂಡೆವ್ವಾ ಒಸರುವ ಗಡಿಗೆ ಪ ಏಸುರೂಪಾಯ್ಗೆ ಕೊಂಡುಕೊಂಡೆವ್ವಾ ಏಸುರಾಪಾಯ್ಗೆ ಕೊಂಡುಕೊಂಡಿ ಹೇಸಿಕೊಳ್ಳದೆ ಇದನು ನೀನು ಬೇಸರಿಲ್ಲದೆ ತೊಳೆಯುತಿದ್ದಿ ವಾಸನಿಕ್ಕಿ ನಾರುತಿದೆ ಅ.ಪ ಎಂಥ ಕುಂಬಾರಿದನು ಮಾಡಿದ ಎಷ್ಟುಕಾಲದಿ ಕುಂತು ಇದಕೆ ಶೋಧ ಹುಡುಕಿದ ಅವನು ದಾವ ಸಂತೆಯೊಳಗೆ ಕುಂತು ಮಾರಿದ ಕೊಂಡೇನುತಿಳಿದ ತಂತು ತಿಳಿಯದೆ ಹೊತ್ತುಕೊಂಡು ನಿಂತಿಯಿದರ ಖ್ಯಾಲಿನೊಳಗೆ ಸಂತೆ ತೀರಿಹೋಗಲಾಗೇನಂತ ಹೇಳುವಿ ಕೇಳುವವರಿಗೆ 1 ಕಷ್ಟದ್ಹೊತ್ತು ಕುದಿಯುತಿದ್ದ್ಯಲ್ಲ ಹುಚ್ಚು ಎಷ್ಟುದುಡಿದು ತುಂಬುತಿದ್ದ್ಯಲ್ಲ ನಿಲ್ಲದಿನಿತು ಅಷ್ಟು ಒಸರಿ ಬಸಿಯುತಾದಲ್ಲ ಖೂನ ನಿನಗಿಲ್ಲ ನಟ್ಟನಡುವೆ ಗಂಟುಬಿದ್ದು ಕೊಟ್ಟು ನಿನಗೆ ಕಷ್ಟ ವಿಧ ವಿಧ ಕಟ್ಟ ಕಡೆಗೆ ಕೈಯ ಬಿಟ್ಟು ಕೆಟ್ಟು ಮಣ್ಣು ಕೂಡುತಾದೆ 2 ಮಸಣಿಬುದ್ಧಿ ನೀಗಿ ಕೇಳಮ್ಮ ನಿಜವನಿರುತ ಕುಶಲರ್ಹೇಳುವ ಮಾತು ತಿಳಿಯಮ್ಮ ಮುಂದೆ ಮಹಕಾಲ ನಿಶೆಯು ಒದಗುತದೆ ತಂಗೆಮ್ಮ ಪುಸಿಯಲ್ಲವಮ್ಮ ಮಸಿಯ ಗಡಿಗ್ಹಿಡಿದು ಹಸನಮಾಡಿ ವಸುಧೆಗಧಿಕ ಶ್ರೀರಾಮಪಾದ ಕುಸುಮಕರ್ಪಿಸಿ ಧನ್ಯಳಾಗಿ ಅಸಮಮೋಕ್ಷಪದವಿ ಪಡೆಯೆ 3
--------------
ರಾಮದಾಸರು