ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಂದದೆಮ್ಮನು ಕರುಣದಿಂದ ಪೊರೆವರ ಪ ನಂಬಿ ತುತಿಸುವಾ ಜನ ಕದಂಬಕಿಷ್ಟವ ತುಂಬಿ ಕೊಡುವರೋ ಅನ್ಯ ಹಂಬಲೀಯರು 1 ವಿನುತ | ಮೂಲ ರಾಮನಾ ಶೀಲ ಸದ್ಗುಣ ನುತಿಪ ಮೇಲು ಭರತನಾ 2 ಜಲಧಿ ಚಂದಿರಾ ಒಲಿದು ಭಕ್ತಾರಾ ಪೊರೆವ ಸುಲಭ ಸುಂದರಾ 3 ಗುರು ಸುಧೀಂದ್ರರಾ ವಿಮಲ | ಕರಜರೆನಿಪರಾ ಸ್ಮರಿಸಿ ಸುರುಚಿರಾ ವಿಮಲ ಚರಣ ಪುಷ್ಕರಾ 4 ಭೂತ ಭಾವನಾ ಜಗನ್ನಾಥ ವಿಠಲನಾ ಪ್ರೀತಿ ಪಾತ್ರನಾ ನಂಬಿರೀತನೀಕ್ಷಣಾ 5
--------------
ಜಗನ್ನಾಥದಾಸರು
ಜಲಜಾಪ್ತ ಸಂಕಾಶ ಲಲಿತ ಸನ್ಮøದುಹಾಸ ಕಲಿಕಲುಷ ವಿಧ್ವಂಸ ಪರಮಹಂಸ ಶರಣಜನ ಸಂರಕ್ಷ ಸುರವಿರೋಧಿ ವಿಪಕ್ಷ ಧರ್ಮರಕ್ಷಣ ದೀಕ್ಷ ಶ್ರೀಕಟಾಕ್ಷ ಸರಸಿಜಾಯತನಯನ ಶರದಿಂದುನಿಭವದನ ದುರುಳ ಮ್ಲೇಂಛನಿಹನನ ತುರಗವದನ ಧುರಧೀರ ಶ್ರುತಿಸಾರ ಸುರುಚಿರಾಂಗದ ಹೀರ ವರಹಾರ ಕಂಧರ ಭಯವಿದೂರ ಕಮಲಾಸನಾದಿ ಸಂಸೇವ್ಯಮಾನ ಅಮರಸಂಕುಲತೋಷ ದಿವ್ಯವೇಷ ವಿಮಲ ಶೇಷಾದ್ರೀಶ ಶ್ರೀನಿವಾಸ
--------------
ನಂಜನಗೂಡು ತಿರುಮಲಾಂಬಾ
ನರಜನ್ಮವನು ಕೊಟ್ಟು ಸಲಹಿದೆ ಯೆನ್ನನು ಕೊರತೆಯೇನಿಲ್ಲವೋ ಗೋವಿಂದಾ ಪ ಉರುತರ ಜನ್ಮವ ಸುರುಚಿರಾಂಗಗಳನ್ನು ಅರಿವು ಇಂದ್ರಿಯಗಳ ಸ್ಮರಣೆಯಿಂ ಕೂಡಿದ ಅ.ಪ ನಿನ್ನಧ್ಯಾನವ ಗೈವವೊಲೆನ್ನ ಈ ರಸನೆಯು ನಿನ್ನ ಮೂರ್ತಿಯ ನೋಡಲಿ ಈ ನೇತ್ರಾ ನಿನ್ನ ಪೂಜಿಸೆ ಹಸ್ತ ನಿನ್ನ ಚರಿತೆಗೆ ತರ್ಕಾ ನಿನ್ನ ನಮಿಸಲು ಶಿರವು ನಿನ್ನಾಲಯಕೆ ಕಾಲು 1 ನಿನ್ನ ಪಾದದ ತುಳಸಿಯನ್ನು ಘ್ರಾಣಿಸ ಇನ್ನೇನು ಬೇಡವಯ್ಯ ಸನ್ನುತಾಂಗ ಗೋಪಾಲ 2 ಧನಕನಕಾಂಬರ [ವಸ]ನದ ಧರ್ಮ ಮೋಕ್ಷದೊ ಳಿನಿತಾಸೆಯೆನಗಿಲ್ಲ ಕೇಳಯ್ಯ ಜನುಮ ಜನುಮದೆ ನಿನ್ನ ಘನಪುಣ್ಯ ನಾಮವ ನೆನೆವ ಭಕ್ತಿಯು ಮಾತ್ರ ಮನದೆ ನೆಲೆಗೊಳಿಸಯ್ಯ 3 ದೇವದೇವನೆ ನಿನ್ನ ಸೇವಕರಿಗೆ ಯೆನ್ನ ಸೇವಕನೆನಿಸದೆ ಬಿಡಬೇಡಾ ದಾಸರಸೇವಿಸಲೆನ್ನ ಜೀವ ತುಡಿಯುವುದೊ ವಿಸಲೆ ದಾಸರದಾಸ ಶ್ರೀ ಮಾಂಗಿರಿಯರಸ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪೊಗಳಲರಿಯೆನೆ ಲೋಕಮಾತೇ ನಿನ್ನ ಸೊಗಸಾದ ರೂಪುರೇಖೆಯ ಸಿಂಧುಜಾತೇ ನಿಗಮವಿಖ್ಯಾತೇ ಪ ಅಳಕ ನಿಚಯವು ಇಂದ್ರನೀಲಗಳು ತುಂಬಿಗಳು ತಳಪುಗಳು ಯೆಸೆವ ನಳಿನಗಳು ಬಾಳೆಗಳು ಚೆಲುವಹಿ ಸುನಾಸಿಕವು ಅಲಕೆ ಸುಮವು ಚಂಪಕವು ಅಲರ್ವಿಲ್ಲಿನ ಧನುವೋ ಪುರ್ಬುಗಳೋ ಪೊಳೆವರದನದಸಾಲುಗಳುಕಳಸಗಳೋ ಕುಂಡಲಗಳೋ ವಿಲಸದಧರವು ಬಿಂಬಫಲವೋ ನವವಿದ್ರುಮವೋ ಅಳವಟ್ಟ ಸವಿನುಡಿಯು ಗಿಣಿಯ ಸೋಲಿಪ ಪರಿಯೋ ಕಳೆ ಪೆರ್ಚಿದಾನನವೋ ಶಶಿಯೋ ಭಳಿರೆ ಮಳಯಜಗಂಧಿನಿ ಮಹೇಶರಿಪು ಜನನೀ 1 ಗಳವು ಶಂಖವು ಮೆರೆವ ಕದಪುಗಳು ಮುಖರಗಳು ಕುಸುಮ ಮಾಲೆಗಳು ಸುಲಲಿತವಯವವೋ ಲತಾವಳಿಗಳ ತರಂಗವೋ ತಳಿವ ಪೂಜಡೆಯೋ ಸುಲಿಪಲ್ಲವವೋ ತೊಳಗುವ ತೊಡೆಯೆನಲೋ ಸಲಿಲಜಾಗಾರೇ ಸಮ್ಮೋಹನಾಕಾರೇ ಸೌಂದರ್ಯಭರಿತೆ 2 ವರಜಂಘೆಗಳು ಪಂಚಶರನ ಶರಧಿಗಳೋ ಸರಸೀರುಹ ಕೆಂದಳಿರೋ ಚರಣಗಳು ನಖಗಳು ಸುರುಚಿರಾಂಬಕೀ ದಯಾಕಾರೇ ಶುಭಚರಿತೆ ವಿಖ್ಯಾತೆ ಪುರಹರ ಸುರೇಶ್ವರ ಸುಪೂಜಿತಾಂಘ್ರಿಸರೋಜೇ ಭಕ್ತ ಮಂದಾರೇ ವರವೇಲಾನಗರವಾಸಿ ವೈಕುಂಠಚನ್ನಿಗರಾಯನರಸಿ ಗುಣರಾಸಿ ದುರಿತಾಸಿ ನಮೋ ಪರಮಪದದಾಯಕಿಯೆ ಸೌಮ್ಯನಾಯಕಿಯೆ 3
--------------
ಬೇಲೂರು ವೈಕುಂಠದಾಸರು
ವನಜಾಕ್ಷಿ ಕೇಳೆನ್ನ ಮನದನ್ನನಂದವನು ಮನನಲಿದು ಪೇಳುವೆನು ಮಹಿಮೆಯನ್ನು ತುಚ್ಛಮಾಗಿರುತಿರ್ಪ ಕಚ್ಛಪಾಕಾರದೊಳು ಇಚ್ಛೆಗೊಂಡವನಿವನೆ ಮಚ್ಚನಯನೆ ಹೆಡ್ಡತನದಲಿ ಬಂದು ದೊಡ್ಡ ಮಡುವೊಳು ನಿಂದು ಗುಡ್ಡವನು ಪೊತ್ತಿಹನೆ ದಡ್ಡನಿವನೆ ಸುರುಚಿರಾಂಗವನಿಂತು ಮರೆಗೈದು ಮುಸುಕಿನಿಂ ಪರಮಸಂಭ್ರಮವಾಂತು ಮೆರೆಯುತಿಹನೆ ಕ್ಷೋಣಿಯೊಳಗಿಂತಹರ ಕಾಣೆನಿನ್ನು ಪ್ರಾಣೇಶನಾಗಿನಾಂ ಪಡೆದೆನಿವನಂ ಏಣಾಕ್ಷಿ ನಡೆದುದಿನ್ನಾಡಲೇನು ಜಾಣ ಶೇಷಾದ್ರೀಶನಾಣ್ಮನಹನು
--------------
ನಂಜನಗೂಡು ತಿರುಮಲಾಂಬಾ
ಸಿತಗಿರೀಶ ಶ್ರೀಪತಿಯೆ ಕಾಯೋ ಯನ್ನಾ | ಕರುಣಾರಸ ಪೂರ್ಣ ಪ ಭವ ಭಂಗಾ ಅ.ಪ. ವರುಷಾ | ಕಾಣಲಿಲ್ಲ ಹರುಷಾ ||ಇಂದಿರೇಶ ತವ ಚರಣ ಸನ್ನಿಕರ್ಷಾ | ಎಂದಾಗುದೊ ಶ್ರೀಶಾ ||ವಂದಿಸೂವೆನೊ ನಾನು ನಿನ್ನ ಅನಿಶಾ | ಶ್ವೇತಾದ್ರಿ ವಾಸಾ 1 ಕಮಲ ಕಾಂಬುವಂಥ ಹದನಾ | ತೋರಿಸೊ ಜಿತ ಮದನಾ 2 ಸುರುಚಿರಾಂಗ ಶ್ರೀ ಬಿಳಿಗಿರಿಯ ರಂಗಾ | ಎನ್ನಂತರಂಗಾ ||ಮುರ ವಿರೋಧಿ ಸುರ ಸಾರ್ವಭೌಮ ಹರಿಯೇ | ಕರಿರಾಜನು ಕರಿಯೇ ||ತ್ವರದೊಳುದಿಸ್ಯವನ ಕಾಯ್ದ ದೊರೆಯೇ | ಹೀಗೆನ್ನ ಪೊರೆಯೆ ||ಗುರು ಗೋವಿಂದ ವಿಠಲ ಶ್ರೀಹರಿಯೇ | ನಿನ್ನುಪಕೃತಿ ತಾ ಮರೆಯೆ 3
--------------
ಗುರುಗೋವಿಂದವಿಠಲರು
ಹರಿನಿನ್ನ ಕರುಣವಿರಾಲಾವ ಭಯವು ಸ್ಮರಣಿ ಮಾತ್ರದಿ ಸಕಲದುರಿತಗಳ ಪರಿಹರಿಪ ಪ ಸಣ್ಣ ವಯದಲಿ ಶ್ರೀ ಜಗನ್ನಾಥದಾಸಾರ್ಯ ಬನ್ನ ಬಡುತಿರೆ ವ್ಯಾಧಿ ಪೀಡೆಯಿಂದ ಘನ್ನ ಕರುಣಾಭ್ದಿ ಶ್ರೀ ಗೋಪಾಲದಾಸರಾ - ಬಿನ್ನಪವನಾಲಿಸಿ ರೋಗಮೋಚನ ಗೈದ 1 ದಾಸಕುಲರತ್ನ ಪ್ರಾಣೇಶ ದಾಸಾರ್ಯರ ಆಸುವಂಶದ ತರುಳ ರೋಗದಿಂದಾ ಯಾಸ ಬಡುವದು ಕೇಳಿ, ಆಶೆಯನೆ ತೊರೆದಿಹನು ನೀ ಸಲಹ ಬೇಕಯ್ಯಾ ಕರುಣದಿಂದಲಿ ನೋಡಿ 2 ವರದೇಂದ್ರ ಗುರುವರರ ಸುರುಚಿರಾಲಯದಲ್ಲಿ ಇರಳ್ಹಗಲು ನಿಮ್ಮ ನಾಮ ಸ್ಮರಿಸುವಂಥ ಪರಿ ಪೀಡಿಸುವದುಚಿತವೇನೊ ಶ್ರೀ ಹರಿ ವಿಚಾರಿಸಿ ನೀನೆಸಿದಯದಿಂದ ನೋಡೊ 3 ವಾಸವಾದ್ಯಮರನುತ ವಾಸುದೇವನೆ ನೀನು ಈ ಸಮಯದೊಳಗಿವನ ಕರುಣದಿಂದ ಪೋಷಿಸಲು ನಿನ್ನ ಪೊಂದಿರುವ ಸದ್ಭಕ್ತರ ದಾಸನೆಂದೆನಿಸಿ ಜೀವಿಸಲಿಯನವರತ 4 ನಿನ್ನನೇ ನಂಬಿರುವೆ ನಿನ್ನನೇ ಪ್ರಾರ್ಥಿಸುವೆ ಧನ್ವಂತ್ರಿ ನೀನೆನ್ನ ಮೊರೆಯಾಲಿಸೊ ಬನ್ನ ಬಡಿಸಲು ಸಲ್ಲ ಇನ್ನು ನೀ ಕರುಣಿಪುದು ವರದೇಶವಿಠಲ 5
--------------
ವರದೇಶವಿಠಲ