ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ಧರಣಿಯೊಳ್ ಹದಿನಾರು ಸಾವಿರ ಮಂದಿ ಆಳುತ ದ್ವಾರಕೆಯಲ್ಲಿ ವಿನೋದದಿ ಕುಳಿತಿದ್ದ ಹರಿಯು 1 ಅಂಬುಜೋದ್ಭವನ ಅಂಕದಲುದಿಸಿದ ಸುತ ಚೆಂದ ಚೆಂದ ವೀಣೆ ಪಿಡಿದು ಕಂದರ್ಪಪಿತ (ನಲ್ಲಿಗೆ) ನಲಿನಲಿದಾಡುತ ಬಂದ ನಾರಂದ ಹರುಷದಲಿ2 ಬಂದ ನಾರಂದನ ಕಂಡು ಕಮಲನಾಭ ಚೆಂದದಿಂದಲಿ ಅಘ್ರ್ಯ ಪಾದಪೂಜೆಯ ಮಾಡಿ ನಾ- ರಂದಗೆ ಎರಗಿದನಾಗ3 ದೇವಾಧಿದೇವನೆ ದೇವಲೋಕದಿ ಸುತ್ತಿ ಈ ಪಾರಿಜಾತವ ತಂದೆ ದೇವಿ ರುಕ್ಮಿಣಿಗೀಗ ಮುಡಿಸೆಂದು ನಾರಂದ ಸ್ವಾಮಿಯ ಚರಣಕ್ಕರ್ಪಿಸಿದ 4 ತಕ್ಷಣದಿ ಜಗನ್ಮಾತೆ ಮಾಲಕ್ಷುಮಿ ಸಾಕ್ಷಾತ ಶ್ರೀನಾರಾಯಣನು ವಕ್ಷಸ್ಥಳದಲಿ ಹೊಂದಿರುವ ರುಕ್ಮಿಣಿಯನು ಸ್ತೋತ್ರ ಮಾಡಿದನು ನಾರದನು 5 ಕಡಲಶಯನ ಕಡೆಗಣ್ಣ ನೋಟಗಳಿಂದ ಕಡುಮುದ್ದು ಸುರಿವೊ ರುಕ್ಮಿಣಿಯ ಬಡನಡುವಿನ ಭಾಮಿನಿರನ್ನೆ ಬಾರೆಂದು ತೊಡೆಯ ಮ್ಯಾಲಿಟ್ಟ ಶ್ರೀಕೃಷ್ಣ 6 ದುಂಡುಮಲ್ಲಿಗೆ ಗೊಂಡ್ಯ ಚೌರಿ ರಾಗಟೆ ಜಡೆ- ಅಂಗನೆ ರುಗ್ಮಿಯಾಲಿಂಗನೆ ಮಾಡುತ ರಂಗ ತಾ ಮುಡಿಸಿದ ಸತಿಗೆ 7 ಸರಿಸವತೇರ ಬಿಟ್ಟು ಸುರಪಾರಿಜಾತವ ಗರುವಿಕೆಯಿಂದ ನೀ ಮುಡಿದೆ ಹರದಿ ಸತ್ಯಭಾಮೆ ಕೇಳಿ ಮುನಿದರಿನ್ನು ಅರಿಯೆನು ನಾ ಇದಕೆ ಉಪಾಯ 8 ಗಾಡಿಕಾರನು ಕೃಷ್ಣ ಆಡುವೊ ಮಾತನು ಕೇಳಿ ರುಕ್ಮಿಣಿ ನಗುತಿರಲು ಓಡುತ ಬಂದು ನಾರದ ಸತ್ಯಭಾಮೆ- ಗಲ್ಲದ ವಾರ್ತೆಗಳರುಹಿದನು 9 ಅಲ್ಲಿಂದ ದೇವಲೋಕವ ಸುತ್ತಿ ತಂದೇನೆ ಚೆಲ್ವೆನಗೆ ತಕ್ಕ ಕುಸುಮ ಗೊಲ್ಲ ಕೃಷ್ಣನ ಕೈಯಲ್ಲಿ ಕೊಟ್ಟರೆ ತನ್ನ ನಲ್ಲೆ ರುಕ್ಮಿಣಿಗೆ ಮುಡಿಸಿದನು 10 ಕೇಳುತ ಭಾಮೆ ತಲ್ಲಣಿಸಿ ಕೋಪಗಳಿಂದ ಹೇಮಮಾಣಿಕ್ಯದ್ವಜ್ರಾಭರಣ ಹಾರ ಪದಕ ಕಠಾಣಿಮುತ್ತನೆ ಚೆಲ್ಲಿ ಭೂಮಿಲಿ ಬಿದ್ದೊ ್ಹರಳಿದಳು 11 ಮಲ್ಲಿಗೆ ದವನ ಕ್ಯಾದಿಗೆ ಶಾವಂತಿಗೆ ಬಿಟ್ಟು ಒಲ್ಲೆನೆಂದೊರೆಸಿ ಕಸ್ತೂರಿಯ ವಲ್ಲಭನೊಲ್ಲದೀ ಸೊಗಸ್ಯಾತಕೆನುತಲಿ ಗಲ್ಲದ್ವಿಳ್ಯವನುಗುಳಿದಳು 12 ಸರ್ಪನಂದದಿ ಉಸುರ್ಹಾಕುತ ಭಾಮೆ ತಾ ನೇತ್ರದಿ ಜಲವ ಸುರಿಸುತಲಿ ಸರ್ಪಶಯನನೊಲ್ಲದೀ ದೇಹವ್ಯಾಕೆಂದು ಪಟ್ಟೆ ಮಂಚದಲೊರಗಿದಳು 13 ನಿಂತು ನೋಡುತ ಸತ್ಯಭಾಮೆ ಮಾಡುವೊದು ಇ- ನ್ನೆಂತು ಮಾಡಲಿಯಿದಕೆಂದು ಅಂತರಂಗದಲಿ ಯೋಚನೆ ಮಾಡಿ ನಾರಂದ ಶ್ರೀ- ಕಾಂತನ ಮನೆಮಾರ್ಗ ಹಿಡಿದ 14 ತಿರುಗಿ ಬಂದ್ಹರಿಯ ಮುಂದರುಹಿದ ನಾರಂದ ತೊರೆವೋಳು ತನ್ನ ಪ್ರಾಣವನು ಮರುಗುತ ಸೊರಗಿ ಬಿದ್ದಿರುವೊ ಭಾಮೆಯ ನೋಡಿ ಕರುಣವಿಲ್ಲೇನೊ ಶ್ರೀ ಕೃಷ್ಣ 15 ಮುನಿಯ ಮಾತನು ಕೇಳಿ ಮುಗುಳು ನಗೆಯ ನಕ್ಕು ಪರಿ ಬವಣೆಗೆ ಒಳಗಾದೆ ಧರೆಯ ಒಳಗೆ ಇಬ್ಬರ್ಹೆಂಡರಾಳುವೋರಿನ್ನು ಪರಮ ಮೂರ್ಖರು ಅವರೆಂದ 16 ಹೊದ್ದ ಪೀತಾಂಬರ ಅಲೆಯುತ ಶ್ರೀಕೃಷ್ಣ ಹದ್ದನೇರದೆ ನಡೆಯುತಲಿ ಮುದ್ದು ರುಕ್ಮಿಣಿಯ ಮುಂದಕೆ ಕರೆದ್ಹೇಳದೆ ಎದ್ದು ಬಂದನು ಭಾಮೆಮನೆಗೆ 17 ಅರ್ಕನಂತ್ಹೊಳೆಯುತ ಹೊಕ್ಕ ತನ್ನರಮನೆ ಕಕ್ಕಬಿಕ್ಕ್ಯಾಗಿ ನೋಡುತಲಿ ದಿಕ್ಕು ದಿಕ್ಕಿಗೆ ಬಿದ್ದಾಭರಣವಾರಿಸಿ ರತ್ನ ದೆಕ್ಕಿಲೇ(?) ಬಂದು ತಾ ಕುಳಿತ 18 ಮಿಂಚು ಸೂರ್ಯಗೆ ಮಿಗಿಲಾಗಿದ್ದ ಮುಖ ಬಾಡಿ ಸಂಪಿಗೆ ಸರವ ಈಡ್ಯಾಡಿ ಚಿಂತೆಮಾಡುವರೆ ಚಿನ್ನದ ಗೊಂಬೆ ಏಳೆಂದು ಮಂಚದ ಮ್ಯಾಲೆ ತಾ ಕುಳಿತ 19 ಬೆವರಿದ್ದ ಮುಖವ ಮುಂಜೆರಗಿಲಿಂದೊರೆಸುತ ಹ- ರವಿದ ಹಾರ ಹಾಕುತಲಿ ಪರಮ ಪ್ರೀತಿಲಿ ತನ್ನ ಕರಗಳಿಂದ್ಹಿಡಿದೆತ್ತೆ- ನ್ನರಗಿಳಿ ಏಳೆಂದೆಬ್ಬಿಸಿದ 20 ಸಿಟ್ಟಿಲಿಂದೆದ್ದು ಶ್ರೀ ಕೃಷ್ಣನ ಒಳೆಯಿಕ್ಕೆ ಬಿಟ್ಟವರಾರು ಈಗೆನುತ ದೃಷ್ಟಿ ತೆಗೆದು ಕೋಟಿಸೂರ್ಯ ಪ್ರಕಾಶನ ಇ- ಕ್ಕದ್ಹಾಗೆವೆಯ ನೋಡಿದಳು 21 ಇಷ್ಟು ಕ್ರೋಧಗಳ್ಯಾತಕೀ ಚಾಡಿ ನಾರಂದ ಹಚ್ಚಿ ಹೋದನೆ ಕದನವನು <ಈಔಓಖಿ size=
--------------
ಹರಪನಹಳ್ಳಿಭೀಮವ್ವ
ನೋಡಿ ದಣಿಯವೆನ್ನ ಕಂಗಳು ಈ ಸೋದೆಲಿರುವ ಈಡು ಇಲ್ಲದುತ್ಸವಂಗಳ ಬೇಡಿದವಗೀ ಧ್ವಜಬುತ್ತಿ (?) ನೀಡಿ ದಯಸೂರ್ಯಾಡುವರ ಪ ಯತಿಗಳ ಸಮೂಹವೆಷ್ಟು ಮಿತಿಯಿಲ್ಲದ ಬ್ರಾಹ್ಮಣ್ಯವೆಷ್ಟು ಮತಿಹೀನರಿಗೆ ಗತಿಯ ಕೊಡುವ ಪೃಥಿವಿಗಧಿಕ ಗುರುಗಳನ್ನು 1 ಭೂತನಾಥಗೆರಗಿ ನಿಂತು ವಾತಸುತಗೆ ಕೈಯ ಮುಗಿದು ಆತ ನಾರಾಯಣಭೂತನೆಂಬೋ ನೀತವಾದ ದೂತನಂತೆ2 ಕೊಳಲ ಕೃಷ್ಣ ಧವಳಗಂಗಾ ಹೊಳೆಯೊ ಮುತ್ತಿನ ಗದ್ದಿಗೆ ಮ್ಯಾಲೆ ಕಳೆಯು ಸುರಿವೊ ಕಮಲಪಾದ ಇಳೆಯೊಳ್ ಇಲ್ಲೀಳಿಗೆಯ ಪೂಜೆ 3 ಸನಕಾದಿ ಸುರೇಶನೆದುರು ಕಣಕ ಹ್ವಾಲಗ (ಹೋಳಿಗೆ?)ವನ್ನೆ ಮಾಡಿ ಮನಕೆ ಬಂದ ಮೃಷ್ಟಾನ್ನವನು ಜನಕೆ ತೃಪ್ತಿಬಡಿಸುತಿರಲು 4 ಸುತ್ತ ವೃಂದಾವನದ ಮಧ್ಯೆ ಉತ್ತಮರಾದ ವಾದಿರಾಜರು ಸತ್ಯವತಿಯ ಸುತರ ಎದುರು ನಿತ್ಯಾನಂದಭರಿತರಾಗಿ 5 ಸೃಷ್ಟಿಗಧಿಕಾನಂತಾಸನವು ಶ್ವೇತದ್ವೀಪ್ವೈಕುಂಠವೆಂಬೊ ಮುಕ್ತಸ್ಥಳದಲ್ವಾಸವಾದ ಲಕ್ಕುಮಿ ತ್ರಿವಿಕ್ರಮನ 6 ನೇಮನಿಷ್ಠ ಸೇವಕ ಜನಕೆ ಬೇಡಿದ ಇಷ್ಟಾರ್ಥ ಕೊಡುವೊ ಭೀಮೇಶಕೃಷ್ಣ ದಯದಿ ನೋಡಿದೆ ಹಯವದನನಂಘ್ರಿ 7
--------------
ಹರಪನಹಳ್ಳಿಭೀಮವ್ವ