ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಡದೆ ಬೇಡದೆ ಕಂಗೆಡದೆ ಕೋ ಮನವೆ ನಿಜ ಸುಭಿಕ್ಷ ಗುರು ಸಂರಕ್ಷ ಧ್ರುವ ಅಳುಕದೆ ಬಳುಕದೆ ತುಳುಕದೆ ನಿಂದು ತಿಳಕೊ ನಿಜಸುಭಿಕ್ಷೆ ಕೊಳಕ ಹುಳಕ ಮೊಳಕನೆಂದು ಮಾಡದಿರುಪೇಕ್ಷ ನಾಳೆ ನಾಡದಿಂದ್ಯಾಗೆಂದು ಕಲ್ಪಿಸಿಕೊಬ್ಯಾಡಪೇಕ್ಷ 1 ಲಜ್ಜೆ ಅಳಿದು ಗುರು ಶರಣವ ಹೊಕ್ಕು ಸರಕ್ಕನೆ ಕೋ ಸುಭಿಕ್ಷೆ ಹೆಜ್ಜೆಜ್ಜಿಗೆ ಸುರಿಮಳೆಗರೆವುತಲದೆ ಗುರುಕರುಣದಕಟಾಕ್ಷ ಫಜ್ಜಿಗೆ ಬಂದುವರಿತ ಮ್ಯಾಲೆ ಕಂಜನಾಭನೆ ಸುಪಕ್ಷ 2 ಬೇಡಿಸಿಕೊಳ್ಳದೆ ನೀಡುತಲಾನೆ ಭಾಸ್ಕರ ಗುರು ಸಮರ್ಥ ನೀಡಿ ನಿಜನಿಧಾನವ ಕೊಟ್ಟು ಮಾಡುತಲಾನೆ ಹಿತಾರ್ಥ ಬಡವರಾಧಾರೆನ್ನೊಡೆಯನೆ ಜಗತ್ರಯಕ್ಕೊಬ್ಬನೆ ಕರ್ತ ಮೂಢ ಮಹಿಪತಿಗನುದಿನ ಬಿಡದೆ ನೀಡುತಾನೆ ಸಕಲಾರ್ಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೆನೆ ಕಂಡ್ಯ ಮನವೆ ಸದ್ಗುರು ದಿವ್ಯಪಾದ ಖೂನ ತೋರುವದಿದೆ ನಿಜಬೋಧ ದ್ರುವ ನೆನೆಯಬೇಕೊಂದೆ ಭಾವದಿಂದೆ ತಾನೆತಾನಾಗುವ ಗುರು ತಾಯಿತಂದೆ 1 ಘನ ಸುಖ ಕೊಡುವ ಅನುಭವದಲಿಡುವ ಜನನ ಮರಣದ ಬಾಧಿಯ ಮೂಲಗಡೆವ 2 ಗುರುವಿಂದಧಿಕ ಬ್ಯಾರಿಲ್ಲ ಸುಖ ತಿರುಗಿ ನೋಡಲು ತನ್ನೊಳಾದ ತಾ ಕೌತುಕ 3 ಇದೆ ನಿಜಬೋಧ ಸ್ವಸುಖದ ಭೇದಿಸಿದವರಿಗಿದೆ ಸುಪ್ರಸಾದ 4 ಗುರುತಾ ತೋರುವ ಸುರಿಮಳೆಗರೆವ ಅನುದಿನ ಹೊರೆವ5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹೊಂದಬೇಕು ನಿಜನೋಡಿ ತಂದೆ ಗುರುನಾಥ ಬೋಧ ಧ್ರುವ ಪರಧನ ಪರಸತಿಯರ ಬಿಟ್ಟರೆ ಸಾಕು ಹೇಸಿ ತೋರುವುದು ತನ್ನೊಳು ಪ್ರತ್ಯಕ್ಷ ವಾರಣಾಸಿ ಸುರಿಮಳೆಗರೆವುದು ಹೆಜ್ಜೆಜ್ಜಿಗೆ ಪುಣ್ಯದ ರಾಶಿ ಅರಿತು ಏಕರಸವಾಗಿ ಸದ್ಗುರು ಸ್ಮರಿಸಿ 1 ಜನ್ಮಕೆ ಬಂದ ಮ್ಯಾಲೆ ಪುಣ್ಯಪಥ ಸಾಧಿಸಿ ಸನ್ಮತ ಸುಖಸಾರದೊಳು ಮನಭೇದಿಸಿ ಉನ್ಮನವಾಗಿ ಜೀವನ ಸದ್ಗತಿಗೈದಿಸಿ ಜನ್ಮಕೆ ಬೀಳುವ ಭವಬಂಧನ ಛೇದಿಸಿ 2 ಸಾಯಾಸದಿಂದ ಸಾಧಿಸಬೇಕು ಸಾಧುಸಂಗ ಗುಹ್ಯಗುರುತ ನೋಡಲಿಬೇಕು ಅಂತರಂಗ ಬಾಹ್ಯಾಂತ್ರದೋರುತಿದೆ ಸದ್ಗುರು ಪ್ರಾಣಲಿಂಗ ಭವ ಭಂಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು