ಒಟ್ಟು 8 ಕಡೆಗಳಲ್ಲಿ , 8 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಜ ಭಜ ಮಾನಸ ಗರುಡತುರಂಗಂ ಅಜ ಸುರಸೇವಿತ ಪಾಂಡುರಂಗಂ ಪ ಗಜರಾಜಾನತ ಮೋಹನರಂಗಂ ವಿಜಯಧ್ವಜ ಶ್ರೀಪಾವನರಂಗಂ ಅ.ಪ ಗಿರಿಧರ ಮುರಹರ ಭೂವರ ರಂಗಂ ನರಕೇಸರಿ ಮುಖರಾಜಿತ ರಂಗಂ ವರಶುದ್ಧಾಚ್ಚುತ ಸುರುಚಿರ ರಂಗಂ ಪರಶಿವ ದಾನವ ವಿನಮಿತ ರಂಗಂ 1 ಸನಕ ಸನಂದನ ಮುನಿನುತ ರಂಗಂ ಹನುಮ ವಿಭೀಷಣ ಸನ್ನುತ ರಂಗಂ ಘನಮಣಿ ಮೌಕ್ತಿಕ ಶೋಭಿತ ರಂಗಂ ಜನಕ ಧರಾವಿವ ಪೂಜಿತ ರಂಗಂ 2 ಮಂಗಳದಾಯಕ ಶುಭಕರ ರಂಗಂ ಸಂಗರ ಧೀರ ಸುಧಾಕರ ರಂಗಂ ಗಂಗಾಜನಕ ಕೃಪಾಂಬುಧಿ ರಂಗಂ ಅಂಗಜ ಜನಕ ಶ್ರೀ ಮಾಂಗಿರಿ ರಂಗಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಊ. ದೇವತಾಸ್ತುತಿ ಬ್ರಹ್ಮದೇವರು ಕರುಣಿಸೊ ಕೋಮಲಾಂಗನೆನಾರಾಯಣಸುತನೆ ಕರುಣಿಸೊ ಪ ಕರುಣಿಸು ಎನ್ನನು ಸುರಸೇವಿತ ಪಾದಪರಮೇಷ್ಠಿಯ ನಿನ್ನ ಶರಣು ಬಂದಿಹೆನು ಅ.ಪ. ವಾಣಿರಮಣ ನಿನ್ನ ಗಾನ ಮಾಡುವೆ ಸಿರಿಮಾನಿನಿ ಅರಸನ ಧ್ಯಾನದೊಳಿರಿಸೊ 1 ಶಿವಜನಕನೆ ನಿನ್ನ ಕವನ ಮಾಡುವ ಹೃದ್-ಭವನದೊಳಗೆ ಮಾಧವನ ತೋರಿಸೊ2 ಇಂದಿರೇಶನ ಮನವಿಂದು ಬೋಧಿಸಿ ಭವಬಂಧನ ಬಿಡಿಸಿ ಶರ ವೃಂದಾಸನ ಗುರು 3
--------------
ಇಂದಿರೇಶರು
ಪದ್ಮನಾಭರ ಭಜಿಸೋ ಹೇ ಮನುಜಾನೀ ಪ ಮಧ್ವರಾಯರ ಕರಪದ್ಮ ಸಂಭವರಾದ ಅ.ಪ ಮತ್ತ ಮಾಯಿಗಳೆಂಬೊ ಹಸ್ತಿಗಣಕೆ ಪಂಚ ವಕ್ತ್ರರೆಂದೆನಿಸಿದ ಪೃಥ್ವೀಸುರಸೇವಿತ 1 ಪ್ರೀತಿಯಿಂದಲಿ ಗೋಪಿನಾಥನರ್ಚಿಸಿ ಸುಖ ತೀರ್ಥ ಗ್ರಂಥಕೆ ಸವ್ಯಾಖ್ಯಾತ್ರರೆಂದೆನಿಸಿದ 2 ಧರೆಯೊಳು ಶರಣರ ಪೊರಿವ ಕಾರ್ಪರನರ ಹರಿಯನೊಲಿಸಿದಂಥ ಪರಮ ಮಹಿಮರಾದ3
--------------
ಕಾರ್ಪರ ನರಹರಿದಾಸರು
ಬರುತಲಿಹರು ನೋಡಿ ಗುರುವರೇಣ್ಯ ಸುಖತೀರ್ಥ ಯತಿವರರು ಪ ಹರಿದು ಬರುವ ಸುರನದಿಯ ಪ್ರವಾಹದ ತೆರದಲಿ ಪರಿಪರಿ ಪರಿವಾರ ಸಹಿತ ಅ.ಪ ಕರದಲಿ ಪಿಡಿದಿಹ ದಂಡ ಕಮಂಡಲ ಕೊರಳೊಳು ತುಳಸಿಯ ಚಿಗುರಿನ ಮಾಲೆಯು ಅರಿವಾರಿಜ ಲಾಂಛನಗಳಿಂದೊಪ್ಪುವ ವರ ದ್ವಾದಶ ನಾಮಗಳನು ಧರಿಸುತ 1 ಯತಿಗಳು ಗೃಹಿಗಳು ಬ್ರಹ್ಮಚಾರಿಗಳು ಶತಶತ ಸಂಖ್ಯೆಗಳಲಿ ಸೇರಿಹರು ಅತಿ ಸಂಭ್ರಮದಲಿ ನೋಡಲು ಪುರುಷ ರತುನವು ಮಾರ್ಗದ ಖತಿಪರಿಹರಿಸುತ 2 ಅವನಿಸುರರು ಮುಂಬದಿಯಲಿ ತಮ್ಮಯ ಕವಿತೆಗಳಲಿ ಗೋವಿಂದನ ಗುಣಗಳ ನವ ನವ ಸ್ವರದಲಿ ಪಾಡುತ ಕುಣಿಯಲು ಶ್ರವಣ ನಯನಕಾನಂದವ ಬೀರುತ 3 ತ್ವರೆಯಲಿ ಸರಿದು ತಾ ಬರುತಿರೆ ಯುವ ಕೇ- ಸರಿಯ ಧಿಕ್ಕರಿಸುವ ಸಂಭ್ರಮ ಗಮನ ಚರಣಯುಗಳ ಕಾಂತಿಯ ಪಸರಿಸುತಲಿ ಧರಣಿಯ ಪಾವನ ಮಾಡುವ ಬಗೆಯಲಿ 4 ಏನಿರಬಹುದೆಂದು ನೋಡುವರಿಗೆ ಕಾಣಿಸುವುದು ತೇಜದ ಪುಂಜ ಭೂನಿಲಯವ ಬೆಳಗಲು ಅತಿ ನೂತನ ಭಾನು ಉದಯಿಸಿದ ತೆರದಲಿ ಪೊಳೆಯುತ 5 ಪದುಮರಾಗ ಕಾಂತಿಯ ಮೀರಿದ ನಖ ಕೂರ್ಮ ಪ್ರಪದಗಳು ವಿಧಿಭವಮುಖ ಸುರಸೇವಿತ ಜಂಘವು ಮದಗಜ ಕರವನು ಪೋಲುವ ತೊಡೆಗಳು 6 ಪುಷ್ಪ ನಿತಂಬಗಳಲಿ ಪೊಳೆಯುತಲಿಹ ರೇಷ್ಮೆಯ ವಸ್ತ್ರವ ಧರಿಸಿಹರು ಕುಕ್ಷಿಲಲಾಟ ಶಿರೋಧರಗಳಲತಿ ಶ್ರೇಷ್ಠದ ತ್ರಿವಳಿಗಳಿಂದ ರಾಜಿಸುತ7 ಕೆಚ್ಚಿನ ವಕ್ಷಸ್ಥಳವತಿ ಸುಂದರ ಉಚ್ಚ ಪೀವರದ ಸ್ಕಂಧಯುಗಳವು ಸ್ವಚ್ಛದ ಕೆಂಬಣ್ಣದ ಕರತಲದಲಿ ಬಿಚ್ಚಿ ಹಾರುತಿಹ ಧ್ವಜಲಾಂಛನದಿ 8 ಚಂದಿರ ಬಿಂಬವಿದೋ ಪ್ರೇಕ್ಷಕರಾ ನಂದತರಂಗವ ಉಕ್ಕಿಸುತಿಹುದು ಒಂದು ಕಳಂಕವು ಕಾಣದಿರುವ ಅತಿ ಸುಂದರ ಪುರುಷವರೇಣ್ಯರು ಸೊಗಸಿಲಿ 9 ಸುಂದರ ಮಂದಸ್ಮಿತದಿಂ ಶೋಭಿಪ ಕುಸುಮ ತೆರದಲಿ ದಂತಗಳು ಮಂದಿಗಳಿಗೆ ಬಲು ಹರುಷವಿತ್ತು ಅರ ವಿಂದ ನಯನ ಆನಂದತೀರ್ಥ ಮುನಿ 10 ಕಿವಿಯಲಿ ಪೊಳೆಯುವ ತುಳಸಿಯದಳಗಳು ಅವಿರಳ ತೇಜದಿ ಹೊಳೆಯುವ ಕಪೋಲ ಭುವನತ್ರಯಗಳಭೀಷ್ಟವ ನೀಡುವ ಸುವಿಮಲ ಸುಂದರ ಭ್ರಕುಟಿ ವಿಲಾಸದಿ 11 ಅಕಲಂಕ ಶರೀರರು ಬರುತಿಹುದನು ಸಕಲ ಕಲಾಕುಶಲರು ನೋಡಿ ಶಕುತಿಗೆ ಮೀರಿದ ಮಾದರಿಯೆಂದರು ಪ್ರಕೃತಿ ಮಧುರ ಸರ್ವಾಂಗ ಸುಂದರರು 12 ಕಾಂತಿ ಸುಧೆಯ ಪಾನವ ಮಾಡಿರಿ ಸುಖ ಶಾಂತಿ ನಿಲಯರಾಶ್ರಯದಲಿ ಬಾಳಿರಿ ಚಿಂತೆ ಸಂತಾಪಗಳೆಲ್ಲವ ತೊಳೆಯಿರಿ ಸಂತತ ಹರಿದಾಸ್ಯದಲಿ ಪ್ರಸನ್ನರು 13
--------------
ವಿದ್ಯಾಪ್ರಸನ್ನತೀರ್ಥರು
ಬಾರಮ್ಮ ಭಾಗ್ಯನಿಧಿಯೆ | ಸಿರಿಯೆ ಪ ಬಾರಮ್ಮ ನಿನ್ನ ಪಾದಾರವಿಂದ ತೋರಲು ಅ.ಪ ಸರಸಿಜಾಕ್ಷನ ವಕ್ಷ ಮಂದಿರೆ ಇಂದಿರೆ ಸರಸಿಮುದವೆರಸಿ ನಿನ್ನರಸನೊಡನೆನೀ 1 ಸೀತಾರುಕ್ಮಿಣ್ಯಾದ್ಯವತಾರಿಣಿ ಬುಧ- ವ್ರಾತ ಮನಃ ಪದ್ಮ ವಿಹಾರಿಣಿ ಚೇತೋದ್ಭವ ಜನನೀ ಶ್ರೀತರುಣೀಮಣಿ 2 ಬ್ರಹ್ಮರುದ್ರೇಂದ್ರಾದಿ ಸುರಸೇವಿತೆ ಬ್ರಹ್ಮಾಣಿ ಗಿರಿಜಾ ಶಚೀವಂದಿತೆ ಪರ- ಬ್ರಹ್ಮ ಗುರುರಾಮವಿಠಲನ ದಯಿತೆ 3
--------------
ಗುರುರಾಮವಿಠಲ
ಮಂಗಳವೆನ್ನಿರೆ ಮದನಗೋಪಾಲನಿಗೆ ಮಂಗಳವೆನ್ನಿರೆ ಮಾಧವಗೆ ಪ ಮಂಗಳವೆನ್ನಿರೆ ಮಾಮನೋಹರನಿಗೆ ಮಂಗಳವೆನ್ನಿರೆ ಮುರಹರಗೆ ಅ.ಪ ಭುವನಮೋಹನ ಶಾಮಲಸುಂದರಾಂಗಗೆ ಅಮಿತಪರಾಕ್ರಮ ಅಚ್ಚುತಗೆ ನವನವಲೀಲೆಯ ತೋರಿದ ದೇವಗೆ ಸುವಿನಯದಿಂದ ಶ್ರೀ ಶ್ರೀಧರಗೆ1 ಶಂಖು ಚಕ್ರಪೀತಾಂಬರಧಾರಿಗೆ ಬಿಂಕದಿಂದ ಮುರಳಿಯನೂದಿದಗೆ ಶಂಕರಾದಿ ಸುರಸೇವಿತಗೆ ನಿಷ್ಕ- ಳಂಕದಿ ಭಜಿಪರ ಪೊರೆದವಗೆ2 ಪರಿಪರಿ ವಿಧದಲಿ ಹರಿ ಸ್ಮರಣೆಯ ಮಾಡೆ ಪರಾಭವನಾಮ ಸಂವತ್ಸರದಿ ದುರಿತಗಳೆಲ್ಲವ ಪರಿಹರಿಸುತ ಕಾಯ್ವ ಸಿರಿವರ ಕಮಲನಾಭ ವಿಠ್ಠಲನಿಗೆ3
--------------
ನಿಡಗುರುಕಿ ಜೀವೂಬಾಯಿ
ಸೇವಕನೆಲೊ ನಾನು ನಿನ್ನಯ ಪಾದಸೇವೆ ನೀಡೆಲೊ ನೀನು ಪ. ಸೇವಕನೆಲೊ ನಾನು ಸೇವೆ ನೀಡೆಲೊ ನೀನುಕಾವದೇನೆಲೊ ಶ್ರೀವಧೂವರ ರಾವಣಾಂತಕ ರಕ್ಷಿಸೆನ್ನನುಗೋವರ್ಧನ ಗಿರಿಧರ ದೇವ ಗೋವುಗಳ ಕಾವಶ್ರೀಮಹಾನುಭಾವ ವರಗಳನೀವ ದೇವಶ್ರೀವಲ್ಲಭ ದಯಮಾಡೆನ್ನನುಈ ವ್ಯಾಳೆಗೆ ಇಂದಿರೆರಮಣ ಅ.ಪ. ರಾಮ ದಶರಥನಂದನ ರಘುಕುಲಾಬ್ಧಿಸೋಮ ಸುಂದರವದನವಾಮನ ಪರಿಪೂರ್ಣಕಾಮ ಕೌಸಲ್ಯರಾಮಸ್ವಾಮಿ ಶ್ರೀರಂಗಧಾಮ ದೈತ್ಯವಿರಾಮಶ್ರೀಮದನಂತ ನಾಮಭೀಮ ಮುನಿಜನಸ್ತೋಮರಮ್ಯಗುಣಧಾಮ ರಣರಂಗಭೀಮಕೋಮಲಶ್ಯಾಮ ಹೇಸಾಮಜವರದ ನೀನನುದಿನಕಾಮಿತಫಲವನು ಕರುಣಿಸಿ ಕಾಯೊ 1 ಶಂಕರ ಸುರಸೇವಿತ ಶೇಷಗರುಡಾ-ಲಂಕಾರ ಮಣಿಶೋಭಿತಪಂಕಜನಯನ ಮೀ-ನಾಂಕ ಜನಕ ಪಾದ-ಪಂಕಜಾಸನವಿನುತ ತಿರುಪತಿವೆಂಕಟ ಬಿರುದಾಂಕ ಜಯ ಜಯಶಂಖಚಕ್ರಗದೆ ಪಂಖ ಪಿಡಿದಕಳಂಕ ಚರಿತ ತಾ-ಟಂಕಗೊಲಿದ ನಿಶ್ಶಂಕಲಂಕಾಧಿಪರಿಪು ರಘುಪತಿಕಿಂಕರರಿಗೆ ಕಿಂಕರ ನಾನೆಲೊ 2 ಮಾಧವ ಮಧುಸೂಧನನಂದಮಂಗಳ ವಿಗ್ರಹಬಿಂದುಮಾಧವ ಶ್ರೀಮುಕುಂದ ಶ್ರೀಮದಾ-ನಂದ ವಂದಿತಾಮರವೃಂದ ಶ್ರುತಿಗಳ ತಂದ ತುರಗವನೇರಿ ಬಂದವೃಂದಾವನದೊಳಗಿಂದ ಯಶೋದೆಯಕಂದ ಹರಿಗೋ-ವಿಂದ ಶೇಷಗಿರಿಯಲಿ ನಿಂದಮಂದಾಕಿನಿ ಪಡೆದೆಲೊ ಧ್ರುವಗೊಲಿ-ದಂದದಿ ಎನಗೊಲಿಯೊ ಹಯವದನ 3
--------------
ವಾದಿರಾಜ
ಪಾರ್ವತೀ ಪತಿಪಾಹಿ ಹರಹರ ಪಪಾರ್ವತೀಪತಿ ನೀನೊಲಿದು ಮನಸಿನೊಳುತೋರ್ವದು ಕೇಶವನ | ಹರಹರ ||ಅ. ಪ||ವಿಜಯನಿನ್ನೊಳಗಂದು ವಿಜಯಿಸಲಸ್ತ್ರವ |ತ್ರಿಜಗವರಿಯ ಕೊಟ್ಟ ||ಮಜ ಭಾಪುರೆಅಂಬುಜಸುತ ನಂದನ |ಗಜಚರ್ಮಾಂಬರನೆ | ಹರಹರ 1ಜಾತವೇದಸಶಶಿತರಣಿನಯನ |ಮಾತರಿಶ್ವತನಯ ||ಭೂತ ಗಣಪ ಗುಣವ್ರಾತ ನಿನ್ನವರೊಳು |ಪ್ರೀತಿಯಿಂದಲೆ ಕೂಡಿಸು | ಹರಹರ 2ಕ್ಷಿತಿಧರ ಶರ ಮನ್ಮಥಪುರಹರಣ| ಪ್ರಮಥಾಧಿಪ ಹರಿಣಾಂಕ ||ನತಿಸುವೆ ನಿನ್ನನು ಪ್ರತಿದಿನದಲಿ | ಸನ್ಮತಿ ಕರುಣಿಸು ತ್ವರಿಯಾ || ಹರಹರ3ಸುರಸೇವಿತ ಪದ ಅರವಿಂದಅನಘ|ಮುರರಿಪುಸುಖಕಪರ್ದಿ||ಚರಣವ ನಂಬಿದವರ ಭಯವಾರಿದ |ಮರುತಕುಶನಂದನನೆ || ಹರಹರ4ಖಟವಪಾಣಿಖಳಆಟವಿವಹ್ನಿಧೂ |ರ್ಜಟ ಹರ ಪ್ರಾಣೇಶ ||ವಿಠಲನ ಭಜನೆಯು ಘಟಿಕ ತಪ್ಪದಲೆ |ಘಟನೆ ಮಾಡಿಸುವುದೋ || ಹರಹರ 5
--------------
ಪ್ರಾಣೇಶದಾಸರು