ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸೆನ್ನನು ಕರುಣಾನಿಧಿಯೆ ಪ ಹರಿ ಭಜಕರಾಗ್ರಣಿಯೆ ವರಕಪಿಶಿರೋಮಣಿಯೆ ಅ.ಪ ಧರಣಿತಳದಲ್ಲಿ ಪರಿಪೂರ್ಣವಾಗೀ ಇರುವ ವಾರ್ತೆಯ ಕೇಳಿ ಹರುಷ ಮನದಲಿ ನಿನ್ನ ಚರಣ ಪಂಕಜಯುಗ್ಮ ಭರದಿ ಭಜಿಪ ಎನ್ನ 1 ದುರುಳ ದೈತ್ಯನ ಶೀಳಿ ಧರಣಿಸುರಸುತನ ನೀ ಪೊರೆದ ಕೀರುತಿ ಕೇಳಿ ತ್ವರದೀ ಪಾದ ಸರಸಿಜ್ವದಯವನ್ನು ದುರುಳ ಮಾನವ ನಾ 2 ಜನಕ ಮಾಡಿದ ಋಣವ ಹುಣಿಸೆ ಬೀಜಗಳಿಂದ ಋಣಗಳೆದ ಘನ ಮಹಿಮೆ ಕೇಳಿ ಮನದಿ ಯೋಚಿಸಿ ಚರಣವನಜ ಭಜಿಸುವ ಎನ್ನ ಋಣ ಬಿಡಿಸೊ ಗುರುಜಗನ್ನಾಥ ವಿಠಲ ಪ್ರಿಯಾ 3
--------------
ಗುರುಜಗನ್ನಾಥದಾಸರು
ಭಾರತಿ ಪೊರೆಯೆಮ್ಮನು ಕಾರುಣ್ಯಮೂರುತಿ ಸಾರಸಭವಸತಿ ತೋರಿಸು ಸನ್ಮತಿ ಪ. ವೀಣಾಪುಸ್ತಕಧಾರಿಣಿ ಪನ್ನಗವೇಣಿ ವಾಣಿ ಗೀರ್ವಾಣಿ ಜನನೀ ಜಾಣೆ ಬ್ರಹ್ಮನ ರಾಣಿ ಸುಶ್ರೋಣಿ ಕಲ್ಯಾಣಿ 1 ನಾರದಮುನಿ ಸನ್ನುತೆ ಸಾರಸನೇತ್ರೇ ಚಾರುಚರಿತೇ ಸುರಸುತೆ ಮಾರನಯ್ಯನ ಚರಿತೆ ಸಾರುವಂತೆಸಗು ಮಾತೆ 2 ನಾಲಿಗೆಯೊಳು ನೆಲಸುತ ನಲಿನಲಿಯುತ ಮೇಲಹಕೃತಿ ನುಡಿಸುತ ಪಾಲಿಸು ಶ್ರೀಗಿರಿಲೋಲನ ಸೊಸೆ ನಿರುತ 3
--------------
ನಂಜನಗೂಡು ತಿರುಮಲಾಂಬಾ
ಗಣೇಶ ಪ್ರಾರ್ಥನೆ1ಲಂಬೋದರ ಪಾಹೀ ಪಾಹೀ ಜಗದ್ಗುರು|ಶಂಭುನಂದನ ಸುರಸುತ ಪಾದಾ ಪಯೋಗೀಶಾರ್ಚಿತ ಶ್ರೀ ಪಾರ್ವತಿ ಪುತ್ರ ನತಮಿತ್ರಾ |ಆಗಸವಾಳ್ದಮೂಷಕರೂಢಾ ||ನಾಗಶಯನನಪಾದಧ್ಯಾನದಲ್ಲಿಡು ನಿತ್ಯಾ |ಶ್ರೀ ಗಣಪತಿ ನಿನ್ನ ಬಲಗೊಂಬೆ 1ಶ್ರೀವರ ಶ್ರೀರಾಮಚಂದ್ರ ಧರ್ಮರಾಯಾ |ದೇವೇಂದ್ರಾ ನಿನ್ನ ಪೂಜಿಸಿದಾರೋ ||ಕೇವಾಲಾಕಲಿದುರ್ಯೋಧನ ಪೂಜಿಸದೆ ಕೆಟ್ಟಾ |ಶ್ರೀ ವಿಘ್ನೇಶ್ವರ ನಿನ್ನ ಬಲಗೊಂಬೆ 2ದನುಜಾರ ಮೋಹೀಸೂವದಕೆ ಸಂಕಟ ಚೌತಿ |ಮನಿಸೀ ಪೂಜಿಸಿಕೊಂಬೆ ಖಳರಿಂದಾ ||ಮುನಿ ವ್ಯಾಸ ಕೃತ ಗ್ರಂಥಾರ್ಥವ ತಿಳಿದು ಬರೆದಾ |ಗಣರಾಜಾ ನಿನ್ನ ಪಾದಾ ಬಲಗೊಂಬೆ 3ಶಂಬು ಚಕ್ರಾಂಕಿತಾ ಪಾಶಧಾರನೇ ರಕ್ತ |ಅಂಬರಾದ್ವಯ ಭೂಷಾ ನಿರ್ದೋಷಾ ||ಶಂಬರಾರಿಪುಶರಾ ವಿಜತಾಮೃದ್ಭವ ಗಾತ್ರಾ |ಅಂಬಾರಾಧಿಪ ನಿನ್ನ ಬಲಗೊಂಬೆ 4(ಅಂಬೂಜಾಲಯಜಾನೆ ಬಲಗೊಂಬೆ)ಏಕವಿಂಶತಿಪುಷ್ಪಾನ ಮನ ಮೋದಕ ಪ್ರೀಯ |ನೀ ಕರುಣಿಪುದೂ ನಿನ್ನವಾನೆಂದು ||ಸಾಕು ವಿಷಯ ಸುಖಾ ಸುಜನಾರೋಳಾಡಿಸೊ |ಏಕಾದಂತನೆ ನಿನ್ನ ಬಲಗೊಂಬೆ 5ಏನು ಬೇಡುವೊದಿಲ್ಲಾ ಏನು ಮಾಡುವೊಕರ್ಮ|ಶ್ರೀನಿವಾಸನೆ ಮಾಡಿಸುವನೆಂಬೊ ||ಜ್ಞಾನಾವೆ ಯಂದೆಂದಿಗಿರಲಿ ತಾರಶಾಂತ- |ಕಾನುಜಾ ನಿನ್ನ ಬಲಗೊಂಬೆ 6ಪ್ರಾಣಸೇವಕ ಚಾಮೀಕರವರ್ಣ ಗಜಮುಖ |ಪ್ರಾಣೇಶ ವಿಠಲನಾ ಸುಕುಮಾರಾ ||ನೀನೊಲಿದೆಮಗೆ ವಿಘ್ನವ ಪರಿಹರಿಸುತ |ಪೋಣಿಸು ಸನ್ಮತೀ ಬಲಗೊಂಬೆ 7
--------------
ಪ್ರಾಣೇಶದಾಸರು