ಒಟ್ಟು 8 ಕಡೆಗಳಲ್ಲಿ , 8 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

1. ಗಜೇಂದ್ರಮೋಕ್ಷ ನಾರಾಯಣ ಎನ್ನಿರೊ ನಾರಾಯಣ ಎನ್ನಿ ನಾರದಾದ್ಯಖಿಳ ಮುನಿವಿನುತಾಯ ಪಾಹಿಮಾಂ ಘೋರ ಭವದುಃಖ ಸಂಹಾರಾಯ ಪ ಪಾಂಡುದೇಶದೊಳು ಇಂದ್ರದ್ಯುಮ್ನನೆಂಬ ಭೂ ಮಂಡಲಾಧಿಪನು ವೈರಾಗ್ಯದಲಿ ಹರಿಪಾದ ಪುಂಡರೀಕಧ್ಯಾನಪರನಾಗಿತಪಸಿಲಿರೆಚಂಡತಾಪಸನಗಸ್ತ್ಯಾ ಹಿಂಡು ಶಿಷ್ಯರ ಬೆರೆಸಿ ಬರಲು ಸತ್ಕರಿಸದಿರೆ ಕಂಡು ಗಜಯೋನಿಯೊಳು ಜನಿಸು ಪೋಗೆಂದು ಉ- ತಾ ಶುಂಡಾಲನಾದನರಸ 1 ಕ್ಷೀರಸಾಗರ ತಡದೊಳೈವತ್ತು ಯೋಜನ ವಿ- ಸ್ತಾರದಿಂದಿರುವ ತ್ರಿಕೂಟಾದ್ರಿ ಶೃಂಗತ್ರಯದಿ ರಾರಾಜಿತ ತಾಮ್ರರಚಿತ ಕಾಂಚನದಿಂದ ಮೇರುಸಮ ಗಂಭೀರದಿ ಪಾರಿಜಾತಾಂಭೋಜ ತುಳಸಿ ಮಲ್ಲಿಗೆ ಜಾಜಿ ಸೌರಭಗಳಶ್ವತ್ಥ ಚೂತ ಪುನ್ನಾಗ ಜಂ ವಾರಣೀಂದ್ರನು ಮೆರೆದನು 2 ಆನೆ ಹೆಣ್ಣಾನೆ ಮರಿಯಾನೆಗಳ ಸಹಿತಲಾ ಕಾನನವು ತೊಳಲುತ್ತ ಬೇಸಿಗೆಯ ಬಿಸಲಿನಲಿ ಕಂಡಿತು ಪಾನಾಭಿಲಾಷೆಯಿಂದ ನಾನಾ ಪ್ರಕಾರದಿಂ ಜಲಕ್ರೀಡೆಯಾಡುತಿರೆ ಏನಿದೆತ್ತಣ ರಭಸವೆಂದುಗ್ರಕೋಪದಿಂ ನೆಗಳು ಏನೆಂಬೆನಾಕ್ಷಣದೊಳು 3 ಒತ್ತಿ ಹಿಡಿದೆಳೆವುತಿರೆ ಇದೆತ್ತಣಯದೆನುತ ಮತ್ತೆ ಇಭರಾಜನೌಡೆತ್ತಿ ಫೀಳಿಡುತ ಎಳೆ ಸೆಳೆದುದು ಬಿಡದೆ ನೆಗಳವು ಇತ್ತಂಡವಿತ್ತು ಕಾದಿತ್ತು ಸಾವಿರ ವರುಷ ಪೊತ್ತರಿಸಿತ್ತೇನೆಂಬೆ ಮತ್ತಾ ಗಜೇಂದ್ರಂಗೆ ಚಿಂತಿಸುತ ಮತ್ತ್ಯಾರು ತನಗೆನುತಲಿ 4 ಬಂದುದಾ ಸಮಯದಲಿ ಹಿಂದೆ ಮಾಡಿದ ಪುಣ್ಯ ದಿಂ ದಿವ್ಯಜ್ಞಾನದಿಂ ಕಣ್ತೆರೆದು ಕೈಮುಗಿದು ಮುಕುಂದ ಮುನಿವೃಂದವಂದ್ಯಾ ಇಂದಿರಾರಮಣ ಗೋವಿಂದ ಕೃಷ್ಣ ಭಕ್ತರ ಬಂಧು ಕರುಣಾಸಿಂಧು ತಂದೆ ಸಲಹೆನ್ನ ನಾ ಮಾಯಾಪ್ರಬಂಧದಿ ನೆಗಳಿನಿಂ 5 ಪರಮಾತ್ಮ ಪರಮೇಶ ಪರಿಪೂರ್ಣ ಪರಾತ್ಪರ ಉರುತರ ಪರಂಜ್ಯೋತಿ ಪರಮಪಾವನ ಮೂರ್ತಿ ಪರಮೇಷ್ಠಿ ಪರಮಪುರುಷಾ ನಿರುಪಮ ನಿಜಾನಂದ ನಿರ್ಭಯ ನಿರಾವರಣ ನಿರಂಜನ ನಿರಾಧಾರ ನಿರವೇದ್ಯ ನಿಶ್ಯಂಕ ನಿತ್ಯನೈಮಿತ್ಯಕಾ ನೀ ಸಲಹೆನ್ನನೆಂದಾನೆ 6 ಗುಪಿತ ಕಂಠಧ್ವನಿಯೊ ಳಂತರಾತ್ಮಕನ ನೆನೆವುತ್ತಳುತ್ತಿರಲಿತ್ತ ಕರುಣದಿಂದಾಕ್ಷಣದೊಳನಂತಶಯನದೊಳೆದ್ದನು ಸಂತವಿಸಿ ಸಿರಿಮುಡಿಯ ಗರುಡವಾಹನನಾಗಿ ಚಿಂತೆಬೇಡವೆನುತ ಅಭಯ ಹಸ್ತ ಕೊಡುತ ಶ್ರೀ ದಂತಿವದನನ ನೆಗಹಿದಾ 7 ನೆಗಳ ಬಾಯನು ಚಕ್ರದಲಿ ಸೀಳಿ ಕರಿವರನ ಉಗುವ ಕರುಣದಿಂ ಮೈದಡಹಲ್ಕೆ ಗಜಜನ್ಮ ಕುಂಡಲದಿಂದ ಮಿಗೆ ಶೋಭಿಸುತಲೆಸೆದನು ವಿಗಡ ದೇವಲ ಋಷಿಯ ಶಾಪದಲಿ ಬಿದ್ದಿಳೆಗೆ ಮಿಗೆನಕ್ರನಾಗಿ ಹೂಹೂ ಎಂಬ ಗಂಧರ್ವ ಅಮರರೊಲುಮೆಗೆ ನೆರೆದನೋಲೈಸುತ 8 ಮಣಿಮಯ ಕಿರೀಟಕುಂಡಲ ಹಾರ ಪದಕ ಕಂ ಕಣ ಕೌಸ್ತುಭೋಜ್ವಲ ಸುಗಂಧ ಭೂಷಣ ಹಸ್ತ ಪಾಣಿಯಾ ಶಂಖಚಕ್ರಾಬ್ಜಧ್ವಜ ಕಸ್ತೂರಿ ತಿಲಕ ಪ್ರಣವ ತಾಕಿದನು [ಝಣ ಝಣಿತನೂ]ಪುರ[ದ] ದಂತ ಪಂಕ್ತಿಯ ಕೃಪೆ ಸಿರಿ ಮೊಗದ ಪೀತಾಂಬರದಾಲಂಕೃತದ ಸುರಸಿದ್ಧ ಸಾಧ್ಯ ಸಂದಣಿಯೊಳಗೆ ಮೆರೆದನು 9 ಹರಿಯನುತಿಗೈದಂಘ್ರಿಗೆರಗಲಾಕ್ಷಣದಲಿ ಭರದಿಂದಲೆತ್ತಿ ಕೇಳ್ಮಗನೆನ್ನನೀ ಶರಧಿ ಗಿರಿಶೃಂಗತ್ರಯ ಸಪ್ತದ್ವೀಪದಲಿ [ಧರಣಿದೇವಿ] ವರಲಕ್ಷ್ಮಿಯೊಳು ಗರುಡ ಶೇಷ ನಾರದ ಪ್ರಹ್ಲಾದ ಧ್ರುವ ರೊಲು ಸಿರಿವತ್ಸ ಶಂಖ ಚಕ್ರಾವತಾರದಲಿ ಸ್ಮರಿಸುವವರ ಕಾಯ್ವೆನೆಂದಾ 10 ಆವನಿದನುದಯ ಕಾಲದೊಳೆದ್ದು ಭಕ್ತಿಯಿಂ ಭಾವಶುದ್ಧಿಯಲಿ ಭಜನೆಯ ಮಾಳ್ಪ ಜನರಿಗ ಫಾವಳಿಯ ಪರಿಹರಿಸಿ ನರಜನ್ಮವನು ಕಳೆದು ಪರಿಶುದ್ಧರಾದಹರೆಂ- ದಾ ವಾಸುದೇವನಾಜ್ಞಾಪಿಸಿದ ಗಜೇಂದ್ರ ಸಹಿ ತಾ ವಿಹಂಗಾಧಿಪನನೇರಿ ಬಿಜಯಂಗೈದ ಆ ವೈಕುಂಠಪತಿಯ ನಂಬಿದ ಸೇವಕರಿಗೇನಿದು ಚೋದ್ಯವೇ11
--------------
ಬೇಲೂರು ವೈಕುಂಠದಾಸರು
ಅಂಕಿತನಾಮ ಸ್ತುತಿಮಂಗಳ ತಿರುಪತಿಯರಸಗೆ ಜಯಮಂಗಳ ವೆಂಕಟರಮಣನಿಗೆ ಪವಟಪತ್ರಶಯನಗೆ ಕೈಟಭ ರಿಪುವಿಗೆಸ್ಫುಟನಾಭಿ ಕಮಲಸಂಭವಪಾಲಗೆಘಟಸಿ ಬ್ರಹ್ಮಾಂಡಗಳಗಣಿತಗಳನಲ್ಲಿನಟಿಸಿ ಪ್ರಾಣಿಗಳಲ್ಲಿ ನಲಿವನಿಗೆ 1ನಿಗಮವ ತಂದಗೆ ನಗವ ತಾಳಿದನಿಗೆಜಗತಿಯ ದಂಷ್ಟ್ರದಿ ಧರಿಸಿದಗೆಭುಗಿಲೆಂದು ಕಂಭದಲುದಿಸಿ ಪ್ರಹ್ಲಾದನಮಗನೆಂದಂಕದೊಳಿಟ್ಟ ನರಸಿಂಹಗೆ 2ಅದಿತಿ ಗರ್ಭದಿ ಬಂದು ವಟುರೂಪನಾದಗೆ ಮುದದಿಂದ ಜಮದಗ್ನಿ ಸುತನಾದಗೆಪದುಮಜೆಯರಸ ಶ್ರೀ ರಘುರಾಮಚಂದ್ರಗೆಯದುಕುಲೋದ್ಭವನಾದ ಶ್ರೀ ಕೃಷ್ಣಗೆ 3ಪುರಮೂರ ಗೆಲಿದಗೆ ತುರಗ ರೇವಂತಗೆಪರಿಪರಿ ರೂಪಿನ ಪರಮಾತ್ಮಗೆಶರಧಿಸುತಾ ಮುಖಚಂದ್ರ ಚಕೋರಗೆಸುರಸಿದ್ಧ ವೃಂದವಂದಿತ ಪಾದಗೆ 4ತಿರುಪತಿಯಲಿ ನಿಂದು ಚರಣ ಸೇವಕರಿಗೆವರವಿತ್ತು ಪೊರೆವ ಕರುಣಾನಿಧಿಗೆಸ್ಮರಣೆಮಾತ್ರದಲಘತಿಮಿರ ಸಮೂಹಕ್ಕೆತರಣಿ ಶ್ರೀ ವೆಂಕಟರಮಣನಿಗೆ 5ಓಂ ದೇವಕೀನಂದನಾಯ ನಮಃ
--------------
ತಿಮ್ಮಪ್ಪದಾಸರು
ಅಕ್ಷವಿದ್ಯಾನಿಪುಣ ಅಕ್ಷಯಾತ್ಮಕ ಸುಗುಣ ಅಕ್ಷಯತರ ಸುವಚನ ಲಸಿತವದನ ದ್ಯೂತೋದ್ಯೋಗತರ ಖ್ಯಾತ ಸುಗುಣೋಪೇತ ದೈತ್ಯ ಸಂಕುಲಘಾತ ಪ್ರಾಣನಾಥ ಸುರಸಿದ್ಧ ಸಂಪ್ರೀತ ಮಾರತಾತ ಗೋಪಾಲ ಕುಲರತ್ನದೀಪ ಗೋಕುಲ ಶರಣ ಗೋಪಿಕಾಜನಮನದ ತಾಪಶಮನ ಲೀಲಾ ವಿಭೂತಿಯುಗನಿರತ ಸುಹಿತ ನೀಲಾಂಬರಾವರಜ ರಾಜರಾಜ ಕಾಲಾಂಬುದಾಕಾರ ಖಲಕುಠಾರ ಪಾಹಿಮಾಂ ಶ್ರೀಶೇಷಗಿರಿವಿವಿಭಾಕ್ಷ
--------------
ನಂಜನಗೂಡು ತಿರುಮಲಾಂಬಾ
ತೆರಳಿದರು ಶ್ರೀ ಜಗನ್ನಾಥದಾಸಾರ್ಯರು ಸಿರಿಪತಿಯ ಸ್ಮರಿಸಿ ಹರಿಪುರಕೆ ಹರುಷದಲಿ ಪ ವರಶುಕ್ಲವತ್ಸರದ ಭಾದ್ರಪದ ಶಿತಪಕ್ಷ ಹರಿವಾರ ನವಮಿಯಲ್ಲಿ ಸುರಸಿದ್ಧ ಸಾಧ್ಯ ಸನ್ಮುನಿಗಣಾರ್ಚಿತ ಪಾದ ಹರಿಯೆ ಪರನೆಂದೆನುತಲಿ ಧರಣಿಯನು ತ್ಯಜಿಸಿ ಬಹುಮಾನಪೂರ್ವಕವಾಗಿ ಬೆರೆದು ಸುರಸಂದಣಿಯಲಿ ಪರಮಾರ್ಥವೈದಿ ಮನ ಹರಿಯ ಪಾದದಲಿಟ್ಟು ವರವಿಷ್ಣುದೂತ ವೈಮಾನಿಕರ ಒಡಗೂಡಿ 1 ಅತಿಪ್ರೇಮಿಗಳು ಹಸನ್ಮುಖರು ದಯೆ ಬೀರುವರು ಖತಿದೂರರಿವರು ಜಗದೀ ಮಿತಿಮೀರಿ ಶ್ರೀಹರಿಯ ಕಥೆ ನಾನಾ ಪರಿಯಲ್ಲಿ ಅತಿಶಯದಿ ಪೇಳಿ ಇಹಕೆ ಸತತವು ಶರಣರ್ಗೆ ಗತಿಯಾಗುವಂತೆ ಸ ತ್ವಥವಿಡಿಸಿ ಕರುಣದಿಂದ ಹಿತವಂತರೆನಿಸಿ ಸಮ್ಮತವಾಗಿ ಸರ್ವರಿಗೆ ಮತಿದೋರಿ ಕೊಟ್ಟು ಸದ್ಗತಿಯಗೋಸುಗವಾಗಿ 2 ಆಚರಣೆಯಲಿ ಒಂದರಘಳಿಗೆ ಬಿಡದೆ ಬಲು ಖೇಚರಾರೂಢ ಹರಿಯಾ ಸೋಚಿತಾರಾಧನೆಯ ಮಾಡಿ ಮರೆಯದಲೆ ಮಹಾ ವೈಚಿತ್ರ್ಯವನು ತೋರಿ ಈ ಚರಾಚರದಿ ಸಂಗೀತ ಸಾಹಿತ್ಯದಲಿ ಪ್ರಾಚಾರ್ಯವಂತರೆನಿಸೀ ಆ ಚತುರ್ದಶಭುವನಪತಿ ಶ್ರೀದವಿಠಲನ ಯೋಚನೆಯ ಬಿಡದೆ ಮಂಗಳ ಶಬ್ದವಾದ್ಯದಿಂ 3
--------------
ಶ್ರೀದವಿಠಲರು
ವಿನುತ ಸಿರಿ | ರಾಮ ವಿಠಲ ಕಾಯೋ ಪ ಈ ಸತೀ ಮಣಿಯ ನೀ | ಸಲಹಬೇಕೆಂದುಶೇಷ ಸಂಜ್ಞಿತ ಹರಿಯೆ | ಪ್ರಾರ್ಥಿಸುವೆ ಧೊರೆಯೇ ಅ.ಪ. ಅಮೃತ ಕೂರ್ಮ | ರೂಪದಿಂದರುಹೀಉಪದೇಶ ನೀಡ್ವಗುರು | ರೂಪವನೆ ತೋರಿಸುತಅಪರಿಮಿತ ಕಾರುಣ್ಯ | ರೂಪನಾಗಿರುವೆ 1 ಪರಮ ಗುರು ನಿಜ ರೂಪ | ಎರಡು ಬಾರಿಯು ತೋರಿಸರಸನಾಬ್ಯಾದಿ ಹರುಷ | ಬೀರ್ದೆ ಭಯಹಾರೀಕರುಣವೆಂತುಟೊ ನಿನಗೆ | ಸುರಸಿದ್ಧ ಸಂಸೇವ್ಯಶಿರಿ ರಮಣ ಶ್ರೀರಾಮ | ಪರಮ ಪುರುಷನೆ 2 ಈ ಸತೀಮಣಿ ಬಯಕೆ | ನೀ ಸಲಿಸಿ ಲೌಕಿಕದಿಲೇಸು ಹೊಲ್ಲೆಗಳೆಂಬ | ಪಾಶಗಳ ಬಿಡಿಸೀದೋಷ ದೂರನೆ ಹರಿಯೆ | ನೀ ಸಲಹೆ ಪ್ರಾರ್ಥಿಸುವೆದಾಶರಥೆ ಪೊರೆ ಇವಳ | ಮೇಶ ಮಧ್ವೇಶಾ 3 ಮಧ್ವಮಾರ್ಗದಿ ಇಹಳು | ಶುದ್ಧ ಭಕ್ತಿಜ್ಞಾನಸಿದ್ಧಿಸುತ ಇವಳಲ್ಲಿ | ಉದ್ಧರಿಸೊ ಹರಿಯೇ |ಕೃದ್ಧ ಖಳ ಸಂಹಾರಿ | ಸದ್ಧರ್ಮ ಪಥತೋರಿಅಧ್ವಯನೆ ತವ ನಾಮ | ಶುದ್ಧ ಸುಧೆ ಉಣಿಸೋ 4 ಸರ್ವವ್ಯಾಪ್ತನೆ ದೇವ | ಪವನಾಂತರಾತ್ಮಕನೆದರ್ವಿ ಜೀವಿಯ ಕಾಯೊ | ಶರ್ವವಂದ್ಯಾ |ಸರ್ವ ಸುಂದರ ಗುರು | ಗೋವಿಂದ ವಿಠ್ಠಲನೆಈ ವಿಧದ ಬಿನ್ನಪವ | ನೀವೊಲಿದು ಸಲಿಸೋ 5
--------------
ಗುರುಗೋವಿಂದವಿಠಲರು
ಶಂಕರಿ ಸರ್ವೇಶ್ವರಿ ಮೃಗಾಲಂಕಶೇಖರಿ ಜಯ ಜಯಪ. ಶಾಂಭವಿದೇವಿ ಸುರಕದಂಬಸಂಜೀವಿ ಅಂಬುಜಾಯತಾಕ್ಷಿ ಖಲಶುಂಭಮರ್ದಿನಿ1 ಬುದ್ಧಿದೇವತೆ ಸುರಸಿದ್ಧಸನ್ನುತೆ ಅದ್ರಿಜಾತೆ ರುದ್ರಪ್ರೀತೆ ಶುದ್ಧ ಭಾಗವತೆ2 ಧ್ಯೇಯರೂಪಿಣಿ ಮಹಾದೇವ ಮೋಹಿನಿ ಶ್ರೀಯಶೋದೆ ಲಕ್ಷ್ಮೀನಾರಾಯಣಭಗಿನಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಮತ್ಕಾಂಚನ ಕೋಟಿರನ್ನತನಯಾ | ಕ್ಷೀರಾಂಬುನಿಧಿ ಮಧ್ಯದಿ | ನೇಮದಿಂ ನಿಜಧಾಮದಲ್ಲಿ ರಮೆಯಾ | ಒಡಗೂಡಿ ಸುರಸಿದ್ಧದೀ | ಸಾಮಗಾಯನ ಪ್ರಿಯನಾಗಿನಿರುತಾ | ಪಾಲಿಪ ಲೋಕಂಗಳಂ | ಮಾಧವ ದಯಾನಿಧೇ ವಧುವರಾ | ಕುರ್ಯಾತ್ಸದಾ ಮಂಗಳಂ | 1 ಭಾನುಕೋಟಿಯ ತೇಜದಿಂ ಬೆಳಗುವಾ | ಮುಕಟವು ಮಸ್ತಕದಿ | ಶ್ರೀ ನೀಲಾಳಕ ಭಾಲಮಧ್ಯಮೆರೆವಾ | ಕೇಶರ ಪೌಂಡ್ರಕದಿ | ಸೂನಾಸಿಕದಿ ವಾರಜಾಕ್ಷಅಧರಿಂ | ದೊಪ್ಪುವ ಕರ್ಣಂಗಳಂ | ತಾನೀಕುಂಡಲ ಭೂಷಣಾ ವಧುವರಾ | ಕುರ್ಯಾತ್ಸದಾ ಮಂಗಳಂ 2 ಶ್ರೀ ಲಕ್ಷ್ಮೀ ನಿಜಶಾರದಾಗಿರಿಸುತೇ | ಭಾರತೀ - ಶಚಿ- ಭಾಮಿನೀ | ಕಾಲಿಂದೀವರ ನರ್ಮದಾ ಸರಸ್ವತೀ | ಗಂಗಾ ತ್ರಿಪಥಗಾಮಿನೀ | ಪಾಲಿಸುವ ಗೋದಾವರೀ ಭೀಮರಥೀ | ಶ್ರೀ ಕೃಷ್ಣ ವೇಣಿಂಗಳಂ | ಮೇಲೆ ಕಾವೇರಿತುಂಗೆ ತಾವಧುವರಾ | ಕುರ್ಯಾತ್ಸದಾ ಮಂಗಳಂ 3 ವಾರಿಜಾಸನ ವಾಯು ಶಂಕರಗುರು | ತ್ವಂಹೇಂದ್ರ ವಸಿಷ್ಠನು | ಭಾರದ್ವಾಜ ಪರಾಶರಾತ್ರಿ ಭೃಗು ಕ- ಶ್ಯಪ ಕೌಶಿಕ ಶ್ರೇಷ್ಠನು | ಕಾರುಣೀ ಜಮದಗ್ನಿ ರಾಮ ಮರಿಚೀ | ವ್ಯಾಸಾದಿ ಋಷಿ ಪುಂಗಳಂ | ನಾರದಾದಿ ಮುನೀಂದ್ರರೀ ವಧುವರಾ | ಕುರ್ಯಾತ್ಸದಾ ಮಂಗಳಂ 4 ಇಂದ್ರೋವಹ್ನಿ ಪಿತೃಪತಿ - ನಿಋಋತಿ | ಮಕರೇಶ ಪ್ರಭಂಜನಾ | ಸಾಂದ್ರೈಶ್ವರ್ಯ ಕುಬೇರ ಈಶದಿಕ್ಪಾ ಲಾದಿತ್ಯಶಶಿರಂಜನಾ | ಚಂದ್ರಾತ್ಮಜನುಭೌಮದೇವಗುರುತಾ | ಕವಿಮಂದ ಗ್ರಹಂಗಳಂ | ಸಾಂದ್ರಾಗೀಹ ಸಮಸ್ತಗಿರೀ ವಧುವರಾ | ಕುರ್ಯಾತ್ಸದಾ ಮಂಗಳಂ 5 ಶ್ರೀ ಮತ್ಸ್ಯಾಕೃತಿ ಕೂರ್ಮನಾಗಿ ವರಹಾ | ನರಸಿಂಹನೆಂದೆ ನಿಸಿದಾ | ವಾಮನಾಭೃಗುವರ್ಯರಾಮರಘುಪಾ | ಯದುವಂಶದಲಿ ಜನಿಸಿದಾ | ತಾ ಮತ್ತೇ ನಿಜ ಬೌದ್ಧಕಲ್ಕಿ ಎನಿಸೀ | ತಾಳ್ದಾವತಾರಂಗಳಂ | ಶ್ರೀ ಮನೋಹರ ದೇವಕೀ ವಧುವರಾ | ಕುರ್ಯಾತ್ಸದಾ ಮಂಗಳಂ 6 ಕಾಶೀ ಕಂಚಿ ಅವಂತಿಕಾ ವರಪುರೀ | ದ್ವಾರಾವತೀ ಮಥುರಾ | ದೋಷನಾಶಿಕ ಪುಣ್ಯಕ್ಷೇತ್ರ ಬದರೀ | ಶೇಷಾದ್ರಿವರ ಸೇತುಬಧ ತುಹಿನಾ | ರಜತಾದ್ರಿ ಸೈಲಂಗಳಂ | ಈ ಸಪ್ತಾಂಬುಧೀ ಸರ್ವದೀ ವಧುವರಾ | ಕುರ್ಯಾತ್ಸದಾ ಮಂಗಳಂ 7 ದಶರಥಾತ್ಮಜನಾದ ರಾಮಜಗದೀ | ಜನಕಾತ್ಮಜಾ ಸೀತೆಯಾ | ಕುಶಲದೀ ನರಲೀಲೆಯಿಂದ ಮೆರೆವಾ ವೈಭವ ಸಂಗsತಿಯಾ ಉಸರೀದಾ ಗುರುಮಹಿಪತಿಸುತ ಕ- ನ್ನಡ ಭಾಡೆ ಶ್ಲೋಕಂಗಳಂ | ವಸುಧೆಯಲಿ ಸ್ಮರಿಸುವವರಿಂಗೆ ಕೊಡುವಾ | ರಘುನಾಥ ಜಯಮಂಗಳಂ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶಂಕರಿ ಸರ್ವೇಶ್ವರಿ ಮೃಗಾಲಂಕಶೇಖರಿ ಜಯ ಜಯ ಪ.ಶಾಂಭವಿದೇವಿ ಸುರಕದಂಬಸಂಜೀವಿಅಂಬುಜಾಯತಾಕ್ಷಿ ಖಲಶುಂಭಮರ್ದಿನಿ 1ಬುದ್ಧಿದೇವತೆ ಸುರಸಿದ್ಧಸನ್ನುತೆಅದ್ರಿಜಾತೆ ರುದ್ರಪ್ರೀತೆ ಶುದ್ಧ ಭಾಗವತೆ 2ಧ್ಯೇಯರೂಪಿಣಿ ಮಹಾದೇವ ಮೋಹಿನಿಶ್ರೀಯಶೋದೆ ಲಕ್ಷ್ಮೀನಾರಾಯಣಭಗಿನಿ 3(ಕುಮಟಾದಲ್ಲಿಯ ಶಾಂತೇರಿ ಕಾಮಾಕ್ಷಿ)
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ