ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಭೀಮಸೇನ ಪ್ರಾರ್ಥನೆ) ಭೀಮಸೇನ ಸಕಲಸತ್ವಧಾಮ ರಕ್ಷಿಸೆನ್ನ ಬೇಗ ಸಾಮಗಾನ ಲೋಲ ಕೃಷ್ಣ ಪ್ರೇಮರಸಕೆ ಪಾತ್ರನಾದ ಪ. ಮಂಗಲಾಚರಿತ್ರ ನಿನ್ನ ಅಂಗಸಂಗದಿಂದ ಬಹು ತುಂಗ ಗಿರಿಯು ಒಡೆದು ಶತಶೃಂಗವೆನಿಸಿತು ಅಂಗುಲಿ ಪ್ರಹಾರದಿಂದ ಶಿಂಗತತಿಗಳನ್ನು ಬಹಳ ಭಂಗಬಡಿಸಿ ಬಾಲಲೀಲ ರಂಗದಲ್ಲಿ ಬಲುಹ ತೋರ್ಪ 1 ಹಸಿದ ವೇಳೆಯಲ್ಲಿ ಮೆದ್ದ ವಿಷದ ಭಕ್ಷ್ಯ ಜೀರ್ಣಗೊಳಿಸಿ ಉಶನ ಮಂತ್ರದಿಂದ ಹಲ್ಲ ಮಸೆಯುತಾ ಬಂದ ಅಸುರ ವೇಶದಷ್ಟಾಕ್ಷಿಗಳ ಮಶಕದಂತೆ ಬಡಿದು ಕೆಡಹಿ ಕುಶಲದಿಂದ ನಿದ್ರೆಗೈದ ಅಸಮಶಕ್ತಿ ಪೂರ್ಣಮೂರ್ತಿ 2 ನಗಗಳ ಮೇಲೇರುತ್ತ ಹಣ್ಣುಗಳನೊಂದೊಂದಾಗಿ ಕರದಿ ತೆಗೆದು ತಿಂಬ ಕೌರವರನು ನಗುತ ನೋಡುತಾ ನೆಗೆದು ಬೀಳ್ವ ತೆರದಿ ತರುಮೂಲಗಳಾ ತುಳಿದು ಕೆಡಹಿ ದೇವಾ- ಕೊಂಡ 3 ಗೂಗೆಯಂತೆ ನಿನ್ನ ಬಳಿಗೆ ಸಾಗಿ ಬಂದು ಶಕುನಿಮುಖರು ಯೋಗನಿದ್ರೆ ತಿಳಿಯದೆ ಚೆನ್ನಾಗಿ ಬಂಧಿಸಿ ಭಾಗೀರಥಿಯ ಜಲದಿ ದೂಡೆ ವೇಗದಿ ಪಾತಾಳವೈದಿ ನಾಗಕನ್ಯೆರಿತ್ತ ರಸವ ಬೇಗ ಸವಿದು ತಿರುಗಿ ಬಂದ 4 ದುರುಳರಿಂದ ರಚಿತವಾದ ಅರಗಿನ ಮನೆಗೆ ಹೋಗಿ ಕಾಲ ನಿರುತಕಿನಿಸಿಲಿ ಇರುಳಿನಲ್ಲಿ ತಾನೆ ಅಗ್ನಿ ಇರಿಸಿ ಬೇಗಲೆದ್ದು ಸಹೋ ದರರನೆತ್ತಿ ಬಹು ಯೋಜನಕೆ ಸರಿದು ಪೋದ ಶಕ್ತರರಸ 5 ಡೊಂಬಿಮಾಳ್ಪನೆಂದು ಬಹಳ ಡಂಬರದಿಂದಿದಿರಾ ಹಿ- ಕದಂಬ ವೈರಿಯ ಅಂಬರದೊಳಗೈದಿ ವಜ್ರಕಂಬದಂತೆ ಹೊಳವ ಬಹು ಸ್ತಂಭದಿಂದ ಕೆಡಹುತ ಹೈಡಿಂಬನೆಂಬ ಮಗುವ ಪಡೆದ 6 ನಗರ ದೊಳ್ವೈದಿಕರಂತೆ ವಾಸವಾಗಿ ಪೋಕ ಬಕನ ಬಾಧೆಯಿಂದ ಶೋಕಗೊಳುವರ ಸಾಕುವೆನೆಂದೆದ್ದು ನಾನಾ ಶಾಖ ಭಕ್ಷಾನ್ನಗಳ ತಾನೆ ಸ್ವೀಕರಗೊಂಡಸುರನನ್ನು ಸೋಕಿ ಸೀಳಿ ಬಿಸುಟ ದೊರೆಯೆ 7 ವಿಪ್ರ ವೇಷದಿಂದ ದ್ರುಪದಸುತೆಯನೊಲಿಸಿ ಕೃದ್ಧ ನೃಪರ ಗೆದ್ದು ರುಕ್ಮಿಣೀಶ ಕೃಪೆಯಾ ಬಲಕೊಂಡು ಅಪರಿಗಣ್ಯ ಪೌರುಷಕಿಂನುಪಮೆಯಿಲ್ಲವೆಂದು ಸರ್ವ ಖಪತಿವರರು ಪೊಗಳುತಿರಲು ತ್ರಿಪುರವೈರಿಯಂತೆ ಮೆರೆದ 8 ಅಂಧ ನೃಪನ ಮಾತ ಕೇಳಿ ಇಂದ್ರಪ್ರಸ್ಥ ಪುರಕೆ ರಾಜ ನೆಂದು ನಿಂದು ಮಗಧಾದಿಗಳ ನೊಂದೆ ನಿಮಿಷದಿ ಕೊಂದು ರಾಜಸೂಯಮೇಧದಿಂದ ಸಕಲಯಜ್ಞೇಶಗೋ- ಕೊಂಡ 9 ದ್ಯೂತ ನೆವದಿ ಸಕಲ ರಾಜ್ಯ ಸೋತು ವನಕೆ ಪೋಗಿ ಲಕ್ಷ್ಮೀ- ನಾಥ ಕರುಣ ಬಲದಿಂದ ಸುರವ್ರಾತವಡಗಿಸಿ ಭೂತನಾಥನೋರದಿ ಬಹಳ ಖ್ಯಾತ ಕೀಚಕಾದಿಗಳನು ಘಾತಿಸಿ ಗಂಧರ್ವನೆಂದಜ್ಞಾತವಾಸ ಕಳದ ಧೀರ 10 ದುರುಳ ಕೌರವರನು ಗದೆಯ ತಿರುಹಿ ಕೆಡಹಿ ಧರಣಿಭರವ ಸುರಪಸೂನು ಸಹಿತಲ್ಲಿಳುಹಿ ಪರಮ ಹರುಷದಿ ಹರಿಯ ನೇಮದಿಂದ ನಾಗಪುರವನಾಳಿ ವಿಷ್ಣುಭಕ್ತಿ ಸುಜನ ತತಿಯ ಪೊರೆದು ಪದ್ಮಜಾತನಾಹ11 ದುಷ್ಟವೈರಿ ಜನರ ಗೆದ್ದು ಅಷ್ಟ ಭಾಗ್ಯ ಸಹಿತ ದೇಹ ಪುಷ್ಟಿ ಜ್ಞಾನ ದೃಷ್ಟಿಗಳನು ಕೊಟ್ಟು ಕರುಣಿಪಾ ಸೃಷ್ಟಿಗೊಡೆಯ ಸರ್ಪರಾಜ ಬೆಟ್ಟದಲ್ಲಿ ನಿಂದು ಭಕ್ತ- ಭೀಷ್ಟವರದನೊಲಿಪ ತೆರದಿ ಸುಷ್ಠುಪ್ರೇಮವಿಟ್ಟು ಕಾಯೊ 12
--------------
ತುಪಾಕಿ ವೆಂಕಟರಮಣಾಚಾರ್ಯ
ಗುರ್ವಂತರ್ಗತ ಗೋಪಾಲ ಪಾಹಿ ಸರ್ವಪಾಲಕ ಶಿರಿಲೋಲ ಪ ಶರ್ವಸುರಗಂಧರ್ವ ಮುನಿಕುಲ Àಸರ್ವಸೇವಿತ ಗರ್ವರಹಿತನೆ ಅ.ಪ ರಾಮಾಕೃಷ್ಣ ವ್ಯಾಸರೂಪದಿಂದಾ ಮಾಮನೋಹರ ಮಾಡೆಕೃಪಾ ಶ್ರೀಮಧ್ವ ಮೊದಲಾದ ಆ ಮಹಾಮುನಿಗಳ ಸ್ತೋಮಸಂತತ ಮಹಾಪ್ರೇಮಮನದಲಿದ್ದು ಭೂಮಿತಳದೊಳಗಖಿಳಜನರಿಗೆ ಕಾಮಿತಾರ್ಥವ ಸಲಿಸಿ ತಾ ನಿ ಸ್ಸೀಮ ಮಹಿಮೆಯ ತೋರಿ ಇವರಿಗೆ ಆ ಮಹತ್ತರ ಕೀರ್ತಿಕೊಡುತಿಹ 1 ಆವಾವಜನುಮಗಳಲ್ಲಿ ಜಗಕೆ ಜೀವನಪ್ರದನಾಗಿ ಇಲ್ಲೀ ಶ್ರೀವರ ಸರ್ವೇಶ ಜೀವೇಶ ಸುರವಂದ್ಯ ದೇವ ನಿನ್ನಯ ಪಾದಸೇವಾವ ಸಲಿಸೆಂದೆ ಕೋವಿದರ ಕುಲಮಣಿಗಳೊಳಗೆ ಭಾವಿಪುದು ಸನ್ಮನವನಿತ್ತು ಗೋವಿದಾಂಪತೆ ಙÁ್ಞನಗಮ್ಯನೆ ಪಾವನಾತ್ಮಕ ಪರಮ ಪಾಲಿಸೋ 2 ದಾತ ಶ್ರೀ ಗುರುಜಗನ್ನಾಥವಿಠಲ ನೀ ಧಾತನಾಂಡಕೆ ಮುಖ್ಯನಾಥಾ ಧಾತಪ್ರಮುಖಸುರವ್ರಾತಸನ್ನುತಪಾದ ಪಾಥೋಜಯುಗಳ ಸಂಭೂತ ರಜೋದಿಂದ ಧೂತಪಾಪನ ಮಾಡುವದು ಅ ದ್ಭೂತ ಙÁ್ಞನ ವಿರಕುತಿ ಸಂಪ ದ್ಪ್ರಾತ ಪಾಲಿಸೊ ಹೇ ಮಹದ್ಭುತ ದಾತ ಎಂಬೆನೊ ನಮೋ ನಮೋ 3
--------------
ಗುರುಜಗನ್ನಾಥದಾಸರು
ನಿತ್ಯ ಕರ್ಮೇಂದ್ರಿಯ ಸೇವಿತನಿಗೆಮಂಗಳಂ ಉಡುಪಿನ ಶ್ರೀಕೃಷ್ಣನಿಗೆಪ. ನಂದನ ಕಂದನಿಗೆ ವೃಂದಾರಕೇಂದ್ರನಿಗೆಮಂದರ ಗಿರಿಧರಗೆ ಇಂದಿರಾಕಾಂತನಿಗೆನಂದ ಸುರವ್ರಾತನಿಗೆ ನಂದ ತೀ-ರ್ಥೇಂದ್ರ ಗೋವಿಂದ ಹರಿಗೆ1 ಮಕರ ಕುಂಡಲಧರ ರುಕುಮಿಣಿ ರಮಣನಿಗೆಅಕಳಂಕ ಮಹಿಮಗೆ ಅಕುಟಿಲನಿಗೆಶುಕವಾಹನನ ಪಿತಗೆ ಭಕುತವತ್ಸಲಗೆ ಅ-ಧಿಕ ಕೋಟಿರವಿತೇಜ ಮಕುಟ ದಿಟ್ಟನಿಗೆ 2 ಸರಸ ಮಂದಹಾಸನಿಗೆ ನರಹರಿ ರೂಪನಿಗೆವರ ಕೌಸ್ತುಭಹಾರ ಧರಿಸಿದವಗೆಕರುಣದಿ ಗೋಪಿಯರ ಧುರದಿ ರಕ್ಷಿಪನಿಗೆಸಿರಿಮುದ್ದು ಹಯವದನ ಮುರಹರನಿಗೆ 3
--------------
ವಾದಿರಾಜ
ಭವ ಕೂಪನಿ ಪತಿತಂ ಪ ಘೊರ ದುರಿತಹರ ಚಾರುಚರಣಯುಗಲಂ ಪ್ರಣ ಮಾಮಿ ತ್ರಿಕಾಲಂ ಅ,ಪ ಕಾರ್ಪರ ಋಷಿಕೃತ ಘೋರ ತಪ:ಪ್ರೀತ ಅ- ತ್ರಾವಿರ್ಭೂತ ಕಾರ್ಪರ ಗ್ರಾಮೇತೀರ ಗತಾಶ್ವತ್ಥ ಪೇಣ ಸಮಸ್ತ ಆರಾಧಕ ನಿಜಭಕ್ತ ಜ- ನಾಭಿಷ್ಟ ವರ್ಷಣ ಸರ್ವೇಷ್ಟ ನಾರಾಯಣ ಮುನಿ ಪೂಜಿತ ಸುರವ್ರಾತ ಸಂಸ್ತುತ ಶುಭಚರಿತ 1 ಸಾಕ್ಷಾಚ್ಛ್ರೀರ ಪಿವೀಕ್ಷ್ಯಾದ್ಭುತರೂಪಂ ತವ ಪ್ರಕಟಿತ ಕೋಪಂತ್ರ್ಯಕ್ಷಾದ್ಯಮರೈ:ಪ್ರೇಷಿತಾಪಿ ಸ್ವ¥ತಾ ಶಂಕೆ- ತೇವ ತಸ್ಥಾ ರಕ್ಷಿತÀವಾನಭಿ ವೀಕ್ಷ್ಯ ಪ್ರಹ್ಲಾದಂ ಕೃತ್ವಾಪ್ರ ಸಾದಂ ಲಕ್ಷ್ಮೀಧವಖಲ ಶಿಕ್ಷಣ ತವಚರಿತಂ ಜ್ಞಾಪಯಮೇ ಸತತಂ 2 ಭಕ್ತಿಂದೇಹಿ ಪ್ರಶಸ್ತಾಂತ್ವಯಿ ಕೃಪಯಾ ಚಿಂತಿತ ದುರ್ವಿಷಯಾ ಸಕ್ತಿಂಜಹಿ ಸದ್ಭಕ್ತ ಚಿತ್ತನಿಲಯ ಕಾಯಾಧವ ಪ್ರಿಯ ಶೃತಿಪುಟಸಂಭೃತಯಾ ಮುಕ್ತಾ ಮುಕ್ತ ಸಮಸ್ತ ಜಗತ್ಕಾಯಾ ಸುರಗಣ ಸಂಶೇವ್ಯಾ3 ಸುಜನಾರ್ತಿಹರಣಾ ವೃಕ್ಷಾದವತೀರ್ಣ ಮದೃತ್ತಿಮಿರ ಪ್ರದ್ಯೋತನಕಿರಣ ಸನ್ನಿಭಶುಭ ಚರಣ ಷಡ್ಗುಣಸಂಪನ್ನ 4 ಮಂಗಳ ಕೃಷ್ಣ ತರಂಗಿಣೆ ಕೂಲಸ್ಥ ಅಶ್ವತ್ಥೋದ್ಭೂತ ತುಂಗವದನ ಬಹು ಶಾಲಿಗ್ರಾಮಗತ ಷೋಡಶ ಬಾಹುಯುತ ಮಾತಂಗ ಸಂಗೀತಪ್ರಿಯ ಮಂಗಳತರಚರಿತ ಶತಿತತಿ ವಿಖ್ಯಾತ 5
--------------
ಕಾರ್ಪರ ನರಹರಿದಾಸರು
ರಂಗವೊಲಿದ ದಾಸರಾಯ | ಸತ್ಕವಿಜನಗೇಯ ಪ ಮಂಗಳಕರ ಕುಲಿಶಾಂಗ ಮತಾಂಬುಧಿ ಮಾನವ ಸಿಂಗಾರ್ಯರ ಸುತ ಅ.ಪ ಶರಣು ಮಂದಾರ ಪರಮೋದಾರ ಪರಿಪಾಲಿಸು ಧೀರ ಮಣಿ ಸುಹಾರ ಶೋಭಿತ ಕಂಧರ ಸಾರ ಸು ರಸಗ್ರಂಥ ಕೃತ ಕರುಣಾನಿಧೆ ಗುರು 1 ಜ್ಞಾನಿಕುಲನಾಥ ಭಾನುಜಸೂತ ಭವವಾರಿಧಿ ಪೋತ ಕ್ಷೋಣಿ ಸುರವ್ರಾತ ನಮಿತ ಸುಖ್ಯಾತ ವರದಾನಿ ಪುನೀತ | ಧೇನುಪಾಲ ದಾಸಾರ್ಯರ ಪದಯುಗ ಧ್ಯಾನಿತ ಮಾನಿತ ಮಾನವಿ ನಿಲಯ 2 ದುರಿತ ವಿದೂರ ಸನ್ಮಹಿಮಾಪಾರ ಪಾಮರ ಹೇಮಶಯ್ಯ ಕುಮಾರ ಕುಮತಾಬ್ಧಿ ಸಮೀರ ಕೋಮಲಾಂಗ ಮಮಸ್ವಾಮಿ ಸೋಮನುತ ಶಾಮಸುಂದರ ಸುಧಾಮ ಪ್ರೇಮ ಸಖ 3
--------------
ಶಾಮಸುಂದರ ವಿಠಲ
ಶ್ರೀ ನರಸಿಂಹದೇವ ಶರಣ ರಕ್ಷಕನೆ ದಾನವಾರಿ ಸುಭಕ್ತಾಧೀನ ಮೂರುತಿಯೆ ಪ. ಹರಿ ತನ್ನ ದೈವವೆಂದು ಸ್ಮರಿಸುತಿರಲು ಬಾಲ ನಿರವ ಕಾಣದೆ ದುಷ್ಟಹಿರಣ್ಯಕಾಸುರನು ಪರಿ ಹಿಂಸಿಸೆ ಮೊರೆದು ಕೋಪದೊಳೆದ್ದು ತರಳಗೊಲಿದೆ ಬಹು ಕರುಣಾನಿಧಿಯೆ 1 ಛಿಟಿ ಛಿಟಿಲೆಂದಾರ್ಭಟಿಸಿ ಕಂಬವು ಸಿಡಿಯೆ ಕಟಿ ಮಸಿದಗ್ನಿ ನಿಟ್ಟುಸಿರಿನಿಂ ಹಲ್ಗಳ ಕಟಿ ಕಡಿವುತುಬ್ಬಸ ತೋರಿ ನಿಂದ ಕಠಿಣ ಮೂರುತಿಯೆ 2 ಕೊಬ್ಬಿದ ಹಿರಣ್ಯಕನುಬ್ಬ ಮುರಿವೆನೆಂದು ಹೆಬ್ಬಾಗಿಲೊಳು ಸಂಜೆ ಮಬ್ಬಿನಲಿ ಧನುಜನ ಗರ್ಭವ ನಖದಿಂದ ಇಬ್ಭಾಗವನು ಮಾಡಿ ಹಬ್ಬಿದ ಕರುಳನು ಹರುಷದಿ ಧರಿಸಿದೆ 3 ಭೀತರಾದ ಸುರವ್ರಾತ ಪ್ರಾರ್ಥಿಸೆ ಬಹು ಶಾಂತನಾಗಿ ಸಂತೋಷಪಡಿಸಿದ ಅ- ನಾಥ ರಕ್ಷಕನೆ ಕಾತರವಳಿದೆ 4 ಖಳನ ಮರ್ದಿಸಿ ಬಹು ಇಳೆಯ ಪಾಲಿಸಿದೆ ನಳಿನ ಸಂಭವಗೆ ಬಲು ಹರುಷವನಿತ್ತೆ ಹೆಳವನಕಟ್ಟೆ ಶ್ರೀ ರಂಗ ದಾಗಿನಕಟ್ಟೆನೆಲೆವಾಸ ಕಂಬದ ನರಸಿಂಹದೇವ 5
--------------
ಹೆಳವನಕಟ್ಟೆ ಗಿರಿಯಮ್ಮ