ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಸಾರ್ಥಕವಾಯಿತು ಎನ್ನ ಜನನಾ ಚಂದ್ರ ಪುಷ್ಕರಣಿಯ ವಾಸ ರಂಗನ್ನ ಕಂಡು ಪ ಸುತ್ತೇಳು ಪ್ರಾಕಾರಗೋಪುರ ಮಹಾದ್ವಾರ ರತ್ನದ ಕವಾಟ ತೋರಣಗಳು ಕತ್ತಲೆ ಹರನಂತೆ ಕಣ್ಣಿಗೆ ತೋರುತಿದೆ ತುತ್ತಿಸಲಳವೆ ಅನಂತ ಜನುಮಕೆ 1 ಸಾಲು ಬೀದಿಗಳು ಒಂದೊಂದರ ಮಧ್ಯದಲಿ ಸಾಲು ಮಂಟಪ ಮುತ್ತಿನ ಚಪ್ಪರಾ ಕೀಲುಮಣಿಗಳಿಂದ ಬಿಗಿದ ಸೊಬಗು ಹೊಂ ಬಾಳೆಸ್ತಂಭಗಳೆಡಬಲದಲ್ಲಿ ಒಪ್ಪಲು 2 ಮುಂದೆ ಗರುಡಗಂಭ ಪವಳದ ಗವಾಕ್ಷಿ ಹಿಂದೆ ನೆರೆದ ಬಲು ಪರಿಯಂಗಡಿ ಸಂದಣಿಯಿಂದ ಭೂಸುರರು ಸ್ತೋತ್ರವ ಪೇಳೆ ಒಂದೊಂದು ಬಗೆಯಲ್ಲಿ ವಂದಿಸುವುದು ಕಂಡು 3 ಚಂದನ್ನನಿಂದೆ ಪೋಗಾಡಿದ ಸರೋವರ ಒಂದು ಸುರವನ್ನೆ ವೃಕ್ಷದಲ್ಲಿ ಮಿಂದು ಸಜ್ಜನರು ಕೈಗಳ ಮುಗಿದು ನಮೊ ಎಂದು ಕೊಂಡಾಡುವರು ವೇಗದಲ್ಲಿ 4 ಪ್ರಣವಾಕಾರವಾದ ವಿಮಾನ ಅದರ ಮೇಲೆ ಮಿನುಗುವ ವಾಸುದೇವಾದಿಗಳ ಮನದಣಿಯ ಕೊಂಡಾಡಿ ಮುದದಿಂದ ಪಾಡುತ್ತಾ ಫಣಿ ತಲ್ಪನಾಥ ಶ್ರೀ ಪರಮಪುರುಷನ ಕಂಡು 5 ಕಮಲಾಕ್ಷ ಕುಳಿರತೆರದಿ ಕದಪು ಕರ್ಣ ಕುಂಡಲ ಉರದಲ್ಲಿ ಕೌಸ್ತುಭ ಹಾರ ಪದಕ ಪಾವನ ಪಾದಾ6 ನಸುನಗೆ ಚತುರ್ದಶ ಲೋಕವ ಬಿಸಜ ಕರಗಳು ಭೂಷಣದಿಂದಲಿ ಬಿಸಜ ಭವನ ಪಡೆದು ನಾಭಿ ವಸನಕಟಿ ಮಿಸುಣಿಪ ವಡ್ಯಾಣ ಸರ್ವ ಲಕ್ಷಣನಾ 7 ಕಾಲ ಕಡಗ ಪೆಂಡೆ ಪೊಂಗೆಜ್ಜೆ ಅಂದಿಗೆ ವಾಲಾಯ ಪದತಳದಲಿ ರೇಖೆ ವಾಲಗ ಸಿರಿದೇವಿ ಪ್ರೀತಿಯಿಂದಲೆ ಮಾಡೆ ಸುರರು ಸಮ್ಮುಖದಲಿ ನುತಿಸೆ 8 ಉಭಯ ಕಾವೇರಿ ನಡುವೆಯಿದ್ದು ದಕ್ಷಿಣ ಅಭಿಮುಖವಾಗಿ ಪವಡಿಸಿದ ವಿ ಭೀಷಣದ ವರದ ರಂಗ ಮಂದಿರ ನಿಲಯಾ ವಿಬುಧೇಶ ವಿಜಯ ವಿಠ್ಠಲ ರಂಗನ ಕಂಡು9
--------------
ವಿಜಯದಾಸ
ಏಳು ಏಳು ಏಳು ಲೋಕದ ಒಡಿಯನೆ | ಏಳು ಗೋವಳರಾಯ ಗೋಪೇರಿಗತಿ ಪ್ರಿಯಾ | ಅಪ್ರಾಕೃತ ಕಾಯಾ ಸುರಮುನಿ ಗೇಯಾ | ಏಳು ಗೋಪಾಲಕೃಷ್ಣ ಪ ಪುರಂದರನ ದಿಶೆಯಲ್ಲಿ ಗರುಡಾಗ್ರಜನು ಬರಲು | ಶರಧಿ ತೆರೆ ತಗ್ಗಿದವು ಉರಗ ಪೆಡೆ ಪಸರಿಸಿದಾ | ಹರಿದು ಪೋಯಿತು | ಕಾಳ | ಸುರ ವೈರಿಗಳು ಅಡಗಲು | ಅರಳಿದವು ಅರವಿಂದ | ಝಂಕರಿಸಿ ಶುಕಪಿಕ ಮೃಗಾದಿ ಯೆ-| ಕರುಣಾಳುಗಳ ದೇವನೆ 1 ಮೇರೆ ತಪ್ಪಿ ಬಂದಾ ರಥಸಹಿತ ಭಾಸ್ಕರನು ದಿಶದಿಶೆಗೆ ಕಿರಣಗಳ | ಹರಹಿಕೊಳುತಾ | ಹರಿ ಗುರುವೆ ಪೇಳಲಳವೆ | ಕಲಿಸಿ ಮಂದಿರದೊಳಗೆ ಎಳೆಬಾಳೆ | ಶೃಂಗರಿಸಿದರು ಅರವಿಂದನಾಭ ಚೆಲುವ 2 ಪರಮ ಮಂಗಳವಾದ ದ್ವಾರ ದ್ವಾರಗಳಿಗೆ | ವಿರಚಿಸಿತು ಕಳಿತೆ ತೋರಣ ಕನ್ನಡಿ ಮಲಕು | ಭರದಿಂದಲಿ ಬಿಗಿದು ಮೇಲ್ಕಟ್ಟು ಚಿತ್ತರದ ಗೊಂಬೆ | ಪರಿಚಾರವು ವಪ್ಪಲು | ಹಿರಿದು ಹೂವಿನ ಮಾಲೆ ಕಟ್ಟಿದವು | ಮಕರವು ತುರ ತೊ ಗರು ಪೊಗಳು ಕಾದೋದಕವು ತಂದಿರೆ | ಅರಸಾದ ಆದಿದೈವ3 ಪರಮ ಭಾಗವತರು ಬತ್ತೀಸರಾಗದಲಿ | ಸ್ವರಮಂಡಲಾ ತಾಳ ತಂಬೂರಿ ಕಿನ್ನುರಿಗ ಸರವೇಣಿ ನಾನಾ ಗೀತ | ಪರಿ ಪರಿ ಕೊಂಡಾಡುತಿರಲು | ಕುಣಿಯುತಿದೆ ಸುರನಿಕರ ಪರಿಪಾಲಿಕ 4 ಸುರ ನರೋರಗ ಯಕ್ಷಗರುಡ ಸಿದ್ಧ ವಿದ್ಯಾ | ಕಿನ್ನರ ಸಾಮ | ಪರಮೇಷ್ಟಿ ವಾಲಗಕೆ ಬಂದು ಎ- ದುರು ನಿಂದು ತುತಿಪನಾಹಕೊ ಭರಿತಾಭರಣವಿಟ್ಟು | ಸರಸ್ವತಿ ಭಾರತಿ ಗಿರಿಜೆ ಸುರನಾರಿಯರು ತಮ್ಮ | ಹರಿವಾಣ | ದಾರುತಿಯ ಪಿಡಿದು ನಿಂದೈಧಾರೆ ಶರಣಾಗತ ವತ್ಸಲಾ 5 ಕರಿ ತುರಗ ರಥಪಾಯದಳವು ದಟ್ಟಡಿಯಾಗಿ | ನೆರದಿದೆ ಸಭೆಯಲಿ ಸಪ್ತಾಂಗದವರುಂಟು | ಅರಿ ಶಂಖಗದಾ ಪದುಮಖೇಟ ನಂದನ ಮುಸಲಾ | ಪರಶು ನೇಗಲ ಸುಶಕ್ತಿ ಪರಿಪರಿಯ ದಿವ್ಯಾಯುಧವ ತಮತಮಗೆ | ಧರಿಸಿ ಸಂತೋಷದಲಿ ದಾತಾರ ನಿನ್ನಯ ಬರುವ ಹಾರೈಸಿ | ವೈರಿಗಳು ನೋಡುತಲಿ ಹಾರೆ ಕುರುವಂಶ ವಿನಾಶಕಾ 6 ಸುರಿಗೆ ಪಾರಿಜಾತದ ಮಲ್ಲಿಗೆ | ಸುರವನ್ನೆ ಬಕುಳ ಪಾರಿ ಭದ್ರ ಸಂಪಿಗೆ | ಮರುಗ ಮಲ್ಲಿ ಜಾಜಿ ಕಾಂಜಿ ಶಾವಂತಿಗೆ ಕರವೀರ ನಂದಾವರ್ತ | ಅರಗುಂದ ಕುಂತಾತಸಿದವನ ಮುಡಿವಾಳ | ಈರವಂತಿಕೆ ಕೇತಿಕಾ ಸರ್ವ ಕುಸುಮಗಳಿಗೆ | ಶಿರೋರತನವಾದ ಎಳದುಳಸಿ ಹಾರಗಳಿಗೆ | ಅರಿಗಳ ಮಸ್ತಕಾಂಕುಶಾ7 ಚರಣದಂದಿಗೆ ಪೆಂಡೆ ಪೊಂಗೆಜ್ಜಿ ಮಣಿಮಯದ | ಸರಪಳಿಯು ತೊಡೆದು ಬಿರುದಾವಳಿಗಳು ಪೀತಾಂ | ಕಾಂಚಿ ದಾಮಾ | ಸರಿಗೆ ನ್ಯಾವಳಹಾರ ತುಳಸಿ ಕೌಸ್ತಭ ಪದÀಕ | ಸಿರಿವತ್ಸ ಕನಕಕುಂಡಲ ನೊಸಲ ಮೃಗನಾಭಿ | ಕರದಾಭೂಷ ಫಣಿಮಕುಟ ಧರಿಪಾ ದೇವಿ ನಿನ್ನ | ದರುಶನ ಭಕ್ತರಿಗೆ ಲಾಭಾ 8 ಸಿರಿ ಏಳಲೀಸಳೊ ಹತ್ತವತಾರವನು ಧರಿಸಿದ ದಣವಿಕಿಯ | ಕರಿ ಕಾಯಲಿ ಬಂದ ಭರದ ಉನ್ನತವು | ರಣದೊಳಗೆ ಪಾರ್ಥನ್ನ ರಥದ ತುರುಗವ ನಡಿಸಿದ ಲಜ್ಜೆಯ | ಸುರತ ಕ್ರೀಡೆಯಲಿ ಸ್ತ್ರೀಯರೋಳಾದಂಜಿಕಿಯೊ | ವರವ ಕೊಡು ಎಂದು ಬಂದು ಮಮ ಭಕ್ತರ ಭಯವೊ | ಸಿರಿ ವಿಜಯವಿಠ್ಠಲ ಉಡುಪಿಯ ಕೃಷ್ಣ ನಿನಗೆ | ದರಿಲ್ಲವೆಂಬೊ ಘನವೊ9
--------------
ವಿಜಯದಾಸ