ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೋಗಣೆ ಮಾಡೊ ಆನಂದಮೂರುತಿ ಪ. ರÀನ್ನದ ತಳಿಗೆಯನ್ನು ಶೋಭನವಾದ ಪೊನ್ನ ಬಟ್ಟಲುಗಳ ನೆರವಿ ಶ್ರೀಹರಿಗೆ ನಿನ್ನರಸಿ ಆ ಲಕ್ಷ್ಮಿ ಸೊಸೆಯರ ಕೂಡಿ ಶಾ- ಲ್ಯನ್ನ ಸವಿಶಾಕಗಳ ನೀಡಿದ ಕೈಯಿಂದ 1 ತುಪ್ಪ ಮಧು ಚಿತ್ರಾನ್ನ ಪಾಯಸ ಕರಿಗಳ ಸಾರಸ ಭಕ್ಷ್ಯಗಳ ದಧಿ ಪಕ್ವಫಲಂಗಳು ಆ ಪದ್ಮಮುಖಿ ಬಡಿಸಿದಳು ಲೇಹ್ಯಪೇಹ್ಯವ 2 ಎನ್ನ ಕುಂದುಗಳಾಮುನಿಗೆ ದಿವ್ಯ ಅನ್ನವೊ ಮನ್ನಿಸಿ ಕರೆದು ನಿನ್ನ ಕರಕಂಜದಿಂದ ಪೂರ್ಣವಮಾಡು ಭುಜಿಸೊ ಹಯವದನ ಕೃ- ಪಾಳು ಸಕಲಲೋಕಪಾಲ ಸುರರೊಡೆಯನೆ 3
--------------
ವಾದಿರಾಜ
ಕರಗತನಾಗಿರಲು ಶ್ರೀಕೃಷ್ಣನು ಪ ಪುರಜನಗಳಿಗಿನ್ನು ಕೊರತೆಗಳುಂಟೆ ಅ.ಪ ಪರಮದಯದಿ ತನ್ನ ನೆರಳಿನೊಳೆಲ್ಲರ ಪೊರೆಯುತಿರುವ ನಮ್ಮ ಸಿರಿವಲ್ಲಭನು 1 ನಾಡಿನ ಭಕುತರ ಕೂಡಿಸಿ ಮುದದಲಿ ಬೇಡಿದ ವರಗಳ ನೀಡುವ ದೊರೆಯು 2 ಬಿಡಿಬಿಡಿ ನಿಮ್ಮಯ ಕಡು ಕ್ಲೇಶಗಳೆಂದು ಗಡಗಡ ದುಂದುಭಿ ಹೊಡೆಸುವ ಧೀರನು 3 ಪತಿತ ಪಾವನೆಂದು ಪ್ರಥೆಯನು ಪೊಂದಿಹ ಕ್ಷಿತಿಸುರರೊಡೆಯನು ಅತಿಸುಲಭದಿಲಿರೆ 4 ಎನ್ನನು ಸೇವಿಸಿ ಧನ್ಯರಾಗಿ ಎಂದು ಸನ್ನೆಯನೀವ ಪ್ರಸನ್ನ ಶ್ರೀಮಾಧವ 5
--------------
ವಿದ್ಯಾಪ್ರಸನ್ನತೀರ್ಥರು
ಕವಿಗಳು ಪೊಗಳುವ ವಿವರವ ಪೇಳುವೆ ಪ ಅವನಿಯೊಳ್ ಕೃಷ್ಣನು ಅವತರಿಸುವ ಕಥೆ ಅ.ಪ ಸುರರೊಡೆಯನ ದಿವ್ಯ ತರುವನು ಬಲದಲಿ ಸರಸಿಜನಾಭನು ಧರೆಗೆ ತರುವನೆಂದು ಅರಿಯುತ ವರ ಸುಮನಸರೆಲ್ಲ ಕರಗಳಿಂದಲಿ ಸುಮ ಸುರಿದರೆಂದೆನುತಲಿ 1 ಅಂಬುಜನಾಭನು ಶಿಶುವಾಗಿರಲವನ ಸಂಭ್ರಮದಲಿ ತನ್ನ ವಶಗೊಳುವುದಕೆ ತುಂಬುರು ಗಂಧರ್ವರು ಪಾಡಿದರು ರಂಭೆ ಊರ್ವಶಿಯರು ನೃತ್ಯ ಮಾಡಿದರೆಂದು2 ವಾಸುದೇವನು ತನ್ನ ಶಿಶುವೆಂದರಿಯುತ ವಸುದೇವನ ಬಲು ಆಸೆಗೆ ನಗುತಲಿ ವಸುಗಳು ದೇವರು ವಾಸುದೇವನು ತಮ್ಮ ಕೂಸು ಏಕಲ್ಲವೆಂದು ಹರುಷ ಪೊಂದಿದರೆಂದು 3 ಇಂದುವದನನ ಅಂದವ ನೋಡುತ ಚಂದ್ರಕಲೆಯರ್ಧ ಕುಂದಿದನೆನ್ನುತ ಸುಂದರಕೃಷ್ಣನು ಅಂದು ತನ್ನಯ ಕುಲ ದಿಂದ ಬಂದಿರೆ ಬಲು ನಂದ ಪೊಂದಿದನೆಂದು 4 ಪನ್ನಗಶಯನನು ಸಣ್ಣ ಕೂಸಾಗಿರೆ ತನ್ನ ವಿಭುತನಕೆ ಇನ್ನು ಕುಂದಿಲ್ಲವೆಂದು ಉನ್ನತ ಗಗನ ಪ್ರಸನ್ನನಾಗಿ ದಿವ್ಯ ಸಣ್ಣ ತಾರೆಗಳಿಂದ ಬೆಡಗು ತೋರಿದ ಕಥೆ 5
--------------
ವಿದ್ಯಾಪ್ರಸನ್ನತೀರ್ಥರು
ಜಗನ್ನಾಥದಾಸರ ಸ್ತೋತ್ರ ಅಂಬುಜಾಕ್ಷಿ ಸ್ತಂಭದಿಹನ್ಯಾರೇ - ಸಾರೇ ಪ ನಂಬಿ ಭಜಿಸುವ ಭಕುತರ ಮನದಹಂಬಲ ನೀಡುವರೆ - ನೀರೇ ಅ.ಪ ಸುರರೊಡೆಯನೋಲ್ ಪರಿಪರಿಯಲೈ- ಶ್ವರ್ಯದಿಂ ರಾಜಿಸುವರ್ಯಾರೇಹರಿಕಥಾಮೃತ ಗ್ರಂಥ ವಿರಚಿಸಿಧರಣಿ ಸುರರುದ್ಧರಿಸಿದವರೆ 1 ಫುಲ್ಲಲೋಚನೆ ಬಲ್ಲೆಯಾ ಇವ -ರಿಲ್ಲಿರುವ ಕಾರಣವಿದೇನೆಫುಲ್ಲನಾಭನ ಪುಡುಕುತಲೀಪ್ರಹ್ಲಾದನನುಜ ಸಹ್ಲಾದರಿವರೆ 2 ಜಲಜ ತುಳಸಿಮಣಿ ಸುಮಾಲಿಕೆಗಳದಿ ಧರಿಸಿಹನ್ಯಾರೆ - ನೀರೇಕಲಿಯುಗದಿ ಕಮಲಾಪತಿ ವಿ- ಠಲನ ಒಲಿಸಿದಿಳೆಯೊಳಗೆ ಮೆರೆವರೆ 3
--------------
ಕಮಲಪತಿವಿಠ್ಠಲರು
ಪುಟ್ಟಿದೆ ಭುವಿಯೊಳು ಬಹುದಿನ ಕಳೆದೆನೊಪುಟ್ಟಿಸ ಬೇಡವೆನ್ನ ಪ ಪಟ್ಟಾಭಿರಾಮನೆ ಪರಮಘಟ್ಯಾಗಿ ನಿನ್ನ ಪಾದಗಳ ನಂಬಿದೆ ದೇವ ಅ.ಪ ಎಂಭತ್ತು ನಾಲ್ಕು ಲಕ್ಷ ಯೋನಿಯಚೀಲಗಳಲಿ ಬಂದೆನೊ ಕುಂಭಿಣಿಯೊಳು ಪುಟ್ಟಿ ಬಹು ಪಾಪಗಳ ಮಾಡಿಕುಂಭೀಪಾಕದಿ ಬೆಂದೆನೊ ಅಖಿಳ ಸುರರೊಡೆಯನೆಅರ್ತಾರ್ತಿಹರನೆಂದು ಕೇಳಿ ಬಂದೆನು ನಾನು 1 ಜನಪಾಶ ಬದ್ಧನಾದೆಮೀನು ಮಾಂಸದಾಸೆಗ್ಹೋಗಿ ಸಿಕ್ಕಿದಂತೆಮೋಸ ಹೋದೆನೊ ಬರಿದೆಏಣವು ಕಿಂಕಿಣಿಧ್ವನಿಗೆ ಮರುಳಾದಂತೆಇಳೆಯೊಳು ಮಂಕಾದೆನೊಏನೆಂಬೆ ದಾಸರಿ ಕೋಡಗದಂದದಿಕುಣಿಯುವೆ ನಾನೆಲ್ಲ ಜನಗಳ ಮುಂದೆ 2 ಕಾಯ ಪೋಷಣೆಗಾಗಿ ಹೇಯಕರ್ಮಂಗಳಕಾಲ ಕಾಲದಿ ಮಾಡ್ದೆನೊಜಾಯಾದಿಗಳ ರಕ್ಷಣೆಮಾಡೆ ಅದರಿಂದಜಾಗರೂಕನಾದೆನೊನ್ಯಾಯರಹಿತನಾಗಿ ಗುರು ಹಿರಿಯರ ಪಾದಭಜನೆ ಮಾಡದೆ ಪೋದೆನೊಕಾಯಜನೈಯನೆ ಶ್ರೀಕೃಷ್ಣರಾಯನೆಕಾಯಬೇಕೆನ್ನಪರಾಧಗಳನು ದೇವ3
--------------
ವ್ಯಾಸರಾಯರು
ಯಾರೇನು ಮಾಡುವರೋ ಹರಿಯೇ ಯಾರಿಂದಲೇನಹುದು ಪ ವಾರಿಜಾಂಬಕ ಮಾರಜನಕ ಕೌಸ್ತುಭ ವಕ್ಷ ಶ್ರೀಶಾ ಅ.ಪ. ಅಜ ಈ ಜಗ ಸೃಜಿಸಿದನೆ ಶ್ರೀದೇವಿಯು ನಿಜಗುಣ ನೆಲೆಗಂಡಳೆ ಭುಜಗಭೂಷಣ ಆಯಕರ್ತನಾದರೆ ಭಜಕನಾ ಬಯಕೆ ಬಾಯಬಿಡುವದೆ 1 ಸುರಪ ಸುರರೊಡೆಯನೆ ಧರಣಿ ಈ ಉರಗೇಂದ್ರ ಪೊತ್ತಿದನೆ ದುರುಳನ ಭಯಕೆ ಪುರವ ಬಿಟ್ಟೋಡಿದ ಧರಣಿಯ ದುರುಳನೊಯ್ಯೆ ವರಾಹರೂಪದಿ ತಂದೆ ನೀ ತಂದೆ ಹರಿಯೇ 2 ಶ್ರೀಪತಿ ಸುರತತಿಯ ಸೃಜಿಸಿ ಈಪ್ಸಿತಾರ್ಥಗಳನೆಲ್ಲಾ ಅವರಿಗೆ ಸ್ವಾಪ್ನಜಾಗೃತಿಯಲಿ ಪರಿಪಾಲಿಸೆ ಮಹಾನಿಧಿವಿಠಲ ನೀನಲ್ಲದಿನ್ಯಾರೋ 3
--------------
ಮಹಾನಿಥಿವಿಠಲ
ಶ್ರೀಪುರುಷೋತ್ತಮಪಾಹಿಜಯಜಯಮು-ರಾರೆ ನರಹರೆ ಸುರದೊರೆ ಪಸಾರಸನಯನ ಶ್ರೀ ಮುಕುಂದ ಹರೆ ಶ್ರಿತಜನರಕ್ಷಕಭಾನುಕೋಟಿ ಕಾಂತಿಸುಂದರ ಪ್ರಭÉೂೀ ನಮಿತಚರಣಕಾಮಜನಕ ಕಮಲವದನಶ್ರೀಮುಕುಂದ ಗರುಡಗಮನಉರಗಶಯನ ನಮಿಪೆನಿನ್ನಸುರರೊಡೆಯನೆ ತ್ವರದಿ ಬಾ 1ಚಂದದಿ ನಮಿಪೆ ಸುಂದರಾನನ ಮುನಿಹೃದಯಸದನಇಂದಿರಾ ರಮಣ ಮುರಮರ್ಧನ ಚಂದ್ರವದನಮಂದರಗಿರಿ ಎತ್ತಿದ ಬಲುಚಂದದಿಂದ ಸುರರ ಪೊರೆದವಂದಿಪೆ ಗೋವಿಂದ ನಿನ್ನಚಂದ ಪಾದಕ್ಕೆರಗಿ ನಮಿಪೆ 2ಕಾಮಿನಿರೂಪವ ಪ್ರೇಮದಿಂದಲಿ ನೀ ತಾಳುತಲಿಕಾಮಜನಕನೆಂದರಿಯದೆ ಭ್ರಾಮಕರಾಗಿರಲುಕಾಳಿಫಣಿಯ ತುಳಿದು ಹರಿಯುಅಸುರರಟ್ಟಿ ಸದೆದು ನೂಕಿಕಂಸ ಮರ್ಧನ ಕಮಲನಾಭವಿಠ್ಠಲ ವಸುಧೆಯೊಳಗೆ ಮೆರೆದ 3
--------------
ನಿಡಗುರುಕಿ ಜೀವೂಬಾಯಿ