ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಗುರು ರಾಜರ ಸೇವಿಸಿರೋ---- ದಂಡ ಕಮಂಡಲ ಪಿಡಿದಿ ನಿಂದಿಹ ಹಸ್ತ ಭೂ ಮಂಡಲವೆಲ್ಲಾ ತಿರುಗಿ ಬಂದಿಹ ಹಸ್ತ ಬಿಡದೆ ಭಕುತರಾ ಸಲಹುವ ಹಸ್ತ ಪತಿ ಶ್ರೀ ರಘು ರಾಮರ ಸೇವಿಪ ಹಸ್ತಾ ಮತ್ತೆ ಭೂಸುರರಿಗೆಲ್ಲಾ ಅಭಯವೀಯುವ ಹಸ್ತ ಮುಕ್ತಿಮಾರ್ಗಕೆ ದಾರಿ ತೋರುತಿಹ ಹಸ್ತ ಚಿತ್ತಜನಯ್ಯನ ನೆನೆದು ಮನದಲ್ಲಿ ನಲಿಯುವ ಹಸ್ತಾ ಭೂತ ಪ್ರೇತಗಳನೆಲ್ಲ ಓಡಿಸುತಿಹ ಹಸ್ತ ಸಕಲವ್ಯಾಧಿಗಳ ಹರಿಸಿರಕ್ಷಿಪ ಹಸ್ತ ಸುವ ಜನರ ಉದ್ಧಾರ ಗೈಯುವ ಹಸ್ತ ಸರುವದಾ ಶಿರಿಪತಿಯ ಕೊಂಡಾಡುವ ಹಸ್ತಾ ಕನಸಿಲಿ ಬಂದು ಕಣ್ಣಪೊರೆ ತೆಗೆದಿಹ ಹಸ್ತ ಮುದದಲಿ ಮಗಿವಿಗೆ ಮಾತ ಕಲಿಸಿದ ಹಸ್ತ ಜೀವ ಕಳೆ ತುಂಬಿದ ಹಸ್ತ ಪರಮ ಪಾವನವಾದ ಶ್ರೀಗುರುರಾಜರ ಹಸ್ತಾ ಜಗವೆಲ್ಲ ನೋಡೆ ಪ್ರಖ್ಯಾತಿ ಪಡೆದಿಹ ಹಸ್ತ ನಗುತ ಮಂತ್ರಾಲಯದೊಳು ಬಂದು ನಿಂದಿಹ ಹಸ್ತ ಅಗಣಿತಮಹಿಮೆ ತೋರಿ ಮೆರೆಯುತಿಹಾ ಹಸ್ತ ಸರಿಗಾಣೆ ಧರೆಯೊಳು ಶ್ರೀರಾಘವೇಂದ್ರರ ದಿವ್ಯ ಹಸ್ತಾ.
--------------
ರಾಧಾಬಾಯಿ
ಶ್ರೀ ವ್ಯಾಸರಾಜರು ಏಸು ಮಹಿಮ ನೋಡೋ | ಶ್ರೀ ವ್ಯಾಸಮುನಿಯು ತಾನೂ ಪ ದಾಸಜನರ ಹೃದ್ದೊದ್ದೋಷ ಕಳೆದು ಸಂ | ತೋಷ ಕೊಡುವ ದೊರೆ ಅ.ಪ. ರಾಮಾಚಾರ್ಯರ ಗೃಹದಿ | ಭೂಮಿ ಸೋಕದೆ ಪುಟ್ಟಿಪ್ರೇಮದಿಂದಲಿ ಪುರು | ಷೋತ್ಮ ತೀರ್ಥರ ಗುಹದಿಯಾಮ ಯಾಮಕೆ ಪಾಲು | ಆಮಹಾಮುನಿ ಕೂಡೆಸೀಮೆ ಮೀರಿದ ತೇಜ | ಕೋಮಲ ಕಾಯನು 1 ಪೂರ್ಣ ಬೋಧರ ಪೀಠ | ಬ್ರಹ್ಮಣ್ಯರಿಂಗೊಂಡುಭವಾರ್ಣ ತಾರಿಸುವಂಥ | ನ್ಯಾಯ ಗ್ರಂಥವ ಮಾಡಿಕರ್ಣ ರಹಿತನ ಸುಶಯ್ಯನ ಮಾಡಿಕೊಂಡಅರ್ಣ ಸಂಪ್ರತಿಪಾದ್ಯ | ಕೃಷ್ಣನ್ನ ಮೆರೆಸೀದ 2 ಸುಜನ ಕುಮುದ ಚಂದ್ರ | ನಿಜಭಕ್ತ ಪರಿಪಾಲ ಪರಿವ್ರಾಜಾಕಾಚಾರ್ಯ | ವಿಜಯ ನಗರಿಲಿ ನೆಲೆಸೀಅಜನನಯ್ಯನ ನಾಮ | ಭಜನೆ ಪ್ರಾಕೃತದೊಳುನಿಜಜನ ಕೊರೆಯುತ | ಅಜೇಯನೆನಿಸಿದಂಥ 3 ಮಿಥ್ಯಾಮತವಗೆದ್ದು | ತಥ್ಯಾವು ಜಗವೆಂದುಸ್ತುತ ಶ್ರೀಹರಿಯ ಸರ್ವೋತ್ತುಮನೆನುತಸತ್ಯವು ಪಂಚ ಭೇದ | ನಿತ್ಯವು ತಾರತಮ್ಯಭೃತ್ಯರು ಬ್ರಹ್ಮ ದೇವತೆಗಳೆಂದೊರೆದ 4 ಪುರಂದರ | ದಾಸರೆಂದೆನಿಸೀದ 5 ಅಹಿಪರ್ವತಾಧೀಶ | ಅಹಿತಲ್ಪನ್ನಾಸೇವೆವಿಹಿತದಿ ದ್ವಿಷಡಾಬ್ದ | ಬಹುಗೈದು ಅರಸಿನಕುಹುಯೋಗವಾರಿಸಿ | ಮಹಿಯ ಸುರರಿಗೆಲ್ಲಸಹಸ್ರಾರು ಗ್ರಾಮಗಳ್ | ಜಹಗೀರುಗಳನಿತ್ತ 6 ಛಂದದಿಂದಲಿ ನವ | ವೃಂದಾವನಕೆ ಬಂದುವೃಂದಾವನದಿ ನಿಂದು | ಇಂದೀವರಾಕ್ಷನುನಂದ ಕಂದ ಗುರು ಗೋ | ವಿಂದ ವಿಠಲನ ಹೃನ್‍ಮಂದಿರದಲಿ ನೋಡಿ | ನಂದವ ಪಡುತಿರ್ಪ7
--------------
ಗುರುಗೋವಿಂದವಿಠಲರು
ಸ್ವಾಮಿ ನಿನಗೆ ಶರಣನೆಂಬೆ ಸೋಮನಾಥಾ ಸಕಲ ಕಾಮಿತಾರ್ಥವಿತ್ತು ಸಲಹೊ ಸೋಮನಾಥಾ ಪ. ಹರಿಯ ಕರುಣಾ ಬಲದಿ ನೀನು ಸೋಮನಾಥಾ ಸರ್ವ ಸುರರಿಗೆಲ್ಲ ಧೊರೆಯಾಗಿರುವಿ ಸೋಮನಾಥ ಪಾದ ನಂಬಿ ಸೋಮನಾಥ ಮೊರೆಯ ಹೊಕ್ಕೆ ನಿಂದು ಬಂದು ಸೋಮನಾಥ 1 ವಿಘ್ನರಾಜ ನಿನ್ನ ಮಗನು ಸೋಮನಾಥಾ ಬೇಗ ಭಸ್ಮಗೈಸು ವೈರಿಗಳನು ಸೋಮನಾಥಾ ಮಗ್ನನಾದೆ ಮಹಾಂಬುಧಿಯೊಳ್ ಸೋಮನಾಥಾ ಸರ್ವ ವಿಘ್ನವೋಡಿಸೈ ಕೃಪಾಳೊ ಸೋಮನಾಥ 2 ಶಂಕರ ಕೈಪಿಡಿಯೊ ತ್ರಿಪುರ ಬಿಂಕವಾರಿ ಶ್ರೀ- ವೆಂಕಟಾದ್ರಿನಾಥನ ಮನೋನುಸಾರೀ ಕಿಂಕರನೆಂದೆನಿಸೆನ್ನ ಮೃಗಾಂಕಧಾರೀ ಪಾದ- ಪಂಕಜವ ನೀಡು ಸರ್ವಾತಂಕಹಾರೀ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀ ನರಸಿಂಹ ಸ್ತೋತ್ರ11ವಂದಿಸು ನರಹರಿಯ ಮನವೆ ವಂದಿಸು ನರಹರಿಯವಂದ್ಯವಂದ್ಯನು ಬಹು ಸುಂದರ ಸುಖಮಯಇಂದಿರರಸ ಅರವಿಂದ ಸುನಾಭನ ವಂದಿಸು ನರಹರಿಯ ಪಸಿಂಧುಸಂಚರ ಬಹು ಸುಂದರ ಗಿರಿಧರತಂದನು ವಸುಧೆಯ ಕಂದನ ಕಾಯ್ದ ಪುರಂದರವರದ ಮುನೀಂದ್ರ ಕುಮಾರ ಕಪೀಂದ್ರಗÉ ಒಲಿದಮರೇಂದ್ರಗೆ ಬೋಧಿಸಿನಿಂದ ದಿಗಂಬರಕುಂಭಿಣಿಸುರನುತಮಂದರಗಿರಿ ಎತ್ತಿ ಸಿಂಧುವಿಂದಲಿ ಬಂದುಅಂಧ ಮೂಢರ ತನ್ನ ಅಂದ ಮೋಹದಿಕಟ್ಟಿದಾನ್ತ ಸುರರಿಗೆಲ್ಲ ಚಂದ ಸುಧೆಯನಿತ್ತಇಂದಿರಾಕಾಂತನನಂತ ಸುಗುಣಗಳಚಿಂತಿಸಿ ಯೋಗ್ಯದಿ ಕಂದದ ಪ್ರೇಮದಿವಂದಿಸು ನರಹರಿಯ 1ವೇದಾಂತರ್ಗತಬಾದರಾಯಣಹರಿಪಾದಾರಾಧಕಮೋದಸುತೀರ್ಥರಪಾದಾವಲಂಬಕ ಸಾಧು ಸುಮೇಧರಹೃದಯಾಕಾಶದಿ ಪದುಮದ ಮೂಲದಿಸದಮಲಾತ್ಮನಾದಿತ್ಯನುಪೋಲುವಿಧವಿಧಭಾಸದಿ ಪದೆ ಪದೆ ನೋಡುತವಿಧಿಯ ತಾತನ ಬಹುಮೋದಸುಗುಣಗಳಮುದದಲಿ ಚಿಂತಿಪಕೋವಿದಹಿರಿಯರಪಾದಸುಪಾಂಶುವ ನಿಯಮದಿ ಪೊಂದಿ ನೀಪದುಮೇಶನ ನಿನ್ನ ಹೃದಯದಿ ಚಿಂತಿಸಿವಂದಿಸು ನರಹರಿಯ 3ನಿಜಸುಖಮಾರ್ಗದಿ ಭಜಕ ಬಾಲಕ ಪೋಗೆಅರ್ಜಿತ ದ್ವೇಷದಿ ಮೂರ್ಜಗ ಶತ್ರುಗಜಾದಿಗಳಿಂ ಹೆಜ್ಜೆಜ್ಜೆಗೆ ಬಾಧಿಸೆಧೂರ್ಜಟಸೇವ್ಯ ಜನಾರ್ಧನ ನರಹರಿಗರ್ಜಿಪ ವದನನು ಸಜ್ಜನಪಾಲಕಅಜಸುರರೆಲ್ಲರು ತೇಜೋಮಯ ಅತಿಜ್ವಲಿಸುವ ನಖದಿಂ ದುರ್ಜನ ರಾಜನಜೋಜ್ಜೆಯ ಛೇದಿಸಿ ಭಜಕಗೆ ವರವಿತ್ತುಸೃಜ್ಯಾಸೃಜ್ಯರ ಪ್ರಾಜÕನ ಮರೆಯದೆವಂದಿಸು ನರಹರಿಯ 3ಸೃಷ್ಟ್ಯಾಧೀಶನದೃಷ್ಟನಾಗಿರುತಿಹಸೃಷ್ಟಾಸೃಷ್ಟ ಪ್ರವಿಷ್ಟಾಸೃಷ್ಟನುಶಿಷ್ಟರ ಇಷ್ಟ ಸುದೃಷ್ಟಿಯ ಬೀರುತಶಿಷ್ಟರ ಬಹು ವಿಧ ಕಷ್ಟಗಳಳಿದುಅಭೀಷ್ಟಗಳೀವನು ದುಷ್ಟರ ಶಿಕ್ಷಿಪಭ್ರಷ್ಟಜನರಿಗಿವ ಸ್ಪಷ್ಟನಾಗುವನಲ್ಲಶ್ರೇಷ್ಠೋತ್ತಮಪರಮೇಷ್ಠಿಜನಕನಿವಕಾಷ್ಟಾಗ್ನಿಯವೊಲ್ ಅದೃಷ್ಟಾದೃಷ್ಟನುದುಷ್ಟದೂರ ವಾಸಿಷ್ಠ ಶ್ರೀ ಕೃಷ್ಣನುತಿಷ್ಟನು ನಿನ್ನೊಳುತ್ಕøಷ್ಟನೆಂದರಿತುವಂದಿಸು ನರಹರಿಯ 4ಸರಿಪರರಿಲ್ಲದ ಸಿರಿಯರಸನಚಾರುಚರಣಾರಾಧನ ಪರಸುಖವೀವುದುಸಿರಿದೊರೆ ಸುಹೃದನು ಸಿರಿಸಹ ಮೆರೆಯುತಅರಿತ ಸುಜನರನು ಪೊರೆವನು ದಯದಿಮೊರೆಯನು ಲಾಲಿಸಿ ಪೊರೆದನು ಗರ್ಭವಮರೆತು ನಾರಾ ಎಂದ ನರಸುರಗೊಲಿದನುಪೊರೆದನು ದಯದಿ ನರಾಧಮ ಎನ್ನನುಕರಿವರ ದ್ರೌಪದಿವರದ ವಿಖ್ಯಾತನುಸರಸಿಜಭವತಾತ ಪ್ರಸನ್ನ ಶ್ರೀನಿವಾಸಪೊರೆವನು ನೆನೆವರ ಸಿರಿಭೂದೊರೆಯೆಂದುವಂದಿಸು ನರಹರಿಯ 5
--------------
ಪ್ರಸನ್ನ ಶ್ರೀನಿವಾಸದಾಸರು