ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟು ಕೂಗಲು ದಯ | ಪುಟ್ಟಲಿಲ್ಲವೊ ನಿನಗೆ ಬೆಟ್ಟದೊಡೆಯ ಹರಿಯೆ ಪ. ಸಿಟ್ಟೇಕೆ ಎನ್ನೊಳು ಕೃಷ್ಣಮೂರುತಿ ನಿನಗೆ ಬಿಟ್ಟರೆ ನೀ ಎನ್ನ ಸೃಷ್ಟಿಯೊಳಾರುಂಟೊ ಅ.ಪ. ಪರಮ ಪಾತಕಿಯೆಂದು | ತೊರೆದರೆ ನೀ ಎನ್ನ ಮೊರೆಬೀಳಲಿನ್ನಾರಿಗೆ ಕರುಣಾಮೂರುತಿ ಎಂಬೊ ಬಿರುದು ಪೊತ್ತಿಲ್ಲವೆ ಸರಿಯೆ ನಿನಗಿದು ಕೊರಗಿಸುವುದು ಜರಿದು ಬಳಲುವೆ ಧರೆಯೊಳೀಗ ನಾ ಸುರರ ರಕ್ಷಕ ಪರಮಪಾವನ ಕರವ ಮುಗಿವೆ ದರುಶನವ ನೀಡೊ 1 ನೀನಲ್ಲದೆ ಇನ್ನು | ನಾನಾರ ಭಜಿಸಲೊ ಗಾನವಿಲೋಲ ಹರಿ ಕಾನನದೊಳು ಕಣ್ಣು ಕಾಣದಂತಾಗಿದೆ ಧ್ಯಾನಕೆ ಸಿಲುಕದೆ ನೀನೆನ್ನ ಕಾಡುವೆ ಮಾನ ಪ್ರಾಣ ಶರೀರ ನಿನ್ನದೊ ನಾನು ಅನ್ಯರ ಭಜಿಸಲಾರೆನೊ ಹೀನಬುದ್ಧಿಯ ಬಿಡಿಸಿ ಗುರುಗಳ ಧ್ಯಾನವೆನಗಿತ್ತು ನೀನು ಕಾಯೊ 2 ಅನ್ನಪಾನವ ಬಿಟ್ಟು | ನಿನ್ನನು ಸ್ತುತಿಸಲು ಇನ್ನು ಕರುಣವಿಲ್ಲವೆ ಇನ್ನು ಸೈರಿಸಲಾರೆ ಘನ್ನ ಮಹಿಮನೆ ದುಃಖ ನಿನ್ನ ಮನಸು ಕರಗಲಿನ್ನೇನಗೈಯ್ಯಲೊ ಎನ್ನ ಯತ್ನವು ವ್ಯರ್ಥವಾಯಿತು ಇನ್ನು ನೀ ದಯೆಗೆಯ್ಯಬೇಕೊ ಮುನ್ನ ಮಾಡಿದ ತಪ್ಪನೆಣಿಸದೆ ಎನ್ನ ದೃಷ್ಟಿಗೆ ನಿನ್ನ ತೋರೊ 3 ಸುತನ ಮೊರೆಯನೆ ಕೇಳಿ | ಹಿತದಿ ವೇದವನಿತ್ತೆ ಶರಧಿ ಅಮೃತ ಸುರರಿಗಿತ್ತೆ ಕ್ಷಿತಿಯ ಬಾಧೆಯ ಬಿಡಿಸಿ ಸುತನ ಬಾಧಿಸೊವೊನ ಹತಮಾಡಿ ಇಂದ್ರಗೆ ಗತಿಸಿದ ಪದವಿತ್ತೆ ಕ್ಷಿತಿಯನಾಳ್ವರ ಹತವಗೈಸಿದೆ ಕ್ಷಿತಿಸುತೆಯ ಪ್ರೇಮದಲಿ ತಂದೆ ಹಿತದಿ ಪಾಂಡವ ಸುತರ ಕಾಯ್ದೆ ವ್ರತವ ಕೆಡಿಸಿ ಕಲಿಹತವಗೈದೆ 4 ಕಂತು ಜನಕನೆ ನಿನಗೆ ನ್ನಂತರ ತಿಳಿಯದೇನೋ ಸಂತತ ಗೋಪಾಲಕೃಷ್ಣವಿಠ್ಠಲ ನಿನ್ನ ಶಾಂತರೂಪವ ಎನ್ನ ಅಂತರಂಗದಿ ತೋರೊ ಚಿಂತಿತಾರ್ಥ ಪಂಥಗಾರನೆ ಎಂತು ದಿನಗಳು ಸಂದು ಹೋದುವೊ ಸಂತತಾನಂದನಂತಶಯನ 5
--------------
ಅಂಬಾಬಾಯಿ
ಚಂಡಳಹುದೋ ನೀನುಕದನಪ್ರಚಂಡಳಹುದೋ ನೀನುದಿಂಡೆಯರನ್ನು ಖಂಡಿಸಿ ತುಂಡಿಪಚಂಡವಿಕ್ರಮಮಾರ್ತಾಂಡಮಂಡಿತ ದೇವಿಪಭುಗು ಭುಗು ಭುಗಿಲೆಂದು ಮಧು ಕೈಟಭೆಂಬುವರುನೆಗೆ ನೆಗೆ ನೆಗೆಯುತ ರಣಕೆ ಬರಲು ಪೋಗಿಜಿಗಿ ಜಿಗಿ ಜಿಗಿದವರ ನೀನು ಯುದ್ಧವ ಮಾಡಿನೆಗೆದುರೆ ಖಡ್ಗವನು ಝಡಿದು ಧಗ ಧಗಧಗಿಸುವ ಚಕ್ರವನು ಇಡಲು ಶಿರವುಜಿಗಿಯೆ ಚರ್ಮವ ಸೀಳಿ ಮಾಡಿದೆ ಭೂಮಿಯ ನೀನು1ಛಟ ಛಟಾಕೃತಿಯಿಂದ ಮಹಿಷಾಸುರನ ಬಲನಟ ನಟ ನಟಿಸುತ ಪಟು ಭಟರಿದಿರಾಂತುಘಟಿಸಿ ರಣಕೆ ಬರಲು ಫಲ್ಗಳ ಕಟಕಟನೆ ಕಡಿದು ನಿಲ್ಲಲು ಅಸುರ ಬಲಸೆಟೆದು ಹಿಂದಾಗುತಲಿರಲು ಸುರಕಟಕನಿಮ್ಮನ್ನು ಹೊಗಳಿ ಕೊಂಡಾಡಲು2ಘುಡು ಘುಡು ಘುಡಿಸುತ್ತ ಮಹಿಷಾಸುರನು ಬರೆದಢ ದಢನೆ ಪೋಗಿ ಹೊಡೆದು ನಿನ್ನಯಪಾದದಡಿಯೊಳವನ ಕೆಡಹಿ ಚದುರ ಬೀಳೆ-ಕಡಿದು ಕಂಡವ ಕೊಡಹಿ ನಿಲ್ಲಲು ಸುರರೊಡೆಯ ನೆಲ್ಲರ ನೆರಹಿನಿಲ್ಲಲು ನೀನುಬಿಡದೆ ಅಭಯವಿತ್ತು ಹರುಷದಿ ವಾರಾಹಿ3ಶುಂಭನಿಶುಂಭರೆಂಬ ರಾಕ್ಷಸರುಪಟಳಅಂಬುಜಾಂಡಕೆ ರಂಭಾಟವದು ಹೆಚ್ಚೆಜಂಭಾರಿದಿವಿಜರೆಲ್ಲ ನಿಲ್ಲದೆ ದೂರಬೆಂಬಿಡದ್ಹೇಳಲೆಲ್ಲ ಕೇಳಿಯೆ ಉ-ಗ್ರಾಂಬಕಳಾಗಿ ನಿಲ್ಲೆ ಅಸುರ ಕಾದಂಬ ನಿನ್ನನುಕಂಡು ಬೆದರಿ ವೋಡಿದರೆಲ್ಲ4ಆರು ನೀನೆಂದು ಶುಂಭನ ದೂತ ವಿಚಾರಿಸೆ ಕೇಳಿಯೆ ಎಮ್ಮರಸನಿಗೆನಾರಿ ನೀ ಸತಿಯಳಾಗು ಜಾಗತ್ಯಕ್ಕೆವೀರ ಶುಂಭನ ಸೊಬಗು ಬಣ್ಣಿಸುವೊಡೆಮೂರು ಲೋಕಕೆ ಹೊರಗು ಬಾ ಎನೆ ನೀನುಚೋರಗುತ್ತರ ವಿತ್ತೆ ಹೇಳ್ವೆನೇನದ ಬೆರಗು5ಕೇಳು ಶುಂಭನ ದೂತ ಖೇಳ ಮೇಳದಿ ನಾನುಕೀಳು ಸಪ್ತದಿಯಾಡ್ದೆ ಈರೇಳು ಲೋಕದಲಿತೋಳು ಸತ್ವವು ಬಲಿದು ಸಮರದಲಿಸೋಲಿಸೆನ್ನನು ಪಿಡಿದು ಒಯ್ಯಲು ಅವರಾಳು ಆಗಿಯೆ ನಡೆದು ಬಹೆನು ಪೋಗಿಖೂಳರ ಕರೆದು ತಾ ರಣಕೆಂದು ನುಡಿದು6ಅಂಬವಚನವಶುಂಭಕೇಳಿಸುಗ್ರೀವನೆಂಬ ನಿಶಾಚರ ಶುಂಭನಲ್ಲಿಗೆ ಪೋಗಿಶಾಂಭವಿಯಾಡಿದುದ ಶಬ್ದವ ಕೇಳ-ಲಂಬುದಿಯ ನೀಂಟುವುದ ವಡಬಾನಳ-ನೆಂಬವೋಲ್ ಕೋಪವ ತಾಳ್ದು ಬರಲು ಸರ್ವಸಂಭ್ರಮದಲಿ ನೋಡಿ ಎದ್ದು ನೀ ನಿಂದುದನು7ಸರಸರನೆ ಶುಂಭಾಸುರನ ಬಲ ಬರೆ ಕಂಡುಗರಗರನೆ ಹಲ್ಲ ಕೊರೆದು ಅವನ ದಂಡಸರಕುಗೊಳ್ಳದೆ ಛೇದಿಸಿ ಸುಭಟವೀರರಿರವನೆಲ್ಲಾ ಶೋಧಿಸಿಶುಂಭನಿಶುಂಭರಶೋಣಿತಕಾರಿಸಿ ಸುರರಿಗಿತ್ತೆಸ್ಥಿರವಪ್ಪ ಸೌಭಾಗ್ಯದವರ ನೀ ಪಾಲಿಸಿದೆ8ದುಷ್ಟ ಜನರೆಲ್ಲ ಸುಟ್ಟು ಭಸ್ಮಮಾಡಿಶಿಷ್ಟ ಜನರ ಪ್ರಾಣಗುಟ್ಟು ನೀನೆಂತೆಂಬರನಟ್ಟಿ ದಟ್ಟಿಸಿದೆ ಪರಾಂಬ ಭಕ್ತರ ಅ-ಭೀಷ್ಟ ಪಾಲಿಪ ಜಗದಾಂಬ ದುರ್ಜನರಘ-ರಟ್ಟಳಹುದೇ ತ್ರಿಪುರಾಂಬ ರಕ್ಷಿಸು ಎನ್ನಶಿಷ್ಟ ಚಿದಾನಂದಅವಧೂತಬಗಳಾಂಬ9
--------------
ಚಿದಾನಂದ ಅವಧೂತರು
ಮಧ್ವರಾಯಾ-ಗುರು-ಮಧ್ವರಾಯಾಮಧ್ವರಾಯಾ-ಗುರು-ಮಧ್ವರಾಯಾ ಪರಾಮಾವತಾರದೊಳೊಮ್ಮೆ ಮಧ್ವರಾಯಾಆ ಮಹಾ ಹನುಮನಾದೆ ಮಧ್ವರಾಯಾ ||ವಾಮಮುಷ್ಟಿಲಿ ರಾವಣನ ಗೆಲಿದೆ ಮಧ್ವರಾಯಾ ||ಕಾಮಿತಾರ್ಥಸುರರಿಗಿತ್ತೆ ಮಧ್ವರಾಯಾ1ಕೃಷ್ಣಾವತಾರದೊಳೊಮ್ಮೆ ಮಧ್ವರಾಯಾದುಷ್ಟಕುಲಕೆ ಭೀಮನಾದೆ ಮಧ್ವರಾಯಾ ||ಕುಟ್ಟಿದೆ ಕೌರವರನೆಲ್ಲ ಮಧ್ವರಾಯಾ - ಶ್ರೀ -ಕೃಷ್ಣನ ಪ್ರೀತಿಯ ಪಡೆದೆಯೊ ಮಧ್ವರಾಯಾ 2ಧರೆಯೊಳು ಯತಿಯಾಗಿ ಜನಿಸಿದೆ ಮಧ್ವರಾಯಾಗುರುವ್ಯಾಸರ ಹಿತವ ಪಡೆದೆ ಮಧ್ವರಾಯಾದುರುಳಮಾಯಿಮತವ ಮುರಿದೆ ಮಧ್ವರಾಯಾಪುರಂದರವಿಠಲನ ದಾಸನಾದೆ ಮಧ್ವರಾಯಾ3
--------------
ಪುರಂದರದಾಸರು