ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಹಳ ನಂಬಿದೆ ಭಕ್ತಪಾಲ ಶ್ರೀ ಲಕ್ಷೀಯ ಲೋಲ ವೆಂಕಟರಾಯನ ಮೂರು ಲೋಕದೊಡೆÉಯನ ಮುಕ್ತಿಯ ಕೊಡುವನ ಪಾಲಿಸಿ ಜಗವನುದ್ಧರಿಸಿದ ದೇವನ ಪ. ಜಲದೊಳು ಪೊಕ್ಕು ವೇದವ ತಂದು ಅಜವನಿಗಿತ್ತು ಬಲುಗಿರಿ ಕುಸಿಯಲು ಬೆನ್ನಿನಿಂದಲಿ ತಳೆದು ನೆಲನ ಕದ್ದಸುರನ ಕೊಂದು ಕಂಬದಿ ನಿಂದು ಬಲಿಯ ದಾನವ ಬೇಡಿ ಜಲ ಪರುಷವ ನೀಡಿ ಮತ್ತೆ ಮಾತೆಯ ಕಡಿದು ಛಲದಿ ರಾವಣನ ಸಂಹರಿಸಿ ಸೀತೆಯ ತರಿಸಿ ಬಲುಸತಿಯರನಾಳಿ ಬವುದ್ಧ ರೂಪವ ತಾಳಿ ಅಲ್ಲದಶ್ವವೇರಿದ ಅತಿ ಚೆಲುವ ದೇವನ 1 ನಿಗಮ ಚೋರನ ಕೊಂದು ನೀರೊಳು ಮುಳುಗ್ಯಾಡಿ ನಗವ ಬೆನ್ನಲಿ ಪೊತ್ತು ಸುರರಿಗಮೃತವಿತ್ತು ಬಗೆದು ಧಾರುಣಿಯನ್ನು [ಚೀರಿ ಹರಹಿ] ಹಿರಣ್ಯಕನ ಮಿಗಿಲಾದ ಬಲಿಯ ಮೆಟ್ಟಿ ಸೊಗಸಿಂದ ಕಾಮಧೇನುವ ತಂದು ಕೌಸಲ್ಯಾ ಮಗನಾಗಿ ಹುಟ್ಟಿ ರಕ್ಕಸÀರನ್ನು ತರಿದೊಟ್ಟಿ ವಿಗಡ ಮಾವನ ಕೊಂದು ಮತ್ತೆ ತ್ರಿಪುರವ ಗೆಲಿದು ಜಗದೊಳುದ್ದಂಡ ರಾವುತನಾದ ದೇವನ 2 ಆದಿಪೊಳ[ಕು] ಕ್ಷೀರಾಂಬುಧಿ ಮಥsÀನವ ಆಡಿ ಕೂರುಮನಾಗಿ ಮತ್ತ ಹಿರಣ್ಯಕನ ದಾಡೆಯಿಂದಲಿ ಸೀಳಿ ಜೋಡು ರೂಪವ ತಾಳಿ ಬೇಡಿ ಮೂರಡಿ ನೆಲವ ತೀಡಿ ಕ್ಷತ್ರಿಯರ ಸಂಹರಿಸಿ ಕಾಡೊಳು ಚರಿಸಿ ಗಾಡಿಗಾತಿಯರ ಮನೆಯೊಳುಳ್ಯಾಡಿ ಸತಿಯರ ವ್ರತ- ಗೇಡಿ ಭಕ್ತರಿಗೆ ಅಭಯವ ನೀಡಿ ಹೆಳವನಕಟ್ಟೆ ಕಾಡುಗಲ್ಲಲ್ಲಿ ನಿಂತ ಕಲಿ ವೆಂಕಟೇಶನ 3
--------------
ಹೆಳವನಕಟ್ಟೆ ಗಿರಿಯಮ್ಮ
ರಂಗನಾಥನ್ನ ಈ ಕಂಗಳಿಂದಲಿ ಕಂಡು ಹಿಂಡು ಪ. ಮಂಗಳಾತ್ಮಕ ದೇವ ಮಮ ಸ್ವಾಮಿ ಸಲಹೆಂದು ಅಂಘ್ರಿಗಳಿಗೆರಗಿ ನುತಿಪೇ ಸ್ತುತಿಪೇ ಅ. ಮಾಂಡವ್ಯರಿಗೆ ವಲಿದು ಶ್ರೀನಿಕೇತನ ದೇವ ಗಂಡಕೀಶಿಲೆ ರೂಪದಲ್ಲಿ ಅಂಡಜವಾಹನನು ಉದ್ಭವಿಸಿ ಸ್ವರ್ಣಾದ್ರಿ ಎಂಬ ಸುಕ್ಷೇತ್ರದಲ್ಲೀ ಹಿಂಡುಭಕ್ತರ ಸೇವೆ ಕೈಯಕೊಳುತ ಬದಿಯಲ್ಲಿ ನಿಂದು ವಿಗ್ರಹ ರೂಪದಲ್ಲೀ ಕಂಡು ಪುಳಕಾಂಕಿತದಿ ಕರುಣ ಮೂರ್ತಿಯ ನುತಿಸಿ ಕೊಂಡಾಡಿ ದಣಿದೆ ನಿಂದೂ ಇಂದೂ 1 ಶಂಖಚಕ್ರಾಂಕಿತದ ಚತುರ್ಭಜವು ಶ್ರೀವತ್ಸ ಪಂಕಜಾಕ್ಷಿಯರುಭಯದಿ ಶಂಕೆಯಿಲ್ಲದ ಭಕ್ತರಿಗೆ ವಲಿವ ಸೌಂದರ್ಯಾ ಲಂಕಾರ ಉಡಿಗೆ ಮುದದಿ ಪಂಕಜಾಸನ ಮುಖ್ಯದಿವಿಜಗಣ ಸೇವಿತನು ಕಿಂಕರರಿಗೊಲಿವ ದಯದೀ ವಂಖಿ ಬಾಪುರಿ ತೋಳು ಕಡಗ ಕಾಲ್ಗೆಜ್ಜೆಗಳು ಕಂಕಣ ಕಿರೀಟ ನಿಟ್ಟಾ ದಿಟ್ಟಾ 2 ಆಗಮವ ಅಜಗಿತ್ತು ಸುರರಿಗಮೃತವಿತ್ತು ಭೂದೇವಿ ಭಯ ಬಿಡಿಸಿದಾ ಬೇಗ ಕಂಬದಿ ಬಂದು ಮಗುವ ರಕ್ಷಿಸಿ ಬಲಿಯ ಯಾಗದಲ್ಲಿ ಭೂ ಬೇಡಿದಾ ನೀಗಿ ಕ್ಷತ್ರಿಯ ಕುಲ ದಶಶಿರಿನ ಸಂಹರಿಸಿ ಮಾಗಧನ ಬಲವ ಮುರಿದಾ ಅಂಬರ ಕಲ್ಕಿ ಗೋಪಾಲಕೃಷ್ಣವಿಠಲಾ ಮಾಗಡಿ ತಿರುಮಲೇಶಾ ಶ್ರೀಶಾ 3
--------------
ಅಂಬಾಬಾಯಿ
ಸುವ್ವಿ ಶ್ರೀ ದೇವಿರಮಣ ಸುವ್ವಿ ಸರ್ಪರಾಜಶಯನ ಹರಣ ಸುವ್ವಿ ನಾರಾಯಣ ಪ ಭವ್ಯಚರಿತ ದುರಿತವಿಪಿನ ಹವ್ಯವಾಹನ ಭವೇಂದ್ರಾದಿ ಸೇವ್ಯಮಾನ ಸುಪ್ರಸಿದ್ಧ ಸುಲಭsÀ ಮೂರುತಿ ಅವ್ಯಯಾಮಿತ ಸುಖಾತ್ಮ ದಿವ್ಯ ಮಹಿಮೆ ತುತಿಪೆ ಸುವಿವೇಕಿಗಳಿಗೆ ಕೊಡುವುದಮಿತ ಮೋದವ 1 ವಾಸವಾದ್ಯಮರ ವಾರಾಶಿ ಶಾರದೇಂದು ಮಧ್ವ ದೇಶಿಕಾರ್ಯ ಚಿತ್ತ ಸಿಂಹಪೀಠಮಧ್ಯಗ ದೇಶಕಾಲ ವ್ಯಾಪ್ತ ಸರ್ವೇಶ ಸಾರ್ವಭೌಮ ಶ್ರೀಮ ಹೀ ಸಮೇತ ಕೃಷ್ಣ ಕೊಡಲಿ ಎಮಗೆ ಮಂಗಳ 2 ಕಮಲ ಸಂಭವನ ವೇದ ತಮನು ಒಯ್ಯತಿರಲು ಲಕ್ಷ್ಮೀ ಶರಧಿ ಮಥನದಿ ಕಮಠ ರೂಪಿನಿಂದ ಸುರರಿಗಮೃತವಿತ್ತು ಕಾಯ್ದ ಅಖಿಳ ಸುಮನಸೇಂದ್ರ ಸ್ವಾಮಿ ಕೊಡಲಿ ಎಮಗೆ ಮಂಗಳ 3 ಕನಕ ಲೋಚನನ ಸದೆದು ಮನುಜಸಿಂಹ ವೇಷನಾದ ದ್ಯುನದಿ ಪಡೆದು ಜನನಿ ಕಡಿದು ವನವ ಚರಿಸಿದ ಜನಪ ಕಂಸನ್ನೊದೆದು ತಿರಿಪುರವನಿತೆಯರ ಸುವ್ರ್ರತ ವಿನುತ ಕಲಿ ದೇವರಾಜ ಎಮ್ಮ ಸಲಹಲಿ 4 ಪಾಹಿ ಪಾವನ ಚರಿತ್ರ ಪಾಹಿ ಪದ್ಮ ಪತ್ರನೇತ್ರ ನಿಗಮ ಗಾತ್ರ ಮಾಂ ಪಾಹಿ ಸಜ್ಜನಸುಮಿತ್ರ ಪಾಹಿ ದೋಷದೂರ ಸುಗುಣ ಪಾಹಿ ಜಗನ್ನಾಥ ವಿಠಲ ಜಯ ತ್ರಿಧಾಮಗ 5
--------------
ಜಗನ್ನಾಥದಾಸರು