ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವತಾಸ್ತುತಿ ಮತ್ತು ಗುರುಸ್ತುತಿ ಅರಸಿನಂತೆ ಬಂಟನೋ ಹನುಮರಾಯ ಪ ಅರಸಿನಂತೆ ಬಂಟನೆಂಬುದ ನೀನುಕುರುಹು ತೋರಿದೆ ಮೂರು ಲೋಕಕೆ ಹನುಮ ಅ ಒಡೆಯನಂಬುಧಿಯೊಳು ಪೊಕ್ಕು ದೈತ್ಯನ ಕೊಂದುತಡೆಯದೆ ಶ್ರುತಿಯನಜಗಿತ್ತನೆಂದುಸಡಗರದಿಂದ ಶರಧಿಯ ದಾಂಟಿ ಮಹಿಜೆ ಪೆ-ರ್ಮುಡಿಯ ಮಾಣಿಕವ ರಾಘವಗಿತ್ತೆ ಹನುಮ 1 ಮಂದರಧರ ಗೋವರ್ಧನ ಗಿರಿಯನು ಲೀಲೆ-ಯಿಂದಲಿ ನಿಂದು ನೆಗಹಿದನೆಂದುಸಿಂಧು ಬಂಧನಕೆ ಸಮಸ್ತ ಪರ್ವತಗಳತಂದು ನಳನ ಕೈಯೊಳಗಿತ್ತೆ ಹನುಮ2 ಸಿರಿಧರ ವರ ಕಾಗಿನೆಲೆಯಾದಿಕೇಶವಸುರರಿಗಮೃತವನು ಎರೆದನೆಂದುವರ ಸಂಜೀವನವ ತಂದು ಸೌಮಿತ್ರಿಗಂದುಎರೆದು ಶ್ರೀರಾಮನ ನಿಜದೂತನೆನಿಸಿದೆ ಹನುಮ 3
--------------
ಕನಕದಾಸ
ವಾದಿರಾಜರು ಸಾಗಿಬಾರಯ್ಯ ಗುರುವೆ ವಾದಿರಾಜೇಂದ್ರಾರ್ಯ ಬಾಗುವೆ ನಾ ನಿನಗೆ ಶಿರವಾ ಪ. ಭಾಗವತರ ದುರಿತಾಘಂಗಳನೆ ಕಳೆದು ಬಂದಾ ದುರ್ವಾದಿಗಳನೆ ಮರೆದು ಸುರರೆಲ್ಲ ಇವರೆ ಮೇಲ್ ಪೂ ಮಳೆಯಗರೆದು ತುಂಬುರರು ನರದರು ಗಾನಗಳಿಂದ ಮೆರೆದು ಘಲುಘಲು ಘಲುರೆಂದು, ಅಪ್ಸರರು ನಾಟ್ಯಗಳ ಕುಣಿದು ಅ.ಪ. ಹೊದ್ದ ಕಾವೆ ಶಾಟಯಲೊಪ್ಪುವಾ ಶ್ರೀ ಮುದ್ರಿ ಗಂಧಾಕ್ಷತೆಯಿಂದಾ ಗಳದಲ್ಲಿ ಶ್ರೀ ತುಳಸಿ ಪುಷ್ಪಮಾಲೆಗಳಿಂದಾ ಝಗಝಗನೆ ಮುಖಕಮಲಳ್ಹೋಳವೋದು ಯೆಂದಾ ಋಜುಗಣದವರಹುದೆಂದು ಪೇಳುವಾನರನಿಂದಾ ಮಾಡುವವರಿಗೆ ಕ್ರಿಮಿಕೀಟಗಳು ದುರುವುವುದೇಹದಿಂದಾ ಬಂದ ಜನರಿಗ್ಹರುಷ ಬಡಿಸುವದರಿಂದಾ ಮುದದಿಂದಾ 1 ಏನುಪೇಳಲಿ ಗುರುವೆ ನಿನ್ನ ಮಹಿಮೆಯು ನೋಡಲಾಶ್ಚರ್ಯವೋ ಭೂತರಾಜರಿಂದ ಪೂಜೆಗೊಂಬುವ ಛಂದವೋ ಧಿಂ ಧಿಮಿ ಧಿಮಿಕೆಂದು ಕುಣಿದಾಡುವಾನಂದವೊ ಯಡಬಲದಿ ದ್ವಾರ ಪಾಲಕರಿರುವಾನಂದವೋ ಮುಕ್ತಿಯನೆ ಕೊಡುವಾ 2 ನಿನ್ನಂಥಾ ಕರುಣಿ ಗುರು ಇನ್ನಿಲ್ಲ ಧರೆಯೊಳು ಮನ್ನೀಸಿ ಸಲಹಯ್ಯ ಮಹರಾಯ ಘನ್ನ ಸಂಸಾರದೊಳು ಬನ್ನಪಟ್ಟು ಬಹಳ ನೊಂದೇನೀ ಕೈಪಿಡಿದು ಎಂದು ನಿಂದೀನೀ ಉದ್ಧಾರ ಮಾಡಬೇಕೆಂದು ಬಂದೀನಿ ಮಂದ ಭಾಗ್ಯ ಜೀವನ ಕುಂದುಗಳೆಣಿಸಿದಾಗೊದೊ ಇಂದು ಅಡಿಗಡಿಗೆ ನಮೋ ಬೇಡುವೆನೋ ಬಂಧೊ 3 ರುಕ್ಮಿಣಿ ಕಳುಹಿದಾ ವಾಲೆಯು ತಾನು ಶ್ರಿ ಕೃಷ್ಣಗರ್ಪಿಸಿದನು ದ್ವಿಜನು ಸಾಮಾನ್ಯವಲ್ಲವೋ ಈತ ಗುರುರಾಜನೆಂದೆನಿಸೀದಾ ದುರ್ವಾದಿಗಳು ಜಯಸೀದಾ ಪವಮಾನರಾಯನೆಂದೆನಿಸಿದಾ ಸುರರಿಗಮೃತವನುಣಿಸೀದಾ ವೃಂದಾವನ ಚಾರ್ಯರಿಂದ ಸೇವೆ ಸ್ವೀಕರಿಸೀದಾ ಸುಖವಸುರಿಸೀದಾ 4 ಸ್ವಾದೀಯಪುರದಲ್ಲಿ ಇರುವರೋ ಗುರುರಾಜರು ಅಮೃತ ಪಾನ ಬಂದ ಸೇವಕರಿಗಭೀಷ್ಟವ ಕರೆದು ತಾ ಕೊಡುವ ದ್ರಷ್ಟ ಜನರಾ ಫಲ್ಗಳ ಮುರಿವಾ ಸರ್ವೇಶನಲ್ಲದೆಂಬೋರ ಅಳಿವಾ ಮಧ್ವಮತವನ್ನುದ್ದಾರ ಮಾಡುವ ಕಾಳೀಮರ್ಧನಕೃಷ್ಣನೊಲಿವಾ 5
--------------
ಕಳಸದ ಸುಂದರಮ್ಮ
ಹರಿಹರರು ಸರಿಯೆಂಬ ಮರುಳು ಜನರುಹರಿಹರರ ಚರಿತೆಯನು ತಿಳಿದು ಭಜಿಸುವುದು ಪ ಸುರರು ಮುನಿಗಳು ಕೂಡಿ ಪರದೈವವಾರೆಂದುಅರಿಯಬೇಕೆಂದೆರಡು ವರಧನುಗಳಹರಿಹರರಿಗಿತ್ತು ಸಂಗರವ ಮಾಡಿಸಿ ನೋಡೆಮುರಹರನು ಪುರಹರನ ಗೆಲಿದುದರಿಯಾ 1 ಕರವ ಶಿರದ ಮ್ಯಾಲಿರಿಸಿ ಖಳ-ನುರುಹಿ ಹರನನು ಕಾಯಿದ ಕಥೆಯ ನೀನರಿಯಾ 2 ದೂರ್ವಾಸರೂಪ ಹರನಂಬರೀಷನ ಮುಂದೆಗರ್ವವನು ಮೆರೆಸಿ ಜಡೆಯನು ಕಿತ್ತಿಡೆಸರ್ವಲೋಕದೊಳವನ ಚಕ್ರನಿಲಲೀಯದಿರೆಉರ್ವೀಶನನು ಸಾರಿ ಉಳಿದನರಿಯಾ 3 ಹರನಂಶ ದ್ರೋಣಸುತನು ಪಾಂಡವಾ ಎಂದುಉರವಣಿಸಿ ನಾರಾಯಣಾಸ್ತ್ತ್ರವನು ಬಿಡಲು ಹರಿ ಬಂದು ಬೇಗ ತನ್ನಸ್ತ್ರವನು ತಾ ಸೆಳೆದುಶರಣಾಗತರ ಕಾಯಿದ ಕಥೆಯನರಿಯಾ 4 ನರನಾರಾಯಣರು ಬದರಿಕಾಶ್ರಮದಲಿರೆಹರನು ಹರಿಯೊಡನೆ ಕದನವನು ಮಾಡೆಹರಿ ಹರನ ಕಂಠವನು ಕರದಲಿ ಪಿಡಿದು ನೂಕೆಕೊರಳ ಕಪ್ಪಾದ ಕಥೆ ಕೇಳಿ ಅರಿಯಾ 5 ಹರಿ ಸುರರಿಗಮೃತವನು ಎರೆದ ರೂಪವನೊಮ್ಮೆಹರ ನೋಡುವೆನೆಂದು ಸಂಪ್ರಾರ್ಥಿಸೆಪರಮ ಮೋಹನ ರೂಪಲಾವಣ್ಯವನು ಕಂಡುಹರ ಮರಳುಗೊಂಡ ಕಥೆ ಕೇಳಿ ಅರಿಯಾ 6 ಹರಿಯ ಮೊಮ್ಮನ ಬಾಣಾಸುರನು ಸೆರೆವಿಡಿಯೆಗರುಡವಾಹನನಾಗಿ ಕೃಷ್ಣ ಬಂದುಹರನ ಧುರದಲಿ ಜಯಿಸಿ ಅವನ ಕಿಂಕರನ ಸಾ-ವಿರ ತೋಳುಗಳ ತರಿದ ಕಥೆಯ ನೀನರಿಯಾ 7 ಸುರತರುವ ಕಿತ್ತು ಹರಿ ಸುರಲೋಕದಿಂದ ಬರೆಹರನು ಹರಿಯೊಡನೆ ಕದನವನು ಮಾಡೆತರಹರಿಸಲಾರದೋಡಿದ ಕಥೆಯ ನೀನೊಮ್ಮೆಹಿರಿಯರ ಮುಖದಿ ಕೇಳಿ ನಂಬು ಹರಿಯಾ 8 ಹರಸುತನು ತಪದಿಂದ ಹರಿಯ ಚಕ್ರವ ಬೇಡೆಪರಮ ಹರುಷದಲಿ ಚಕ್ರವನೀಯಲುಭರದಿಂದ ಧರಿಸಲಾರದೆ ಚಕ್ರವನಂದುಹರನು ಭಂಗಿತನಾದನೆಂದರಿಯಲಾ 9 ರಾವಣಾಸುರ ಕುಂಭಕರ್ಣ ನರಕಾದಿಗಳುಶೈವತಪವನು ಮಾಡಿ ವರವ ಪಡೆಯೆಅವರುಗಳನು ವಿಷ್ಣು ನರರೂಪಿನಿಂದರಿದುದೇವರ್ಕಳನು ಕಾಯಿದ ಕಥೆಯ ನೀನರಿಯಾ 10 ಗಂಗಾಜನಕನÀ ಸನ್ಮಂಗಲ ಚರಿತ್ರ್ರೆಗಳಹಿಂಗದಲೆ ಕೇಳಿ ಸುಖಿಸುವ ಜನರಿಗೆಭಂಗವಿಲ್ಲದ ಪದವನಿತ್ತು ಸಲಹುವ ನಮ್ಮರಂಗವಿಠ್ಠಲರಾಯನ ನೆರೆ ನಂಬಿರೋ11
--------------
ಶ್ರೀಪಾದರಾಜರು