ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರದ್ಯುಮ್ನ ವಿಠಲ ನೀನಿವಳ ಸಲಹಬೇಕೋ ಪ ವಿದ್ಯಾಯು ಸಂಪತ್ತು | ಭಕ್ತ್ಯಾದಿಗಳನಿತ್ತುಉದ್ಧರಿಸ ಬೇಕಿವಳ | ಮಧ್ವಾಂತರಾತ್ಮಾ ಅ.ಪ. ಹರಿದಾಸ್ಯ ಕಾಂಕ್ಷಿತಳು | ಹಿರಿದಾಗಿ ಬೇಡಿಹಳುವರತೈಜ ಸಾಖ್ಯಹರಿ | ವರದ ನಾಗಿರುವೇಕರುಣನಿಧಿ ತವನಾಮ | ಸ್ಮರಿಪ ಸನ್ಮಾರ್ಗವನುಅರುಹಿ ಮಹ ಭವನಿಧಿಯ | ತರಣ ತಿಳಿಸಿರುವೇ 1 ಕಂಸಾರಿ ತವಪಾದಪಾಂಸುವನೆ ಶಿರದಿ ಅ | ಸಂಶಯದಿ ಧರಿಸೀಮಾಂಸಧಾತುಕ ಸಪ್ತ | ಹೇಸಿಕೆಯ ದೇಹವು - ವಿಪಾಂಸಗನಿಗಧಿಷ್ಠಾನ | ವೆಂಬುದನೆ ತಿಳಿಸೋ2 ಪಂಚಬೇದಾತ್ಮಕ ಪ್ರ | ಪಂಚವು ಸದಾ ಸತ್ಯಅಂಚೆವಹ ಸುರರಾದಿ | ತರತಮ್ಯದಾಸಂಚಿಂತನೆಯ ಕೊಟ್ಟು | ವಾಂಛಿತಾರ್ಥದ ಹರಿಯೆಮಿಂಚಿನಂದದಿ ಪೊಳೆಯೊ | ಹೃತ್ಪಂಕಜದ ನಡುವೆ3 ಮತೆ ಈ ಯುಗದಲ್ಲಿ | ಕೃತ್ಯ ವ್ರತನೇಮಾದಿಸತ್ವ ರಹಿತವು ಆಗಿ | ನಿತ್ಯಫಲರಹಿತಾಎತ್ತ ನೋಡಿದ ರತ್ತ | ಕತ್ತಲೆಯು ಕವಿದಿಹುದುಹತ್ತಿರವೆ ಇರುವಂಥ | ಭಕ್ತವತ್ಸಲ ಸಲಹೋ 4 ದಾವಾಗ್ನಿ ಕುಡಿದವನೆ | ಪಾವಿನಾಮದ ಹರನೆಗೋವುಗಳೊಳುದ್ಗೀಥ | ದೇವಾದಿದೇವಾಕಾವುದಿವಳನು ಎಂಬ | ಭಾವ ಬಿನ್ನಪ ಸಲಿಸೊಮಾವಿನೋದಿಯೆ ಗುರು | ಗೋವಿಂದ ವಿಠಲಾ5
--------------
ಗುರುಗೋವಿಂದವಿಠಲರು
ಮಧ್ವಮುನಿಯೆ ನಿನಗೆ ಎದ್ದು ಕರಗಳ ಮುಗಿವೆ | ಬುದ್ಧಿ ಪಾಲಿಸಿ ಎನ್ನ ಉದ್ಧರಿಸೊ ಗುರುವೇ ಪ ದುರುಳ ಪಾಮರ ಸಂಕರನೆಂಬುವನು | ದುರಾಚಾರಗಳು ಧರಿಯೊಳಗೆ ಕುಭಾಷ್ಯಗಳ ವ್ಯಾಪಿಸೀ | ಇರಲು ಉತ್ತಮ ಸಂಪ್ರದಾಯದಲ್ಲಿಪ್ಪ | ವರರು ಇರದಂತಾಗೆ ಸುಜನರು ಕೂಗೆ 1 ಮಲ್ಲ ಮಾಯಿಗಳ ಹಲ್ಲು ಮುರಿದ ಅಪ್ರತಿಮಲ್ಲ | ಇಳಿಯೊಳಗೆ ಶುದ್ದ ಭಾಷ್ಯ ರಚಿಸಿ ಲೇಸಾ | ಕಿಲಕಿಲನೆ ನಗುತ ಮೊಗ ಕಳೆವೇರುತಾ ವೇಗ | ನಳಿನನಾಭನ ಚರಣ ಮನದಲಿಟ್ಟ ಪರಣಾ 2 ಇಪ್ಪತ್ತು ಒಂದು ದುರ್ಮತದ ವರ ಕುವಾಕು | ಸರ್ಪನನ್ ಗರುಡ ಶೀಳಿದಂತೆ ಕೇಳಿ | ಇಪ್ಪ ಬಲು ಅಜ್ಞಾನ ಓಡಿಸಿ ಸುಜ್ಞಾನ | ತಪ್ಪದಲೆಗರದು ಸಂತರನೆಲ್ಲ ಪೊರೆದು 3 ಮಿಥ್ಯ | ಪಂಚವಿರಹಿತ ಹರಿ ಪರನೆಂದು ಸಾರೀ | ಚಂಚಲವ ಪರಿಹರಿಸಿ ಮರುತ ಮತ ಉದ್ಧರಿಸಿ | ಕಾಯ ಸುಖ ತೀರ್ಥರಾಯಾ4 ಸುರರಾದಿಗಳ ಮಣಿಯ ಆರಾರು ನಿನಗೆಣೆಯೇ | ಅರಸಿದರೆ ಕಾಣೆ ಹರಿ ಪದಗಳಾ ಆಣೆ | ಶಿರಿ ವಿಜಯವಿಠ್ಠಲನ್ನ ಭಜಿಸುವ ಯತಿರನ್ನ | ಶರಣಪಾಲಕ ಪೂರ್ಣಪ್ರಜ್ಞ ಗುಣಪೂರ್ಣ 5
--------------
ವಿಜಯದಾಸ