ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರೆದೆಡೆಗೆ ತಾ ಬರುವ ಕರೆದೆಡೆಗೆ ತಾ ಬರುವ ಪ ಬರುವೆ ತರುವ ಸುಖವ ಮುರುಳೀಧರನು ಅ.ಪ ತಿಳಿಯ ಭಕುತಿಯ ಪಡೆದ ಜನರಿಗೆ ಗೆಳೆಯನಿವ ಬಲು ಸುಲಭನು ಇಳೆಯಸುರರಾದರದಿ ಕರೆಯಲು ಹರುಷದಲಿ ನಲಿನಲಿಯುತಲಿ 1 ಸದನದಲಿ ಹದನಿಲ್ಲ ಈತನಿ ಗೊದಗಿಸುವುದತಿ ಸಾಹಸ ವಿಧಿಯ ಬರಹವು ಇಲ್ಲವೆನುತಲಿ ಹೆದರದಿರಿ ಮಧುಸೂಧನನು 2 ಇದು ನನದು ಇದು ನನದು ಎನುವ ಮದದ ವಚನಕೆ ನಗುತಲಿ ಇದು ನಿನದು ಎನ್ನಲು ಪ್ರಸನ್ನನು ವಿದುರನಾಲಯ ಪೊಕ್ಕಿಹ3
--------------
ವಿದ್ಯಾಪ್ರಸನ್ನತೀರ್ಥರು
ಮುನಿರಾಯರ ಸ್ಮರಣೆ ಮಾಡಿರೊ ಮಧ್ವ ಮುನಿರಾಯರ ಸ್ಮರಣೆ ಪ ಚರಣಕಮಲವ ಭರದಿ ಭಜಿಸುವ ಧರಣಿ ಸುರರಾದರದಿ ಪೊರೆಯುವ ತರಣಿ ಮಂಡಲಗಣವ ಗೆಲಿಯುವ ಹರಿಣವಾಹನನಂಶನಾದ ಅ.ಪ ಕಪಿರೂಪವÀ ಧರಿಸಿ ರಾಮನ ಆಜ್ಞೆಯನು ಶಿರದಲಿ ವಹಿಸಿ ವಾರಿಧಿಯನು ನಿಮಿಷ ಮಾತ್ರದಿ ಲಂಘಿಸಿ ದಶವದನನ ಅಶೋಕವನದಲಿ ಶಶಿಮುಖಿಯ ತಾ ಕಂಡು ವಂದಿಸಿ ದಶರಥ ಸುತನ ವಾರ್ತೆ ಪೇಳಿ ನಿಶಿಚರೇಶನ ಪುರವ ವಹಿಸಿದ 1 ಕುರುಕುಲದೊಳಗೆ ಪುಟ್ಟಿ ಮತ್ಸಾಧಿಪನ ನಗರದೊಳಗೆ ತಾ ಜಟ್ಟಿ ಕಾಳಗದಲ್ಲಿ ಮಲ್ಲರ ತಲೆಯ ಮೆಟ್ಟಿ ದುರುಳ ದುರ್ಯೋಧನನ ಸೇನೆಯು ಬರಲು ಪಶುಗಳ ಕದಿಬೇಕೆಂದು ತಿರುಗಿ ಓಡಿಸುವಂತೆ ಮಾಡಿದ 2 ಪರಬ್ರಹ್ಮ ಅಗುಣನೆಂದು ಜೀವೇಶರಿಗೆ ಬೇಧವೇ ಇಲ್ಲವೆಂದು ಪ್ರಪಂಚಕ್ಕೆ ಸತ್ಯತ್ವ ಯಾವುದೆಂದು ಜಗನ್ಮಿಥ್ಯಾವಾದಿ ಜನಗಳ ನಿಗಮ ಯುಕುತಿಗಳಿಂದ ಖಂಡಿಸಿ ಖಗವಾಹನ ನಾಮಗಿರಿ ಸಿರಿ ನೃಹರಿ ಮೂರುತಿಗರ್ಪಿಸಿದ 3
--------------
ವಿದ್ಯಾರತ್ನಾಕರತೀರ್ಥರು