ಕರುಣಾಲವಾಲ ಪ
ಸಿರಿಯರಸನೆ ನಿನ್ನ ಚರಣವ ನಂಬಿದೆ
ಸುರಗಣ ಸೇವಿತ ಸುರರಾಜಪಾಲ ಅ.ಪ
ಇಂದ್ರನಕೂಡಿ ಮುನೀಂದ್ರನ ಸತಿಶಾಪ
ದಿಂದರೆಯಾಗಿರಲಂದು ನೀ ದಯದಿ
ಸುಂದರ ಚರಣಾರವಿಂದಗಳಿತ್ತ ಧೂಳಿ
ಯಿಂದ ಪಾವನಗೈದ ಇಂದಿರೇಶನೆ ನೀ 1
ಚಕ್ರವರ್ತಿಯು ಮರೆಹೊಕ್ಕರೆ ನುತಿಸಿ
ರಕ್ಷಿಸಿದಾಪರಿಯಕ್ಕರೆ ತೋರಿಸಿ 2
ಶಿರಸರಿಸಕ್ಕೆ ಗುರಿಯಿಡಲು
ನರನ ಶಿರವುಳುಹಿದ ಸಿರಿವರದವಿಠಲ ಹರಿ3