ಒಟ್ಟು 6 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಶ್ರೀದೇವದೇವಾದಿ ಸದ್ಗುರುನಾಥ ಶರಣು ಸುರಮುನಿಜನರ ಪ್ರಾಣ ಜೀವನದಾತ ಶರಣು ಪರಬ್ರಹ್ಮ ಪರಮಾನಂದ ಭರಿತ ಸಿರಿ ಅರಸ ಕರುಣಾಳು ಶ್ರೀನಾಥ ಶರಣು 1 ವೇದ ಆಗೋಚರಾನಾದಿ ಗುರು ಅನಂತ ಸಾಧುಜನ ಸಹಕಾರ ಸಂತತ ಸದೋದಿತ ಸದ್ಬ್ರಹ್ಮ ಆನಂದ ಗುಣತ್ರಯ ವಿರಹಿತ ಆದಿ ಅನಾದಿ ಅವಿನಾಶ ಗುರುನಾಥ 2 ಸಂಜೀವ ಸದ್ಗುರುನಾಥ ಶಕ್ತನಹುದಖಿಳದೊಳು ಸಕಳಾರ್ಥಪೂರಿತ ಯುಕ್ತನಹುದಯ್ಯ ಶಕ್ತಿಯು ಗುರುಸಮರ್ಥ ಮುಕ್ತಿದಾಯಕ ಮಹಿಪತಿ ಪ್ರಾಣನಾಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಮಧೇನುಗರವುತಲ್ಯದೆ ನಮ್ಮ ಮನಿಯಲಿ ನೋಡಿ ಬ್ರಹ್ಮಾನಂದದೋರುತದೆ ಪರಮಾಮೃತ ಸೂರ್ಯಾಡಿಧ್ರುವ ಭೋರ್ಗರೆವುತಲ್ಯದೆ ಇರುಳ ಹಗಲಿ ತಾ ಕರಕೊಳ್ಳಲಿ ವಶವಲ್ಲ ಅಮೃತ ದುರುಳರಿಗಿದು ಅರಿಕಿಲ್ಲ ಸುರಿ ಸುರಿದು ಸಾರಾಯ ಚಪ್ಪರಿದನುಭವ ನಿಜಸುಖ ತಾ ಬಲ್ಲ ಸುರಮುನಿಜನರಾನಂದದಿ ಸೇವಿಸಿ ಅರಹುತರಾದರು ಎಲ್ಲ 1 ಕಾಸಿ ಕಡಿಯದೇ ಭಾಸುತಲ್ಯದೆ ಲೇಸಾಗಿ ನವನೀತ ಮೋಸಹೋಗದನುಸರಿಸಿಕೊಂಬುದು ವಸುಧಿಯೊಳಗೆ ತ್ವರಿತ ಋಷಿಮುನಿಗಳು ಸ್ವಹಿತ ತುಸುಕೊರತಿಲ್ಲದೆ ಪಸರಿಸಿ ತುಂಬೆದ ವಿಶ್ವದೊಳಗೆ ಸನ್ಮತ2 ಅನುದಿನ ಮಹಿಪತಿಗಿದು ನಿಜ ನೋಡಿ ಮಹಾಮಹಿಮೆಯ ಸವಿಗೂಡಿ ಶಿರದಲಭಯವ ನೀಡಿ ಇಹಪರದೊಳು ಗುರುನಾಮವೆ ಕಾಮಧೇನುವಿದೆ ಕೊಂಡಾಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯದೇವ ಜಯದೇವ ಜಯ ರಾಘವ ರಾಮಾ ದಯದಲಿಯಚ್ಚರನೀವದು ಸ್ಮರಿಸಲುತವನಾಮಾ ಪ ಹಭವ ಭವಮುಖರಮೊರೆಯನು ಕೇಳುತಲಿ ದಶರಥ ಕೌಲಸ್ಯರಾ ಬಸಿರಿಂದುದಿಸುತಲಿ ರುಷಿ ಮುಕರಕ್ಷಿಸಿ ತಾಟಕಿ ದೇಹದಿಬಿಡಿಸುತಲಿ ವಸುಧಿಲಿ ಶಿಲೆಯನು ಪಾದದದಿಮೆಟ್ಯುದ್ಧರಿಸುತಲಿ 1 ಹರುಷದಿ ಕೌಶಿಕನೊಡನೆ ಮಿಥಿಲೆಗೆ ಪೋಗುತಲಿ ಹರದು ಮುರಿದು ಜನಕಜೆ ಮಾಲೆಯ ಧರಿಸುತಲಿ ಬರಲಾನಂದದಿ ಭೃಗುಪತಿ ದಶರಥ ದರಶನ ಪಾಡುತಲಿ ಅರಸುತನಕ ಕೈಕೆಯು ಬ್ಯಾಡೆನೆ ನಡೆದೈತ್ವರಿಲಿ 2 ವನದಲಿ ಭಂಗಿಸಿಶೂರ್ಪನಖಿಖರ ದೂಶಣರಾ ಅನುವರ ಕಾಂಚನ ಮೃಗವಾ ಬೆಂಬೆತ್ತಲು ದೂರಾ ಜನಕಜೆಯಾಕೃತಿ ವೈಯ್ಯಲು ಕಪಟದಿದಶಶಿರಾ ಅನುಭಜಟಾಯುವಿನಿಂದಲಿ ಕೆಳಿ ನಡದೆ ಧೀರಾ 3 ಪಥದಲಿ ಮುರಿದುಕಬಂಧವ ಶಬರಿಗೆ ಗತಿನೀಡಿ ಪ್ರಥಮದಿ ಹನುಮನ ಕಂಡು ವಾಲಿಯ ಹತಮಾಡಿ ರತಿಯಲಿ ಸುಗ್ರೀವಜಾಂಭವ ಸೈನ್ಯದ ಲೋಡಗೂಡಿ ಕ್ಷಿತಿಜೆಯಾ ಸುದ್ದಿಯತರಿಸಿ ನಡೆದೈನಲಿದಾಡಿ 4 ಸೇತುವೆ ಗಟ್ಟಿಸಿ ಶರಣವ ಬರಲು ವಿಭೀಷಣನು ಭೀತಿಯ ಹಾರಿಸಿಸೈನ್ಯದಿ ದಾಟಿದೆ ಶರಧಿಯನು ನೀತಿಯ ತಪ್ಪಿದ ರಾವಣ ಕುಂಭಶ್ರವಣರನು ಖ್ಯಾತಿಲಿ ಮಡಹಿದೆ ಅವರಾಸಂತತಿ ಸಂಪದನು 5 ಶರಣಗಸ್ಥಿತಪರಪದವಿತ್ತು ದೇವರ ಶೆರೆಬಿಡಿಸಿ ಮರಳಿದಯೋಧ್ಯಕಪುಷ್ಪಕದಿಂ ಸೀತೆಯವರೆಸೀ ಮೆರೆವತ್ಸಜರಜನನಿಯರ ಸಕಲರಸುಖಬಡಿಸಿ ಸುರಮುನಿಜನರನುಸಲಹಿದೈ ಸಾಮ್ರಾಜ್ಯವನು 6 ನಾಮದಮಹಿಮೆ ಹೊಗಳಲು ಶೃತಿಗಳಿಗಳವಲ್ಲಾ ಪ್ರೇಮದಿಸವಿಸದುಂಬುವ ಶಿವ ಸೀತಾಬಲ್ಲಾ ನೇಮದಿಸುರನಂದಾನ್ನರ ಬವ ತರಿಸಿದರಲ್ಲಾ ಕಾಮಿತ ದಾಯಕ ಗುರುಮಹಿಪತಿ ಪ್ರಭುಶಿರಿನಲ್ಲಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಲುದೊಡ್ಡ ಧೊರಿ ದೊರಕಿದೆನಗೊಬ್ಬ ನೋಡಿ ಸಲಹುತಿಹ್ಯ ಸಕಲಾರ್ಥ ಸಾರಾಯ ನೀಡಿ ಧ್ರುವ ದೊರೆಗಳಾದವರಿಗೆಲ್ಲ ಈತನೆ ದೊರೆಯು ಚರಣಸೇವೆಯಲ್ಲಿಹಳು ಅಖಂಡ ಸಿರಿಯು ಸುರಮುನಿಜನರ ಪಾಲಿಸುತಿಹ್ಯ ಪರೋಪರಿಯು ಸರಿಸಿಜೋದ್ಭವನುತಗಿಲ್ಲ ಸರಿಯು 1 ಅನಂತಕೋಟಿ ಬ್ರಹ್ಮಾಂಡ ನಾಯಕನೆಂದು ಅನಂತಸಿದ್ಧಿ ವಾಲ್ಗೈಸುತಿಹವು ಅನಂತಗುಣ ಪರಿಪೂರ್ಣ ಶ್ರೀ ಹರಿಯೆಂದು ಅನಂತಶ್ರುತಿ ಸ್ಮøತಿ ಸಾರುತಿಹ್ಯವು 2 ಅನೆಮೊದಲಿರುವೆÉ ಕಡೆ ಅನುದಿನಾಹಾರವಿತ್ತು ಜನವನವಿಜನದಿ ರಕ್ಷಿಸುತಿಹನು ದೀನ ಮಹಿಪತಿಸ್ವಾಮಿ ಭಾನುಕೋಟಿತೇಜ ತಾನೆ ತಾನಾಗೆನಗೆ ಸಲಹುತಿಹ್ಯನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಯೆಂದು ಮನವೆ ನೀ ಸ್ಮರಿಸೋ ದೃಢದಿಂದ ಸ್ಮರಿಸಿದಾಕ್ಷಣ ಬಂದು ಒದಗುವ ಗೋವಿಂದ ಕರುಣದಿಂದಲಿ ನೋಡಿ ಹಿಂಗಿಸುವ ಭವಬಂಧ ಪರಮದಯಾನಿಧಿಯು ಶ್ರೀಹರಿ ಮುಕುಂದ 1 ಸ್ಮರಿಸಿದಾಕ್ಷಣ ಪುಣ್ಯಗತಿಗೈದಜಾಮಳ ಮರೆಯದೆ ಸ್ಮರಿಸಿದ ಧ್ರುವ ಯೈದಿದಢಳ ಹರಿಯೆಂದು ಪ್ರಹ್ಲಾದ ಪುಣ್ಯಗೈದ ಸಬಳ ಸ್ಮರಿಸಿದವರ ಕಾವ ಶ್ರೀಹರಿ ಗೋಪಾಲ 2 ಗಜ ಭಯ ಸ್ಮರಿಸಿದಾಕ್ಷಣ ಮೊರೆ ಇಟ್ಟು ದ್ರೌಪದಿಗಾಯಿದಭಿಮಾನ ಸ್ಮರಿಸಿದ ಪಾಂಡವರ ರಕ್ಷಿಸಿದ ಪ್ರಾಣ ಪರಮಭಕ್ತರ ಜೀವ ಶ್ರೀಹರಿ ನಾರಾಯಣ 3 ಹರಿನಾಮದಿಂದಾಯಿತು ಅಹಲ್ಯೋದ್ಧಾರಣ ಸ್ಮರಣೆ ಸಕಲವೆಲ್ಲ ತರಿಸಿತು ಪೂರ್ಣ ಸುರಮುನಿಜನರಿಗೆ ಇದೇ ನಿಜಭೂಷಣ ಪರಮ ವೈಷ್ಣವರಿಗೆ ಇದೇ ಜೀವ ಪ್ರಾಣ 4 ಹರಿಯೆಂದು ನೆನಿಯೋ ನೀ ಗುರು ಕೃಪೆಯಿಂದ ಸ್ಮರಿಸೊ ಮನವೆ ದೃಢಭಾವ ಭಕ್ತಿಯಿಂದ ನಿತ್ಯ ನಿಜಾನಂದ ತೋರುವ ಶ್ರೀಹರಿನಾಮ ಸುಖ ಸದಾನಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಜಿಸಿ ಬಹು ಭಕುತಿಯಿಂದತ್ಯಜಿಪ ಭವಬಂಧನವ ಹರಿಯ ಪದವ ಪ.ಮನವೈರಿಯಂ ಪಿಡಿದು ಮಿತ್ರನಂ ಮಾಡಿ ಕೊಂಡನುನಯದಿ ವೈರಾಗ್ಯ ಘನಸಿರಿಯೊಳುದಿನದಿನಕೆ ಮುದವೇರಿ ತಾತ್ವಿಕರೊಡನೆ ಮಧ್ವಮುನಿರಾಯನೊರೆದಪರಿಹರಿಯ ಪಾದವ1ತುದಿಮೊದಲೆ ಸರ್ವಕಾಲಕೆ ಚಿಂತನೆಯ ಬಲಿದುಪದುಮಾಕ್ಷನಾಕೃತಿಯ ನೋಡಿ ದೃಢದಿಕದಲಗುಡದಂತಃಕರಣ ಸ್ನೇಹ ಸಾರವನುಹೃದಯ ಮಂಟಪದೊಳಗೆ ಹರಿಯ ಪದವ 2ಹರಿಪರಾತ್ಪರ ಲಕುಮಿ ಅರಸಿ ಅಜಕುವರ ಹರವರಪೌತ್ರ ಸುರಮುನಿಜನರು ದಾಸರುತರತಮದ ತಂತ್ರಸಾರ್ಥದಿಂನೆರೆನಂಬಿಅರಸ ಪ್ರಸನ್ವೆಂಕಟ ಶ್ರೀಹರಿಯ ಪದವ 3
--------------
ಪ್ರಸನ್ನವೆಂಕಟದಾಸರು