ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಗುರು ಬ್ರಹ್ಮಣ್ಯ | ಶರಣು ಶಿರಿ ಸುರಮಾನ್ಯಪರಿಹರಿಸು ಭವತಾಪ | ಬಿನ್ನವಿಪೆ ಮುನಿಪ ಪ ಪುರುಷೋತ್ಮ ಕರಜಾತ | ಕಣ್ವತಟದಲಿ ಖ್ಯಾತನರಹರಿಯ ಪದಕಮಲ | ಭಜಕಶೀಲಶರಣ ಜನ ಸುರಕಲ್ಪ | ತರುವೆ ಎನ್ನಯ ಪಾಪಪರಿಹರಿಸೊ ಮುನಿಮೌಳಿ | ನಾನು ಪದಧೂಳಿ 1 ಯೋನಿ ಅನೇಕದಲಿ | ಬಂದಿರುವೆ ನಾಬಳಲಿಮಾನ ನಿಧಿ ನೀಯನ್ನ | ಕಾಯೊ ದಯ ಪೂರ್ಣ |ಜ್ಞಾನಾರ್ಕನೆನಿಸಿರುವ | ಮೌನಿ ತವ ಸದ್ಭಾವಪೂರ್ಣ ಹರಿ ಸುಜ್ಞಾನ | ಪಾಲಿಸೈ ನಿಪುಣ 2 ವಿಕಳ ಮತಿಯನು ಹರಿಸು | ಅಕಳಂಕನೆಂದೆನಿಸುಸುಖತೀರ್ಥ ಮತ ಸುಧೆಯ | ಉಣುವ ಪರಿಯ |ಸುಖದಿಂದ ಕರುಣಿಸುತ | ಸುಖ ಹರಿಯ ನೋಳ್ಪಂಥಪ್ರಕರಣದಲಿರಿಸೆನ್ನ | ಮೌನಿ ಕುಲರನ್ನ 3 ಸುಕೃತ ಒಂದಿರಲಿ | ನಿನ್ನ ದಯವಿರಲಿ 4 ವಿಠ್ಠಲ ಸುಪೂಜಕನೆ | ಕಷ್ಟಗಳ ಕಳೆಯುವನೆಶಿಷ್ಟ ಸಜ್ಜನ ಪಾಲ | ಹರಿಪದ ವಿಲೋಲ ಕೃಷ್ಣ ಗುರು ಗೋವಿಂದ | ವಿಠ್ಠಲನ ಪದದ್ವಂದ್ವಸುಷ್ಠು ಹೃದ್ಗುಹದಲ್ಲಿ | ಕಾಣಿಪುದು ಅಲ್ಲಿ 5
--------------
ಗುರುಗೋವಿಂದವಿಠಲರು
ಶರಣು ಶಂಕರ ಭೂಷಣಾದ್ರಿಗೆ ಶರಣು ಅಭಯಾಚಲನಿಗೆ ಪ ಶರಣು ಖಗಮೃಗ ತರುಲತಾಂಕಗೆ ಶರಣು ವಿಂಶತಿ ನಾಮಗೆ ಅ.ಪ. ವರಹ ನೀಲಾಂಜನ ಕನಕಋಷಿ ಗರುಡ ಘನ ನಾರಾಯಾಣಾ ಉರಗ ತೀರ್ಥಾನಂದ ಶ್ರೀ ಪು ಷ್ಕರ ವೃಷಭ ವೈಕುಂಠಗೆ 1 ಜ್ಞಾನ ಪರ್ವತ ಮೇರು ಶೃಂಗಗೆ ಶ್ರೀನಿವಾಸ ಸುಕ್ರೀಡಗೆ ಪಂ ಚಾನನಾಹ್ವಯ ವೆಂಕಟಾದ್ರಿಗೆ ಕ್ಷೋಣಿಯೊಳು ಸುರಮಾನ್ಯಗೆ 2 ರತುನ ಕಾಂಚನ ಶ್ರೀನಿವಾಸನ ಪ್ರತಿಮೆಯಂದದಿ ಪೊಳೆವಗೆ ಕೃತಿರಮಣ ಜಗನ್ನಥವಿಠಲಗೆ ಅತುಳ ಮಂಗಳನೆನಿಪಗೆ 3
--------------
ಜಗನ್ನಾಥದಾಸರು
ಶರಣು ಶರಣು ಪ ಪರಿಹರಿಸು ಕರುಣಾಳು ಬಿನ್ನಪವ ಕೇಳು ಅ.ಪ. ವಾಸವಾದ್ಯಮರನುತ ವನಜಸಂಭವನ ಸುತ ನೀ ಸಲಹೊ ಕೈಲಾಸವಾಸ ಈಶ ಕ್ಲೇಶ ಮೋದಾದಿ ಸಮ ತಿಳಿದು ಅಶ್ವತ್ಥಾಮ ಶ್ರೀಶುಕ ದುರ್ವಾಸ ಸ್ಫಟಿಕ ಸಮಭಾಸ 1 ವೈಕಾರಿಕಾದಿ ತ್ರೈರೂಪ ನಿನ್ನಯ ಕೋಪ ಶೋಕಕೊಡುವುದು ದೈತ್ಯಜನಕೆ ನಿತ್ಯ ಲೌಕಿಕಗಳೆಲ್ಲ ವೈದಿಕವಾಗಲೆನಗೆ ಮೈ ನಾಕಿ ಹೃತ್ಕುಮುದೇಂದು ಭಕ್ತಜನ ಬಂಧು 2 ಪವಮಾನತನಯ ನಿನ್ನವರಲ್ಲಿ ಕೊಡು ವಿನಯ ದಿವಸ ಸವನಗಳಲ್ಲಿ ಎನ್ನಿರುವ ನೀ ಬಲ್ಲಿ ಪವನ ದ್ವಿತಿಯರೂಪ ಸತತ ಎನ್ನಯಪಾಪ ಅವಲೋಕಿಸದಲೆನ್ನ ಸಲಹೊ ಸುರಮಾನ್ಯ 3 ಶೇಷನಂದನ ಶೇಷಭೂಷಣನೆ ನಿಶೇಷ ದೋಷರಹಿತನ ತೋರು ಕರುಣವನು ಬೀರು ಶ್ರೀ ಷಣ್ಮುಖನ ತಂದೆ ಸತತ ನೀ ಗತಿಯೆಂದೆ ಶೋಷಿಸು ಭವಾಮಯವ ಬೇಡುವೆನು ದಯವ4 ಗರ್ಗ ಮುನಿಕರಪದುಮ ಪೂಜ್ಯ ಚರಣಾಬ್ಜ ಮಮ ದುರ್ಗುಣಗಳೆಣಿಸದಲೆ ಜಗದೆ ಮೇಲೆ ನಿರ್ಗತಾಶನ ಜಗನ್ನಾಥ ವಿಠಲನ ಸ ನ್ಮಾರ್ಗವನೆ ತೋರು ಈ ದೇಹ ನಿನ ತೇರು 5
--------------
ಜಗನ್ನಾಥದಾಸರು