ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕಿಷ್ಟು ಕರುಣವೊ ಶ್ರೀಕೃಷ್ಣದೇವ ಪ ನಾಲ್ಕ್ಹತ್ತು ಲೋಕದಲಿ ಸುಖ ಸೂರೆ ಮಾಳ್ಪೊ ಹರಿ ಅ.ಪ ಮುಕ್ತಗಣ ನೋಡಯ್ಯ ನಿತ್ಯಮುಕ್ತಳ ನೋಡು ಶಕ್ತವಿಧಿ ವಾಣೀಶ ಭಕ್ತಿ ದೇವ ಫಣಿ ರುದ್ರ ಇವರ ಸತಿಯರ ನೋಡು ಉತ್ತಮೋತ್ತಮ ಸುಖವ ಸೂರೆಗೊಂಬರೊ ಹರಿಯೆ 1 ನಿನ್ನಾರು ಮಹಿಷಿಯರ ಸುರಪ ಸುರಗಣ ನೋಡು ಪುಣ್ಯತಮ ಸುರಮನಿಯ ಭೃಗುವ ನೋಡು ಚಿಣ್ಣ ಪ್ರಹ್ಲಾದನನ್ನ ಬಲಿ ಧ್ರುವ ಭೀಷ್ಮನ್ನ ಇನ್ನು ದ್ರೌಪದಿ ಶುಕನ ಆನಂದ ನೋಡಂiÀi್ಯ 2 ಅಂಬರೀಷನ ನೋಡು ರಾವಣಾನುಜ ಜನಕ ಪರೀಕ್ಷಿತ ವೃತ್ತ ಶಬರಿ ತುಂಬಿದ ಸದ್ಭಕ್ತ ಋಷಿಪತ್ನಿಯರ ನೋಡು ಕಂಬನಿಯ ಸುರಿಸುವೆನೊ ಕರುಣಿಸೊ ಹೃದ್ಗøಹದಿ 3 ನೀಯೆನ್ನ ಸತ್ವ ನೀಯೆನ್ನ ಜ್ಞಾನ ನೀಯೆನ್ನ ಮನ ಬುದ್ಧಿ ಕರುಣ ನಿಧಿಯೆ ನೀಯೆನ್ನ ಪ್ರಾಣರತಿ ನೀಯೆನ್ನ ಸತ್ಕರಣ ನೀಯೆನ್ನ ಧೃತಿ ಶಾಂತಿ ನೀಯೆನ್ನ ಸರ್ವನಿಧಿ 4 ನೀ ಮಾಡೆ ನಾ ಮಾಳ್ಪೆ ನೀನಾಡಿಸಿದರಾಡ್ವೆ ಕಾಮದನೆ ಕಾಮಪಿತ ಜಯೇಶವಿಠಲ ಶ್ರೀ ರಮಣ ಸರ್ವೇಶ ಈ ಮನಸು ನಿನ್ನಲ್ಲಿ ಪ್ರೇಮದಿ ನೆಲಸಿ ಇರುವಂತೆ ಕೃಪೆಮಾಡು 5
--------------
ಜಯೇಶವಿಠಲ
ತೋರವ್ವಾ ಕೇಳದೀ ಶ್ರೀನಿಧಿಯಾ|ಕಾರುಣ್ಯಂಬುಧಿಯಾ ಪ ಹರಿಯಾ ಸಕಲ ಜಗಧೊರಿಯಾ|| ಸುರಮನಿ ಜನಸಿರಿಯಾ|ಅನಂತಾನಂತ ಚರಿಯಾ| ಕರುಣ ಹೊಕ್ಕಾಕರಿಯಾ| ಕೇಳುತ ಘನ ಮೊರಿಯ ಬಂದೊದಗಿದಧೊರಿಯಾ 1 ಸ್ಮರನಾ ಲಾವಣ್ಯಾ ಮಂದಿರನಾ| ಸಿರಿದೇವಿ ಮನೋಹರನಾ ಪರಕ ಪರಾತ್ಪರನಾ| ಶಂಖಚಕ್ರದ ಕರನಾ| ಸಾರಥಿಯಾದಾ ನರನಾ|ಪೀತಾಂಬರ ಧರನಾ 2 ನಂದಾನಂದನ ಶ್ರೀ ಮುಕುಂದಾ| ದೀನವತ್ಸಲದಿಂದಾ|ಹೊರಿಯಲಯನ್ನದೊಂದಾ| ನೋಡದೇ ಮುನ್ನಿನ ಕುಂದಾ| ಗುರು ಮಹೀಪತಿ ಪ್ರಭುಬಂದಾ ನೀಡಿದಾನಂದಾ|| 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಮೊ ಶ್ರೀ ರಮಣಿ ಜಯ ತ್ರಿಭುವನ ಜನನೀ ಪ ನಾಭ ಪ್ರೀಯೇ ಗುಣ ಸದನೀ | ಜಾಂಬೂನದಾಂಬರ ವರಣೀ | 1 ಸುರಮನಿ ವಂದ್ಯ ಪದದ್ವಯ ಪಾವನೀ ನರಸೀರುಹದಳ ನಯನೀ2 ಗುರುವರ ಮಹಿಪತಿ ನಂದನೋದ್ದರಣೀ ಶರಣ ರಕ್ಷಕ ಘನ ಕರುಣೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಮ ರಮಣಾರಘು ಪ ಸುಂದರವದನಾಸುರಮನಿ ಪಾಲಕ ಮಾಧವ ಕೃಷ್ಣ ಹರಿ 1 ಕುಂಡಲೀಶ ಶಯನ ಕೋದಂಡಧರ ಘನ ಮಂಡಲಾಧಿಪತಿ ಮಹಾಮಹಿಮ ರಘುಪತಿ 2 ಶ್ರೀ ಜಗನ್ನಾಯ್ಕನೆ ಶ್ರೀತಜನಪೋಷಕ ರಾಜಾಧಿರಾಜ ಮತ್ರ್ಯರಾಜನೆನಿಸಿಹ 3 ವೆಂಕಟರಮಣ ಅಕಳಂಕ ಮಹಿಮ ಪಂಕಜೋದ್ಭವನಯ್ಯಾ ಪರಮಭಕ್ತರ ಪ್ರಿಯ 4 'ಹೆನ್ನೆರಂಗ ' ಬಿಲವಾಸ ಹೆನ್ನ ಚಿನ್ಮಯ ರೂಪ ಶ್ರೀ ಚಿತ್ತಜನಯ್ಯ ಭೂಪ 5
--------------
ಹೆನ್ನೆರಂಗದಾಸರು