ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಾರಸಮಾರ್ಜಿತ ಸಂತಾಪಂ ಪ ಮುನಿಮಾನಸ ಪೂಜಿತ ನಿರ್ಲೇಪಂ ವನರುಹಾಸನ ಮುಖ್ಯ ವಂದಿತ ಗೌರವಂ ನರ ಪುಂಗವಂ ಮನುಕುಲಾರ್ಚಿತ ಪಾದಪಂಕಜ ರಾಘವಂ ಸುರಧೇನುವಂ 1 ಶೋಭಿತ ಪಾವನ ಕೀರ್ತಿಯುತಂ ಪಶುಪತಿ ಪ್ರಿಯಮವ್ಯಯಂ ಸುರಪೂಜಿತ ಗುಣಭೂಷಿತಂ ಶಶಧರಾನನೆ ಜಾನಕೀ ಪ್ರಿಯ ಭಾಸುರಂ ಕರುಣಾಕರಂ 2 ಖರದೂಷಣ ಶಾಸಕ ದೇವಂ ಶರಣಾಗತ ಸಂರಕ್ಷಣ ನಿರತಂ ಚರಣಪಲ್ಲವನುನ್ನ ದುಂದುಭಿಕಾಯಂ ಅಕ್ಷಯಂ ಅದ್ವಯಂ ಸುರವರಂ ವರಧೇನುನಾಮಕ ನಗರನಾಯಕಂ ಹಾಯಕಂ 3
--------------
ಬೇಟೆರಾಯ ದೀಕ್ಷಿತರು
ಮರುತನಾತ್ಮಜ ನಿನ್ನ ಚರಣ ಕಮಲಯುಗ್ಮ ನೆರೆನಂಬಿದವ ಧನ್ಯನೊ ಪ ಧರೆಯೊಳಗೆ ರಘುವರನ ಶೇವಿಸಿ ಶರಣು ಜನರನು ಪೊರೆವುದಕೆ ಭೂಸುರಗಣದಿ ರಾಜಿಸುವ ರಾಯಚೂರ ಪುರದ ಕೋಟೆಯೊಳಿರಲು ಬಂದಿಹ ಅ.ಪ ಬಹುಭರದಿವಾರಿಧಿ ಲಂಘಿಸಿ ಹರಿಭಟನೆಂದು ತಿಳಿಸಿ ತ್ವರದಿ ರಾಮನಿಗರ್ಪಿಸಿ ಧೀರನೆ ಸುರವಿನುತ ತವ ಪರಿಮಳವಿರಚಿಸಿದ ಗುರುವರರ ನೋಡಿದೆ 1 ಗೋವಿಂದನಂಘ್ರಿಯ ಭಜಿಸಿ ಮನದಿ ಭಾವಿಸಿ ನಂದಸುತನಿಗರ್ಪಿಸಿ ಪ್ರಥಮಾಂಗನೆನಿಸಿ ಸಮರ್ಥ ತವಪದ ಕೊಂದಿಸುವೆ ಮನ ಮಂದಿರದಿ ಯದುನಂದನನ ಪದದ್ವಂದ್ವ ತೋರಿಸು 2 ಪುಟ್ಟಿಯತಿರೂಪವನೆಧರಿಸಿ ಕ್ಷಿತಿಯೊಳಗಖಿಲ ದುರ್ಮತಗಳೆಂಬುವ ಮೇಘತತಿಗೆ ಮಾರುತನೆನಿಸಿ ಪ್ರತಿಪಾದ್ಯನೆಂದು ತಿಳಿಸಿ ಸುಖ ತೀರ್ಥರೆನಿಸಿ ಅತಿಹಿತದಿ ಸತ್ಪಥವ ತೋರಿದಿ ಅತುಳ ಮಹಿಮನೆನುತಿಸುವೆನು ಸತತ ಪಾಲಿಸೋ 3 ತನುಮರೆಯಲು ಧುರದಿ ಜೀವನವಿತ್ತಕಾರಣದಿ ವನಜನಾಭನು ದಯದಿ ತನ್ಮೂರ್ತಿ ಸಹಿತದಿ ತಟಿತ್ಕೋಟಿ ಸೇವಕಜನರ ಸಲಹುವಿ ಕೊಳುತಲಿ ಮೆರೆವದೇವನೆ 4 ಶಿರದಿ ಮುಕುಟ ಮಂಡಿತ ಮೂರ್ತಿ ದರುಶನವನೆ ಕೊಳ್ಳುತ ವಿಸ್ತರ ಮಂಟಪದಿರಾಜಿತ ಸುರಪೂಜಿತ ಕÀರುಣ ಶರಧಿಯೆ ಪೊರೆವದೆನ್ನನು ಶರಣು ಜನರಘ ಕರುಣವ ಪಡೆದ ಧೀರನೆ 5
--------------
ಕಾರ್ಪರ ನರಹರಿದಾಸರು